ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಹಕರೇ ಎಚ್ಚರ! ಮಾರ್ಚ್ ತಿಂಗಳಿನಲ್ಲಿ ಬ್ಯಾಂಕುಗಳಿಗೆ ಸಾಲು ಸಾಲು ರಜೆ

|
Google Oneindia Kannada News

ಬೆಂಗಳೂರು, ಮಾರ್ಚ್ 2 : ಮಾರ್ಚ್ ತಿಂಗಳಿನಲ್ಲಿ ಸಾಲು ಸಾಲು ರಜೆಗಳಿದ್ದು, ಬ್ಯಾಂಕಿಂಗ್ ವ್ಯವಹಾರದಲ್ಲಿ ವ್ಯತ್ಯಯ ಕಂಡು ಬರುವ ಸಾಧ್ಯತೆಯಿದೆ. ಈ ವರ್ಷದ ಫೆಬ್ರವರಿಯಲ್ಲಿ 29 ದಿನಗಳಿತ್ತು. 2 ಮತ್ತು 4ನೇ ಶನಿವಾರ, ಭಾನುವಾರ ಸೇರಿ ಬ್ಯಾಂಕ್‌ಗಳಿಗೆ ಹಲವು ರಜೆಗಳಿತ್ತು. ಕಳೆದ ತಿಂಗಳ ಮೊದಲ ದಿನವೇ ಬ್ಯಾಂಕ್ ಸಿಬ್ಬಂದಿ ಮುಷ್ಕರದಿಂದಾಗಿ ಬ್ಯಾಂಕ್ ವ್ಯವಹಾರ ಬಂದ್ ಆಗಿತ್ತು. ಒಟ್ಟಾರೆ, ಕಳೆದ ತಿಂಗಳು ಬ್ಯಾಂಕ್ ಸಿಬ್ಬಂದಿಗಳಿಗೆ ಒಟ್ಟು 10 ರಜೆಗಳು ಸಿಕ್ಕಿದಂತೆ ಆಗುತ್ತದೆ. 4 ಭಾನುವಾರ, 2 ಮತ್ತು 4ನೇ ಶನಿವಾರ ಎಂದಿನಂತೆ ಬ್ಯಾಂಕ್ ರಜೆ ಸಿಕ್ಕಿತ್ತು.

Recommended Video

Tejasvi Surya Exclusive interview part 2 | Tejasvi Surya | Oneindia Kannada

ಬ್ಯಾಂಕ್ ಸಿಬ್ಬಂದಿಗಳಿಗೆ ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ರಜಾದಿನವಿರಲಿದೆ. ಇದಲ್ಲದೆ, ಯಾವೆಲ್ಲ ದಿನಗಳಲ್ಲಿ ರಜಾ ಸಿಗಬಹುದು ಎಂಬುದನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್ ಬಿಐ) ಪ್ರಕಟಿಸಿದೆ. ಸಾರ್ವತ್ರಿಕ ರಜಾ ದಿನ, ನಿರ್ಬಂಧಿತ ರಜಾ ದಿನಗಳನ್ನು ಇದರಲ್ಲಿ ನೀಡಲಾಗಿದೆ. ಕೆಲವು ರಜಾ ದಿನಗಳು ಕೆಲವು ಪ್ರದೇಶಕ್ಕೆ ಮಾತ್ರ ಸೀಮಿತವಾಗಿರಲಿದೆ.

2020ನೇ ಸಾಲಿನ ಬ್ಯಾಂಕ್ ರಜಾ ದಿನಗಳ ಸಂಪೂರ್ಣ ಪಟ್ಟಿ2020ನೇ ಸಾಲಿನ ಬ್ಯಾಂಕ್ ರಜಾ ದಿನಗಳ ಸಂಪೂರ್ಣ ಪಟ್ಟಿ

ಅಸ್ಸಾಂನ ಬಿಹು, ಕೇರಳ ಓಣಂ ಸೇರಿದಂತೆ ಪ್ರಾದೇಶಿಕ ಹಬ್ಬಗಳ ದಿನದಂದು ಆಯಾ ರಾಜ್ಯಗಳಲ್ಲಿ ಬ್ಯಾಂಕ್ ಕಾರ್ಯ ನಿರ್ವಹಿಸುವುದಿಲ್ಲ ಎಂದು ಆರ್ ಬಿಐ ಪ್ರಕಟಿಸಿದೆ.

