ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬದರಿನಾಥ ದೇವಾಲಯ ತೆರೆದಾಗ ನಡೆದ ಅಪರೂಪದ ವಿಸ್ಮಯ, ದೇಶಕ್ಕೆ ಶುಭ ಸೂಚನೆ

|
Google Oneindia Kannada News

ಹಿಂದೂಗಳ ಪವಿತ್ರ ಚಾರ್ ಧಾಮ್ ಕ್ಷೇತ್ರಗಳಲ್ಲೊಂದಾದ, ಹಿಮಾಲಯದ ತಪ್ಪಲಿನಲ್ಲಿರುವ ಪುರಾಣ ಪ್ರಸಿದ್ದ ಬದರಿನಾಥ್ ದೇವಾಲಯದ ಬಾಗಿಲನ್ನು ಶುಕ್ರವಾರ (ಮೇ 15) ಬ್ರಾಹ್ಮೀ ಮಹೂರ್ತದಲ್ಲಿ ತೆರೆಯಲಾಗಿದೆ.

Recommended Video

ಮುತ್ತಪ್ಪ ರೈ ನಿಧನಕ್ಕೆ ಡಾನ್ ಜಯರಾಜ್ ಪುತ್ರ ವ್ಯಂಗ್ಯ..! | Ajith Jayraj | Muthappa Rai

ಪ್ರಧಾನ ಅರ್ಚಕರು ಸೇರಿದಂತೆ 27 ಮಂದಿ ಮಾತ್ರ ದೇವಾಲಯವನ್ನು ಪ್ರವೇಶಿಸಿದ್ದು, ಪ್ರಥಮ ಪೂಜೆ ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ನಡೆದಿದೆ. ಶುಕ್ರವಾರ ಬೆಳಗ್ಗೆ 4.30ಕ್ಕೆ ದೇವಾಲಯದ ಬಾಗಿಲನ್ನು ತೆರೆಯಲಾಗಿತ್ತು.

ಬದರಿನಾಥ ದೇಗುಲದಲ್ಲಿ ಮೋದಿ ಹೆಸರಿನಲ್ಲಿ ಮೊದಲ ಪೂಜೆ ಬದರಿನಾಥ ದೇಗುಲದಲ್ಲಿ ಮೋದಿ ಹೆಸರಿನಲ್ಲಿ ಮೊದಲ ಪೂಜೆ

ಗಂಗೋತ್ರಿ,ಯಮುನೋತ್ರಿ, ಬದರಿನಾಥ ಹಾಗೂ ಕೇದಾರನಾಥ್ ಈ ನಾಲ್ಕು ಚಾರ್ ಧಾಮ್ ಕ್ಷೇತ್ರಗಳಾಗಿವೆ. ಆದಿಗುರು ಶಂಕರಾಚಾರ್ಯರು ಸ್ಥಾಪಿಸಿರುವ ಬದ್ರಿನಾಥ ದೇಗುಲವು ಸಮುದ್ರಮಟ್ಟದಿಂದ ಸುಮಾರು 10,800 ಅಡಿ ಎತ್ತರದಲ್ಲಿದೆ.

ನಿನ್ನೆ ದೇವಾಲಯದ ಬಾಗಿಲನ್ನು ತೆರೆದಾಗ ಪವಾಡವೊಂದು ನಡೆದಿದೆ. ಇದು ದೇಶಕ್ಕೆ ಶುಭ ದಿನಗಳ ಸೂಚನೆ ಎಂದು ಕ್ಷೇತ್ರದ ಧರ್ಮಾಧಿಕಾರಿಗಳು ಹೇಳಿದ್ದಾರೆ. ಮುಂದೆ ಓದಿ..

 ಬದರಿನಾಥ್ ದೇಗುಲ ಆರಂಭ, ಭಕ್ತರ ಪ್ರವೇಶಕ್ಕೆ ನಿರ್ಬಂಧ ಬದರಿನಾಥ್ ದೇಗುಲ ಆರಂಭ, ಭಕ್ತರ ಪ್ರವೇಶಕ್ಕೆ ನಿರ್ಬಂಧ

ಕೇದಾರನಾಥ ದೇವಾಲಯದ ಬಾಗಿಲನ್ನು ಏ29ರಂದು ತೆರೆಯಲಾಗಿತ್ತು

ಕೇದಾರನಾಥ ದೇವಾಲಯದ ಬಾಗಿಲನ್ನು ಏ29ರಂದು ತೆರೆಯಲಾಗಿತ್ತು

ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿರುವ ಬದರಿನಾಥ ದೇವಾಲಯವು ಗಢ್ವಾಲ್ ಹಿಮಾಲಯದಲ್ಲಿ ಅಲಕನಂದಾ ನದಿಯ ದಂಡೆಯ ಮೇಲೆ ನರ ಮತ್ತು ನಾರಾಯಣ ಪರ್ವತಗಳ ನಡುವೆ ಸ್ಥಿತವಾಗಿದೆ. ಪ್ರತೀಯೊಬ್ಬ ಹಿಂದೂಗಳು ಒಮ್ಮೆ ಭೇಟಿ ನೀಡಲು ಬಯಸುವ ಪುಣ್ಯಕ್ಷೇತ್ರ ಇದಾಗಿದೆ. ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯದ ಬಾಗಿಲು ಏಪ್ರಿಲ್ 26 ಮತ್ತು ಕೇದಾರನಾಥ ದೇವಾಲಯದ ಬಾಗಿಲನ್ನು ಏಪ್ರಿಲ್ 29ರಂದು ತೆರೆಯಲಾಗಿತ್ತು.

