• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗುರುವಾರ ಮುಷ್ಕರ; ಬ್ಯಾಂಕ್ ವ್ಯವಹಾರ ಸ್ಥಗಿತವಾಗಲಿದೆ

|

ನವದೆಹಲಿ, ನವೆಂಬರ್ 25: ಕೇಂದ್ರ ಕಾರ್ಮಿಕ ಸಂಘ ಗುರುವಾರ ರಾಷ್ಟ್ರವ್ಯಾಪ್ತಿ ಮುಷ್ಕರಕ್ಕೆ ಕರೆ ನೀಡಿದೆ. ಇದರಿಂದಾಗಿ ನವೆಂಬರ್ 26ರಂದು ಹಲವು ಖಾಸಗಿ ಬ್ಯಾಂಕ್‌ಗಳ ವ್ಯವಹಾರ ಸ್ಥಗಿತಗೊಳ್ಳಲಿದೆ.

ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ರಾಷ್ಟ್ರವ್ಯಾಪ್ತಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಬ್ಯಾಂಕ್ ನೌಕರರು ಸಹ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದು, ಗುರುವಾರ ಬ್ಯಾಂಕ್‌ಗಳು ಬಂದ್ ಆಗುವ ಸಾಧ್ಯತೆ ಇದೆ.

ನವೆಂಬರ್ 26ರಂದು ಆಟೋ, ಟ್ಯಾಕ್ಸಿ ಚಾಲಕರ ಮುಷ್ಕರ: ಬೇಡಿಕೆಗಳೇನು?

ಭಾರತೀಯ ಮಜ್ದೂರ್ ಸಂಘ ಹೊರತುಪಡಿಸಿ 10 ಕೇಂದ್ರ ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಬೆಂಬಲವನ್ನು ಘೋಷಣೆ ಮಾಡಿವೆ. ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಓವರ್ ಸಿಸ್ ಬ್ಯಾಂಕ್ ಬಂದ್ ಬೆಂಬಲಿಸಿಲ್ಲ.

ಡಿ.5ರ ಕರ್ನಾಟಕ ಬಂದ್; ಮಹತ್ವದ ಸೂಚನೆ ಕೊಟ್ಟ ಹೈಕೋರ್ಟ್

ಖಾಸಗಿ ವಲಯದ ಹಲವು ಬ್ಯಾಂಕ್, ವಿದೇಶಿ ಬ್ಯಾಂಕ್‌ಗಳ ಉದ್ಯೋಗಿಗಳು ಮುಷ್ಕರಕ್ಕೆ ಬೆಂಬಲ ನೀಡುವ ಸಾಧ್ಯತೆ ಇದೆ. ಸಾಮಾಜಿಕ ಜಾಲತಾಣದ ಮೂಲಕ ಹಲವಾರು ಬ್ಯಾಂಕ್‌ ಗುರುವಾರ ವ್ಯವಹಾರ ಇರುವುದಿಲ್ಲ ಎಂದು ಈಗಾಗಲೇ ಗ್ರಾಹಕರಿಗೆ ಮಾಹಿತಿ ನೀಡಿವೆ.

ಡಿ.5ರ ಕರ್ನಾಟಕ ಬಂದ್ ಕರೆ ವಾಪಸ್ ಇಲ್ಲ; ವಾಟಾಳ್ ನಾಗರಾಜ್

ಬ್ಯಾಂಕ್‌ಗಳ ಖಾಸಗೀಕರಣಕ್ಕೆ ವಿರೋಧ, ಹೊರಗುತ್ತಿಗೆ ವ್ಯವಸ್ಥೆಗೆ ವಿರೋಧ, ಬ್ಯಾಂಕ್ ಸಿಬ್ಬಂದಿ ಪರವಾಗಿ ಸೇವಾಶುಲ್ಕ ಕಡಿತ ಸೇರಿದಂತೆ ಬ್ಯಾಂಕಿಂಗ್‌ಗೆ ಸಂಬಂಧಪಟ್ಟ ಬೇಡಿಕೆಗಳು ಮುಷ್ಕರದಲ್ಲಿ ಸೇರಿದ್ದು, ಉದ್ಯೋಗಿಗಳು ಪಾಲ್ಗೊಳ್ಳುವುದು ಖಚಿತವಾಗಿದೆ.

ಬ್ಯಾಂಕ್ ಉದ್ಯೋಗಿಗಳು ಮುಷ್ಕರದಲ್ಲಿ ಪಾಲ್ಗೊಂಡರೂ ಸಹ ಡಿಜಿಟಲ್ ವ್ಯವಹಾರಕ್ಕೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ. ನೆಟ್ ಮತ್ತು ಮೊಬೈಲ್ ಬ್ಯಾಂಕಿಂಗ್ ಕಾರ್ಯ ನಿರತರವಾಗಿರಲಿದೆ. ಎಟಿಎಂನಿಂದ ಹಣವನ್ನು ಸಹ ವಿತ್ ಡ್ರಾ ಮಾಡಬಹುದಾಗಿದೆ.

ಶುಕ್ರವಾರ ಬ್ಯಾಂಕ್‌ಗಳು ಎಂದಿನಂತೆ ಕಾರ್ಯ ನಿರ್ವಹಣೆ ಮಾಡಲಿವೆ. ಶನಿವಾರ ಮತ್ತು ಭಾನವಾರ ಪುನಃ ಬ್ಯಾಂಕ್ ರಜೆ ಇರಲಿದ್ದು, ಸೋಮವಾರದಿಂದ ವ್ಯವಹಾರಗಳು ಸಹಜ ಸ್ಥಿತಿಗೆ ಬರಲಿವೆ.

English summary
Public sectors banks across India are planning to go on strike on Thursday, November 26. Strike will not affect digital transactions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X