ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕುಗಳ ವಿಲೀನ ವಿರೋಧಿಸಿ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 22: ರಾಷ್ಟ್ರೀಕೃತ ಬ್ಯಾಂಕ್‌ಗಳ ವಿಲೀನ ವಿರೋಧಿಸಿ ಅಖಿಲ ಭಾರತ ನೌಕರರ ಸಂಘ ರಾಷ್ಟ್ರವ್ಯಾಪಿ ಮುಷ್ಕರವನ್ನು ಆಯೋಜಿಸಿದೆ.

ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಮುಷ್ಕರ ಕರೆಗೆ ಬೆಂಬಲ ನೀಡಿರುವ ವಿವಿಧ ಬ್ಯಾಂಕ್​ಗಳ ನೌಕರರ ಒಕ್ಕೂಟದ ಸದಸ್ಯರು ಬೀದಿಗಿಳಿದು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾಗಿದೆ.

ಬ್ಯಾಂಕ್ ವಿಲೀನ ವಿರೋಧಿಸಿ, ಅಕ್ಟೋಬರ್ 22ರಂದು ಮುಷ್ಕರಕ್ಕೆ ಕರೆಬ್ಯಾಂಕ್ ವಿಲೀನ ವಿರೋಧಿಸಿ, ಅಕ್ಟೋಬರ್ 22ರಂದು ಮುಷ್ಕರಕ್ಕೆ ಕರೆ

ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ (ಎಐಬಿಒಎ), ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (ಎಐಬಿಒಸಿ), ಬ್ಯಾಂಕ್ ಅಧಿಕಾರಿಗಳ ರಾಷ್ಟ್ರೀಯ ಸಂಸ್ಥೆ (ನೊಬೊ), ಮತ್ತು ಭಾರತೀಯ ರಾಷ್ಟ್ರೀಯ ಬ್ಯಾಂಕ್ ಅಧಿಕಾರಿಗಳ ಕಾಂಗ್ರೆಸ್ (ಐಎನ್‌ಬಿಒಸಿ) ಇಂದಿನ ಮುಷ್ಕರ ಹೋರಾಟದಲ್ಲಿ ಭಾಗಿಯಾಗಿದ್ದಾರೆ.

Bank Strike Operations May Be Affected Today

ಖಾಸಗೀಕರಣಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕುಗಳ ವಿಲೀನ ಪ್ರಕ್ರಿಯೆಗೆ ಮುಂದಾಗಿತ್ತು. ಹಾಗಾಗಿ ಬ್ಯಾಂಕ್‌ಗಳ ವಿಲೀನ ವೇತನ ಸಮಸ್ಯೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ರಾಷ್ಟ್ರವ್ಯಾಪಿ 'ಬ್ಯಾಂಕ್' ಮುಷ್ಕರಕ್ಕೆ ಕರೆ ನೀಡಲಾಯ್ತು. ಆದರೆ, ಸರ್ಕಾರದ ಮಧ್ಯಪ್ರದೇಶದಿಂದ ಈ ರಾಷ್ಟ್ರವ್ಯಾಪಿ 'ಬ್ಯಾಂಕ್' ಮುಷ್ಕರ ಮುಂದೂಡಲಾಗಿತ್ತು.

ರಾಷ್ಟ್ರ ರಾಜಧಾನಿ ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್​​, ಕೋಲ್ಕತ್ತಾ, ಚೆನ್ನೈ ಸೇರಿದಂತೆ ಪ್ರಮುಖ ನಗರಗಳಲ್ಲಿ ನೌಕರರು ಬ್ಯಾಂಕ್​​ ಮುಷ್ಕರ ನಡೆಸಲಿದ್ದಾರೆ.

ಇದರ ಪರಿಣಾಮ ಎಲ್ಲಾ ಬ್ಯಾಂಕ್​​ಗಳಲ್ಲೂ ವಹಿವಾಟು ಸ್ಥಗಿತಗೊಂಡಿದೆ. ಬಹುತೇಕ ಎಟಿಂಗಳಲ್ಲೂ ನೋ ಕ್ಯಾಶ್​​ ಬೋರ್ಡ್​​​ ಕಾಣಿಸುವ ಸಾಧ್ಯತೆಯಿದೆ. ಮುಷ್ಕರ ಪ್ರತಿಭಟನೆಯೂ ಹಿಂಸಾಚಾರಕ್ಕೆ ತಿರುಗುವ ಸಾಧ್ಯತೆಗಳಿದ್ದು, ಎಲ್ಲೆಡೆಯೂ ಬಿಗಿ ಪೊಲೀಸ್​​ ಬಂದೋಬಸ್ತ್ ​​ಆಯೋಜಿಸಲಾಗಿದೆ.

ಸಿಬ್ಬಂದಿಗಳ ಸಮಸ್ಯೆಗಳ ಕುರಿತು ಒಂದು ಸಮಿತಿ ರಚನೆ ಮಾಡಲು ಒಪ್ಪಿಗೆ ಸೂಚಿಸಿದ್ದರಿಂದ ಒಕ್ಕೂಟ ಅನಿರ್ಧಿಷ್ಟಾವಧಿಗೆ ಮುಷ್ಕರ ಮುಂದೂಡಿತ್ತು. ಈ ಮೊದಲು ಸೆಪ್ಟೆಂಬರ್ 26-27ರಂದು 48 ಗಂಟೆಗಳ ಕಾಲ ಮುಷ್ಕರ ನಡೆಸಲು ನಿರ್ಧರಿಸಿತ್ತು ಬಳಿಕ ಮುಂದೂಡಿತ್ತು.

English summary
Bank Strike Operations May Be Affected Today, Services in state-owned banks may be affected as some of the employee's unions have decided to observe nationwide strike on Tuesday to protest against bank mergers and fall in deposit rates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X