ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಪ್ಟೆಂಬರ್ ತಿಂಗಳಲ್ಲಿ ದೇಶದ ವಿವಿಧ ರಾಜ್ಯಗಳ ಬ್ಯಾಂಕು ರಜೆ ದಿನ ಪಟ್ಟಿ

By ಒನ್ಇಂಡಿಯಾ ಡೆಸ್ಕ್
|
Google Oneindia Kannada News

ನವದೆಹಲಿ, ಆಗಸ್ಟ್ 26: ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿ ಐ) ಸೆಪ್ಟೆಂಬರ್ ತಿಂಗಳ ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸಿದೆ. ಆಗಸ್ಟ್ ತಿಂಗಳಲ್ಲಿ ಹಲವು ರಾಜ್ಯಗಳಲ್ಲಿ ಕೊವಿಡ್ 19 ಕರ್ಫ್ಯೂ, ಲಾಕ್ ಡೌನ್ ಮುಗಿದಿದ್ದು, ಅನ್ ಲಾಕ್ ಪ್ರಕ್ರಿಯೆ ಜಾರಿಯಲ್ಲಿದೆ. ಕೆಲವೆಡೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದೆ. ಆದರೆ, ಬ್ಯಾಂಕುಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಮಾತ್ರ ಜುಲೈ ತಿಂಗಳಂತೆ ಆಗಸ್ಟ್ ತಿಂಗಳಲ್ಲೂ ಕಡಿಮೆ ರಜೆ ದಿನಗಳಿತ್ತು. ಆದರೆ, ಸೆಪ್ಟೆಂಬರ್ ತಿಂಗಳಲ್ಲಿ ಹಬ್ಬದ ದೆಸೆಯಿಂದ ಹೆಚ್ಚಿನ ರಜೆ ನಿರೀಕ್ಷಿಸಲಾಗಿದೆ.

ಸಾರ್ವಜನಿಕ ವಲಯ, ಖಾಸಗಿ ವಲಯ, ವಿದೇಶಿ ಹಾಗೂ ಸಹಕಾರಿ ಬ್ಯಾಂಕ್ ಸೇರಿದಂತೆ ಪ್ರಾದೇಶಿಕ ಬ್ಯಾಂಕುಗಳು ಎಲ್ಲಾ ಭಾನುವಾರ, 2 ಮತ್ತು 4ನೇ ಶನಿವಾರ ಸರ್ಕಾರಿ ರಜೆ ಇರುತ್ತದೆ. ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ಬ್ಯಾಂಕ್ ರಜಾ ದಿನವಿರಲಿದೆ.

2021: ಶ್ರಾವಣ, ಭಾದ್ರಪದ, ಕಾರ್ತಿಕ, ಅಶ್ವಯುಜ ಮಾಸದ ಹಬ್ಬಹರಿದಿನ, ರಜಾದಿನಗಳ ಪಟ್ಟಿ2021: ಶ್ರಾವಣ, ಭಾದ್ರಪದ, ಕಾರ್ತಿಕ, ಅಶ್ವಯುಜ ಮಾಸದ ಹಬ್ಬಹರಿದಿನ, ರಜಾದಿನಗಳ ಪಟ್ಟಿ

ಪ್ರತಿ ವರ್ಷ ಗಣರಾಜ್ಯದಿನ (ಜನವರಿ 26), ಸ್ವಾತಂತ್ರ್ಯೋತ್ಸವ ದಿನ (ಆಗಸ್ಟ್ 15) ಹಾಗೂ ಗಾಂಧಿ ಜಯಂತಿ (ಅಕ್ಟೋಬರ್ 02) ದಿನದಂದು ಸರ್ಕಾರಿಸ್ವಾಮ್ಯದ ಕಚೇರಿ, ಬ್ಯಾಂಕ್ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳಿಗೂ ರಜಾ ದಿನವಿರಲಿದೆ. ಅಸ್ಸಾಂನ ಬಿಹು, ಕೇರಳ ಓಣಂ ಸೇರಿದಂತೆ ಪ್ರಾದೇಶಿಕ ಹಬ್ಬಗಳ ದಿನದಂದು ಆಯಾ ರಾಜ್ಯಗಳಲ್ಲಿ ಬ್ಯಾಂಕ್ ಕಾರ್ಯ ನಿರ್ವಹಿಸುವುದಿಲ್ಲ.

Bank Holidays in September 2021: Full List of Bank Holiday Dates

ಗಮನಿಸಿ: ಕರ್ನಾಟಕದಲ್ಲಿ ಗಣೇಶ ಚತುರ್ಥಿಗೆ ಒಂದು ದಿನ ಮಾತ್ರ ರಜೆ ಲಭ್ಯವಾಗಲಿದೆ. ಮಿಕ್ಕಂತೆ ವಿವಿಧ ರಾಜ್ಯಗಳ ರಜಾ ದಿನಗಳ ಬಗ್ಗೆ ವಿವರ ಮುಂದಿದೆ..

