ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ ದಿನದಂದು ಹುಟ್ಟುವ ಆರ್ಥಿಕ ತಜ್ಞರ ಬಗ್ಗೆ ಜಾಗ್ರತೆ

By Manjunatha
|
Google Oneindia Kannada News

ಬೆಂಗಳೂರು, ಫೆಬ್ರವರಿ 01: ತಮ್ಮ ಆದಾಯವೆಷ್ಟು, ಖರ್ಚೆಷ್ಟು, ಕೆಜಿ ಅಕ್ಕಿಗೆ ಎಷ್ಟು ಬೆಲೆ ಎಂದೂ ಗೊತ್ತಿರದವರೆಲ್ಲಾ ಬಜೆಟ್‌ ದಿನದಂದು ಆರ್ಥಿಕ ತಜ್ಞರಾಗಿಬಿಡುತ್ತಾರೆ. ಇಂದು ಸಹ ಸಾಮಾಜಿಕ ಜಾಲತಾಣದಲ್ಲಿ ದಿಢೀರ್ ಉದ್ಭವಿತ ಆರ್ಥಿಕ ತಜ್ಞರು ಖಂಡಿತ ಕಾಣಸಿಗುತ್ತಾರೆ.

ಬಜೆಟ್ ಪ್ರಾರಂಭವಾಗುವ ಒಂದು ದಿನ ಮುನ್ನವೇ ಟ್ವಿಟರ್‌ನಲ್ಲಿ #Budget2018 ಹ್ಯಾಷ್‌ಟ್ಯಾಗ್ ಟ್ರೆಂಡಿಂಗ್ ಆಗಿದ್ದು, ಲಕ್ಷಾಂತರ ಜನ ಈಗಾಗಲೇ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಕೇಂದ್ರ ಆಯವ್ಯಯ 2018 LIVE : ಜೇಟ್ಲಿಯಿಂದ ಕೃಷಿ ಪ್ರಧಾನ ಬಜೆಟ್ಕೇಂದ್ರ ಆಯವ್ಯಯ 2018 LIVE : ಜೇಟ್ಲಿಯಿಂದ ಕೃಷಿ ಪ್ರಧಾನ ಬಜೆಟ್

ಇವರಲ್ಲಿ ಎಲ್ಲವೂ ಗುಣಮಟ್ಟದ ಸರಿಯಾದ ವಿಶ್ಲೇಷಣೆ ಎನ್ನಲಾಗದು, ಕೇವಲ ತಮ್ಮ ಇರುವಿಕೆ ದಾಖಲಿಸಲು ಸ್ವಲ್ಪ ಮೈಲೇಜ್ ಗಿಟ್ಟಿಸಿಕೊಳ್ಳಲಷ್ಟೆ ತೋಚಿದ್ದು ಗೀಚುವ ಪ್ರಚಾರ ಪ್ರಿಯ ಆರ್ಥಿಕ ತಜ್ಞರೂ ಇರುತ್ತಾರೆ. ಬಜೆಟ್‌ ಮಾಹಿತಿಗಾಗಿ ಸಾಮಾಜಿಕ ಜಾಳತಾಣಗಳ ಮೊರೆ ಹೋಗುವವರು ಈ ಬಗ್ಗೆ ಸ್ವಲ್ಪ ಜಾಗೃತೆ ವಹಿಸಬೇಕು.

Be Carefull about fake economisits on budget day

ಅಧಿಕೃತ ಖಾತೆ ಹೊಂದಿದ ವ್ಯಕ್ತಿಗಳಿಂದ ಬಂದ ಅಭಿಪ್ರಾಯಗಳನ್ನು, ವಿಶ್ಲೇಷಣೆಗಳನ್ನು ನಂಬಬಹುದು ಅದನ್ನು ಹೊರತು ಪಡಿಸಿದರೆ ಸುದ್ದಿ ಮಾಧ್ಯಮಗಳು, ಸುದ್ದಿ ಏಜೆನ್ಸಿಗಳ ಖಾತೆಗಳಿಂದ ಬರುವ ಸುದ್ದಿಗಳು ಸತ್ಯವೆನ್ನಬಹುದು.

ಫೇಕ್‌ ಸುದ್ದಿ ವಾಹಿನಿಗಳ ಪೇಜ್‌ ಬಗ್ಗೆ ಜಾಗೃತೆ ಇರಲಿ. ಅಧಿಕೃತ ಖಾತೆ ಅಲ್ಲದಿದ್ದರೂ ಸಹಿತ ನಂಬಲರ್ಹ, ಗುಣಮಟ್ಟದ ಅಭಿಪ್ರಾಯಗಳನ್ನು ಪ್ರಕಟಿಸುವ ಖಾತೆಗಳೂ ಸಾಕಷ್ಟಿವರೆ ಆದರೆ ಅವನ್ನು ಆಯ್ದು ಕೊಳ್ಳುವುದು ಓದುಗರ ಬುದ್ಧಿಮತ್ತೆಗೆ ಬಿಟ್ಟಿದ್ದು.

English summary
Be careful about fake economists on budget day on social media. please fallow credible accounts and read only credible news channels accounts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X