ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣ ಭಾರತಕ್ಕೆ ಬಾಂಗ್ಲಾದೇಶಿ ಉಗ್ರರ ಸ್ಥಳಾಂತರ..?

By Kiran B Hegde
|
Google Oneindia Kannada News

ಪಶ್ಚಿಮ ಬಂಗಾಳ ರಾಜ್ಯದ ಬರ್ದ್ವಾನ್ ನಗರದಲ್ಲಿ ಬಾಂಬ್ ಸ್ಫೋಟಗೊಂಡ ನಂತರ ಉಗ್ರರು ದಕ್ಷಿಣ ಭಾರತಕ್ಕೆ ತಮ್ಮ ನೆಲೆ ಬದಲಾಯಿಸಿದ್ದಾರೆ. ತೋಟದಲ್ಲಿ ಮಾಲಿಗಳಾಗಿ ಹಾಗೂ ಕಟ್ಟಡಗಳ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ, ಸ್ಫೋಟದ ಪ್ರಮುಖ ಆರೋಪಿಯಾಗಿರುವ ಕೌಸರ್ ಇನ್ನೂ ಬಾಂಗ್ಲಾದೇಶಕ್ಕೆ ಪಾರಾಗಿಲ್ಲ ಹಾಗೂ ಭಾರತದಲ್ಲಿಯೇ ಹಾಯಾಗಿದ್ದಾನೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಉದ್ದೇಶಿತ ಕಾರ್ಯಾಚರಣೆಗಾಗಿ ಉಗ್ರರು ಈಗಾಗಲೇ 18 ಕೋಟಿ ರೂಪಾಯಿಗಳಷ್ಟು ಬಂಡವಾಳ ಹೂಡಿದ್ದಾರೆ ಮತ್ತು ಅದನ್ನು ವ್ಯರ್ಥವಾಗಲು ಖಂಡಿತ ಅವಕಾಶ ನೀಡುವುದಿಲ್ಲ. ದೇಶದೆಲ್ಲೆಡೆ ತಮ್ಮ ಬೆಂಬಲಿಗರನ್ನು ಹೊಂದಿದ್ದಾರೆ. ಸ್ಫೋಟದ ಪ್ರಕರಣವನ್ನು ಜನರು ಮರೆಯುತ್ತಿದ್ದಂತೆ ಬೆಂಗಲಿಗರು ಚಟುವಟಿಕೆ ಆರಂಭಿಸಬಹುದು.

07-burdwan-blast

ಜೆಎಂಬಿ ಕಾರ್ಯಾಚರಣೆ ದಕ್ಷಿಣಕ್ಕೆ ಸ್ಥಳಾಂತರ?

ಭಾರತೀಯರಂತೆ ನಟಿಸುತ್ತಿರುವ ಬಾಂಗ್ಲಾದೇಶ ಮೂಲದ ಉಗ್ರರ ಸಂಖ್ಯೆ ಸುಮಾರು 6000 ದಷ್ಟಿದೆ. ದಕ್ಷಿಣ ಭಾರತಕ್ಕೆ ಸ್ಥಳಾಂತರಗೊಂಡಿರುವ ಅವರು ಹಾಗೂ ಕಟ್ಟಡ ನಿರ್ಮಾಣ ಕೂಲಿ ಕಾರ್ಮಿಕರಂತೆ ನಟಿಸುತ್ತಿದ್ದಾರೆ. ಇವರೆಲ್ಲ ತಾವು ಭಾರತದ ಪ್ರಜೆಗಳು ಎಂಬುದಕ್ಕೆ ಅಧಿಕೃತ ದಾಖಲೆಗಳನ್ನು ಹೊಂದಿದ್ದಾರೆ. ಆದ್ದರಿಂದ ನಾವು ಅಸಹಾಯಕರಾಗಿದ್ದೇವೆಂದು ಎನ್ಐಎ ಅಧಿಕಾರಿಗಳು ಹೇಳಿದ್ದಾರೆ.

ಅವರೆಲ್ಲರೂ ದೀರ್ಘ ಕಾಲದವರೆಗೆ ಬೇರೆ ಬೇರೆಯಾಗಿ ಉಳಿಯುತ್ತಾರೆ. ನಂತರ ಮತ್ತೆ ಒಂದಾಗಿ ಚಟುವಟಿಕೆ ಆರಂಭಿಸುತ್ತಾರೆ. ತಾವು ನಡೆಸಬೇಕಾದ ಕಾರ್ಯಾಚರಣೆಗಾಗಿ ದೀರ್ಘ ಕಾಲದವರೆಗೆ ಕಾಯಬೇಕೆಂಬುದನ್ನೂ ಅವರು ಅರಿತಿದ್ದಾರೆ. 2005ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಪ್ರಮುಖ ಕಾರ್ಯಾಚರಣೆಯ ನಂತರ ಸುಮಾರು ಆರು ವರ್ಷಗಳ ಕಾಲ ಸುಮ್ಮನಿದ್ದು ಮತ್ತೆ ಈಗ ಚಟುವಟಿಕೆ ಆರಂಭಿಸಿದ್ದಾರೆ. ಇದು ಅವರ ಸಹನೆಯ ಶಕ್ತಿಗೆ ಸಾಕ್ಷಿ ಎಂದರು.

ಜೆಎಂಬಿ ಮತ್ತು ಅಲ್-ಉಮ್ಮಾಹ್ ಮಧ್ಯೆ ಸೈದ್ಧಾಂತಿಕ ಸ್ನೇಹ
ಜೆಎಂಬಿ ಹಾಗೂ ಅಲ್-ಉಮ್ಮಾಹ್ ಸಿದ್ಧಾಂತಗಳು ಹೆಚ್ಚು ಹೊಂದಿಕೆಯಾಗುವ ಕಾರಣ ಇವೆರಡೂ ಜತೆಯಾಗಿ ಕಾರ್ಯ ಕೈಗೊಳ್ಳುತ್ತಿವೆ. ಸಿಮಿ ಜತೆ ಸಂಬಂಧವನ್ನೂ ಹೊಂದಿದ್ದವು. ಜೆಎಂಬಿ ಸದಸ್ಯರು ನಿರಾಶ್ರಿತರನ್ನು ತಲುಪಲು ಅಲ್-ಉಮ್ಮಾಹ್ ಸಹಾಯ ಮಾಡಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಎರಡೂ ಸಂಘಟನೆಗಳು ಸೇರಿರುವ ಹಿನ್ನೆಲೆಯಲ್ಲಿ ಜೆಎಂಬಿ ಸದಸ್ಯರು ಕೇರಳ, ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಆಶ್ರಯ ಪಡೆದಿದ್ದಾರೆಂಬುದರಲ್ಲಿ ಎರಡು ಮಾತಿಲ್ಲ. ಇಂಥವರನ್ನು ಪತ್ತೆ ಹಚ್ಚಲು ಎನ್ಐಎ ಸ್ಥಳೀಯ ಪೊಲೀಸರ ನೆರವು ಪಡೆಯಲಿದೆ. ಈ ಕುರಿತು ವಿಶೇಷ ಸೂಚನೆಗಳನ್ನೂ ನೀಡಲಾಗುವುದೆಂದು ಅವರು ತಿಳಿಸಿದ್ದಾರೆ.

English summary
Most of the Burdwan accused have moved to South India and are working under cover as plantation and construction workers, NIA officials informed. They have several of their back up modules across the country and would try and activate them as and when the heat dies down.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X