ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಲಿವುಡ್‌ಗೆ ಮತ್ತೆ ಬಾಯ್ಕಾಟ್ ಬಿಸಿ, ಆದಿಪುರುಷ ಬ್ಯಾನ್‌ಗೆ ಅಯೋಧ್ಯ ಅರ್ಚಕರ ಪಟ್ಟು!

|
Google Oneindia Kannada News

ನವದೆಹಲಿ, ಅ. 06: ಭಗವಾನ್ ರಾಮ, ಹನುಮಾನ್ ಮತ್ತು ರಾವಣನನ್ನು ತಪ್ಪಾಗಿ ಚಿತ್ರಿಸಲಾಗಿದೆ ಎಂಬ ಆರೋಪದ ಮೇಲೆ ಬಾಲಿವುಡ್ ಚಲನಚಿತ್ರ ಆದಿಪುರುಷ ಟೀಸರ್ ಕುರಿತು ನಡೆಯುತ್ತಿರುವ ಗದ್ದಲದ ನಡುವೆಯೇ, ಚಲನಚಿತ್ರವನ್ನು ತಕ್ಷಣವೇ ನಿಷೇಧಿಸಬೇಕೆಂದು ಅಯೋಧ್ಯೆಯ ರಾಮ ಮಂದಿರದ ಪ್ರಧಾನ ಅರ್ಚಕ ಒತ್ತಾಯಿಸಿದ್ದಾರೆ.

ಶ್ರೀರಾಮ, ಹನುಮಾನ್ ಮತ್ತು ರಾವಣನ ಚಿತ್ರಣವು ಮಹಾಕಾವ್ಯಕ್ಕೆ ಹೊಂದಿಕೆಯಾಗುವುದಿಲ್ಲ. ಸಿನಿಮಾದಲ್ಲಿನ ಅವರ ಚಿತ್ರಣವು ಅವರ ಘನತೆಗೆ ತಕ್ಕಂತೆ ಇಲ್ಲ ಎಂದು ಅವರು ಆರೋಪಿಸಿದ್ದಾರೆ. ಸಿನಿಮಾ ಮಾಡುವುದು ಅಪರಾಧವಲ್ಲ. ಆದರೆ, ಉದ್ದೇಶಪೂರ್ವಕ ವಿವಾದಗಳನ್ನು ಹುಟ್ಟುಹಾಕಲು ಉದ್ದೇಶಪೂರ್ವಕವಾಗಿ ವಿವಾದಗಳನ್ನು ಸೃಷ್ಟಿಸಬಾರದು ಎಂದು ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್ ಹೇಳಿದ್ದಾರೆ.

'ಆದಿಪುರುಷ': ರಾವಣನ ಪಾತ್ರದಲ್ಲಿ ಸೈಫ್ ಅಲಿಖಾನ್ ಭಯೋತ್ಪಾದಕ ರೀತಿ ಕಾಣುತ್ತಾರೆ- ಬಿಜೆಪಿ ಆಕ್ರೋಶ'ಆದಿಪುರುಷ': ರಾವಣನ ಪಾತ್ರದಲ್ಲಿ ಸೈಫ್ ಅಲಿಖಾನ್ ಭಯೋತ್ಪಾದಕ ರೀತಿ ಕಾಣುತ್ತಾರೆ- ಬಿಜೆಪಿ ಆಕ್ರೋಶ

ಬಾಲಿವುಡ್ ಚಲನಚಿತ್ರ ಆದಿಪುರುಷದ 1.46 ನಿಮಿಷಗಳ ಟೀಸರ್ ಭಾನುವಾರ ಅಯೋಧ್ಯೆಯಲ್ಲಿ ಬಿಡುಗಡೆಯಾಗಿದ್ದು, ಭಾರಿ ವಿವಾದಕ್ಕೆ ಕಾರಣವಾಗಿದೆ.

ಹಿಂದೂ ದೇವರು, ದೇವತೆಗಳಿಗೆ ಮಾಡುವ ಅಪಮಾನ ಸಹಿಸುವುದಿಲ್ಲ!

ಹಿಂದೂ ದೇವರು, ದೇವತೆಗಳಿಗೆ ಮಾಡುವ ಅಪಮಾನ ಸಹಿಸುವುದಿಲ್ಲ!

ಉತ್ತರ ಪ್ರದೇಶದ ಉಪಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ ಮತ್ತು ಬ್ರಜೇಶ್ ಪಾಠಕ್ ಟೀಸರ್ ಅನ್ನು ಖಂಡಿಸಿದ್ದಾರೆ ಮತ್ತು ಹಿಂದೂ ದೇವರು ಮತ್ತು ದೇವತೆಗಳಿಗೆ ಅಗೌರವವನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.

