ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಂಬಾಕು ಬದುಕು ತಂಬಿಸುವ ಮುನ್ನ ಜಾಗೃತರಾಗಿ...

By ವಿನೋದ್ ಚಂದ್ರ
|
Google Oneindia Kannada News

'ತಂಬಾಕು ಕೊಲ್ಲುತ್ತದೆ' ಎಂಬ ಸೂಚನಾ ಫಲಕಗಳನ್ನು ನಾವು ಪ್ರತಿನಿತ್ಯ ನೋಡುತ್ತೇವೆ, 'ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ' ಎಂದು ಸಿಗರೇಟ್, ಗುಟ್ಕಾ ಮುಂತಾದ ತಂಬಾಕುಯುಕ್ತ ಪದಾರ್ಥಗಳ ಪ್ಯಾಕೇಟ್ ಗಳ ಮೇಲೆ ಓದುತ್ತೇವೆ.

ಜೊತೆಗೆ ಶ್ವಾಸಕೋಶಗಳ ಹಾಳಾದ ಚಿತ್ರ, ಚೇಳಿನ ಅಸ್ತಿ ಪಂಜರದ ಚಿತ್ರ ಹೀಗೆ ಹಲವಾರು ಭಯಾನಕ ಚಿತ್ರಗಳನ್ನು ಕಾಣುತ್ತೇವೆ. ತಂಬಾಕಿನ ಸೇವನೆ ಚೇಳಿನ ವಿಷಕ್ಕಿಂತಲೂ ಹೆಚ್ಚು ವಿಷಕಾರಿ ಎಂದು ತಿಳಿದರೂ ಸಹ ಜನರು ಇದಕ್ಕೆ ದಾಸರಾಗಿರುವುದು ನಿಜಕ್ಕೂ ವಿಷಾದನೀಯ. ಜಗತ್ತನಲ್ಲಿ ಒಂದು ವರ್ಷಕ್ಕೆ 60 ಲಕ್ಷ ಜನರು ತಂಬಾಕು ಸೇವನೆಯಿಂದಲೇ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

Recommended Video

Mysuru : Smokers gets a shocking news | Watch video

ಮನುಕುಲಕ್ಕೆ ಮಾರಕವಾದ ತಂಬಾಕು ತ್ಯಜಿಸಲು ಈ ದಿನ ಸಕಾಲಮನುಕುಲಕ್ಕೆ ಮಾರಕವಾದ ತಂಬಾಕು ತ್ಯಜಿಸಲು ಈ ದಿನ ಸಕಾಲ

ಭಾರತದಲ್ಲಿ ಪ್ರತಿ ವರ್ಷ 10 ಲಕ್ಷ ಜನರು ತಂಬಾಕು ಸಂಬಂಧಿ ರೋಗಗಳಿಂದ ಸಾವನ್ನಪ್ಪುತ್ತಿದ್ದಾರೆ, ಪ್ರತಿ ದಿನ 2200 ಕ್ಕಿಂತ ಹೆಚ್ಚು ಜನ ನಮ್ಮ ದೇಶದಲ್ಲಿ ತಂಬಾಕನ್ನು ಉಪಯೋಗಿಸುವುದರಿಂದ ಸಾವನ್ನಪ್ಪುತ್ತಿದ್ದಾರೆ. ಭಾರತವು ವಿಶ್ವದಲ್ಲಿ ಅತಿ ಹೆಚ್ಚು ಸಂಖ್ಯೆಯ ಬಾಯಿಯ ಕ್ಯಾನ್ಸರ್ ರೋಗಿಗಳನ್ನು ಹೊಂದಿದೆ ಮತ್ತು ಶೇಕಡ 90 ರಷ್ಟುಬಾಯಿಯ ಕ್ಯಾನ್ಸರ್ ಗಳಿಗೆ ಕಾರಣ ತಂಬಾಕಿಗೆ ಸಂಬಂಧಿಸಿದ್ದಾಗಿದೆ, ಎಲ್ಲಾ ರೀತಿಯ ಕ್ಯಾನ್ಸರ್‌ಗಳ ಶೇಕಡ 40 ರಷ್ಟು ಕಾರಣವು ತಂಬಾಕಿನ ಬಳಕೆಯೇ ಆಗಿದೆ.

