ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರಾಕ್ ಒಬಾಮ ಹೊಸ ಪುಸ್ತಕದಲ್ಲಿ ರಾಹುಲ್ ಗಾಂಧಿ ಬಗ್ಗೆ ಲೇವಡಿ

|
Google Oneindia Kannada News

ನವದೆಹಲಿ, ನವೆಂಬರ್ 12: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಹೊಸ ಪುಸ್ತಕ 'ಎ ಪ್ರಾಮಿಸ್ಡ್ ಲ್ಯಾಂಡ್' ಈ ವಾರ ಪುಸ್ತಕ ಮಾರುಕಟ್ಟೆಯನ್ನು ಪ್ರವೇಶಿಸಿದೆ. 'ಡ್ರೀಮ್ಸ್ ಫ್ರಂ ಮೈ ಫಾದರ್', 'ದಿ ಅಡಿಕಸಿ ಆಫ್ ಹೋಪ್' ಮತ್ತು 'ಚೇಂಜ್ ವಿ ಕ್ಯಾನ್ ಬಿಲೀವ್ ಇನ್' ಎಂಬ ಕೃತಿಗಳನ್ನು ರಚಿಸಿದ್ದ ಒಬಾಮಾ, ಮತ್ತೊಂದು ಪುಸ್ತಕ ಹೊರತಂದಿದ್ದಾರೆ.

ಆಸಕ್ತಿಕರ ಸಂಗತಿಯೆಂದರೆ ಅವರ ಈ ಪುಸ್ತಕದಲ್ಲಿ ಯುಪಿಎ ಸರ್ಕಾರದಲ್ಲಿ ಎರಡು ಬಾರಿ ಪ್ರಧಾನಿಯಾಗಿದ್ದ ಡಾ. ಮನಮೋಹನ್ ಸಿಂಗ್ ಹಾಗೂ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಮತ್ತು ಸಂಸದ ರಾಹುಲ್ ಗಾಂಧಿ ಅವರ ಹೆಸರನ್ನು ಉಲ್ಲೇಖಿಸಲಾಗಿದೆ.

ಲೆಕ್ಕವಿಲ್ಲದಷ್ಟು ಮನೆಗಳನ್ನು ನಾಶಪಡಿಸಿದ ಮೋದಿ ಸರ್ಕಾರ: ರಾಹುಲ್ ಗಾಂಧಿ ಆರೋಪಲೆಕ್ಕವಿಲ್ಲದಷ್ಟು ಮನೆಗಳನ್ನು ನಾಶಪಡಿಸಿದ ಮೋದಿ ಸರ್ಕಾರ: ರಾಹುಲ್ ಗಾಂಧಿ ಆರೋಪ

'ಎ ಪ್ರಾಮಿಸ್ಡ್ ಲ್ಯಾಂಡ್' ಕೃತಿಯಲ್ಲಿ ರಾಹುಲ್ ಗಾಂಧಿ ಅವರನ್ನು ಉಲ್ಲೇಖಿಸಿರುವ ಒಬಾಮಾ, 'ರಾಹುಲ್ ಗಾಂಧಿ ದಿಗಿಲಿನ, ರೂಪುಗೊಳ್ಳದ ಗುಣವನ್ನು ಹೊಂದಿದ್ದಾರೆ. ಅವರು ವಿದ್ಯಾರ್ಥಿಯಾಗಿದ್ದರೆ ಕೋರ್ಸ್ ಕೆಲಸ ಮುಗಿಸಿ ಶಿಕ್ಷಕರಿಂದ ಮೆಚ್ಚಿಸಿಕೊಳ್ಳಲು ಬಯಸಿರುವ ಆದರೆ ಬುದ್ಧಿಮತ್ತೆ ಅಥವಾ ವಿಷಯದಲ್ಲಿ ಪರಿಣತನಾಗುವ ಹಂಬಲದ ಕೊರತೆಯುಳ್ಳವರಂತೆ ಕಾಣಿಸುತ್ತಾರೆ' ಎಂದು ಬರೆದಿದ್ದಾರೆ.