"ಸಂತರು ಏನೇ ಹೇಳಿದ್ದರೂ ಅದನ್ನು ಗಮನಿಸಬೇಕು. ಈ ಸಿನಿಮಾ ಹೆಚ್ಚಾಗಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿವೆ. ನಮ್ಮ ಸಂಸ್ಕೃತಿಯ ಮೇಲೆ ದಾಳಿಯಾದಾಗಲೆಲ್ಲ ನಮ್ಮ ಸಂಸ್ಕೃತಿಯನ್ನು ಉಳಿಸಿದ್ದು ಈ ಸಂತರು ಮತ್ತು ಗುರುಕುಲಗಳು. ನಮ್ಮ ಸಂಸ್ಕೃತಿಯ ಬಗ್ಗೆ ನಮಗೆ ಹೆಮ್ಮೆ ಇದೆ" ಎಂದು ಬ್ರಜೇಶ್ ಪಾಠಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೇಶವ್ ಮೌರ್ಯ ಅವರು, ಟೀಸರ್ ಅನ್ನು ವೀಕ್ಷಿಸಿಲ್ಲ ಆದರೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದರೆ ಅದನ್ನು ಪ್ರೇಕ್ಷಕರಿಗೆ ಪ್ರಸ್ತುತಪಡಿಸುವ ಮೊದಲು ಅದನ್ನು ಸರಿಪಡಿಸಬೇಕಾಗಿದೆ ಎಂದು ಹೇಳಿದರು.

ಪಾತ್ರ ರಚನೆಗೂ ಮೊದಲು ಸ್ವಲ್ಪ ಸಂಶೋಧನೆ ಮಾಡಬೇಕು!

ಪಾತ್ರ ರಚನೆಗೂ ಮೊದಲು ಸ್ವಲ್ಪ ಸಂಶೋಧನೆ ಮಾಡಬೇಕು!

ಇದಕ್ಕೂ ಮುನ್ನ ಮಾತನಾಡಿದ ಬಿಜೆಪಿ ವಕ್ತಾರೆ ಮಾಳವಿಕಾ ಅವಿನಾಶ್, ರಾವಣನ ಪಾತ್ರವನ್ನು ಚಿತ್ರಿಸುವ ಮೊದಲು ಚಿತ್ರದ ನಿರ್ಮಾಪಕರು ಯಾವುದೇ ಸಂಶೋಧನೆ ಮಾಡಿಲ್ಲ ಎಂದಿದ್ದಾರೆ.

"ಲಂಕಾದ ರಾವಣ, ಶಿವ ಭಕ್ತ ಬ್ರಾಹ್ಮಣ 64 ಕಲೆಗಳನ್ನು ಕರಗತ ಮಾಡಿಕೊಂಡಿದ್ದರು! ವೈಕುಂಠವನ್ನು ಕಾಪಾಡುತ್ತಿದ್ದ ಜಯ(ವಿಜಯ್) ಶಾಪದಿಂದಾಗಿ ರಾವಣನಾಗಿ ಅವತರಿಸಿದನು!. ಚಿತ್ರದಲ್ಲಿರುವುದು ಟರ್ಕಿಯ ನಿರಂಕುಶಾಧಿಕಾರಿಯಾಗಿರಬಹುದು. ಆದರೆ ರಾವಣನಲ್ಲ! ಬಾಲಿವುಡ್, ನಮ್ಮ ರಾಮಾಯಣ/ಇತಿಹಾಸವನ್ನು ತಪ್ಪಾಗಿ ಬಿಂಬಿಸುವುದನ್ನು ನಿಲ್ಲಿಸಿ! ದಂತಕಥೆ ಎನ್‌ಟಿಆರ್‌ರಾಮರಾವ್ ಬಗ್ಗೆ ಎಂದಾದರೂ ಕೇಳಿದ್ದೀರಾ..?" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ರಾವಣ ಹೇಗಿದ್ದನೆಂದು ತೋರಿಸುವ ಹಲವಾರು ಕನ್ನಡ ಚಿತ್ರಗಳು, ತೆಲುಗು ಚಿತ್ರಗಳು, ತಮಿಳು ಚಿತ್ರಗಳು ಇವೆ. ರಾವಣ ಹೇಗೆ ಕಾಣುತ್ತಾನೆ ಎಂಬುದನ್ನು ಅರ್ಥಮಾಡಿಕೊಳ್ಳಲು ಅವರು 'ಭೂ ಕೈಲಾಸ'ದಲ್ಲಿ ಎನ್‌ಟಿ ರಾಮರಾವ್ ಅಥವಾ ಡಾ ರಾಜ್‌ಕುಮಾರ್ ಅಥವಾ ಈ ಮಹಾನ್ ನಟರಲ್ಲಿ ಯಾರನ್ನಾದರೂ 'ಸಂಪೂರ್ಣ ರಾಮಾಯಣ'ದಲ್ಲಿ ಎಸ್‌ವಿ ರಂಗರಾವ್ ಅವರನ್ನು ಹುಡುಕಬಹುದಿತ್ತು" ಎಂದು ಚಾಟಿ ಬೀಸಿದ್ದಾರೆ.