ಇದು ಏಡ್ಸ್, ಕ್ಷಯ ಮತ್ತು ಮಲೇರಿಯಾ ಈ ಮೂರು ರೋಗಗಳಿಂದ ಒಟ್ಟಾರೆಯಾಗಿ ಸಾಯುವ ಜನರಿಗಿಂತ ಹೆಚ್ಚಿನ ಸಂಖ್ಯೆಯಾಗಿದೆ. ಬೀಡಿ ಸಿಗರೇಟ್, ಗುಟ್ಕಾ ಇವು ಧುಮಪಾನದ ರೂಪದಲ್ಲಿ ತಂಬಾಕು ಸೇವನೆಯ ವಿಧಗಳು, ಧೂಮರಹಿತ ತಂಬಾಕು ಉತ್ಪನ್ನಗಳಾದ ಅಗಿಯುವಂತಹ ಜರ್ದಾ, ಖೈನೀ, ಪಾನ್ ಮಸಾಲ, ಮಾವಾ ಇತ್ಯಾದಿಗಳು ಕೂಡ ತಂಬಾಕು ಸೇವನೆಯಾಗಿದೆ.

ಮೊದಮೊದಲು ಕೇವಲ ಶೋಕಿಗಾಗಿ ಸಿಗರೇಟ್, ಗುಟ್ಕಾ ತಂಬಾಕು ಸೇವನೆ ಪ್ರಾರಂಭವಾಗಿ ನಂತರ ಅವು ಚಟವಾಗಿ ಪರಿಣಮಿಸುತ್ತದೆ, ಸುಮಾರು ಹದಿನೈದು-ಇಪ್ಪತ್ತು ವಯಸ್ಸಿನ ಹರೆಯದವರು ಮುಂದಿನ ಘೋರ ಪರಿಣಾಮಗಳ ಅರಿವಿಲ್ಲದೆ ಧೂಮಪಾನ ಮತ್ತು ಧೂಮರಹಿತ ತಂಬಾಕು ಉತ್ಪನ್ನಗಳನ್ನು ಉಪಯೋಗಿಸಲು ಆರಂಭಿಸುತ್ತಾರೆ, ತಂಬಾಕಿನಲ್ಲಿರುವ ನಿಕೋಟಿನ್ ಎಂಬ ವಸ್ತುವೇ ಧೂಮಪಾನ ಚಟಗಳಿಗೆ ಒಳಗಾಗಲು ಕಾರಣವಾಗುತ್ತದೆ. ಇದರಿಂದಾಗಿಯೇ ಧೂಮಪಾನ ಹಾಗೂ ತಂಬಾಕು ಬಳಕೆಯ ವಿರುದ್ಧ ನಡೆಯುತ್ತಿರುವ ಆಂದೋಲನಗಳು ಬಹುಮಟ್ಟಿಗೆ ಯಶಸ್ವಿಯಾಗುತ್ತಿಲ್ಲ. (ಚಿತ್ರ ಕೃಪೆ: ಪಿಟಿಐ)

ಮಾರಣಾಂತಿಕ ಕಾಯಿಲೆಗಳಿಗೆ ಆಹ್ವಾನ

ಮಾರಣಾಂತಿಕ ಕಾಯಿಲೆಗಳಿಗೆ ಆಹ್ವಾನ

ಇತ್ತೀಚಿನ ದಶಕಗಳಲ್ಲಿ ವಿಶ್ವಾದ್ಯಂತ ಧೂಮಪಾನ, ತಂಬಾಕು ಚಟ ಬೆಳೆಯುತ್ತಿರುವ ವೇಗವನ್ನು ನೋಡಿದರೆ ಮುಂಬರುವ ವರ್ಷಗಳಲ್ಲಿ ಶ್ವಾಸಕೋಶಗಳ ಕ್ಯಾನ್ಸರ್ ಸಾಂಕ್ರಾಮಿಕ ರೋಗದಂತೆ ಹರಡಿದರೆ ಅಚ್ಚರಿಯೇನಿಲ್ಲ. ಸಿಗರೇಟ್- ತಂಬಾಕು ಸೇವನೆ ಹೆಚ್ಚಾದಂತೆ ಹೃದಯ ಕಾಯಿಲೆಗಳು, ಕೆಮ್ಮು, ಅಸ್ತಮ, ಪಾರ್ಶ್ವವಾಯು, ಕ್ಷಯ ಹಾಗೂ ಗಂಟಲು, ಧ್ವನಿಪಟ್ಟಿಗೆ, ಶ್ವಾಸಕೋಶ, ಅನ್ನನಾಳ, ಕರಳು, ಮೂತ್ರಕೋಶ, ಮೂತ್ರಪಿಂಡ ಇವೇ ಮೊದಲಾದ ಅಂಗಗಳು ಕ್ಯಾನ್ಸರ್‌ಗೆ ತುತ್ತಾಗುತ್ತವೆ.

