ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶ : ಬಿಡುಗಡೆಗೆ ಮುನ್ನವೇ 'ಪದ್ಮಾವತಿ'ಗೆ ನಿಷೇಧ

By Manjunatha
|
Google Oneindia Kannada News

ಮಧ್ಯಪ್ರದೇಶ, ನವೆಂಬರ್ 20 : ಪದ್ಮಾವತಿ ಚಿತ್ರವನ್ನು ಮಧ್ಯಪ್ರದೇಶದಲ್ಲಿ ಬಿಡುಗಡೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಸ್ವತಃ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಗುಡುಗಿದ್ದಾರೆ.

ದೀಪಿಕಾ ಪಡುಕೋಣೆ ಸಹಾಯಕ್ಕೆ ಡಿಕೆಶಿ ಬರೆಯಲಿದ್ದಾರೆ ಪತ್ರದೀಪಿಕಾ ಪಡುಕೋಣೆ ಸಹಾಯಕ್ಕೆ ಡಿಕೆಶಿ ಬರೆಯಲಿದ್ದಾರೆ ಪತ್ರ

'ಪದ್ಮಾವತಿ' ಚಿತ್ರದಲ್ಲಿ ರಾಣಿ ಪದ್ಮಾವತಿ ಅವರ ಘನತೆಗೆ ಧಕ್ಕೆ ಬರುವಂತಹಾ ಅಂಶಗಳು ಇವೆ ಹಾಗಾಗಿ ಆ ಚಿತ್ರವನ್ನು ಮಧ್ಯಪ್ರದೇಶದ ಪುಣ್ಯ ಭೂಮಿಯಲ್ಲಿ ಬಿಡುಗಡೆ ಆಗುವುದಕ್ಕೆ ಅನುಮತಿ ನೀಡುವುದಿಲ್ಲ ಎಂದು ಬಹಿರಂಗವಾಗಿ ಹೇಳಿದ್ದಾರೆ. ಈ ಮೂಲಕ ಪದ್ಮಾವತಿ ಚಿತ್ರ ಬಿಡುಗಡೆಗೆ ಮೊದಲ ಸರ್ಕಾರಿ ನಿಷೇಧ ಹೇರಿಕೆಯಾಗಿದೆ.

Ban on releasing Padmavathi in Madhya Pradesh

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿರುವ ಪದ್ಮಾವತಿ ಚಿತ್ರಕ್ಕೆ ಅಡ್ಡಿಗಳು ದಿನೇ ದಿನೇ ಹೆಚ್ಚಾಗುತ್ತಲೆ ಇವೆ. ರಜಪೂತ ಕರ್ನಿ ಸಂಘಟನೆಯು ಪದ್ಮಾವತಿ ಚಿತ್ರದ ತೀರ್ವ ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಚಿತ್ರದ ಬಿಡುಗಡೆಯನ್ನು ತೀರ್ವವಾಗಿ ವಿರೋಧಿಸುತ್ತಿದೆ. ಚಿತ್ರ ಬಿಡುಗಡೆ ಬಗ್ಗೆ ದೇಶದಲ್ಲಿ ಪರ ವಿರೋಧ ಧ್ವನಿಗಳು ಸಮಾನವಾಗಿ ಕೇಳಿಬರುತ್ತಿವೆ.

ಇತ್ತೀಚೆಗಷ್ಟೆ ಹರಿಯಾಣದ ಬಿಜೆಪಿಯ ರಾಜ್ಯ ಮುಖಂಡನೊಬ್ಬ ಪದ್ಮಾವತಿ ಚಿತ್ರದಲ್ಲಿ ಮುಖ್ಯ ಪಾತ್ರ ನಿರ್ವಹಿಸಿರುವ ದೀಪಿಕಾ ಪಡುಕೋಣೆ ಅವರ ತಲೆ ಕಡಿದವರಿಗೆ 10 ಕೋಟಿ ನೀಡುವುದಾಗಿ ಹೇಳಿಕೆ ನೀಡಿದ್ದರು.

ವಿವಾದ ಹೆಚ್ಚಾಗುತ್ತಿರುವ ಕಾರಣ ಚಿತ್ರತಂಡವು ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕಿದೆ. ಆದರೆ ಈಗ ಮಧ್ಯಪ್ರದೇಶದ ಮುಖ್ಯಮಂತ್ರಿಗಳೆ ಚಿತ್ರದ ಬಿಡುಗಡೆಗೆ ಅನುಮತಿ ನೀಡುವುದಿಲ್ಲ ಎಂದಿರುವುದು ಚಿತ್ರತಂಡವನ್ನು ಆತಂಕಕ್ಕೆ ತಳ್ಳಿದೆ.

ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಕೂಡ ಪದ್ಮಾವತಿ ಚಿತ್ರದ ಬಗ್ಗೆ ಋಣಾತ್ಮಕವಾಗಿ ಮಾತನಾಡಿದ್ದರು. ಹಾಗಾಗಿ ಉತ್ತರ ಪ್ರದೇಶದಲ್ಲೂ ಚಿತ್ರ ಬಿಡುಗಡೆಗೆ ಅನುಮತಿ ನಿರಾಕರಿಸುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

ಬಹುತೇಕ ಬಿ.ಜೆ.ಪಿ ಪಕ್ಷದ ಮುಖಂಡರು, ರಾಜಕಾರಣಿಗಳು ಪದ್ಮಾವತಿ ಚಿತ್ರದ ವಿರುದ್ಧ ಮಾತನಾಡುತ್ತಿದ್ದು, ಶಶಿ ತರೂರ್, ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಲವು ಮುಖಂಡರ ಪದ್ಮಾವತಿ ಚಿತ್ರಕ್ಕೆ ಬೆಂಬಲ ಸೂಚಿಸಿದ್ದಾರೆ. ಪದ್ಮಾವತಿ ಚಿತ್ರ ರಾಜಕೀಯ ಮೇಲಾಟಕ್ಕೆ ಧಾಳವಾಗಿಯೂ ಬಳಕೆಯಾಗುತ್ತಿದೆ.

English summary
Madhya Pradesh CM Shivaraj Singh Chowhan said that Movie 'Padmavathi' not going to release in MadhyaPradesh so that it has scenes that could be brunt Rani Padmavathi's Pride.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X