ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲು ಓದಿ: ನಿದ್ರೆಯಲ್ಲಿ ಉಸಿರುಗಟ್ಟುವಿಕೆ ಎಂದರೇನು, ಲಕ್ಷಣ ಮತ್ತು ಅಪಾಯಗಳನ್ನು ತಿಳಿಯಿರಿ

|
Google Oneindia Kannada News

ಮುಂಬೈ, ಫೆಬ್ರವರಿ 16: ಮುಂಬೈನಲ್ಲಿ ಖ್ಯಾತ ಸಂಗೀತ ನಿರ್ದೇಶಕ ಬಪ್ಪಿ ಲಹರಿ ಬುಧವಾರ ವಿಧಿವಶರಾಗಿದ್ದಾರೆ. ಭಾರತದಲ್ಲಿ 1980 ಮತ್ತು 90ರ ದಶಕದಲ್ಲಿ ಡಿಸ್ಕೋ ಸಂಗೀತವನ್ನು ಜನಪ್ರಿಯಗೊಳಿಸಿದ 69 ವರ್ಷದ ಲಹರಿ, ತಮ್ಮ ವಿಭಿನ್ನ ಶೈಲಿಯ ಸಂಗೀತ ಸಂಯೋಜನೆಯಿಂದ ಖ್ಯಾತರಾಗಿದ್ದರು.

ಕಳೆದ ಒಂದು ತಿಂಗಳಿನಿಂದ ಬಪ್ಪಿ ಲಹರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸೋಮವಾರವಷ್ಟೇ ಡಿಸ್ಚಾರ್ಜ್ ಆಗಿದ್ದರು. ಆದರೆ ಮಂಗಳವಾರ ಮತ್ತೆ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಕುಟುಂಬ ಸದಸ್ಯರು ವೈದ್ಯರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ತದನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಮೊದಲೇ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಲಹರಿ, ಮಧ್ಯರಾತ್ರಿಯ ಸ್ವಲ್ಪ ಸಮಯದ ಮೊದಲು ಪ್ರತಿರೋಧಕ ನಿದ್ರೆಯಲ್ಲಿ ಉಸಿರುಗಟ್ಟುವಿಕೆ (ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ) ಕಾರಣದಿಂದಾಗಿ ವಿಧಿವಶರಾದರು," ಎಂದು ಆಸ್ಪತ್ರೆಯ ನಿರ್ದೇಶಕ ಡಾ ದೀಪಕ್ ನಾಮಜೋಶಿ ತಿಳಿಸಿದ್ದಾರೆ.

Breaking; ಖ್ಯಾತ ಸಂಗೀತ ನಿರ್ದೇಶಕ ಬಪ್ಪಿ ಲಹರಿ ವಿಧಿವಶBreaking; ಖ್ಯಾತ ಸಂಗೀತ ನಿರ್ದೇಶಕ ಬಪ್ಪಿ ಲಹರಿ ವಿಧಿವಶ

