ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Zoom ಮೀಟಿಂಗ್ ಆಪ್ ಬಳಕೆದಾರರೇ ಈ ನಿಯಮ ಪಾಲಿಸದಿದ್ದರೆ ಆಪಾಯ

|
Google Oneindia Kannada News

ನವದೆಹಲಿ, ಏಪ್ರಿಲ್.17: ಕೊರೊನಾ ವೈರಸ್ ಸೋಂಕು ಹರಡುವಿಕೆಯನ್ನು ನಿಯಂತ್ರಿಸುವ ಸಲುವಾಗಿ ಭಾರತಕ್ಕೆ ಭಾರತವೇ ಲಾಕ್ ಡೌನ್ ಆಗಿದೆ. ಇದರ ನಡುವೆ ಕೆಲವು ಖಾಸಗಿ ಕಂಪನಿ ಉದ್ಯೋಗಿಗಳು ವರ್ಕ್ ಫ್ರಾಮ್ ಹೋಮ್ ಶುರು ಮಾಡಿದ್ದಾರೆ.

ವರ್ಕ್ ಫ್ರಾಮ್ ಹೋಮ್ ಮಾಡುವ ಉದ್ಯೋಗಿಗಳು, ಆನ್ ಲೈನ್ ಕ್ಲಾಸ್ ತೆಗೆದುಕೊಳ್ಳುವ ಶಿಕ್ಷಕರು ಹೀಗೆ ಎಲ್ಲರೂ ಜೂಮ್ ಮೀಟಿಂಗ್ ಆಪ್ ಮೊರೆ ಹೋಗಿದ್ದಾರೆ. ಈ ಆಪ್ ಮೂಲಕ ಮೀಟಿಂಗ್ ನಡೆಸಲು ಮುಂದಾಗಿದ್ದು ಇದು ಎಷ್ಟರ ಮಟ್ಟಿಗೆ ಸುರಕ್ಷಿತ ಎಂಬುದರ ಬಗ್ಗೆ ಕೇಂದ್ರ ಗೃಹ ಸಚಿವಾಲಯವು ಮಾರ್ಗಸೂಚಿಯನ್ನು ಹೊರಡಿಸಿದೆ.

ಭಾರತದ ಬೇಸಿಗೆಯ ಸೆಕೆ ಕೊರೊನಾವನ್ನು ಕೊಲ್ಲುವುದೇ?:ಸಂಶೋಧನೆ ಏನು ಹೇಳುತ್ತೆ? ಭಾರತದ ಬೇಸಿಗೆಯ ಸೆಕೆ ಕೊರೊನಾವನ್ನು ಕೊಲ್ಲುವುದೇ?:ಸಂಶೋಧನೆ ಏನು ಹೇಳುತ್ತೆ?

ಜೂಮ್ ಮೀಟಿಂಗ್ ಆಪ್ ಸರ್ಕಾರಿ ಅಧಿಕಾರಿಗಳಿಗೆ ಮತ್ತು ಸರ್ಕಾರಿ ಸಂಬಂಧ ಚರ್ಚೆಗೆ ಸೂಕ್ತ ಹಾಗೂ ಸುರಕ್ಷಿತ ವೇದಿಕೆಯಲ್ಲ. ಇನ್ನು, ಖಾಸಗಿ ಕಂಪನಿಗಳು ಅಥವಾ ವೈಯಕ್ತಿಕ ಚರ್ಚೆಗೆ ಆಪ್ ಬಳಸುವವರು ಈ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಕೇಂದ್ರ ಗೃಹ ಸಚಿವಾಲಯವು ತಿಳಿಸಿದೆ.

