• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಂಬೈ ಮೀರಿಸಿದ ಬೆಂಗಳೂರು: ಅತಿ ಹೆಚ್ಚು ಸಕ್ರಿಯ ಕೇಸ್ ಹೊಂದಿರುವ ನಗರ?

|

ಬೆಂಗಳೂರು, ಜುಲೈ 22: ಭಾರತದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿರುವ ರಾಜ್ಯ ಮಹಾರಾಷ್ಟ್ರ. ಇದುವರೆಗೂ 3.2 ಲಕ್ಷಕ್ಕೂ ಅಧಿಕ ಕೇಸ್‌ಗಳು ಮಹಾರಾಷ್ಟ್ರದಲ್ಲಿ ವರದಿಯಾಗಿದೆ. ಅದೇ ರೀತಿ ಅತಿ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳನ್ನು ಹೊಂದಿರುವ ಮೆಟ್ರೋ ನಗರ ಅಂದ್ರೆ ಮುಂಬೈ.

   ಅಪ್ಪನ ಹಾದಿಯನ್ನೇ ಹಿಡಿದ ಮಗ | Oneindia Kannada

   ಮುಂಬೈನಲ್ಲಿ ಇದುವರೆಗೂ 1.03 ಲಕ್ಷಕ್ಕೂ ಹೆಚ್ಚು ಸೋಂಕಿತರು ದಾಖಲಾಗಿದ್ದಾರೆ. ದೆಹಲಿ, ಚೆನ್ನೈ, ಹೈದರಾಬಾದ್, ಕೊಲ್ಕತ್ತಾ ಅಂತಹ ಪ್ರಮುಖ ನಗರಗಳ ಪೈಕಿ ಮುಂಬೈನಲ್ಲಿ ಹೆಚ್ಚು ಕೇಸ್ ಪತ್ತೆಯಾಗಿದೆ.

   24 ಗಂಟೆಯಲ್ಲಿ ಭಾರತದಲ್ಲಿ 37,724 ಹೊಸ ಕೋವಿಡ್ ಪ್ರಕರಣ

   ಆದ್ರೀಗ, ಮುಂಬೈ ನಗರವನ್ನು ಸಿಲಿಕಾನ್ ಸಿಟಿ ಬೆಂಗಳೂರು ಹಿಂದಿಕ್ಕಿದೆ. ಅತಿ ಹೆಚ್ಚು ಸಕ್ರಿಯ ಕೇಸ್‌ಗಳ ಪಟ್ಟಿಯಲ್ಲಿ ವಾಣಿಜ್ಯ ನಗರಕ್ಕಿಂತ ಹೆಚ್ಚು ಸೋಂಕಿತರನ್ನು ಬೆಂಗಳೂರು ಹೊಂದಿದೆ. ಅಂಕಿ ಅಂಶಗಳ ವಿವರ ಮುಂದೆ ಓದಿ....

   ಮುಂಬೈನಲ್ಲಿ ಸಕ್ರಿಯ ಕೇಸ್ ಎಷ್ಟಿದೆ?

   ಮುಂಬೈನಲ್ಲಿ ಸಕ್ರಿಯ ಕೇಸ್ ಎಷ್ಟಿದೆ?

   ಮುಂಬೈನಲ್ಲಿ ಒಟ್ಟು 1,03,368 ಜನರಿಗೆ ಕೊರೊನಾ ವೈರಸ್ ಅಂಟಿಕೊಂಡಿದೆ. ಇದರಲ್ಲಿ 73,555 ಮಂದಿ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಪ್ರಸ್ತುತ 23,704 ಕೇಸ್‌ಗಳು ಸಕ್ರಿಯವಾಗಿದೆ. ಬೆಂಗಳೂರಿಗೆ ಹೋಲಿಸಿಕೊಂಡರೆ ಆಕ್ಟಿವ್ ಕೇಸ್‌ಗಳ ಸಂಖ್ಯೆ ಮುಂಬೈನಲ್ಲಿ ಕಡಿಮೆ ಇದೆ.

   ಬೆಂಗಳೂರಿನಲ್ಲಿ ಆಕ್ಟಿವ್ ಕೇಸ್ ಎಷ್ಟಿದೆ?

   ಬೆಂಗಳೂರಿನಲ್ಲಿ ಆಕ್ಟಿವ್ ಕೇಸ್ ಎಷ್ಟಿದೆ?

