• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಳೆದ ವರ್ಷಕ್ಕಿಂತ 49 ಜಲಾಶಯಗಳಲ್ಲಿ ವಾಡಿಕೆಗಿಂತ ಹೆಚ್ಚಿನ ನೀರು ಸಂಗ್ರಹ

|
Google Oneindia Kannada News

ನವದೆಹಲಿ, ಜೂನ್ 19: ದೇಶದ 130 ಜಲಾಶಯಗಳ ಪೈಕಿ 49 ಜಲಾಶಯಗಳಲ್ಲಿ ವಾಡಿಕೆಗಿಂತಲೂ ಹೆಚ್ಚಿನ ನೀರು ಸಂಗ್ರಹವಾಗಿದೆ.

ಬೇಸಿಗೆಯಲ್ಲೂ ಕೂಡ ಯಾಸ್, ತೌಕ್ತೆ ಚಂಡಮಾರುತದಿಂದಾಗಿ ದೇಶಾದ್ಯಂತ ಮಳೆಯಾಗಿದೆ. ಮುಂಗಾರು ಆಗಮನಕ್ಕೂ ಮುನ್ನವೇ ದೇಶದ 130 ಜಲಾಶಯಗಳಲ್ಲಿ ಶೇ.27ರಷ್ಟು ನೀರು ಭರ್ತಿಯಾಗಿತ್ತು.

ಕಳೆದ 10 ವರ್ಷಗಳಲ್ಲಿ ಈ ಸಮಯದಲ್ಲಿ ಕೇವಲ ಶೇ.20ರಷ್ಟು ನೀರು ಭರ್ತಿಯಾಗುತ್ತಿತ್ತು.ಜಲಾಶಯಗಳಲ್ಲಿ ನೀರಿನ ಪ್ರಮಾಣ ಎಷ್ಟಿದೆ?: 130 ಜಲಾಶಯಗಳಲ್ಲಿ 47.63 ಬಿಲಿಯನ್ ಕ್ಯೂಬಿಕ್ ಮೀಟರ್‌ನಷ್ಟು ನೀರು ಶೇಖರಣೆಯಾಗಿದೆ. ಕಳೆದ ವರ್ಷ ಜೂನ್ ಅಂತ್ಯದಷ್ಟೊತ್ತಿಗೆ 55.11 ಬಿಸಿಎಂನಷ್ಟು ನೀರು ಸಂಗ್ರಹವಾಗಿತ್ತು.

ರಾಜ್ಯದಲ್ಲಿ ಮುಂಗಾರು ಚುರುಕು: 10 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಾಧ್ಯತೆ ರಾಜ್ಯದಲ್ಲಿ ಮುಂಗಾರು ಚುರುಕು: 10 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಾಧ್ಯತೆ

130 ಜಲಾಶಯಗಳ ಪೈಕಿ 49 ಜಲಾಶಯಗಳಲ್ಲಿ ಕಳೆದ ವರ್ಷ ಜೂನ್‌ನಲ್ಲಿ ನೀರು ಸಂಗ್ರಹವಾಗಿದ್ದಕ್ಕಿಂತ ಹೆಚ್ಚಿನ ನೀರು ಈ ವರ್ಷ ಸಂಗ್ರಹವಾಗಿದೆ.

 ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹ

ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹ

ಈ ಜಲಾಶಯಗಳು ಕರ್ನಾಟಕ, ಜಾರ್ಖಂಡ್, ತ್ರಿಪುರ, ಆಂಧ್ರಪ್ರದೇಶ, ತೆಲಂಗಾಣ, ಕೇರಳ ತಮಿಳುನಾಡು ರಾಜ್ಯಗಳಲ್ಲಿವೆ.
2020ರ ಜೂನ್‌ಗಿಂತ ಕಡಿಮೆ ಸಂಗ್ರಹವಿರುವ ಜಲಾಶಯಗಳಲ್ಲಿ ಅನೇಕ ಜಲಾಶಯಗಳು ಮಹಾರಾಷ್ಟ್ರ, ಉತ್ತರ ಪ್ರದೇಶ, ಒಡಿಶಾ, ಪಂಜಾಬ್, ಹಿಮಾಚಲಪ್ರದೇಶ, ಛತ್ತೀಸ್‌ಗಢ ಮತ್ತು ಉತ್ತರಾಖಂಡನನಲ್ಲಿವೆ.

