ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈ 31ರ ತನಕ ಅಂತರಾಷ್ಟ್ರೀಯ ವಿಮಾನ ಸಂಚಾರವಿಲ್ಲ

|
Google Oneindia Kannada News

ನವದೆಹಲಿ, ಜುಲೈ 03 : ಅಂತರಾಷ್ಟ್ರೀಯ ವಿಮಾನಗಳ ಸಂಚಾರವನ್ನು ಜುಲೈ 31ರ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ. ಮಾರ್ಚ್‌ನಲ್ಲಿ ಲಾಕ್ ಡೌನ್ ಘೋಷಣೆಯಾದ ಬಳಿಕ ವಿಮಾನಗಳ ಸಂಚಾರ ರದ್ದಾಗಿದೆ.

ಶುಕ್ರವಾರ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಈ ಕುರಿತು ಆದೇಶ ಹೊರಡಿಸಿದೆ. ಜುಲೈ 15ರ ತನಕ ಮೊದಲು ವಿಮಾನಗಳ ಹಾರಾಟಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಈಗ ಅದನ್ನು ಜುಲೈ 31ರ ತನಕ ವಿಸ್ತರಣೆ ಮಾಡಲಾಗಿದೆ.

ಬೆಂಗಳೂರು ವಿಮಾನ ನಿಲ್ದಾಣದ ಒಂದು ರನ್‌ ವೇ ಬಂದ್ಬೆಂಗಳೂರು ವಿಮಾನ ನಿಲ್ದಾಣದ ಒಂದು ರನ್‌ ವೇ ಬಂದ್

ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ್ದ ಅನ್ ಲಾಕ್ 2 ಮಾರ್ಗಸೂಚಿ ಜುಲೈ 31ರ ತನಕ ಜಾರಿಯಲ್ಲಿ ಇರುತ್ತದೆ. ಅಲ್ಲಿಯ ತನಕ ಮೆಟ್ರೋ, ಸಾಮಾನ್ಯ ವೇಳಾಪಟ್ಟಿ ಪ್ರಯಾಣಿಕ ರೈಲುಗಳು ಸಂಚಾರ ನಡೆಸುವುದಿಲ್ಲ. ಈಗ ಅಂತರಾಷ್ಟ್ರೀಯ ವಿಮಾನಗಳು ಸಹ ಸಂಚಾರ ನಡೆಸುವುದಿಲ್ಲ.

5 ರಾಜ್ಯಗಳಿಂದ ರೈಲು, ವಿಮಾನ ಸಂಚಾರ ನಿಲ್ಲಿಸಿ: ಕೇಂದ್ರಕ್ಕೆ ಸಿಎಂ ಮಮತಾ ಆಗ್ರಹ5 ರಾಜ್ಯಗಳಿಂದ ರೈಲು, ವಿಮಾನ ಸಂಚಾರ ನಿಲ್ಲಿಸಿ: ಕೇಂದ್ರಕ್ಕೆ ಸಿಎಂ ಮಮತಾ ಆಗ್ರಹ

Ban On International Flights Extended Till July 31

ಕೆಲವು ದೇಶಿಯ ವಿಮಾನಗಳು ಹಾರಾಟವನ್ನು ನಡೆಸುತ್ತಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯದಿಂದ ಅನುಮತಿ ಪಡೆದ ಸರಕು ಸಾಗಣೆ ಮಾಡುವ ವಿಮಾನಗಳು ಮಾತ್ರ ಬೇರೆ ದೇಶಗಳಿಗೆ ಹಾರಾಟ ನಡೆಸಬಹುದಾಗಿದೆ.

ವಂದೇ ಭಾರತ್ ; ಬೆಂಗಳೂರಿಗೆ 7 ವಿಮಾನ ಆಗಮನ ವಂದೇ ಭಾರತ್ ; ಬೆಂಗಳೂರಿಗೆ 7 ವಿಮಾನ ಆಗಮನ

ವಂದೇ ಭಾರತ್ ಮಿಷನ್ ಅಡಿ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸ್ ಕರೆತರಲಾಗುತ್ತಿದೆ. ಈ ವಿಮಾನಗಳ ಹಾರಾಟಕ್ಕೆ ಅನುಮತಿ ಇದೆ.

English summary
On July 3, 2020 DGCA said that ban on all international flights has been extended till July 31. Only cargo and flights approved by the DGCA will be allowed to fly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X