ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಬೀಫ್ ಫೆಸ್ಟ್’, ಯುವ ಕಾಂಗ್ರೆಸ್ ನಡೆಗೆ ರಾಹುಲ್ ಕಿಡಿ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಮೇ 29: ಕೇರಳ ಯುವ ಕಾಂಗ್ರೆಸ್ ಕಾರ್ಯರ್ತರು ಸಾರ್ವಜನಿಕ ಸ್ಥಳದಲ್ಲಿ ದನಗಳ ಹತ್ಯೆ ಮಾಡುವುದನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಖಂಡಿಸಿದ್ದು, ಇದೊಂದು ಅನಾಗರಿಕ ನಡೆ, ಇದನ್ನು ಸಹಿಸಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

ಶನಿವಾರ ಆಡಳಿರೂಢ ಸಿಪಿಎಂ ನೇತೃತ್ವದ ಎಲ್.ಡಿ.ಎಫ್ ಹಾಗೂ ಕಾಂಗ್ರೆಸ್ ನೇತೃತ್ವದ ಯುಡಿಎಫ್ ನ ಯುವ ಸದಸ್ಯರು ಸಾರ್ವಜನಿಕವಾಗಿ ಕಣ್ಣೂರಿನಲ್ಲಿ ದನವನ್ನು ಕೊಂದು, ಅಲ್ಲೇ ಬೇಯಿಸಿ 'ಬೀಫ್ ಫೆಸ್ಟ್' ಹೆಸರಿನಲ್ಲಿ ಹಂಚಿದ್ದರು. ಈ ಮೂಲಕ ಪ್ರಾಣಿ ಮಾರುಕಟ್ಟೆಯಿಂದ ಕಸಾಯಿಖಾನೆಗೆ ದನಗಳನ್ನು ಖರೀದಿಸುವಂತಿಲ್ಲ ಎಂಬ ಕೇಂದ್ರ ಸರಕಾರದ ಅಧಿಸೂಚನೆಯನ್ನು ವಿರೋಧಿಸಿದ್ದರು.[ಬೆಂಗಳೂರಲ್ಲಿ ಬೀಫ್ ಫೆಸ್ಟಿವಲ್ ವಿರುದ್ಧ ಗೋರಕ್ಷಕರ ಪ್ರತಿಭಟನೆ]

Barbaric says Rahul Gandhi on cow slaughter by his party workers

ಈ ಕುರಿತು ಟ್ವಿಟ್ಟರಿನಲ್ಲಿ ವೀಡಿಯೊ ಪೋಸ್ಟ್ ಮಾಡಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ಕುಮ್ಮಾನಂ ರಾಜಶೇಖರನ್, ಇದನ್ನು ಹಿಂದೆ ಎಂದು ಕರೆದಿದ್ದಲ್ಲದೆ ಸಾಮಾನ್ಯ ಜನರು ಈ ರೀತಿ ನಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಟೀಕಿಸಿದ್ದರು. ಇನ್ನು ಕಣ್ಣೂರು ಪೊಲೀಸರು ದನವನ್ನು ಕೊಂದ ಯುವ ಕಾಂಗ್ರೆಸ್ ಕಾರ್ಯಕರ್ತರ ಮೇಲೆ 'ಪ್ರಾಣಿ ಹಿಂಸಾ ತಡೆ ಮಸೂದೆ-1960'ರ ಅಡಿಯಲ್ಲಿ ಪ್ರಕರಣವನ್ನೂ ದಾಖಲಿಸಿದ್ದರು.[ಪುಣ್ಯಕೋಟಿಯ ಉಳಿಸಿ ಕೋಟಿ ಪುಣ್ಯವ ಗಳಿಸಿದ ಮೋದಿ ಸರ್ಕಾರ]

ಭಾರತದಲ್ಲಿ ಗೋ ಹತ್ಯೆ ನಿಷೇಧವಿಲ್ಲದ ರಾಜ್ಯಗಳಲ್ಲಿ ಕೇರಳ ಕೂಡ ಸೇರಿದೆ. ಆದರೆ ಕಣ್ಣೂರಿನಲ್ಲಿ ನಡೆದಂಥಹ ಘಟನೆಗಳು ಪ್ರಾಣಿಗಳ ಮೆಲಿನ ಹಿಂಸೆಯನ್ನು ವೈಭವೀಕರಿಸಿದೆ ಎಂಬ ಟೀಕೆಯೂ ಕೇಳಿ ಬಂದಿದೆ.

English summary
Congress vice-president, Rahul Gandhi while condemning the slaughter of a cow by his party workers in Kerala termed the incident as barbaric and completely unacceptable. Youth groups of the state’s ruling CPI(M)-led LDF and Congress-headed UDF opposition killed the animal in Kannur in public view on Saturday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X