ಜೂಮ್ ಬಳಕೆದಾರರಿಗೆ ಕೇಂದ್ರದ ಮಾರ್ಗಸೂಚಿ

ಜೂಮ್ ಬಳಕೆದಾರರಿಗೆ ಕೇಂದ್ರದ ಮಾರ್ಗಸೂಚಿ

- ವಿಡಿಯೋ ಕಾನ್ಫರೆನ್ಸ್ ನಡೆಯುತ್ತಿರುವ ಕೋಣೆಗೆ ಅನಧಿಕೃತ ಜನರನ್ನು ಬಿಟ್ಟುಕೊಳ್ಳದಿರಿ

- ಜೂಮ್ ಆಪ್ ಬಳಸುತ್ತಿರುವ ಸಂದರ್ಭದಲ್ಲಿ ಅನಧಿಕೃತ ವ್ಯಕ್ತಿಗಳು ಸಂವಾದದಲ್ಲಿ ಮಧ್ಯ ಪ್ರವೇಶಿಸದಂತೆ ಎಚ್ಚರಿಕೆ ವಹಿಸಿ

- ಸೈಬರ್ ದಾಳಿಗೆ ಒಳಗಾಗದಂತೆ ಪಾಸ್ ವರ್ಡ್ ಗಳನ್ನು ಅಳವಡಿಸಿ

ಸುರಕ್ಷತಾ ಕ್ರಮಗಳ ಅನುಸರಿಸುವುದು ಸೂಕ್ತ

ಸುರಕ್ಷತಾ ಕ್ರಮಗಳ ಅನುಸರಿಸುವುದು ಸೂಕ್ತ

ಕಾನ್ಫರೆನ್ಸ್ ನಡೆಯುವ ಸಂದರ್ಭದಲ್ಲಿ ಬಹುತೇಕ ಜನರು ಕಂಪ್ಯೂಟರ್, ಲ್ಯಾಪ್ ಟಾಪ್ ಹಾಗೂ ಮೊಬೈಲ್ ಗಳಲ್ಲಿ ಜೂಮ್ ಆಪ್ ಇನ್ ಸ್ಟಾಲ್ ಮಾಡಿಕೊಂಡು ಬಳಸುತ್ತಿರುತ್ತಾರೆ. ಈ ವೇಳೆಯಲ್ಲಿ ಅಧಿಕೃತ ವ್ಯಕ್ತಿಗಳಿಗೆ ಮಾತ್ರ ಕೆಲವು ಆಯ್ಕೆಗಳನ್ನು ಮಾರ್ಪಡಿಸಲು ಅನುಮತಿ ಹೊಂದಿರಬೇಕು. ಉದಾಹರಣೆಗೆ ಮೀಟಿಂಗ್ ನಡೆಯುತ್ತಿರುವ ಸಂದರ್ಭದಲ್ಲಿ ಆಡಳಿತಾತ್ಮಕ ಅಧಿಕಾರಿ ಅಥವಾ ಮುಖ್ಯಸ್ಥರು ಮಾತ್ರ ಲಾಕ್ ಮಾಡುವ ಅವಕಾಶವನ್ನು ಹೊಂದಿರಬೇಕು.

ಮುಂಜಾಗ್ರತೆ ವಹಿಸಿಕೊಂಡು ಜೂಮ್ ಬಳಸಿ

ಮುಂಜಾಗ್ರತೆ ವಹಿಸಿಕೊಂಡು ಜೂಮ್ ಬಳಸಿ

- ಪ್ರತಿ ಬಾರಿ ಮೀಟಿಂಗ್ ಆರಂಭಿಸುವಾಗ ಯೂಸರ್ ಐಡಿ ಮತ್ತು ಹೊಸ ಪಾಸ್ ವರ್ಡ್ ಸೆಟ್ ಮಾಡಿ

- ಮೀಟಿಂಗ್ ಆರಂಭಿಸುವ ಮೊದಲು ಎಲ್ಲ ಸದಸ್ಯರು ಹಾಜರ್ ಆಗಿದ್ದಾರೆಯೇ ಎಂದು ಖಾತ್ರಿಪಡಿಸಿಕೊಳ್ಳಿ

- ಎಲ್ಲ ಸದಸ್ಯರ ಹಾಜರಾದ ಬಳಿಕ ಕಾನ್ಫರೆನ್ಸ್ ಪ್ರವೇಶಿಸುವ ಆಯ್ಕೆಯನ್ನು ನಿಷ್ಕ್ರಿಯಗೊಳಿಸಿ, ಚರ್ಚೆಯನ್ನು ಆರಂಭಿಸಿ

