ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕ್ ವಂಚನೆ: 35 ಕೇಸ್, 7 ಸಾವಿರ ಕೋಟಿ ವಂಚನೆ, 169 ಕಡೆ ದಾಳಿ

|
Google Oneindia Kannada News

ನವದೆಹಲಿ, ನವೆಂಬರ್ 05: ದೇಶದ ವಿವಿಧೆಡೆ ಮಂಗಳವಾರ ಬೆಳಗ್ಗಿನಿಂದ ಕೇಂದ್ರೀಯ ತನಿಖಾ ಸಂಸ್ಥೆ ಸಿಬಿಐ ದಾಳಿ ನಡೆಸುತ್ತಿದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಸುಮಾರು 169 ತಾಣಗಳಲ್ಲಿ ಶೋಧ ಕಾರ್ಯ ಮುಂದುವರೆಸಲಾಗಿದೆ.

ವಸೂಲಾಗದ ಸಾಲದಿಂದ ಬ್ಯಾಂಕಿಂಗ್ ಕ್ಷೇತ್ರಕ್ಕೆ 1.76 ಲಕ್ಷ ಕೋಟಿ ನಷ್ಟವಸೂಲಾಗದ ಸಾಲದಿಂದ ಬ್ಯಾಂಕಿಂಗ್ ಕ್ಷೇತ್ರಕ್ಕೆ 1.76 ಲಕ್ಷ ಕೋಟಿ ನಷ್ಟ

ಸುಮಾರು 35ಕ್ಕೂ ಅಧಿಕ ಆರ್ಥಿಕ ಅಪರಾಧ ಪ್ರಕರಣಗಳಿಗೆ ದಾಖಲಿಸಿಕೊಂಡಿದೆ. ಸುಮಾರು 7,000 ಕೋಟಿ ರೂಪಾಯಿಗೂ ಅಧಿಕ ಮೊತ್ತದ ವಂಚನೆಗೆ ಸಂಬಂಧಿಸಿದಂತೆ ದಾಳಿ ನಡೆಸಲಾಗುತ್ತಿದೆ.

Bank fraud: CBI raid across 169 locations

ಎಲ್ಲೆಲ್ಲಿ ದಾಳಿ?: ಕರ್ನಾಟಕ, ಆಂಧ್ರಪ್ರದೇಶ, ಚಂದೀಗಢ, ದೆಹಲಿ, ಗುಜರಾತ್, ಹರ್ಯಾಣ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಪಂಜಾಬ್, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ, ಉತ್ತರಾಖಂಡ, ದಾದ್ರ, ನಗರ್​ ಹವೇಲಿಗಳಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ.

ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಕೆಲ ತಿಂಗಳುಗಳ ಹಿಂದೆ ದಾಳಿ ನಡೆಸಲಾಗಿತ್ತು. ಈಗ ಯಾವ ಬ್ಯಾಂಕುಗಳಲ್ಲಿ ವಂಚನೆ ನಡೆದಿದೆ ಎನ್ನುವುದರ ಬಗ್ಗೆ ಯಾವುದೇ ಮಾಹಿತಿ ಹೊರ ಹಾಕಿಲ್ಲ.

ಇತ್ತೀಚೆಗೆ ಸುದ್ದಿಯಲ್ಲಿರುವ ಪಿಎಂಸಿ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 21,000 ಬೇನಾಮಿ ಖಾತೆಗಳೂ ಸೃಷ್ಟಿಸಿದ್ದು ಪತ್ತೆಯಾಗಿತ್ತು. ಸುಮಾರು 4,300 ಕೋಟಿ ರು ಸಾಲವನ್ನು ಎಚ್ ಡಿ ಐಎಲ್ ನೀಡಿ ದಿವಾಳಿ ಹಂತಕ್ಕೆ ತಂದ ರಾಕೇಶ್ ಸಾರಂಗ್ ವಾಧವನ್, ಪಿಎಂಸಿ ಎಂಡಿ ಜಾಯ್ ಥಾಮಸ್, ಚೇರ್ಮನ್ ವರ್ಯಾಂ ಸಿಂಗ್, ನಿರ್ದೇಶಕ ಎಸ್ಎಸ್ ಅರೋರಾ ಅವರನ್ನು ಮುಂಬೈ ಪೊಲೀಸ್ (ಆರ್ಥಿಕ ಅಪರಾಧ ವಿಭಾಗ) ಬಂಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Bank fraud: CBI is conducting raid across the country in 169 locations related more than 35 cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X