ಕೊರೊನಾವೈರಸ್, ರೂಪಾಂತರಿ ವೈರಸ್, ಓಮಿಕ್ರಾನ್ ಸೇರಿದಂತೆ ಇತ್ತೀಚಿಗೆ ಈ ಸಾಂಕ್ರಾಮಿಕ ಪಿಡುಗಿನ ರೋಗಗಳೇ ಹೆಚ್ಚು ಸುದ್ದಿಯಲ್ಲಿದ್ದವು. ಇದರ ಮಧ್ಯೆ ಇದೀಗ ಹೊಸ ರೋಗದ ಹೆಸರು ಮುನ್ನಲೆಗೆ ಬರುತ್ತಿದೆ. ಅದುವೇ ಪ್ರತಿರೋಧಕ ನಿದ್ರೆಯಲ್ಲಿ ಉಸಿರುಗಟ್ಟುವಿಕೆ. ಅಸಲಿಗೆ ಈ ಪ್ರತಿರೋಧಕ ನಿದ್ರೆಯಲ್ಲಿ ಉಸಿರುಗಟ್ಟುವಿಕೆ ಎಂದರೇನು?, ಪ್ರತಿರೋಧಕ ನಿದ್ರೆಯಲ್ಲಿ ಉಸಿರುಗಟ್ಟುವಿಕೆ ಲಕ್ಷಣಗಳು ಹೇಗಿರುತ್ತವೆ?, ಎಂಥವರಲ್ಲಿ ಪ್ರತಿರೋಧಕ ನಿದ್ರೆಯಲ್ಲಿ ಉಸಿರುಗಟ್ಟುವಿಕೆ ಕಾಣಿಸಿಕೊಳ್ಳುತ್ತದೆ?, ಹೀಗೆ ಪ್ರತಿರೋಧಕ ನಿದ್ರೆಯಲ್ಲಿ ಉಸಿರುಗಟ್ಟುವಿಕೆ ಕುರಿತಾದ ಸಾಲು ಸಾಲು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ಓದಿ.

ಏನಿದು ಪ್ರತಿರೋಧಕ ನಿದ್ರೆಯಲ್ಲಿ ಉಸಿರುಗಟ್ಟುವಿಕೆ?

ಏನಿದು ಪ್ರತಿರೋಧಕ ನಿದ್ರೆಯಲ್ಲಿ ಉಸಿರುಗಟ್ಟುವಿಕೆ?

ಪ್ರತಿರೋಧಕ ನಿದ್ರಾ ಉಸಿರುಗಟ್ಟುವಿಕೆಯು (OSA) ನಿದ್ರೆ-ಸಂಬಂಧಿಸಿದ ಅತ್ಯಂತ ಸಾಮಾನ್ಯ ಉಸಿರಾಟದ ಅಸ್ವಸ್ಥತೆಯಾಗಿದೆ. ಇದು ನಿದ್ರೆಯ ಸಮಯದಲ್ಲಿ ಉಸಿರಾಟವನ್ನು ಕಡಿಮೆ ಮಾಡಲು ಅಥವಾ ತಡೆಯಲು ಕಾರಣವಾಗುವ ಮೇಲ್ಭಾಗದ ಶ್ವಾಸನಾಳದ ಸಂಪೂರ್ಣ ಅಥವಾ ಭಾಗಶಃ ಪ್ರಮಾಣದಲ್ಲಿ ಪುನರಾವರ್ತಿತವಾಗುತ್ತದೆ. ಈ ಕ್ರಿಯೆಯನ್ನು "ಉಸಿರುಗಟ್ಟುವಿಕೆ" ಎಂದು ಕರೆಯಲಾಗುತ್ತದೆ, ಇದು ಉಸಿರಾಟದ ಸಂಪೂರ್ಣ ಅಥವಾ ಉಸಿರಾಟವು ಭಾಗಶಃ ಕಡಿತವಾಗಿರುವಾಗ "ಹೈಪೋಪ್ನಿಯಾಸ್" ಎಂದು ಕರೆಯಲ್ಪಡುತ್ತದೆ.