- ಎಲ್ಲ ಸದಸ್ಯರು ಹಾಜರಾದ ಬಳಿಕ ಚರ್ಚೆ ಆರಂಭಿಸುವ ಮುನ್ನ ಮೀಟಿಂಗ್ ಲಾಕ್ ಮಾಡಿ

- ಚರ್ಚೆ ವೇಳೆ ಅದರ ಸ್ಕ್ರೀನ್ ಶಾಟ್ ತೆಗೆದುಕೊಳ್ಳುವ ಅವಕಾಶ ಅಧಿಕೃತ ಮುಖ್ಯಸ್ಥರಿಗಷ್ಟೇ ಇರುವಂತೆ ಸೆಟ್ ಮಾಡಿಕೊಳ್ಳಬೇಕು

- ಚರ್ಚೆಯಿಂದ ಒಮ್ಮೆ ಹೊರಹೋದ ಸದಸ್ಯ ಮತ್ತೊಮ್ಮ ಪ್ರವೇಶಿಸುವ ಆಯ್ಕೆಯನ್ನು ನಿಷ್ಕ್ರಿಯಗೊಳಿಸಿ

- ಕಡತಗಳ ವರ್ಗಾವಣೆಯ ಆಯ್ಕೆಯನ್ನು ನಿಷ್ಕ್ರಿಯಗೊಳಿಸಿ

- ಮೀಟಿಂಗ್ ನಡೆಸುತ್ತಿರುವ ಸಂದರ್ಭದಲ್ಲಿ ಅದನ್ನು ರಿಕಾರ್ಡ್ ಮಾಡಿಕೊಳ್ಳುವ ಆಯ್ಕೆಯನ್ನು ನಿಷ್ಕ್ರಿಯಗೊಳಿಸಿ

ಜೂಮ್ ಮೀಟಿಂಗ್ ಬಳಸುವ ಮುಖ್ಯಸ್ಥರಿಗೆ ಮಾರ್ಗಸೂಚಿ

ಜೂಮ್ ಮೀಟಿಂಗ್ ಬಳಸುವ ಮುಖ್ಯಸ್ಥರಿಗೆ ಮಾರ್ಗಸೂಚಿ

ಒಂದು ವೇಳೆ ನೀವು ಜೂಮ್ ಮೀಟಿಂಗ್ ಆಯೋಜಿಸುವ ಮುಖ್ಯಸ್ಥರಾಗಿದ್ದರೆ ಚರ್ಚೆ ಮುಗಿದ ನಂತರ ಸುಮ್ಮನೆ ಎಕ್ಸಿಟ್ ಆಗಬೇಡಿ. ವೈಯಕ್ತಿಕ ಮೀಟಿಂಗ್ ಐಡಿ ಬಳಸುವ ಬದಲು ಪ್ರತಿಬಾರಿ ಮೀಟಿಂಗ್ ಆರಂಭಕ್ಕೂ ಮೊದಲು ಬೇರೆ ಬೇರೆ ಮೀಟಿಂಗ್ ಐಡಿಯನ್ನು ಬಳಸಿ. ಪ್ರತಿಬಾರಿ ಮೀಟಿಂಗ್ ಆರಂಭಿಸುವ ಮೊದಲು ವೈಯಕ್ತಿಕ ಐಡಿ ಬದಲು ಹೊಸ ಮೀಟಿಂಗ್ ಐಡಿ ಮತ್ತು ಪಾಸ್ ವರ್ಡ್ ಗಳನ್ನು ಶೇರ್ ಮಾಡಿ. ಇದರಿಂದ ನಿಮ್ಮ ವೈಯಕ್ತಿಕ ಪಾಸ್ ವರ್ಡ್ ಮತ್ತು ಯೂಸರ್ ಐಡಿ ಸುರಕ್ಷಿತವಾಗಿರುತ್ತದೆ.

English summary
Be Alert Before Use Zoom Metting App. Follow This MHA Advisory For Safety.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X