   ಜುಲೈ 21ರ ವರದಿಯಂತೆ ಬೆಂಗಳೂರಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 34943. ಅದರಲ್ಲಿ 7476 ಜನರು ಸಂಪೂರ್ಣವಾಗಿ ಚೇತರಿಕೆ ಕಂಡಿದ್ದಾರೆ. ಇನ್ನು 26746 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅಂದ್ರೆ, ಮುಂಬೈ ನಗರಕ್ಕಿಂತ ಹೆಚ್ಚು ಆಕ್ಟಿವ್ ಕೇಸ್‌ಗಳನ್ನು ಬೆಂಗಳೂರು ಹೊಂದಿದೆ.

   ಕೊರೊನಾವೈರಸ್ ವಿರುದ್ಧ ಹೋರಾಡಿ ಗೆದ್ದಿದ್ದು ಹೇಗೆ 'ಧಾರಾವಿ'?

   ಅತಿ ಹೆಚ್ಚು ಆಕ್ಟಿವ್ ಕೇಸ್ ಹೊಂದಿರುವ ನಗರ ಯಾವುದು?

   ಅತಿ ಹೆಚ್ಚು ಆಕ್ಟಿವ್ ಕೇಸ್ ಹೊಂದಿರುವ ನಗರ ಯಾವುದು?

   ಮುಂಬೈ ಹಾಗೂ ಬೆಂಗಳೂರಿಗಿಂತಲೂ ಅತಿ ಹೆಚ್ಚು ಆಕ್ಟಿವ್ ಕೇಸ್ ಹೊಂದಿರುವ ನಗರಗಳಿವೆ. ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ 36,810 ಆಕ್ಟಿವ್ ಕೇಸ್ ಇದೆ. ಅದೇ ರಾಜ್ಯದ ಥಾಣೆ ಜಿಲ್ಲೆಯಲ್ಲಿ 36,219 ಕೇಸ್ ಸಕ್ರಿಯವಾಗಿದೆ. ಪ್ರಸ್ತುತ ದೇಶದಲ್ಲಿ ಅತಿ ಹೆಚ್ಚು ಸಕ್ರಿಯ ಕೇಸ್ ಹೊಂದಿರುವ ನಗರಗಳ ಪಟ್ಟಿಯಲ್ಲಿ ಪುಣೆ ಮೊದಲು, ಥಾಣೆ ಎರಡನೇ ಸ್ಥಾನದಲ್ಲಿದೆ. ಬೆಂಗಳೂರು ಮೂರನೇ ಸ್ಥಾನದಲ್ಲಿದೆ.

   ಟಾಪ್ ಏಂಟು ನಗರಗಳಲ್ಲಿ ಅಂಕಿ ಅಂಶ ಏನಿದೆ?

   ಟಾಪ್ ಏಂಟು ನಗರಗಳಲ್ಲಿ ಅಂಕಿ ಅಂಶ ಏನಿದೆ?

   - ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ 36,810 ಆಕ್ಟಿವ್ ಕೇಸ್.

   - ಥಾಣೆ ಜಿಲ್ಲೆಯಲ್ಲಿ 36,219 ಆಕ್ಟಿವ್ ಕೇಸ್.

   - ಬೆಂಗಳೂರಿನಲ್ಲಿ 26746 ಆಕ್ಟಿವ್ ಕೇಸ್.

   - ಮುಂಬೈನಲ್ಲಿ ಪ್ರಸ್ತುತ 23,704 ಸಕ್ರಿಯ ಕೇಸ್‌.

   - ತಮಿಳುನಾಡಿನ ಚೆನ್ನೈನಲ್ಲಿ 14,956 ಸಕ್ರಿಯ ಕೇಸ್‌.

   - ದೆಹಲಿಯಲ್ಲಿ 15,288 ಆಕ್ಟಿವ್ ಕೇಸ್.

   - ಆಂಧ್ರಪ್ರದೇಶದಲ್ಲಿ ಪೂರ್ವ ಗೋದಾವರಿಯಲ್ಲಿ 6,380 ಆಕ್ಟಿವ್ ಕೇಸ್.

   - ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ 5,624 ಆಕ್ಟಿವ್ ಕೇಸ್.

   ಕೊರೊನಾವೈರಸ್ ಐತ್ರಿ: ಬೆಂಗಳೂರಲ್ಲಿ ಬದುಕುವವರು ಈ ಸ್ಟೋರಿ ಓದಲೇಬೇಕು!

   English summary
   Most coronavirus active cases cities: Bangalore passed mumbai and takes third place in india.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X