ಈ ವರ್ಷ ಒಡಿಶಾ ಹಾಗೂ ಮಹಾರಾಷ್ಟ್ರದ ಎರಡು ಅಣೆಕಟ್ಟುಗಳು ಕಡಿಮೆ ನೀರಿನ ಸಂಗ್ರಹವನ್ನು ಹೊಂದಿದೆ. ಗಂಗಾ, ನರ್ಮಾದಾ, ಕೃಷ್ಣ, ಮಹಾನದಿಗಳಲ್ಲಿ ಹರಿವುಹೆಚ್ಚಿದೆ, ಮಹಿ, ಸಿಂಧೂ ನದಿ ಜಲಾನಯನ ಪ್ರದೇಶಗಳು ಕ್ರಮವಾಗಿ ಸಾಮಾನ್ಯ ಮತ್ತು ನೀರಿನ ಕೊರತೆ ಇದೆ.
 ಅಣೆಕಟ್ಟುಗಳ ಬಗ್ಗೆ ಮಾಹಿತಿ

ಅಣೆಕಟ್ಟುಗಳ ಬಗ್ಗೆ ಮಾಹಿತಿ

ಉತ್ತರ ಪ್ರದೇಶದ ಎಂಟು ಜಲಾಶಯಗಳಲ್ಲಿ ಜೂನ್ 17 ರಂದು ಲಭ್ಯವಿರುವ ಸಂಗ್ರಹ 3.82 ಬಿಸಿಎಂನಷ್ಟಾಗಿದೆ. ಅಥವಾ ಅವುಗಳ ಒಟ್ಟು ಸಂಗ್ರಹಣಾ ಸಾಮರ್ಥದ ಶೇ.20ರಷ್ಟು ಇದೆ. ಇದು 2020(ಶೇ.38) ಸಂಗ್ರಹಕ್ಕಿಂತ ಕೆಳಗಿದೆ.

ಪೂರ್ವ ಪ್ರದೇಶದ 20 ಜಲಾಶಯಗಳಲ್ಲಿ(ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ, ತ್ರಿಪುರ, ನಾಗಾಲ್ಯಾಂಡ್) ಲಭ್ಯವಿರುವ ನೀರಿನ ಸಂಗ್ರಹ 4.59 ಬಿಸಿಎಂನಷ್ಟು. ಅಥವಾ ಒಟ್ಟು ಸಾಮರ್ಥ್ಯದ ಶೇ.23ರಷ್ಟಿದೆ.ಗುಜರಾತ್ ಮತ್ತು ಮಹಾರಾಷ್ಟ್ರವನ್ನು ಒಳಗೊಂಡಿರುವ ಪಶ್ಚಿಮ ಪ್ರದೇಶದಲ್ಲಿ 42 ಪ್ರಮುಖ ಜಲಾಶಯಗಳಿವೆ. 9.95 ಬಿಸಿಎಂನಲ್ಲಿ, ಇವುಗಳು ಪ್ರಸ್ತುತ ಅವುಗಳ ಒಟ್ಟು ಸಾಮರ್ಥ್ಯದ ಶೇ.28ರಷ್ಟಿದೆ.
ದಕ್ಷಿಣ ಪ್ರದೇಶವಾದ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಕೇರಳ ಮತ್ತು ತಮಿಳುನಾಡು 37 ಜಲಾಶಯಗಳನ್ನು ಹೊಂದಿದ್ದು, ಇದರಲ್ಲಿ ಲಭ್ಯವಿರುವ ನೀರಿನ ಸಂಗ್ರಹ 16.55 ಬಿಸಿಎಂನಷ್ಟಾಗಿದೆ. ಅಥವಾ ಶೇ.30ರಷ್ಟು ಸಾಮರ್ಥ್ಯ ಹೊಂದಿದೆ.
 ಕರ್ನಾಟಕದಲ್ಲಿ ಮುಂಗಾರು ಚುರುಕು

ಕರ್ನಾಟಕದಲ್ಲಿ ಮುಂಗಾರು ಚುರುಕು

ಕರ್ನಾಟಕ ಹಾಗೂ ಕೋಲ್ಕತ್ತಾದಲ್ಲಿ ಮುಂಗಾರು ಚುರುಕುಗೊಂಡಿದ್ದು ಕಳೆದ ಒಂದು ವಾರದಿಂದ ಭಾರಿ ಮಳೆಯಾಗುತ್ತಿದೆ. ಕರ್ನಾಟಕದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಿಗೆ ಮುಂದಿನ ಎರಡು ದಿನಗಳ ಕಾಲ ರೆಡ್ ಅಲರ್ಟ್ ಘೋಷಿಸಲಾಗಿದೆ.

 ದೇಶದಲ್ಲಿ ವಾತಾವರಣ ಹೇಗಿತ್ತು

ದೇಶದಲ್ಲಿ ವಾತಾವರಣ ಹೇಗಿತ್ತು

ಮೇ ಮೊದಲು ಹಾಗೂ ಎರಡನೇ ವಾರದಲ್ಲಿ ತೌಕ್ತೆ ಹಾಗೂ ಯಾಸ್ ಚಂಡಮಾರುತದಿಂದಾಗಿ ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್, ಉತ್ತರ ಪ್ರದೇಶ, ದೆಹಲಿ, ಬಿಹಾರದಲ್ಲಿ ಮಳೆಯಾಗಿತ್ತು. ಒಟ್ಟಿನಲ್ಲಿ ಈ ಬಾರಿ ಬೇಸಿಗೆಯಲ್ಲೂ ತಂಪಾದ ವಾತಾವರಣವಿತ್ತು.

English summary
Frequent thundershowers and two strong cyclones— Tauktae and Yaas — brought significant rainfall during the summer. Thus, even before the southwest monsoon covers the entire country, the 130 major reservoirs monitored by the Central Water Commission have already stored 27% of their total capacity
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X