ನಪುಂಸಕತ್ವಕ್ಕೂ ಕಾರಣ

ನಪುಂಸಕತ್ವಕ್ಕೂ ಕಾರಣ

ಪುರುಷರಲ್ಲಿ ನಪುಂಸಕತ್ವ ಉಂಟಾಗುವಿಕೆಯ ಪ್ರಮಾಣ ಶೇ. 58 ರಷ್ಟು ಹೆಚ್ಚಾಗಿರುತ್ತದೆ. ಮಹಿಳೆಯರಲ್ಲಿ ಅಂಡಾಣುವಿನ ಫಲವತ್ತತೆಯಲ್ಲಿ ಕ್ಷಿಣತೆ, ಮುಟ್ಟಿನಲ್ಲಿ ಏರುಪೇರು, ಗರ್ಭಪಾತ, ಕಡಿಮೆ ತೂಕದ ಶಿಶುಜನನ, ಗರ್ಭಕಂಠದ ಕ್ಯಾನ್ಸರ್ ಕಂಡುಬರುತ್ತದೆ. ಹೆಚ್ಚು ಶ್ವಾಸಕೋಶದ ಖಾಯಿಲೆಗಳಾದ ಬ್ರಾಂಕೈಟೀಸ್ (ಶ್ವಾಸಕೋಶಗಳ ಒಳಪೊರೆಯ ಉರಿಯೂತ) ಎಂಫಿಸೀಮಾ (ಶ್ವಾಸಕೋಶದ ವಾಯುಕೋಶದ ಊತ) ರೋಗಗಳ ಉಲ್ಬಣಗೊಳ್ಳುತ್ತದೆ.

4000 ರಾಸಾಯನಿಕ, 60 ಕ್ಯಾನ್ಸರ್ ಕಾರಕ ವಸ್ತು!

4000 ರಾಸಾಯನಿಕ, 60 ಕ್ಯಾನ್ಸರ್ ಕಾರಕ ವಸ್ತು!

ಸಿಗರೇಟ್ ಮತ್ತು ಬೀಡಿಗಳಲ್ಲಿ ಅಮೋನಿಯಾ ಅರ್ಸೆನಿಕ್, ಕಾರ್ಬನ್ ಮೊನಾಕ್ಸೈಡ್, ಹೈಡ್ರೋಜನ್ ಸೈನೆಡ್, ನಾಪ್ತಾಲಿನ್, ನಿಕೋಟಿನ್, ಟಾರ್, ವಿಕಿರಣವನ್ನುಂಟು ಮಾಡಬಲ್ಲ ಮಿಶ್ರಣಗಳಿರುತ್ತದೆ. ಹಾಗೆಯೇ ಜಗಿಯುವ ತಂಬಾಕಿನಲ್ಲಿ ಕ್ಯಾಡ್ಮಿಯಂ ಪಾರ್ಮಲ್ಡಿಹೈಡ್, ಸುಣ್ಣ, ಮೆಂಥಾಲ್ ಸತುಗಳಿರುತ್ತದೆ, ಅಂದರೆ 4 ಸಾವಿರಕ್ಕೂ ಹೆಚ್ಚು ರಾಸಾಯನಿಕಗಳು ಮತ್ತು 60 ಕ್ಯಾನ್ಸರ್‌ಕಾರಕ ವಸ್ತುಗಳಿವೆ.

ಕಷ್ಟಪಟ್ಟು ಸಂಪಾದಿಸಿದ ಹಣದಿಂದ ರೋಗ ಖರೀದಿಸಬೇಕೆ?

ಕಷ್ಟಪಟ್ಟು ಸಂಪಾದಿಸಿದ ಹಣದಿಂದ ರೋಗ ಖರೀದಿಸಬೇಕೆ?