ಈ ಉಸಿರುಗಟ್ಟುವಿಕೆ ಮತ್ತು ಹೈಪೋಪ್ನಿಯಾಸ್ ಎಂಬುದು ರಕ್ತದಲ್ಲಿನ ಆಮ್ಲಜನಕ ಶುದ್ಧತ್ವ ಕುಸಿತ ಅಥವಾ ನಿದ್ರೆಗೆ ತೊಂದರೆ ಹಾಗೂ ಕೆಲವೊಮ್ಮೆ ಎರಡೂ ಸಮಸ್ಯೆಗಳಿಗೆ ಕಾರಣವಾಗಬಹುದು. ಉಸಿರುಗಟ್ಟುವಿಕೆ ಮತ್ತು ಹೈಪೋಪ್ನಿಯಾಸ್ ಸಮಸ್ಯೆ ಪುನರಾವರ್ತನೆಯಾದರೆ, ನಿದ್ರೆಗೆ ಅಡ್ಡಿಯಾಗಬಹುದು. ಇದರ ಸಂಯೋಗದಿಂದ ಆಮ್ಲಜನಕ ಶುದ್ಧೀಕರಣ ಪ್ರಕ್ರಿಯೆಗೆ ಅಡ್ಡಿಯಾಗುವುದರ ಜೊತೆಗೆ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯ ಸಿಂಡ್ರೋಮ್ (OSAS) ಅಥವಾ ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯ-ಹೈಪೋಪ್ನಿಯಾ ಸಿಂಡ್ರೋಮ್ (OSAHS) ಪದಗಳನ್ನು ಹಗಲಿನ ಸಮಯದಲ್ಲಿ ಗೋಚರಿಸುವ ಲಕ್ಷಣಗಳನ್ನು ಗುರುತಿಸುವುದಕ್ಕೆ ಬಳಸಬಹುದು. (ಉದಾಹರಣೆ: ಹಗಲಿನ ನಿದ್ರೆ, ನೆನಪಿನ ಶಕ್ತಿ ಕಡಿಮೆಯಾದ ಸಂದರ್ಭಗಳಲ್ಲಿ ಬಳಸಬಹುದು)

ಪೋಷಕರೇ ಎಚ್ಚರ: ಬೆಂಗಳೂರಿನ ಮಕ್ಕಳಲ್ಲಿ ಹೆಚ್ಚುತ್ತಿರುವ ಶ್ವಾಸನಾಳ ಉರಿಯೂತದ ರೋಗ!?ಪೋಷಕರೇ ಎಚ್ಚರ: ಬೆಂಗಳೂರಿನ ಮಕ್ಕಳಲ್ಲಿ ಹೆಚ್ಚುತ್ತಿರುವ ಶ್ವಾಸನಾಳ ಉರಿಯೂತದ ರೋಗ!?

ನಿದ್ರೆಯಲ್ಲಿ ಉಸಿರುಗಟ್ಟುವಿಕೆ ಯಾರಿಗೆ ಹೆಚ್ಚಾಗಿ ಕಾಡುವುದು?

ನಿದ್ರೆಯಲ್ಲಿ ಉಸಿರುಗಟ್ಟುವಿಕೆ ಯಾರಿಗೆ ಹೆಚ್ಚಾಗಿ ಕಾಡುವುದು?

ಸಾಮಾನ್ಯವಾಗಿ ನಿದ್ರೆಯಲ್ಲಿ ಉಸಿರುಗಟ್ಟುವಿಕೆಯು ಶೇ.25ರಷ್ಟು ಪುರುಷರು ಮತ್ತು ಶೇ.10ರಷ್ಟು ಮಹಿಳೆಯರನ್ನು ಬಾಧಿಸುತ್ತದೆ. ಈ ನಿದ್ರೆಯಲ್ಲಿ ಉಸಿರುಗಟ್ಟುವಿಕೆಯು ಶಿಶುಗಳು, ಮಕ್ಕಳು, ವಿಶೇಶವಾಗಿ 50 ವರ್ಷ ಮೇಲ್ಪಟ್ಟವರು ಹಾಗೂ ಹೆಚ್ಚಿನ ತೂಕ ಹೊಂದಿರುವವರು ಸೇರಿದಂತೆ ಎಲ್ಲಾ ವರ್ಗದ ಹಾಗೂ ವಯಸ್ಸಿನ ಜನರ ಮೇಲೂ ಪರಿಣಾಮ ಬೀರುತ್ತದೆ.

ಪ್ರತಿರೋಧಕ ನಿದ್ರೆಯಲ್ಲಿ ಉಸಿರುಗಟ್ಟುವಿಕೆ ಲಕ್ಷಣಗಳು ಯಾವುವು?