ಟೀಸರ್‌ಗೆ ವಿಶ್ವ ಹಿಂದೂ ಪರಿಷತ್ ಆಕ್ರೋಶ

ಟೀಸರ್‌ಗೆ ವಿಶ್ವ ಹಿಂದೂ ಪರಿಷತ್ ಆಕ್ರೋಶ

ಟೀಸರ್‌ಗೆ ಆಕ್ಷೇಪ ವ್ಯಕ್ತಪಡಿಸಿರುವ ವಿಶ್ವ ಹಿಂದೂ ಪರಿಷತ್, ರಾಮ, ರಾವಣ ಮತ್ತು ಲಕ್ಷ್ಮಣರನ್ನು ಚಿತ್ರಿಸಿರುವ ರೀತಿ ಹಿಂದೂ ಧರ್ಮದ ಅಣಕವಾಗಿದೆ. ಹಿಂದೂ ಸಮಾಜದ ಮೌಲ್ಯಗಳನ್ನು ಅಪಹಾಸ್ಯ ಮಾಡಲಾಗಿದೆ. ಇದನ್ನು ಹಿಂದೂ ಸಮಾಜ ಸಹಿಸುವುದಿಲ್ಲ ಎಂದು ವಿಎಚ್‌ಪಿಯ ಸಂಭಾಲ್ ಘಟಕದ ಪ್ರಚಾರ್ ಪ್ರಮುಖ್ ಅಜಯ್ ಶರ್ಮಾ ಹೇಳಿದ್ದಾರೆ.


"ಈ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲು ವಿಎಚ್‌ಪಿ ಅನುಮತಿ ನೀಡುವುದಿಲ್ಲ" ಎಂದು ಅಜಯ್ ಶರ್ಮಾ ಹೇಳಿದ್ದಾರೆ.

ನಿರ್ದೇಶಕನಿಗೆ ಪತ್ರ ಬರೆದ ಮಧ್ಯಪ್ರದೇಶದ ಗೃಹ ಸಚಿವ

ನಿರ್ದೇಶಕನಿಗೆ ಪತ್ರ ಬರೆದ ಮಧ್ಯಪ್ರದೇಶದ ಗೃಹ ಸಚಿವ

ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ, ಹಿಂದೂ ಧಾರ್ಮಿಕ ವ್ಯಕ್ತಿಗಳನ್ನು ತಪ್ಪಾಗಿ ತೋರಿಸುವ ದೃಶ್ಯಗಳನ್ನು ತೆಗೆದುಹಾಕದಿದ್ದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. .


"ಹನುಮಾನ್ ಜಿ ಲೆದರ್ ಧರಿಸಿರುವುದನ್ನು ತೋರಿಸಲಾಗಿದೆ, ಆದರೆ ಗ್ರಂಥಗಳಲ್ಲಿ ದೇವತೆಯ ವೇಷಭೂಷಣದ ವಿವರಣೆಯು ವಿಭಿನ್ನವಾಗಿದೆ. ಇವು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ದೃಶ್ಯಗಳಾಗಿವೆ. ಅಂತಹ ಎಲ್ಲಾ ದೃಶ್ಯಗಳನ್ನು ಚಿತ್ರದಿಂದ ತೆಗೆದುಹಾಕುವಂತೆ ಓಂ ರಾವುತ್ ಅವರಿಗೆ ಪತ್ರ ಬರೆಯುತ್ತಿದ್ದೇನೆ. ತೆಗೆದುಹಾಕದಿದ್ದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ" ಎಂದು ಮಿಶ್ರಾ ಹೇಳಿದ್ದಾರೆ.


ಬಾಲಿವುಡ್‌ನ ಆದಿಪುರುಷ ಚಿತ್ರದಲ್ಲಿ ಸೈಫ್ ಅಲಿ ಖಾನ್ ರಾವಣನಾಗಿ ಕಾಣಿಸಿಕೊಂಡರೆ, ಪ್ರಭಾಸ್ ರಾಮನಾಗಿ ಮತ್ತು ಕೃತಿ ಸನನ್ ಸೀತೆಯಾಗಿ ಕಾಣಿಸಿಕೊಳ್ಳಲಿದ್ದಾರೆ.

English summary
Ayodhya Ram Temple head priest demanded an immediate ban of Bollywood movie Adipurush over the alleged wrong depiction of Lord Ram, Hanuman and Ravana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X