ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬದರಿನಾಥ್ ದೇಗುಲ ಆರಂಭ, ಭಕ್ತರ ಪ್ರವೇಶಕ್ಕೆ ನಿರ್ಬಂಧ

|
Google Oneindia Kannada News

ಡೆಹ್ರಾಡೂನ್, ಮೇ 12: ಕೊರೊನಾವೈರಸ್ ಲಾಕ್ಡೌನ್ ಜಾರಿಯಾದಾಗಿನಿಂದ ಹಿಮಾಲಯ ತಪ್ಪಲಿನ ಬದರಿನಾಥ ದೇಗುಲ ಕೂಡಾ ಬಂದ್ ಆಗಿತ್ತು. ಈಗ ದೇಗುಲಕ್ಕೆ ನಿರ್ಬಂಧಿತ ಪ್ರವೇಶಕ್ಕೆ ಅನುಮತಿ ಸಿಕ್ಕಿದೆ. ಮೇ.15ರಿಂದ ದೇವಾಲಯ ತೆರೆಯಲಿದ್ದು, ಪ್ರಧಾನ ಅರ್ಚಕರು ಸೇರಿದಂತೆ 27 ಮಂದಿ ಪ್ರವೇಶಿಸಬಹುದು ಎಂದು ಜೋಶಿಮಠ ಉಪ ವಿಭಾಗ ಮ್ಯಾಜಿಸ್ಟ್ರೇಟ್ ಅನಿಲ್ ಚನ್ಯಲ್ ಹೇಳಿದ್ದಾರೆ.

ಬದರಿನಾಥ್ ದೇವಾಲಯದ ಪ್ರಧಾನ ಅರ್ಚಕ ಈಶ್ವರಿ ಪ್ರಸಾದ್ ನಂಬೂದರಿ ಮೇ 15 ರಂದು ಬೆಳಗ್ಗೆ 4.30ಕ್ಕೆ ಬದರಿನಾಥ್ ಪುಣ್ಯಕ್ಷೇತ್ರದ ಬಾಗಿಲು ತೆರೆಯಲಿದ್ದಾರೆ. ಮುಖ್ಯ ಅರ್ಚಕರು ಹಾಗೂ ಸಹಾಯಕ ಸಿಬ್ಬಂದಿಗಳು ಪಾಂಡುಕೇಶ್ವರ ತಲುಪಿದ್ದು, ಮೇ 13ರಿಂದ ಪೂಜಾ ಕೈಂಕರ್ಯದ ಸಿದ್ಧತೆ ನಡೆಸಲಿದ್ದಾರೆ.

ಕೇದಾರನಾಥ ದೇಗುಲ ಅಚ್ಚಳಿಯದೆ ಉಳಿದಿದ್ದು ಹೇಗೆ?ಕೇದಾರನಾಥ ದೇಗುಲ ಅಚ್ಚಳಿಯದೆ ಉಳಿದಿದ್ದು ಹೇಗೆ?

ಎರಡು ಬಾರಿ ಪರೀಕ್ಷೆ: ಮುಖ್ಯ ಅರ್ಚಕರು ಕೇರಳಕ್ಕೆ ಹೋಗಿ ಬಂದಿದ್ದರಿಂದ ಅವರಿಗೆ ಎರಡು ಬಾರಿ ಕೊರೊನಾ ವೈರಸ್ ಪರೀಕ್ಷೆ ನಡೆಸಲಾಗಿದ್ದು, ಏಮ್ಸ್ ಆಸ್ಪತ್ರೆಯಲ್ಲಿ ನಿಗದಿತ ಅವಧಿಯ ಕ್ವಾರಂಟೈನ್ ಮುಗಿಸಿದ್ದಾರೆ. ಕೊರೊನಾ ನೆಗಟಿವ್ ಎಂದು ವರದಿ ಬಂದ ಬಳಿಕ ದೇಗುಲದತ್ತ ತೆರಳಲು ಮುಂದಾಗಿದ್ದಾರೆ.

Badrinath Temple to be opened on May 15

ಮಾತನಾಡುವ ಬದರಿನಾಥ: ತೆಹ್ರಿ ರಾಜಮನೆತನದ ಮುಖ್ಯಸ್ಥರನ್ನು ಮಾತನಾಡುವ ಬದರಿನಾಥ ಎಂದೇ ಗುರುತಿಸಿ ಗೌರವಿಸಲಾಗುತ್ತದೆ. ರಾಜಮನೆತನದ ಮುಖ್ಯಸ್ಥರು ಬೋಲೇಂದ್ರ ಬದ್ರಿ ಅವರು ಈ ಮುಂಚೆ ಏಪ್ರಿಲ್ 20ರಂದು ದೇಗುಲದ ಬಾಗಿಲು ತೆರೆಯಲು ಸೂಚಿಸಿದ್ದರು. ಆದರೆ, ಲಾಕ್ಡೌನ್ ಹಾಗೂ ಮುಖ್ಯ ಅರ್ಚಕರು ಕ್ವಾರಂಟೈನ್ ನಲ್ಲಿದ್ದರಿಂದ ದೇಗುಲ ಪ್ರವೇಶದ ದಿನಾಂಕ ಇದೇ ಮೊದಲ ಬಾರಿಗೆ ಬದಲಾಯಿಸಲಾಗಿದೆ.

ಚಾರ್ ಧಾಮ್ ಯಾತ್ರೆಗಳ ಪೈಕಿ ಗಂಗೋತ್ರಿ,ಯಮುನೋತ್ರಿ, ಬದರಿನಾಥ ಹಾಗೂ ಕೇದಾರನಾಥ್ ಯಾತ್ರೆಯನ್ನು ಭಕ್ತರು ಈ ಅವಧಿಯಲ್ಲಿ ಕೈಗೊಳ್ಳುತ್ತಾರೆ. ಅದಿಗುರು ಶಂಕರಾಚಾರ್ಯರು ಸ್ಥಾಪಿಸಿರುವ ಬದ್ರಿನಾಥ್ ದೇಗುಲವು ಸಮುದ್ರಮಟ್ಟದಿಂದ ಸುಮಾರು 10,800 ಅಡಿ ಎತ್ತರದಲ್ಲಿದೆ.

English summary
The portals of Badrinath Temple in Uttarkhand will be opened on May 15, two days before the ongoing coronavirus lockdown is scheduled to be lifted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X