ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಬ್ಬಿಂಗ್ ತಡೆಯಲು ಯತ್ನಿಸುವವರು ಶಿಕ್ಷಾರ್ಹರು : ಸುಪ್ರೀಂಕೋರ್ಟ್

ಸುಪ್ರೀಂಕೋರ್ಟ್ ಶುಕ್ರವಾರ ಮಹತ್ವದ ತೀರ್ಪೊಂದನ್ನು ನೀಡಿದ್ದು, ಡಬ್ ಮಾಡಲ್ಪಟ್ಟ ಚಲನಚಿತ್ರಗಳನ್ನು ಅಥವಾ ಟಿವಿ ಧಾರಾವಾಹಿಗಳ ಪ್ರದರ್ಶನವನ್ನು ತಡೆಯಲು ಯತ್ನಿಸುವವರು ಶಿಕ್ಷಾರ್ಹರು ಎಂದಿದೆ.

By Mahesh
|
Google Oneindia Kannada News

ನವದೆಹಲಿ, ಮಾರ್ಚ್ 17: ಡಬ್ಬಿಂಗ್ ಪರ ವಿರೋಧ ಚರ್ಚೆ ತಾರಕಕ್ಕೇರುತ್ತಿರುವ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಶುಕ್ರವಾರದಂದು ಮಹತ್ವದ ತೀರ್ಪೊಂದನ್ನು ನೀಡಿದೆ. ಡಬ್ ಮಾಡಲ್ಪಟ್ಟ ಚಲನಚಿತ್ರಗಳನ್ನು ಅಥವಾ ಟಿವಿ ಧಾರಾವಾಹಿಗಳ ಪ್ರದರ್ಶನವನ್ನು ತಡೆಯಲು ಯತ್ನಿಸುವರನ್ನು 2002ರ ಸ್ಪರ್ಧಾ ಕಾಯ್ದೆಯ ಉಲ್ಲಂಘನೆಗಾಗಿ ತಪ್ಪಿತಸ್ಥರೆಂಬುದಾಗಿ ಪರಿಗಣಿಸಲಾಗುವುದು ಹಾಗೂ ಶಿಕ್ಷಾರ್ಹ ಅಪರಾಧ ಎಂದಿದೆ.

ಕರ್ನಾಟಕದಲ್ಲಿ ಡಬ್ಬಿಂಗ್ ಚಿತ್ರಗಳ ಪ್ರದರ್ಶನದ ವಿರುದ್ಧ ನಡೆಯುತ್ತಿರುವ ಚಳವಳಿಯ ಮೇಲೂ ಸುಪ್ರೀಂಕೋರ್ಟ್‌ನ ಈ ಆದೇಶವು, ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ.

Ban on dubbed TV shows violates Competition Act, says Supreme Court

ಹಿಂದಿಯಿಂದ ಬಂಗಾಳಿಗೆ ಡಬ್ ಮಾಡಲಾದ ಮಹಾಭಾರತ ಟಿವಿ ಧಾರಾವಾಹಿಯನ್ನು , ಪ.ಬಂಗಾಳದ ವಿವಿಧ ಟಿವಿ ವಾಹಿನಿಗಳಲ್ಲಿ ಪ್ರಸಾರ ಮಾಡುವುದನ್ನು ಪ.ಬಂಗಾಳದ ಕಲಾವಿದರು ಹಾಗೂ ತಂತ್ರಜ್ಞರ ಸಂಘ ಹಾಗೂ ಈಶಾನ್ಯಭಾರತ ಚಲನಚಿತ್ರ ಸಂಘ (ಇಐಎಂಪಿಎ) ಬಲವಾಗಿ ವಿರೋಧಿಸಿ, ಕೋರ್ಟ್ ಮೇಟ್ಟಿಲೇರಿದ್ದರು.

ಡಬ್ಬಿಂಗ್ ಹಾವಳಿಯಿಂದ ಬಂಗಾಳಿಯಲ್ಲಿ ಧಾರಾವಾಹಿಗಳ ನಿರ್ಮಾಣಕ್ಕೆ ಹಿನ್ನಡೆಯುಂಟಾಗಲಿದೆಯೆಂದು ಅವು ಆತಂಕ ವ್ಯಕ್ತಪಡಿಸಿದ್ದರು.

ಬಂಗಾಳಿ ಭಾಷೆಗೆ ಡಬ್ ಮಾಡಲಾದ ಟಿವಿ ಧಾರಾವಾಹಿಗಳನ್ನು ಪ್ರಸಾರ ಮಾಡುವ ವಾಹಿನಿಗಳನ್ನು ಬಹಿಷ್ಕರಿಸುವುದಾಗಿ ಇಐಎಂಪಿಎ ಹಾಗೂ ಸಮನ್ವಯ ಸಮಿತಿಯು ಬೆದರಿಕೆ ಹಾಕಿತ್ತು. ಆದರೆ ಟಿವಿ ವಾಹಿನಿಯೊಂದರ ಮಾಲಕರು ಈ ಬಗ್ಗ್ಗೆ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ)ಕ್ಕೆ ದೂರು ನೀಡಿದಾಗ, ಅದು ಈ ಬೆದರಿಕೆಯು ಸ್ಪರ್ಧಾ ವಿರೋಧಿಯೆಂದು ಅಭಿಪ್ರಾಯಿಸಿತ್ತು.

ನ್ಯಾಯಾಧೀಕರಣವು ಡಬ್ಬಿಂಗ್ ವಿರೋಧದಿಂದ ಸ್ಪರ್ಧಾತ್ಮಕತೆಗೆ ಹಾನಿಯಿಲ್ಲವೆಂದು ವಾದಿಸಿತ್ತು. ಆನಂತರ ನ್ಯಾಯಾಧೀಕರಣದ ನಿರ್ಧಾರವನ್ನು ಪ್ರಶ್ನಿಸಿಸಿ ಸಿಸಿಐ ಸುಪ್ರೀಂಕೋರ್ಟ್ ಮೆಟ್ಟಲೇರಿತ್ತು.

ಡಬ್ಬಿಂಗ್ ಧಾರಾವಾಹಿಗಳನ್ನು ಪ್ರಸಾರ ಮಾಡಿರುವ ಟಿವಿ ವಾಹಿನಿಗಳ್ನು ಬಹಿಷ್ಕರಿಸುವ ಬೆದರಿಕೆಯು, ಅವು ತಮ್ಮ ವಾಣಿಜ್ಯ ಚಟುವಟಿಕೆಗಳನ್ನು ನಡೆಸುವುದಕ್ಕೆ ತಡೆಯೊಡ್ಡುವ ಉದ್ದೇಶದಿಂದ ಕೂಡಿರುವುದಾಗಿ ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ ಹಾಗೂ ಎ.ಎಂ. ಸಪ್ರೆ ಅವರಿದ್ದ ನ್ಯಾಯಪೀಠ ತಿಳಿಸಿದೆ.

English summary
Supreme Court in a significant ruling said anyone attempting to stall exhibition of dubbed films or dubbed serials in the name of protecting a language would be guilty of violating the Competition Act, 2002.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X