ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳ ಮೂಲದ ಐವರು ಐಸಿಸ್ ಉಗ್ರರು ಸಿರಿಯಾದಲ್ಲಿ ಸಾವು

By ವಿಕಾಸ್ ನಂಜಪ್ಪ
|
Google Oneindia Kannada News

ತಿರುವನಂತಪುರಂ, ಜುಲೈ 2: ಐಸಿಸ್ ಉಗ್ರ ಸಂಘಟನೆ ಸೇರಿದ್ದ ಐವರು ಕೇರಳ ಮೂಲದ ಉಗ್ರರು ಸಿರಿಯಾದಲ್ಲಿ ಸಾವನ್ನಪ್ಪಿದ್ದಾರೆ ಎಂದು ಗುಪ್ತಚರ ಮೂಲಗಳು ಹೇಳಿವೆ. ಇವರೆಲ್ಲಾ ನಾಲ್ಕು ತಿಂಗಳ ಹಿಂದೆ ಸಾವನ್ನಪ್ಪಿದ್ದಾರೆ ಎಂದು ಗುಪ್ತಚರ ಇಲಾಖೆ ಹೇಳಿದೆ.

ಬಹ್ರೇನ್ ನಲ್ಲಿ ಕೆಲಸ ಮಾಡುತ್ತಿರುವುದಾಗಿ ಮನೆಯವರಿಗೆ ಸುಳ್ಳು ಹೇಳಿದ್ದ ಪಾಲಕ್ಕಾಡ್ ಮೂಲದ ಸಿಬಿ ಎಂಬಾತ ಸಾವನ್ನಪ್ಪಿದ ಸುದ್ದಿ ಮೊದಲ ಗೊತ್ತಾಗಿತ್ತು. ಆತನಿಗೆ ಯಹ್ಯಾ ಜತೆಗೆ ಸಂಬಂಧವಿತ್ತು. ಯಹ್ಯಾ ಅಫ್ಘಾನಿಸ್ತಾನದಲ್ಲಿ ಸಾವನ್ನಪ್ಪಿದ್ದ ಉಗ್ರನಾಗಿದ್ದಾನೆ. ಆತ 2016ರ ಜುಲೈನಲ್ಲಿ ಐಸಿಸ್ ಸೇರಿದ್ದ. ಇನ್ನುಮಲಪ್ಪುರಂನ ಮುಹಾದೀಸ್ ಕೂಡಾ ಸಾವನ್ನಪ್ಪಿದ್ದಾನೆ. ಬಹ್ರೇನ್ ನಲ್ಲಿ ಕೆಲಸ ಮಾಡುತ್ತಿರುವ ಅತನ ಸೋದರ ಮನಾಫ್ ಈ ಸುದ್ದಿ ತಿಳಿಸಿದ್ದಾನೆ.

'Bahrain circle' case: Five from Kerala killed in ISIS' Syria territory

ಇದೇ ವೇಳೆ ಕಣ್ಣೂರಿನ ಓರ್ವ ವ್ಯಕ್ತಿ ಹಾಗೂ ಕೋಝಿಕ್ಕೋಡ್ ನ ಇನ್ನಿಬ್ಬರು ವ್ಯಕ್ತಿಗಳೂ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಈ ಮೇಲಿನ ಐವರೂ ವ್ಯಕ್ತಿಗಳು ಕಳೆದ ಎರಡು ವರ್ಷಗಳಿಂದ ನಾಪತ್ತೆಯಾಗಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಈ ಪ್ರಕರಣಕ್ಕೆ 'ಬಹ್ರೇನ್ ಸರ್ಕಲ್' ಎಂದು ಹೆಸರಿಟ್ಟಿದ್ದರು.

ಇನ್ನು ಅ಻ಫ್ಘಾನಿಸ್ತಾನದಲ್ಲಿಯೂ ಹಫೀಸುದ್ದೀನ್, ಮುರ್ಶಿದ್, ಯಹ್ಯಾ ಮತ್ತು ಶಜೀರ್ ಮಂಗಲಶೆರಿ ಅಬ್ದುಲ್ಲಾ ಕೂಡಾ ಐಸಿಸ್ ಪರ ಹೋರಾಟದಲ್ಲಿ ಸಾವನ್ನಪ್ಪಿದ್ದರು.

English summary
The Intelligence Bureau has found that five from Kerala had been killed while fighting for the Islamic State in Kerala. The five hailed from the Malabar region and were killed four months back, an Intelligence Bureau report said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X