Bank Holidays 2020 in March, How many days Bank will be closed

ಮಾರ್ಚ್ 8 ರಂದು ಭಾನುವಾರ ರಜೆ ಇದೆ. ಮಾರ್ಚ್ 10 ರಂದು ಹೋಳಿಹುಣ್ಣಿಮೆ ಪ್ರಯುಕ್ತ ರಜೆ ಇರುತ್ತದೆ. ಮಾರ್ಚ್ 11 ರಿಂದ 13 ರವರೆಗೆ 3 ದಿನಗಳ ಮುಷ್ಕರ ನಡೆದರೆ, ಮಾರ್ಚ್ 14ರಂದು ಎರಡನೇ ಶನಿವಾರ, ಮಾರ್ಚ್ 15 ಭಾನುವಾರ ರಜೆ ಸಿಗಲಿದೆ. ಸರಣಿಯಾಗಿ 6 ದಿನಗಳ ಕಾಲ ಬ್ಯಾಂಕ್ ಗಳ ಬಾಗಿಲು ಬಂದ್ ಮಾಡಿದರೆ, ಗ್ರಾಹಕರಿಗೆ ಸಮಸ್ಯೆ ಎದುರಾಗಲಿದೆ. ಹೀಗಾಗಿ, ಬಹುತೇಕ ಮಾರ್ಚ್ 2ನೇ ವಾರ ಬ್ಯಾಂಕುಗಳು ಕಾರ್ಯನಿರ್ವಹಿಸುವ ಸಾಧ್ಯತೆ ಕಡಿಮೆ. ಆದರೆ, ಮೂರು ದಿನಗಳ ಮುಷ್ಕರ ಹಿಂಪಡೆಯುವ ಸಾಧ್ಯತೆ ಹೆಚ್ಚಿರುವುದರಿಂಡ ಗ್ರಾಹಕರಿಗೆ ಕೊಂಚ ನೆಮ್ಮದಿ ಸಿಕ್ಕಿದೆ.

ಕೇಂದ್ರ ಸರ್ಕಾರಿ ನೌಕರರಿಗೆ 2020ರ ರಜಾ ದಿನಗಳ ಪಟ್ಟಿಕೇಂದ್ರ ಸರ್ಕಾರಿ ನೌಕರರಿಗೆ 2020ರ ರಜಾ ದಿನಗಳ ಪಟ್ಟಿ

ಮಾರ್ಚ್ ತಿಂಗಳಿನಲ್ಲಿರುವ ರಜಾದಿನಗಳು:
ಮಾರ್ಚ್ 1: ಭಾನುವಾರ.
ಮಾರ್ಚ್ 5: ಬುಧವಾರ-ಪಂಚಾಯತಿ ರಾಜ್ ದಿನ(ಒಡಿಶಾ)
ಮಾರ್ಚ್ 6: ಶುಕ್ರವಾರ- ಮಿಜೋರಾಂನಲ್ಲಿ ಛಾಪ್ಚುರ್ ಕುತ್ ಹಬ್ಬ
ಮಾರ್ಚ್ 8: ಭಾನುವಾರ
ಮಾರ್ಚ್ 9: ಸೋಮವಾರ-ಉತ್ತರಪ್ರದೇಶದಲ್ಲಿ ಹಜರತ್ ಅಲಿ ವಾರ್ಷಿಕೋತ್ಸವ
ಮಾರ್ಚ್ 10: ಹೋಳಿ
ಮಾರ್ಚ್ 14: ಎರಡನೇ ಶನಿವಾರ
ಮಾರ್ಚ್ 15: ಭಾನುವಾರ
ಮಾರ್ಚ್ 22: ಭಾನುವಾರ
ಮಾರ್ಚ್ 23: ಸೋಮವಾರ-ಹರ್ಯಾಣದಲ್ಲಿ ಶಹೀದ್ ಭಗತ್ ಸಿಂಗ್ ದಿನ
ಮಾರ್ಚ್ 25: ಬುಧವಾರ- ಕರ್ನಾಟಕ, ಆಂಧ್ರಪ್ರದೇಶದಲ್ಲಿ ಯುಗಾದಿ, ಮಹಾರಾಷ್ಟ್ರದಲ್ಲಿ ಗುಡಿ ಪಡ್ವಾ, ಮಣಿಪುರದಲ್ಲಿ ಸಜಿಬು ನೊಗ್ಮಾಪನ್ಬಾ, ಜಮ್ಮು ಮತ್ತು ಕಾಶ್ಮೀರದಲ್ಲಿ ನವರಾತ್ರಾ.

ಮಾರ್ಚ್ 01ರಿಂದ ಬ್ಯಾಂಕಿಂಗ್ ವಹಿವಾಟಿನಲ್ಲಿ ಏನೇನು ಬದಲಾವಣೆ?ಮಾರ್ಚ್ 01ರಿಂದ ಬ್ಯಾಂಕಿಂಗ್ ವಹಿವಾಟಿನಲ್ಲಿ ಏನೇನು ಬದಲಾವಣೆ?

ಮಾರ್ಚ್ 26: ಗುರುವಾರ-ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಉತ್ತರಾಖಂಡ್ ರಾಜ್ಯಗಳಲ್ಲಿ ಛೇತಿ ಚಾಂದ್ ವಾರ್ಷಿಕೋತ್ಸವ.
ಮಾರ್ಚ್ 27: ಶುಕ್ರವಾರ- ಜಾರ್ಖಂಡ್ ರಾಜ್ಯದಲ್ಲಿ ಸಾರ್ಹುಲ್ ಹಬ್ಬ.
ಮಾರ್ಚ್ 28: ನಾಲ್ಕನೇ ಶನಿವಾರ.
ಮಾರ್ಚ್ 29: ಭಾನುವಾರ.

English summary
Banks across India will remain closed for 18 days March on account of various festivals, national as well as regional holidays.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X