ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

60 ವರ್ಷ ಮೇಲ್ಪಟ್ಟವರು ಈ ಲಸಿಕೆ ಪಡೆದರೆ ಸಾಕು ಕೊರೊನಾ ಸೋಂಕಿನಿಂದ ಮುಕ್ತಿ

|
Google Oneindia Kannada News

ನವದೆಹಲಿ, ಅಕ್ಟೋಬರ್ 29: ಸಾಮಾನ್ಯವಾಗಿ ವಯಸ್ಸಾದವರಿಗೆ ಯಾವ ರೋಗ ಬಂದರೂ ಸುಲಭವಾಗಿ ಗುಣಪಡಿಸುವುದು ಕಷ್ಟ ಎಂದೇ ಹೇಳುತ್ತಾರೆ.

ಯಾಕೆಂದರೆ ಅವರಲ್ಲಿ ರೋಗ ನಿರೋಧಕ ಶಕ್ತಿ ಕೂಡ ಕುಂಠಿತವಾಗಿರುತ್ತದೆ. ಆದರೆ ಈ ಒಂದು ಔಷಧದಿಂದ ವಯಸ್ಸಾದವರಿಗೆ ಕೊರೊನಾ ಬಂದರೂ ಕೂಡ ಅದನ್ನು ಕಡಿಮೆ ಮಾಡಬಹುದಾಗಿದೆ ಎನ್ನುವ ಮಾತುಗಳು ಕೇಳಿಬಂದಿದೆ.

2020 ಅಂತ್ಯದೊಳಗೆ ಪಿಫೈಜರ್‌ನಿಂದ 4 ಕೋಟಿ ಕೊರೊನಾ ಲಸಿಕೆ 2020 ಅಂತ್ಯದೊಳಗೆ ಪಿಫೈಜರ್‌ನಿಂದ 4 ಕೋಟಿ ಕೊರೊನಾ ಲಸಿಕೆ

ಕ್ಷಯರೋಗದಿಂದ ರಕ್ಷಣೆ ನೀಡುವ ಬ್ಯಾಸಿಲಸ್ ಕ್ಯಾಲ್ಮೆಟ್-ಗೌರಿನ್(ಬಿಸಿಜಿ) ಲಸಿಕೆ ವಯಸ್ಸಾದವರಿಗೆ ಕೂಡ ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಐಸಿಎಂಆರ್ ನೀಡಿರುವ ಮಾಹಿತಿ ಏನು?

ಐಸಿಎಂಆರ್ ನೀಡಿರುವ ಮಾಹಿತಿ ಏನು?

ಕೊರೊನಾ ಸೋಂಕಿತರಿಗೆ ಆಸ್ಪತ್ರೆಯಲ್ಲಿ ನಿರ್ದಿಷ್ಟವಲ್ಲದಿದ್ದರೂ ಹಲವು ಮಾತ್ರೆಗಳನ್ನು ನೀಡಿ ವೈರಸ್ ಕಡಿಮೆ ಮಾಡುತ್ತಿದ್ದಾರೆ. ಇದೀಗ ಐಸಿಎಂಆರ್ ನೀಡಿರುವ ಮಾಹಿತಿ ಪ್ರಕಾರ ವಯಸ್ಸಾದವರೂ ಕೂಡ ಈ ಬಿಸಿಜಿ ಲಸಿಕೆಯನ್ನು ಪಡೆದುಕೊಂಡರೆ ಕೊವಿಡ್ 19ರೋಗದಿಂದ ಬಹುಬೇಗ ಗುಣಮುಖರಾಗಬಹುದು.