ಸೆಪ್ಟೆಂಬರ್ 2021ರಲ್ಲಿ ಬ್ಯಾಂಕ್ ರಜಾ ದಿನ

Recommended Video

ಧರ್ಮ ಸಂಕಟಕ್ಕೆ ಸಿಲುಕಿ ಮದುವೆಯಾದ ಹನುಮಂತನ ಹೆಂಡತಿ ಯಾರು? | Oneindia Kannada
ಸೆಪ್ಟೆಂಬರ್ 2021ರಲ್ಲಿ ಬ್ಯಾಂಕ್ ರಜಾ ದಿನ
ದಿನ ದಿನಾಂಕ ರಜಾ ದಿನ ನಗರ
ಸೆಪ್ಟೆಂಬರ್ 5, 2021 ಭಾನುವಾರ ವಾರದ ರಜೆ ದೇಶದೆಲ್ಲೆಡೆ
ಸೆಪ್ಟೆಂಬರ್ 8 ಬುಧವಾರ ಶಂಕರದೇವ ತಿಥಿ ಗುವಾಹಟಿ
ಸೆಪ್ಟೆಂಬರ್ 9 ಗುರುವಾರ ತೀಜ್ (ಹರಿತಾಲಿಕಾ) ಗ್ಯಾಂಗ್ ಟಕ್
ಸೆಪ್ಟೆಂಬರ್ 10 ಶುಕ್ರವಾರ ಗಣೇಶ ಚತುರ್ಥಿ ಬೆಂಗಳೂರು, ಅಹಮದಾಬಾದ್, ಬೇಲಾಪುರ್, ಭುವನೇಶ್ವರ್, ಚೆನ್ನೈ, ಹೈದರಾಬಾದ್, ಮುಂಬೈ, ಪಣಜಿ
ಸೆಪ್ಟೆಂಬರ್ 11 ಶನಿವಾರ 2ನೇ ಶನಿವಾರ/ ಗಣೇಶ ಪಂಚಮಿ ಪಣಜಿ
ಸೆಪ್ಟೆಂಬರ್ 12 ಭಾನುವಾರ ವಾರದ ರಜೆ ದೇಶದೆಲ್ಲೆಡೆ
ಸೆಪ್ಟೆಂಬರ್ 17 ಶುಕ್ರವಾರ ಕರ್ಮ ಪೂಜಾ ರಾಂಚಿ
ಸೆಪ್ಟೆಂಬರ್ 19 ಭಾನುವಾರ ವಾರದ ರಜೆ ದೇಶದೆಲ್ಲೆಡೆ
ಸೆಪ್ಟೆಂಬರ್ 20 ಸೋಮವಾರ ಇಂದ್ರಜಾತ್ರಾ ಗ್ಯಾಂಗ್ ಟಕ್
ಸೆಪ್ಟೆಂಬರ್ 21 ಮಂಗಳವಾರ ಶ್ರೀನಾರಾಯಣ ಗುರು ಸಮಾಧಿ ದಿನ ಕೊಚ್ಚಿ, ತಿರುವನಂತಪುರಂ
ಸೆಪ್ಟೆಂಬರ್ 25 ಶನಿವಾರ 4ನೇ ಶನಿವಾರ ಭಾರತದೆಲ್ಲೆಡೆ
ಸೆಪ್ಟೆಂಬರ್ 26 ಭಾನುವಾರ ವಾರದ ರಜೆ ದೇಶದೆಲ್ಲೆಡೆ

ಇದಲ್ಲದೆ, ಸೆಪ್ಟೆಂಬರ್ 9ರಂದು ಗೌರಿ ತೃತಿಯಾ ಹಬ್ಬದ ಸಂದರ್ಭದಲ್ಲಿ ನಿರ್ಬಂಧಿತ ರಜೆ, ಸೆಪ್ಟೆಂಬರ್ 19 ರಂದು ಅನಂತ ಚತುರ್ದಶೀ, ನೋಂಪು ದಿನದಂದು ಬ್ಯಾಂಕ್ ಸಿಬ್ಬಂದಿ ರಜೆ ಮೇಲೆ ಹೋಗುವ ಸಂದರ್ಭ ಒದಗಬಹುದು. ಕೊರೊನಾವೈರಸ್ ಸಾಂಕ್ರಾಮಿಕ ನಿರ್ಬಂಧ ಮಾರ್ಗಸೂಚಿ ನಡುವೆಯೂ ಆನ್ ಲೈನ್ ಬ್ಯಾಂಕಿಂಗ್, ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಎಂದಿನಂತೆ ಸಕ್ರಿಯವಾಗಿರಲಿದೆ ಎಂದು ಆರ್ ಬಿ ಐ ತಿಳಿಸಿದೆ.

English summary
Bank Holidays In September 2021: Let's have a look at important bank dates when banks will remain closed in the month of September. Take a look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X