ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂನ್ 24ರ ಬ್ಯಾಂಕ್ ನೌಕರರ ಮುಷ್ಕರ ಮುಂದಕ್ಕೆ

|
Google Oneindia Kannada News

ನವದೆಹಲಿ, ಜೂ. 23 : ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜೂನ್ 24ರಂದು ಬ್ಯಾಂಕ್ ನೌಕರರು ಕರೆನೀಡಿದ್ದ ದೇಶವ್ಯಾಪಿ ಮುಷ್ಕರವನ್ನು ಮುಂದೂಡಲಾಗಿದೆ. ಹಾಗಾಗಿ ಬುಧವಾರ ಬ್ಯಾಂಕ್ ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.

ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಸಮೂಹದಿಂದ ನಮ್ಮನ್ನು ಪ್ರತ್ಯೇಕಿಸ ಬೇಕು ಎನ್ನುವ ಎಸ್‌ಬಿಐನ ಸಹವರ್ತಿ ಬ್ಯಾಂಕುಗಳ ಪ್ರಮುಖ ಬೇಡಿಕೆಯಾಗಿತ್ತು. ಸದ್ಯ ಸಂಗತಿ ಸರ್ಕಾರದ ಗಮನಕ್ಕೆ ಬಂದಿರುವುದರಿಂದ ಮುಷ್ಕರವನ್ನು ಸದ್ಯಕ್ಕೆ ಕೈಬಿಡಲು ನಿರ್ಧರಿಸಲಾಗಿದೆ ಎಂದು ಎಐಬಿಇಎ ಪ್ರಧಾನ ಕಾರ್ಯದರ್ಶಿ ಸಿ.ಎಚ್‌.ವೆಂಕಟಾಚಲಂ ತಿಳಿಸಿದ್ದಾರೆ.[ಕಾವೇರಿ ಬ್ಯಾಂಕಿನಲ್ಲಿ ಕನ್ನಡ ಬಲ್ಲವರಿಗೆ ಉದ್ಯೋಗ]

bank

ಎಸ್‌ಬಿಐನ ಸಹವರ್ತಿ ಬ್ಯಾಂಕುಗಳಾದ ಸ್ಟೇಟ್‌ ಬ್ಯಾಂಕ್‌ ಆಫ್‌ ಬಿಕಾನೇರ್‌ ಮತ್ತು ಜೈಪುರ, ಸ್ಟೇಟ್‌ ಬ್ಯಾಂಕ್‌ ಆಫ್‌ ಟ್ರಾವಂಕೂರ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಪಟಿಯಾಲ, ಸ್ಟೇಟ್‌ ಬ್ಯಾಂಕ್‌ ಆಫ್ ಮೈಸೂರು ಮತ್ತು ಸ್ಟೇಟ್‌ ಬ್ಯಾಂಕ್‌ ಆಫ್‌ ಹೈದರಾಬಾದ್ ಮುಷ್ಕರಕ್ಕೆ ಬೆಂಬಲ ನೀಡಿದ್ದವು.

ಆದರೆ ನಮ್ಮ ಬೇಡಿಕೆ ಈಡೇರಿಕೆಗೆ ಒಂದು ಅವಧಿಯನ್ನು ಸೀಮಿತ ಮಾಡಿಕೊಳ್ಳುತ್ತೇವೆ. ಚರ್ಚೆ ಮಾಡಿ ಮತ್ತೆ ಹೋರಾಟವನ್ನು ಮುಂದುವರಿಸುವ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದ್ದಾರೆ.[ಎಚ್ ಡಿಎಫ್ ಸಿ ಬ್ಯಾಂಕ್ ಎಟಿಎಂ ಇನ್ಮುಂದೆ ಪೇಪರ್ ಲೆಸ್]

2015ರ ಜನವರಿ ಮತ್ತು ಫೆಬ್ರವರಿಯಲ್ಲಿ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಇಟ್ಟುಕೊಂಡು ಬ್ಯಾಂಕ್ ನೌಕರರು ಮುಷ್ಕರ ನಡೆಸಿದ್ದರು. ನಂತರ ಇತ್ತೀಚೆಗೆ ಬ್ಯಾಂಕ್ ನೌಕರರ ವೇತನದಲ್ಲಿ ಗಣನೀಯ ಹೆಚ್ಚಳ ಮಾಡಲಾಗಿತ್ತು.

ಸಂಘಟನೆ ಇಟ್ಟಿದ್ದ ಬೇಡಿಕೆಗಳು ಯಾವವು?
* ಭಾರತೀಯ ಸ್ಟೇಟ್ ಬ್ಯಾಂಕ್‌ನಿಂದ ಸಹಬ್ಯಾಂಕ್‌ಗಳ ಸಂಪರ್ಕ ಮುಕ್ತ ಮಾಡಬೇಕು.
* ಕಾರ್ಮಿಕ ಒಕ್ಕೂಟಗಳ ಪ್ರಾತಿನಿಧ್ಯ ಮತ್ತು ಹಕ್ಕುಗಳಿಗೆ ಯಾವುದೇ ನಿರ್ಬಂಧ ಹೇರಬಾರದು
* ಸಹಾನುಭೂತಿಯ ನೇಮಕ, ಉಪಸಿಬ್ಬಂದಿ ಮತ್ತು ಅರೆಕಾಲಿಕ ಸಿಬ್ಬಂದಿ ನೇಮಕದಲ್ಲಿ ಇರುವ ಗೊಂದಲ ಬಗೆಹರಿಸಬೇಕು
* ಭಾರತೀಯ ಸ್ಟೇಟ್ ಬ್ಯಾಂಕ್ ಆಡಳಿತ ಮಂಡಳಿ ನಡೆಸುತ್ತಿರುವ ಅರಧಿಕಾರ ಚಲಾವಣೆಗೆ ಕಡಿವಾಣ ಹಾಕಬೇಕು.

English summary
A strike called by All India Bank Employees Association (AIEBA) on June 24 to press for the demands of employees of associate banks of State Bank of India (SBI ) has been postponed, said a top union leader. "The June 24 strike has been postponed. We will meet union ministers for finance and labour and complain about the anti-employee stand of SBI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X