ಲಸಿಕೆ ನೇರವಾಗಿ ಕೊವಿಡ್ 19 ವಿರುದ್ಧ ಹೋರಾಟ

ಲಸಿಕೆ ನೇರವಾಗಿ ಕೊವಿಡ್ 19 ವಿರುದ್ಧ ಹೋರಾಟ

ಬಿಸಿಜಿ ಲಸಿಕೆಯಿಂದ ಉತ್ಪತ್ತಿಯಾಗುವ ರೋಗ ನಿರೋಧಕ ಶಕ್ತಿಯು ಕೋವಿಡ್ ವಿರುದ್ಧ ನೇರವಾಗಿ ಪರಿಣಾಮ ಬೀರುತ್ತದೆಯೇ ಎನ್ನುವುದು ಹೆಚ್ಚಿನ ಅಧ್ಯಯನದಿಂದಷ್ಟೇ ತಿಳಿಯಬೇಕಾಗಿದೆ. ಈ ಪ್ರಯೋಗವು ದೇಶದ ಆರು ಕೇಂದ್ರಗಳಲ್ಲಿ ನಡೆಯಲಿದ್ದು, 60 ವರ್ಷ ಮೇಲ್ಪಟ್ಟ ಆರೋಗ್ಯವಂತ 1600ಕ್ಕೂ ಅಧಿಕ ಜನರು ಈ ಲಸಿಕೆ ಪಡೆಯಲಿದ್ದಾರೆ. ಇದರ ಫಲಿತಾಂಶ ಮುಂದಿನ ವರ್ಷ ಲಭ್ಯವಾಗಲಿದೆ.

ಹಿರಿಯರ ಮೇಲೆ ಲಸಿಕೆ ಪ್ರಯೋಗ

ಹಿರಿಯರ ಮೇಲೆ ಲಸಿಕೆ ಪ್ರಯೋಗ

ಹಿರಿಯರ ಮೇಲೆ ನಡೆಸಲಾದ ಬಿಸಿಜಿ ಲಸಿಕೆ ಪ್ರಯೋಗವು ಪರಿಣಾಮಕಾರಿಯಾಗಿದೆ ಎಂದು ಪ್ರಯೋಗದ ಪ್ರಾಥಮಿಕ ಫಲಿತಾಂಶದಿಂದ ತಿಳಿದುಬಂದಿದೆ ಎಂದು ಐಸಿಎಂಆರ್ ಅಧ್ಯಯನ ತಿಳಿಸಿದೆ. 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿದರೆ ಕೊವಿಡ್‌ನಿಂದ ರಕ್ಷಿಸಬಹುದೇ ಎನ್ನುವುದನ್ನು ಪರೀಕ್ಷಿಸಲು ಐಸಿಎಂಆರ್ ಈ ಅಧ್ಯಯನ ನಡೆಸುತ್ತಿದೆ.

ಕ್ಷಯರೋಗ ಸಂಶೋಧನೆ ರಾಷ್ಟ್ರೀಯ ಸಂಸ್ಥೆ

ಕ್ಷಯರೋಗ ಸಂಶೋಧನೆ ರಾಷ್ಟ್ರೀಯ ಸಂಸ್ಥೆ

ಪ್ರಯೋಗದ ಭಾಗವಾಗಿ ಕ್ಷಯರೋಗ ಸಂಶೋಧನಾ ರಾಷ್ಟ್ರೀಯ ಸಂಸ್ಥೆಯು 60-80 ವರ್ಷದ 54 ಮಂದಿಗೆ ಈ ಲಸಿಕೆಯನ್ನು ನೀಡಿತ್ತು. ಇವರ ರೋಗನಿರೋಧಕ ಪ್ರಮಾಣವನ್ನು ಲಸಿಕೆ ಪಡೆಯದ 32 ಮಂದಿ ರೋಗನಿರೋಧಕ ಪ್ರಮಾಣದ ಜೊತೆ ಹೋಲಿಕೆ ಮಾಡಲಾಗಿತ್ತು. ಒಂದು ತಿಂಗಳು ಇವರ ಆರೋಗ್ಯದ ಮೇಲೆ ನಿಗಾ ಇಡಲಾಗಿತ್ತು. ಈ ಲಸಿಕೆಯು ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದರೆ ಹಿರಿಯರಲ್ಲೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಗಳಿರಲಿಲ್ಲ.

English summary
Bacillus Calmette-Guérin (BCG) vaccine, which primarily provides protection against tuberculosis (TB), is also beneficial against coronavirus disease (Covid-19) among elderly people, scientists at the Indian Council of Medical Research (ICMR) have concluded.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X