ಶುಕ್ರವಾರ ಸಂಪ್ರದಾಯ ಬದ್ದವಾಗಿ ಬದರೀನಾಥನಿಗೆ ಪೂಜೆ

ಶುಕ್ರವಾರ ಸಂಪ್ರದಾಯ ಬದ್ದವಾಗಿ ಬದರೀನಾಥನಿಗೆ ಪೂಜೆ

ಶುಕ್ರವಾರ ಸಂಪ್ರದಾಯ ಬದ್ದವಾಗಿ ಬದರೀನಾಥನಿಗೆ ಪೂಜೆ ಸಲ್ಲಿಸಿ ದೇವಾಲಯದ ಬಾಗಿಲು ತೆರೆಯಲಾಯಿತು. ಆ ವೇಳೆ, ಶುಭ ಸೂಚನೆಯೊಂದು ಕಾಣಿಸಿದ್ದು, ಇದು ಮುಂದಿನ ದಿನಗಳಲ್ಲಿ ದೇಶಕ್ಕೆ ಶುಭ ದಿನಗಳ ಸಂಕೇತ ಎಂದು ಕ್ಷೇತ್ರದ ಧರ್ಮಾಧಿಕಾರಿ ಭುವನ್ ಚಂದ್ರ ಉನಿಯಾಲ್ ಹೇಳಿದ್ದಾರೆ.

ಬದರೀನಾಥನಿಗೆ ತುಪ್ಪ ಲೇಪಿತ ಕಂಬಳಿಯನ್ನು ಹೊದಿಸಲಾಗುತ್ತದೆ

ಬದರೀನಾಥನಿಗೆ ತುಪ್ಪ ಲೇಪಿತ ಕಂಬಳಿಯನ್ನು ಹೊದಿಸಲಾಗುತ್ತದೆ

"ದೇವಾಲಯವನ್ನು ಚಳಿಗಾಲದಲ್ಲಿ ಮುಚ್ಚುವಾಗ ಬದರೀನಾಥನಿಗೆ ತುಪ್ಪ ಲೇಪಿತ ಕಂಬಳಿಯನ್ನು ಹೊದಿಸಲಾಗುತ್ತದೆ. ಕೊರೆಯುವ ಚಳಿಗಾಗಿ ಈ ರೀತಿಯ ಸಂಪ್ರದಾಯವನ್ನು ಹಿಂದಿನಿಂದಲೂ ಪಾಲಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ದೇವಾಲಯದ ಬಾಗಿಲು ತೆರೆದಾಗ, ಹೇಗೆ ನಾವು ದೇವರಿಗೆ ಹೊದಿಸಿ ಹೋಗಿದ್ದೆವೋ ಅದು ಹಾಗೇ ಇದೆ"ಎಂದು ಭುವನ್ ಚಂದ್ರ ಉನಿಯಾಲ್ ಹೇಳಿದ್ದಾರೆ.

ಶುಭ ಸೂಚಕ ಎಂದ ಭುವನ್ ಚಂದ್ರ ಉನಿಯಾಲ್

ಶುಭ ಸೂಚಕ ಎಂದ ಭುವನ್ ಚಂದ್ರ ಉನಿಯಾಲ್

ದೇವಾಲಯದ ಬಾಗಿಲು ತೆರೆದಾಗ, ದೇವರ ಮೇಲೆ ತುಪ್ಪದ ಲೇಪನ ಮತ್ತು ಕಂಬಳಿ ಹಾಳಾಗದೇ ಇದ್ದರೆ, ಇದು ಶುಭ ಸೂಚಕ ಎಂದು ನಂಬಲಾಗುತ್ತದೆ. ಈ ರೀತಿ ಪ್ರತೀ ವರ್ಷವೂ ನಡೆಯುವುದಿಲ್ಲ. ಕಡುಚಳಿಯ ಹೊರತಾಗಿಯೂ ತುಪ್ಪ ಒಣಗದಿರುವುದು ಅದ್ಭುತವೇ ಸರಿ.ದೇಶಕ್ಕೆ ಒಳ್ಲೆಯದಾಗಲಿದೆ"ಎನ್ನುವ ಆಶಾವಾದವನ್ನು ಭುವನ್ ಚಂದ್ರ ಉನಿಯಾಲ್ ಹೊಂದಿದ್ದಾರೆ. (ಚಿತ್ರದಲ್ಲಿ: ಭುವನ್ ಚಂದ್ರ ಉನಿಯಾಲ್)

English summary
Badrinath Temple Opened: Good Sign For Country, Temple Head Bhuvan Chandra Uniyal Statement,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X