ಲೇವಡಿ, ವಿರೋಧ

ಲೇವಡಿ, ವಿರೋಧ

ಒಬಾಮಾ ಅವರ ಪುಸ್ತಕದಲ್ಲಿನ ಸಾಲುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಹುಲ್ ಗಾಂಧಿ ಅವರ ಸಾಮರ್ಥ್ಯವನ್ನು ಅತ್ಯಂತ ವಿಧೇಯವಾಗಿ ಒಬಾಮಾ ಅಣಕಿಸಿದ್ದಾರೆ ಎಂದು ರಾಹುಲ್ ಸೈದ್ಧಾಂತಿಕ ವಿರೋಧಿಗಳು ಟೀಕಿಸಿದ್ದಾರೆ. ಇನ್ನೊಂದೆಡೆ ಅನೇಕರು ಒಬಾಮಾ ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಬಾಮಾ ಮೇಲಿನ ಗೌರವ ಇದರಿಂದ ಕಳೆದುಹೋಯಿತು ಎಂದಿದ್ದಾರೆ.

ಮನಮೋಹನ್ ಸಿಂಗ್ ಭಾವುಕ

ಮನಮೋಹನ್ ಸಿಂಗ್ ಭಾವುಕ

ಇನ್ನೊಂದೆಡೆ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಬಗ್ಗೆಯೂ ಒಬಾಮಾ ಉಲ್ಲೇಖಿಸಿದ್ದಾರೆ. ಡಾ. ಮನಮೋಹನ್ ಸಿಂಗ್ ಅವರು ಭಾವಪೂರ್ಣ ಸ್ವಭಾವದ ವ್ಯಕ್ತಿಯಂತೆ ಕಂಡುಬಂದಿದ್ದಾರೆ ಎಂದು ಅವರು ಬರೆದಿದ್ದಾರೆ.

ಕೇಂದ್ರದ ತಲೆಬಾಗುವ ನಡೆ ದೇಶಕ್ಕೆ ಸಮಸ್ಯೆ ತಂದೊಡ್ಡಬಹುದು: ರಾಹುಲ್ ಗಾಂಧಿಕೇಂದ್ರದ ತಲೆಬಾಗುವ ನಡೆ ದೇಶಕ್ಕೆ ಸಮಸ್ಯೆ ತಂದೊಡ್ಡಬಹುದು: ರಾಹುಲ್ ಗಾಂಧಿ

ಬೈಡನ್ ಯೋಗ್ಯ ವ್ಯಕ್ತಿ

ಬೈಡನ್ ಯೋಗ್ಯ ವ್ಯಕ್ತಿ

ಒಬಾಮಾ ಅವರ ಹೊಸ ಪುಸ್ತಕವು ನೂತನ ಚುನಾಯಿತ ಅಧ್ಯಕ್ಷ ಜೋ ಬೈಡನ್ ಅವರನ್ನು ಸಹ ಉಲ್ಲೇಖಿಸಿದೆ. ತಮ್ಮ ಮಾಜಿ ಉಪಾಧ್ಯಕ್ಷರಾಗಿದ್ದ ಬೈಡನ್ ಅವರು ಬಹಳ ಯೋಗ್ಯ ಮನುಷ್ಯ. ತಮ್ಮ ಕಡೆಯಿಂದ ನೀಡಬೇಕಿರುವುದನ್ನು ಸಲ್ಲಿಸದೆ ಇದ್ದರೆ ತಪ್ಪಾಗುತ್ತದೆ ಎಂದು ಭಾವಿಸುತ್ತಾರೆ ಎಂದು ಹೇಳಿದ್ದಾರೆ.

ರಾಜಕೀಯ ನಿಲುವು

ರಾಜಕೀಯ ನಿಲುವು

ಇದೇ ರೀತಿ ಒಬಾಮಾ ಅವರು ತಮ್ಮ ಪುಸ್ತಕದಲ್ಲಿ ಅನೇಕ ನಾಯಕರ ಹೆಸರನ್ನು ಮತ್ತು ಅವರ ಸ್ವಭಾವವನ್ನು ವರ್ಣಿಸಿದ್ದಾರೆ. ಈ ಪುಸ್ತಕವು ಅವರ ವೈಯಕ್ತಿಕ ಜೀವನಕ್ಕಿಂತಲೂ ಅವರ ರಾಜಕೀಯ ನಿಲುವುಗಳ ಮೇಲೆ ಹೆಚ್ಚು ಗಮನ ಹರಿಸಿದೆ ಎಂದು ನ್ಯೂಯಾರ್ಕ್ ಟೈಮ್ಸ್ ಪುಸ್ತಕ ವಿಮರ್ಶೆ ಹೇಳಿದೆ.

English summary
Former US president Barack Obama has mentioned Manmohan singh and Rahul Gandhi in his new book A Promised Land.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X