ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದೂಗಳನ್ನು ರಕ್ಷಿಸಲು ಬಜರಂಗದಳ ಶಸ್ತ್ರಾಸ್ತ್ರ ತರಬೇತಿ!

|
Google Oneindia Kannada News

ರಾಜಘಡ, ಮೇ 27: ಹಿಂದೂಗಳ ರಕ್ಷಣೆಯ ಸಲುವಾಗಿ ಮಧ್ಯಪ್ರದೇಶದ ಬಜರಂಗದಳ ಘಟಕವು ಈ ತಿಂಗಳ ಆರಂಭದಲ್ಲಿ ರಹಸ್ಯವಾಗಿ ಶಸ್ತ್ರಾಸ್ತ್ರ ಮತ್ತು ಇತರೆ ಆಯುಧಗಳ ತರಬೇತಿ ನೀಡಿದೆ.

ರಾಜಗಡ ಜಿಲ್ಲೆಯ ಬವಾರಾದಲ್ಲಿ ಮೇ 3ರಿಂದ 11ರವರೆಗೆ 32 ಜಿಲ್ಲೆಗಳ ಆಯ್ದ ಯುವಕರಿಗೆ ತರಬೇತಿ ಶಿಬಿರ ನಡೆಸಲಾಗಿದೆ. ದೇಶವಿರೋಧಿಗಳು ಮತ್ತು ಲವ್ ಜಿಹಾದ್‌ನಂತಹ ಘಟನೆಗಳನ್ನು ಹತ್ತಿಕ್ಕಲು ರೈಫಲ್‌ಗಳು, ಕತ್ತಿ ಮತ್ತು ಲಾಠಿಗಳ ಬಳಕೆಯ ತರಬೇತಿ ನೀಡಲಾಗಿದೆ.

ಊಟಿ ಬಳಿ ಬಸ್ ಅಪಘಾತ, ಬೆಂಗಳೂರಿನ ನಾಲ್ವರು ಮೃತಊಟಿ ಬಳಿ ಬಸ್ ಅಪಘಾತ, ಬೆಂಗಳೂರಿನ ನಾಲ್ವರು ಮೃತ

ಶೂಟಿಂಗ್, ಕರಾಟೆ, ಹಗ್ಗ ಅಥವಾ ಟವೆಲ್ ಸಹಾಯದಿಂದ ಮರ ಹತ್ತುವುದು, ಎತ್ತರ ಜಿಗಿತ ಮುಂತಾದ ತರಬೇತಿಗಳನ್ನು 24 ಗಂಟೆಯೂ ನೀಡಲಾಗಿದೆ.

bajrang dal organized arms taining camp to protect hindus

ಒಮ್ಮೆ ಒಳ ಪ್ರವೇಶ ಪಡೆದ ಯುವಕರನ್ನು ಎಂತಹ ಸನ್ನಿವೇಶ ಎದುರಾದರೂ ಶಿಬಿರದಿಂದ ಹೊರಕಳುಹಿಸಲು ಅವಕಾಶವಿರಲಿಲ್ಲ. ಬೆಳಿಗ್ಗೆ 4 ರಿಂದ ರಾತ್ರಿ 11ರವರೆಗೆ ಅವರ ಯೋಗಕ್ಷೇಮ ನೋಡಿಕೊಳ್ಳಲು ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು.

ತರಬೇತಿ ಅವಧಿಗೆ ಸಂಬಂಧಿಸಿದ ಫೋಟೊಗಳಿಂದ ಈ ಶಿಬಿರದ ಕುರಿತು ಮಾಹಿತಿ ಬಹಿರಂಗವಾಗಿದೆ.

ಕೇರಳ: ನಿಪಾಹ್ ವೈರಸ್ ಗೂ ಬಾವಲಿಗೂ ಸಂಬಂಧವಿಲ್ಲ?!ಕೇರಳ: ನಿಪಾಹ್ ವೈರಸ್ ಗೂ ಬಾವಲಿಗೂ ಸಂಬಂಧವಿಲ್ಲ?!

'ದೇಶ ವಿರೋಧಿಗಳು, ಲವ್ ಜಿಹಾದ್‌ನಂತಹ ಪ್ರಕರಣಗಳನ್ನು ಎದುರಿಸಲು ನಾವು ಪ್ರತಿ ವರ್ಷ ಈ ರೀತಿಯ ತರಬೇತಿ ನೀಡುತ್ತೇವೆ. 1984ರಲ್ಲಿಯೇ ಈ ತರಬೇತಿ ಆರಂಭಿಸಲಾಗಿತ್ತು ಎಂದು ಬಜರಂಗದಳದ ಜಿಲ್ಲಾ ಸಂಚಾಲಕ ದೇವಿ ಸಿಂಗ್ ಸೋಂಧಿಯಾ ತಿಳಿಸಿದ್ದಾರೆ.

'ದೇಶದಲ್ಲಿ ಕಾನೂನು ಮತ್ತು ಸಂವಿಧಾನವಿದೆ. ಈ ರೀತಿ ಕಾನೂನನ್ನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ. ಸರ್ಕಾರದಿಂದ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮಧ್ಯಪ್ರದೇಶ ಬಿಜೆಪಿ ವಕ್ತಾರ ರಜನೀಶ್ ಅಗರ್‌ವಾಲ್ ತಿಳಿಸಿದರು.

English summary
Madhya Pradesh Bajrang dal organized an arms trianing camp this month. Its workers were secretly trained to use arms and other weapons in the name of protecting Hindus
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X