ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಟೋಬರ್ 22ರಂದು ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 19: ಬ್ಯಾಂಕ್ ಒಕ್ಕೂಟಗಳು ಅಕ್ಟೋಬರ್ 22ರಂದು ಮುಷ್ಕರ ಹಮ್ಮಿಕೊಂಡಿದ್ದು ಅಂದು ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

ಬ್ಯಾಂಕು ವಿಲೀನ, ಠೇವಣಿ ದರ ಇಳಿಕೆ ವಿರೋಧಿಸಿ ಮತ್ತು ಉದ್ಯೋಗ ಭದ್ರತೆಗೆ ಕರೆ ನೀಡಿ ಎರಡು ಬ್ಯಾಂಕು ಒಕ್ಕೂಟಗಳು ಇದೇ 22ರಂದು ಮುಷ್ಕರ ನಡೆಸಲು ಸಜ್ಜಾಗಿದೆ.

ದಸರಾದಿಂದ ದೀಪಾವಳಿ ಹಬ್ಬದ ಸಾಲು, 11 ದಿನ ಬ್ಯಾಂಕ್ ಬಂದ್!ದಸರಾದಿಂದ ದೀಪಾವಳಿ ಹಬ್ಬದ ಸಾಲು, 11 ದಿನ ಬ್ಯಾಂಕ್ ಬಂದ್!

ಮುಷ್ಕರದಲ್ಲಿ ನಿರತವಾಗುವ ಸಂಘಟನೆಗಳಿಗೆ ತಮ್ಮ ಬ್ಯಾಂಕಿನ ಬಹುತೇಕ ನೌಕರರು ಸದಸ್ಯರಾಗಿಲ್ಲದಿರುವುದರಿಂದ ಇದರ ಪರಿಣಾಮ ಕಡಿಮೆಯಿರಬಹುದು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ. ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು ಸಿಂಡಿಕೇಟ್ ಬ್ಯಾಂಕುಗಳು ಗ್ರಾಹಕರಿಗೆ ಸೇವೆ ಒದಗಿಸುವಲ್ಲಿ ವ್ಯತ್ಯಯವಾಗಲಿದೆ ಎಂದು ಹೇಳಿದೆ.

Bank Unions Plan Strike On October 22

ಅಖಿಲ ಭಾರತ ಬ್ಯಾಂಕು ಉದ್ಯೋಗಿಗಳ ಸಂಘ ಮತ್ತು ಭಾರತೀಯ ಬ್ಯಾಂಕು ಉದ್ಯೋಗಿಗಳ ಫೆಡರೇಶನ್ (ಬಿಇಎಫ್ಐ), ಭಾರತೀಯ ಬ್ಯಾಂಕು ಅಸೋಸಿಯೇಷನ್ ಗೆ ಮಾಹಿತಿ ನೀಡಿ ಅಕ್ಟೋಬರ್ 22ರಂದು ಬೆಳಗ್ಗೆ 6 ಗಂಟೆಯಿಂದ ಮರುದಿನ ಬೆಳಗ್ಗೆ 6 ಗಂಟೆಯವರೆಗೆ ಮುಷ್ಕರ ನಡೆಸುವುದಾಗಿ ಹೇಳಿದೆ.

English summary
Public sector banks unions are planning a strike on October 22 (Tuesday) over merger of public sector banks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X