• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಪ್ರೋ ಅಜೀಂ ಪ್ರೇಮ್‌ಜಿ ದಾನಕ್ಕೆ ಸರಿಸಾಟಿಯಿಲ್ಲ

By Srinath
|

ಬೆಂಗಳೂರು, ನ.14: ವಿಪ್ರೋದ ಅಜೀಂ ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿರುವ ಪ್ರೇಮ ಮತ್ತೊಮ್ಮೆ ಸಾಬೀತಾಗಿದೆ. ಶಿಕ್ಷಣ ಕ್ಷೇತ್ರದ ಒಳಿತಿಗಾಗಿ ಅಜೀಂ ಪ್ರೇಮ್‌ಜಿ ಸಲ್ಲಿಸುತ್ತಿರುವ ಅನುಮಪ ಕೊಡುಗೆ ಮುಂದುವರಿದಿದ್ದು, ಅಜೀಂ ದಾನಕ್ಕೆ ಸರಿಸಾಟಿಯಿಲ್ಲ ಎಂಬಂತಾಗಿದೆ.

ಇತ್ತೀಚೆಗಷ್ಟೆ ಎಚ್ ಸಿಎಲ್ ಕಾರ್ಪೊರೇಶನ್ ಕಂಪನಿಯ ಸಂಸ್ಥಾಪಕ ಅಧ್ಯಕ್ಷ ಶಿವ್ ನಡಾರ್ ಅವರು ತಮ್ಮ Shiv Nadar Foundation ವತಿಯಿಂದ ಶಿಕ್ಷಣಕ್ಕಾಗಿ 3,000 ಕೋಟಿ ರೂಪಾಯಿ ದಾನ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದರ ಬೆನ್ನಿಗೇ ವಿಪ್ರೋ ಅಧ್ಯಕ್ಷರಾದ ಅಜೀಂ ಪ್ರೇಮ್‌ಜಿ ಅವರು ಈ ಬಾರಿ ಬರೋಬ್ಬರಿ 8,000 ಕೋಟಿ ರೂ ದಾನ ತೆಗೆದಿಟ್ಟಿದ್ದಾರೆ. ಇದರಿಂದ ವಿಶ್ವಮಟ್ಟದಲ್ಲಿ ಅಜೀಂ ಅಗ್ರ ಕೊಡುಗೈ ದಾನಿಯಾಗಿ ಹೊರಹೊಮ್ಮಿದ್ದಾರೆ.

68 ವರ್ಷದ ಅಜೀಂ ಪ್ರೇಮ್‌ಜಿ ಅವರು ವಿಪ್ರೋ ಕಂಪನಿಯಲ್ಲಿ ಶೇ. 57ರಷ್ಟು ಪಾಲು ಹೊಂದಿದ್ದಾರೆ. ಅದರಲ್ಲಿ ಶೇ. 10ರಷ್ಟನ್ನು ಭಾರತದ ಗ್ರಾಮೀಣ ಭಾಗದಲ್ಲಿನ ಶಿಕ್ಷಣಕ್ಕಾಗಿ ವಿನಿಯೋಗಿಸಿದ್ದಾರೆ.

ಚೀನಾದ Hurun India Philanthropy List 2013 ಪ್ರಕಾರ, ಇಂಡಿಯಾ ಫಿಲೋಂಥ್ರಪಿ ಲಿಸ್ಟಿನಲ್ಲಿ ಪ್ರೇಮ್‌ಜಿ ಹೆರು ಅಗ್ರ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಎಚ್‌ಸಿಎಲ್ ಸಮೂಹ ಸಂಸ್ಥೆಯ ಅಧ್ಯಕ್ಷ ಶಿವ್ ನಾಡಾರ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಜಿಎಂಆರ್ ಸಮೂಹ ಸಂಸ್ಥೆಯ ಜಿಎಂ ರಾವ್ ಪ್ರತಿ ವರ್ಷ 740 ಕೋಟಿ ದಾನ ನೀಡುವ ಮೂಲಕ ತೃತೀಯ ಸ್ಥಾನದಲ್ಲಿದ್ದಾರೆ.

ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರದ ಅಧ್ಯಕ್ಷ ನಂದನ್ ನೀಲೇಕಣಿ ಮತ್ತು ರೋಹಿಣಿ ನೀಲೇಕಣಿ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ರೊನ್ನೆ ಸ್ಕ್ರೂವ್ವೆವ್ವಾಲಾ ಸ್ವದೇಶಿ ಫೌಂಡೇಷನ್ ಮತ್ತು ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಬಯೋಕಾನ್ ಸಂಸ್ಥೆ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ 470 ಕೋಟಿ ನೀಡುವ ಮೂಲಕ ನಂತರದ ಸ್ಥಾನಗಳಲ್ಲಿದ್ದಾರೆ.

ದಾನಿಗಳ ವಯೋಮಾನ ಸರಾಸರಿ 62 ವರ್ಷಗಳಾಗಿದೆ. ಹತ್ತಕ್ಕೂ ಹೆಚ್ಚು ದಾನಿಗಳ ವಯಸ್ಸು 64 ಆಗಿದೆ. ಪ್ರಾದೇಶಿಕವಾಗಿ ಹೇಳುವುದಿದ್ದರೆ ದಕ್ಷಿಣ ಭಾರತೀಯರು ಒಟ್ಟಾರೆಯಾಗಿ 10,000 ಕೋಟಿ ದಾನ ಮಾಡುವ ಮೂಲಕ ಉತ್ತರ ಭಾರತೀಯರನ್ನು ಮೀರಿಸಿದ್ದಾರೆ. ದಾನಪಟ್ಟಿಯಲ್ಲಿ ಉತ್ತರ ಭಾರತೀಯರು ಕೊಟ್ಟ ಮೌಲ್ಯ 4,865 ಕೋಟಿ ಮಾತ್ರ.

ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಉದ್ಯಮಿಗಳು ಹೆಚ್ಚಿನ ಪ್ರಮಾಣದಲ್ಲಿ ದಾನ ಮಾಡುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಇದಕ್ಕೆ ದೇಶದ ಉದ್ದಿಮೆದಾರರ ಕೊಡುಗೆ 12,200 ಕೋಟಿ! ಆ ನಂತರ, social development (Rs 1,210 crore), healthcare (Rs 1,065 crore), rural development (Rs 565 crore), environmental cause (Rs 170 crore) ಮತ್ತು agriculture (Rs 40 crore) ಮನ್ನಣೆ ಪಡೆದಿವೆ.

ಕಂಪನಿ ಕಾಯಿದೆ 2013ರ ಅನುಸಾರ ಕಂಪನಿಗಳು 500 ಕೋಟಿ ರೂ. ಗೂ ಅಧಿಕ ನಿವ್ವಳ ಮೌಲ್ಯ ಅಥವಾ 1,000 ಕೋಟಿ ರೂ. ಆದಾಯ ಗಳಿಸಿದ್ದರೆ ಅಥವಾ 5 ಕೋಟಿ ರೂ. ಗೂ ಅಧಿಕ ನಿವ್ವಳ ಲಾಭ ಗಳಿಸಿದರೆ ಅದರಲ್ಲಿ ಕನಿಷ್ಠ ಶೇ. 2ರಷ್ಟು ಪಾಲನ್ನು ದಾನಕ್ಕಾಗಿ ವಿನಿಯೋಗಿಸುವುದು ಕಡ್ಡಾಯವಾಗಿದೆ.

English summary
Bangalore Wipro Azim Premji tops in donation with Rs 8000 crore. China-based Hurun Report Inc launched the inaugural Hurun India Philanthropy List 2013, with IT tycoon Azim Hashim Premji emerging as the most generous Indian with a donation of Rs 8,000 crore in the past year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X