ಜೀವಿತಾವಧಿಯಲ್ಲಿ ಕಷ್ಟಪಟ್ಟು ಗಳಿಸಿದ ಹಣವನ್ನು ಕಳೆಯುವುದರ ಬದಲಾಗಿ ಕುಟುಂಬಕ್ಕೆ ಪೌಷ್ಠಿಕ ಆಹಾರ, ಮಕ್ಕಳ ಶಿಕ್ಷಣ, ಉತ್ಪಾದಕ ಉದ್ದೇಶಗಳಿಗೆ ಉಪಯೋಗಿಸಬಹುದು. ತಂಬಾಕಿನ ಬೆಳೆ ಬೆಳೆಯಲು ಮತ್ತು ಸಂಸ್ಕರಣೆ ಮಾಡಲು ಮರಗಳನ್ನು ಕಡಿಯುವುದರಿಂದ ಅರಣ್ಯನಾಶವಾಗುತ್ತದೆ ಹಾಗೂ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಜನಸಾಮಾನ್ಯರನ್ನು ತಂಬಾಕಿನ ದುಷ್ಪರಿಣಾಮಗಳಿಂದ ರಕ್ಷಿಸಲು ಭಾರತ ಸರ್ಕಾರವು ಒಂದು ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾಯಿದೆಯನ್ನು ಜಾರಿಗೊಳಿಸಿದೆ ಈ ಕಾಯಿದೆಯಡಿ ಕೆಳಕಂಡವು ಅಪರಾಧವಾಗುತ್ತದೆ.

ಕಾನೂನಿನ ಬೆಂಬಲ

ಕಾನೂನಿನ ಬೆಂಬಲ

ಸೆಕ್ಷನ್ 4 ರಂತೆ : ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಲಾಗಿದೆ. ನಿಯಮ ಮೀರಿದರೆ 200/- ರೂ ವರೆಗೆ ದಂಡ ವಿಧಿಸಲಾಗುವುದು. ಸೆಕ್ಷನ್ 5 ರಲ್ಲಿ : ತಂಬಾಕು ಉತ್ಪನ್ನಗಳ ಜಾಹಿರಾತು ನಿಷೇಧ ನಿಯಮ ಮೀರಿದರೆ ದಂಡ ಮತ್ತು ಸೆರೆವಾಸ ಎರಡನ್ನು ವಿಧಿಸಬಹುದು. ಸೆಕ್ಷನ್ 6(ಎ) ರಲ್ಲಿ : 18 ವರ್ಷದೊಳಗಿನವರಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲು ಮತು ಖರೀದಿಸಲು ನಿಷೇಧ. ಸೆಕ್ಷನ್ 6(ಬಿ) ; ಶಿಕ್ಷಣ ಸಂಸ್ಥೆಗಳಿಂದ 100 ಗಜ ಅಂತರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಲಾಗಿದೆ. ಸೆಕ್ಷನ್ 7 ರಂತೆ : ತಂಬಾಕು ಉತ್ಪನ್ನಗಳ ಪ್ಯಾಕ್ ಮೇಲೆ ಆರೋಗ್ಯ ಎಚ್ಚರಿಕೆಗಳ ಸಂದೇಶ ಇರಲೇಬೇಕು. ನಿಯಮ ಮೀರಿದರೆ ದಂಡ ಮತ್ತು ಸೆರೆವಾಸ ಎರಡನ್ನು ವಿಧಿಸಲಾಗುವುದು.

ನಿರ್ಮೂಲನೆ ಖಂಡಿತ ಸಾಧ್ಯ

ನಿರ್ಮೂಲನೆ ಖಂಡಿತ ಸಾಧ್ಯ

ತಂಬಾಕು ನಿರ್ಮೂಲನೆ ಖಂಡಿತ ಸಾಧ್ಯ, ಇದಕ್ಕೆ ಬೇಕಾಗಿರುವುದು ಮನೋದೃಢತೆ, ಅಚಲ ನಿರ್ಧಾರ ಹಾಗೂ ಮನೋವೈದ್ಯರ ಸಹಾಯ ಹಸ್ತ. ತಂಬಾಕನ್ನು ತ್ಯಜಿಸಿ ಆರೋಗ್ಯಕರ ಜೀವನಕ್ಕೆ ಮುಂದಾಗಿ.

English summary
Everyone knows that smoking is injurious to health and it leads to deadly diseases, but still people are not ready to give up such bad habbits. Here is an eye opener article on how tobacco and its products harm people, and how it kills happiness of the society.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X