ಪ್ರತಿರೋಧಕ ನಿದ್ರೆಯಲ್ಲಿ ಉಸಿರುಗಟ್ಟುವಿಕೆ ಲಕ್ಷಣಗಳು ಯಾವುವು?

- ಹಗಲಿನ ನಿದ್ದೆ ಅಥವಾ ಆಯಾಸ

- ಎದ್ದಾಗ ಬಾಯಿ ಒಣಗುವುದು ಅಥವಾ ಗಂಟಲು ನೋವು

- ಬೆಳಗ್ಗೆ ತಲೆನೋವು

- ಏಕಾಗ್ರತೆ, ಮರೆವು, ಖಿನ್ನತೆ, ಅಥವಾ ಹುಚ್ಚುತನ

- ರಾತ್ರಿ ಬೆವರುವಿಕೆ ಮತ್ತು

- ನಿದ್ರೆಯ ಸಮಯದಲ್ಲಿ ಚಡಪಡಿಕೆ

- ಲೈಂಗಿಕ ಸಮಸ್ಯೆಗಳು

- ಗೊರಕೆ ಹೊಡೆಯುವುದು

- ಉಸಿರುಗಟ್ಟುವಂತೆ ಭಾಸವಾಗುವುದು ಅಥವಾ ಉಸಿರುಗಟ್ಟುವುದು ಮತ್ತು ದಿಢೀರನೇ ಎಚ್ಚರಗೊಳ್ಳುವುದು,

- ಬೆಳಗ್ಗೆ ಎದ್ದೇಳಲು ತೊಂದರೆ ಅಧಿಕ ರಕ್ತದೊತ್ತಡ ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಕಾಯಿಲೆ (GERD)

- ಮೂತ್ರ ವಿಸರ್ಜನೆಗೆ ಮಧ್ಯರಾತ್ರಿಯಲ್ಲಿ ಆಗಾಗ್ಗೆ ಎಚ್ಚರಗೊಳ್ಳುವುದು,

- ನಿಮ್ಮ ಪಕ್ಕದಲ್ಲಿ ಮಲಗಿದವರು ನಿಮಗಿಂತ ಮೊದಲು ನಿಮ್ಮಲ್ಲಿ ನಿದ್ರೆಯಲ್ಲಿನ ಉಸಿರುಗಟ್ಟುವಿಕೆಯನ್ನು ಗಮನಿಸಲು ಸಾಧ್ಯ

- ಮಕ್ಕಳಲ್ಲಿ ರೋಗಲಕ್ಷಣಗಳು ಸ್ಪಷ್ಟವಾಗಿಲ್ಲದಿರಬಹುದು: ಅವುಗಳ ಪೈಕಿ ಹಾಸಿಗೆ ಒದ್ದೆಯಾಗುವುದು, ಉಸಿರುಗಟ್ಟಿಸುವುದು ಅಥವಾ ರಾತ್ರಿಯಲ್ಲಿ ಬಹಳಷ್ಟು ಬೆವರುವುದು ಅವರು ಉಸಿರಾಡುವಾಗ ಪಕ್ಕೆಲುಬು ಒಳಮುಖವಾಗಿ ಚಲಿಸುತ್ತದೆ,

- ಮಕ್ಕಳಲ್ಲಿ ಕಲಿಕೆ ಮತ್ತು ನಡವಳಿಕೆಯ ಸಮಸ್ಯೆ

- ಆಲಸ್ಯ ಅಥವಾ ನಿದ್ರಾಹೀನತೆ

- ಗೊರಕೆ ಹೊಡೆಯುವ ಸಂದರ್ಭದಲ್ಲಿ ಹಲ್ಲುಗಳನ್ನು ಕಡಿಯುವುದು,

ಹವಾನಾ ಸಿಂಡ್ರೋಮ್: ಭಾರತದಲ್ಲಿ ಯುಎಸ್ ಅಧಿಕಾರಿ ಮೇಲೆ ದಾಳಿ ನಡೆಸಿದ್ಯಾರು?ಹವಾನಾ ಸಿಂಡ್ರೋಮ್: ಭಾರತದಲ್ಲಿ ಯುಎಸ್ ಅಧಿಕಾರಿ ಮೇಲೆ ದಾಳಿ ನಡೆಸಿದ್ಯಾರು?

ಪ್ರತಿರೋಧಕ ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಯಾರಿಗೆ ಅಪಾಯ?

ಪ್ರತಿರೋಧಕ ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಯಾರಿಗೆ ಅಪಾಯ?

ಪುರುಷರು

ಹಿರಿಯರು,

ಅಸ್ತಮಾ ಹೊಂದಿರುವವರು

ಧೂಮಪಾನಿಗಳು

ಮಧುಮೇಹಿಗಳು

ಅಧಿಕ ರಕ್ತದೊತ್ತಡ ಹೊಂದಿರುವವರು

ಹೃದಯಾಘಾತ ಅಥವಾ ಪಾರ್ಶ್ವವಾಯುವಿನ ಅಪಾಯ

ಅಧಿಕ ತೂಕ ಅಥವಾ ಬೊಜ್ಜು

ಮೂಗು, ಗಂಟಲು ಅಥವಾ ಬಾಯಿಯಲ್ಲಿ ಸಣ್ಣ ವಾಯುಮಾರ್ಗ ಹೊಂದುವುದು

ಪ್ರತಿರೋಧಕ ನಿದ್ರೆಯಲ್ಲಿ ಉಸಿರುಗಟ್ಟುವಿಕೆ ಚಿಕಿತ್ಸೆ ಹೇಗೆ?

ಪ್ರತಿರೋಧಕ ನಿದ್ರೆಯಲ್ಲಿ ಉಸಿರುಗಟ್ಟುವಿಕೆ ಚಿಕಿತ್ಸೆ ಹೇಗೆ?

- ಅಗತ್ಯವಿದ್ದರೆ ತೂಕ ನಷ್ಟ ಮಾಡಿಕೊಳ್ಳುವುದು

- ಶೇ,10ರಷ್ಟು ತೂಕ ಕಳೆದುಕೊಳ್ಳುವುದರಿಂದ ವ್ಯತ್ಯಾಸ ಉಂಟಾಗಬಹುದು.

- ಮದ್ಯಪಾನ ಮಾಡದಿರುವುದು ಅಥವಾ ನಿದ್ರೆ ಮಾತ್ರೆಗಳನ್ನು ತೆಗೆದುಕೊಳ್ಳಬಾರದು

- ಒಂದು ಮಗ್ಗಲಿನಲ್ಲಿ ಹೊರಳಿ ಮಲಗುವುದು. ನೀವು ಸೌಮ್ಯ ಪ್ರಮಾಣದ ನಿದ್ರೆಯಲ್ಲಿ ಉಸಿರುಗಟ್ಟುವಿಕೆ ಸಮಸ್ಯೆಯನ್ನು ಹೊಂದಿದ್ದರೆ, ಅದರಿಂದ ರಕ್ಷಣೆ ಪಡೆದುಕೊಳ್ಳಲು ಸಹಾಯವಾಗುತ್ತದೆ.

- ನಾಸಲ್ ಸ್ಪ್ರೇಗಳಿಂದ ನೀವು ನಿದ್ದೆ ಮಾಡುವಾಗ ಸೈನಸ್ ಸಮಸ್ಯೆಗಳು ಅಥವಾ ಮೂಗು ಕಟ್ಟುವಿಕೆಯಿಂದ ಉಸಿರಾಡಲು ಕಷ್ಟವಾಗಿದ್ದರೆ ಇವುಗಳು ಸಹಾಯ ಮಾಡಬಹುದು.

English summary
Singer Bappi Lahiri dies due to obstructive sleep apnea; Know what the health condition means, causes and symptoms, risks factors and treatment in kannada. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X