ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಭಾನುವಾರದಿಂದ ಬದ್ರಿನಾಥ್ ಯಾತ್ರೆ ಆರಂಭ

|
Google Oneindia Kannada News

ಡೆಹ್ರಾಡೂನ್, ಮೇ 08; ಉತ್ತರಾಖಂಡ ಸರ್ಕಾರ ಬದ್ರಿನಾಥ್ ಯಾತ್ರೆಗೆ ಒಪ್ಪಿಗೆ ನೀಡಿದೆ. ಭಾನುವಾರದಿಂದ ಯಾತ್ರೆ ಆರಂಭವಾಗಲಿದೆ. ಪ್ರತಿದಿನ 15 ಸಾವಿರ ಭಕ್ತರು ದೇವರ ದರ್ಶನ ಪಡೆಯಲು ಅವಕಾಶ ನೀಡಲಾಗಿದೆ.

ವಾರ್ಷಿಕ ಚಾರ್‌ಧಾಮ್ ಯಾತ್ರೆಗೆ ಮೇ 3ರಂದು ಉತ್ತರಾಖಂಡ ಸರ್ಕಾರ ಚಾಲನೆ ನೀಡಿದೆ. ಶನಿವಾರ ಪೊಲೀಸರು, ಅಧಿಕಾರಿಗಳು ಬದ್ರನಾಥ್‌ಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಕೇದರನಾಥ ಯಾತ್ರಾರ್ಥಿಗಳ ದೈನಂದಿನ ಮಿತಿ, ಪಾಲಿಸಬೇಕಾದ ಕೋವಿಡ್ ನಿಯಮಗಳು ಇಲ್ಲಿವೆಕೇದರನಾಥ ಯಾತ್ರಾರ್ಥಿಗಳ ದೈನಂದಿನ ಮಿತಿ, ಪಾಲಿಸಬೇಕಾದ ಕೋವಿಡ್ ನಿಯಮಗಳು ಇಲ್ಲಿವೆ

ಬದ್ರಿನಾಥ್ ದೇವಾಲಯವನ್ನು ಹೂವು, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಚಾಮೋಲಿ ಜಿಲ್ಲೆಯ ಅಲಕಾನಂದ ನದಿಯ ದಂಡೆಯಲ್ಲಿರುವ ಬದ್ರಿನಾಥ ದೇವಾಲಯದಲ್ಲಿ ಶ್ರೀ ವಿಷ್ಣುವಿನ ದರ್ಶನ ಪಡೆಯಲು ಸಾವಿರಾರು ಭಕ್ತರು ಆಗಮಿಸುತ್ತಾರೆ.

 ಕೇದಾರನಾಥ ಮತ್ತೆ ಬೆಳಗುತ್ತದೆ ಎಂದು ನನ್ನ ಒಳ ಧ್ವನಿ ಹೇಳುತ್ತಿದೆ: ಪ್ರಧಾನಿ ಮೋದಿ ಕೇದಾರನಾಥ ಮತ್ತೆ ಬೆಳಗುತ್ತದೆ ಎಂದು ನನ್ನ ಒಳ ಧ್ವನಿ ಹೇಳುತ್ತಿದೆ: ಪ್ರಧಾನಿ ಮೋದಿ

Badrinath Temple Open Doors For Devotees On May 8

ಉತ್ತರಾಖಂಡ ಸರ್ಕಾರ ಪ್ರತಿವರ್ಷ 6 ತಿಂಗಳ ಕಾಲ ಬದ್ರಿನಾಥ್ ದೇವಾಲಯವನ್ನು ತೆರೆಯುತ್ತದೆ. ಏಪ್ರಿಲ್ ಅಂತ್ಯದಿಂದ ನವೆಂಬರ್ ತನಕ ಲಕ್ಷಾಂತರ ಭಕ್ತರು ಯಾತ್ರೆಗೆ ಆಗಮಿಸಿ, ದೇವರ ದರ್ಶನ ಪಡೆಯುತ್ತಾರೆ.

ಚಾರ್ ಧಾಮ್ ಯಾತ್ರೆ: ಕೋವಿಡ್-19 ಪರೀಕ್ಷೆ ಇಲ್ಲ, ಲಸಿಕೆ ಪ್ರಮಾಣಪತ್ರವೂ ಕಡ್ಡಾಯವಲ್ಲ ಚಾರ್ ಧಾಮ್ ಯಾತ್ರೆ: ಕೋವಿಡ್-19 ಪರೀಕ್ಷೆ ಇಲ್ಲ, ಲಸಿಕೆ ಪ್ರಮಾಣಪತ್ರವೂ ಕಡ್ಡಾಯವಲ್ಲ

ಕೇದಾರನಾಥ ದೇವಾಲಯ ಭಕ್ತರಿಗೆ ಶುಕ್ರವಾರ ಬಾಗಿಲು ತೆರೆದಿತ್ತು. ಭಾನುವಾರದಿಂದ ಬದ್ರಿನಾಥ್ ಯಾತ್ರೆ ಆರಂಭವಾಗಿದೆ. ಈ ಬಾರಿ ದಿನಕ್ಕೆ ಇಂತಿಷ್ಟು ಭಕ್ತರು ಮಾತ್ರ ಭೇಟಿ ನೀಡಬೇಕು ಎಂದು ಉತ್ತರಾಖಂಡ ಸರ್ಕಾರ ಆದೇಶ ಹೊರಡಿಸಿದೆ.

ಬದ್ರಿನಾಥ್‌ಕ್ಕೆ 15 ಸಾವಿರ, ಕೇದಾರನಾಥ್ 12 ಸಾವಿರ, ಗಂಗೋತ್ರಿ 7 ಸಾವಿರ, ಯಮುನೋತ್ರಿಗೆ 4 ಸಾವಿರ ಭಕ್ತರು ಪ್ರತಿದಿನ ಭೇಟಿ ನೀಡಲು ಅವಕಾಶ ನೀಡಲಾಗಿದೆ. ಈ ಆದೇಶ 45 ದಿನಗಳ ತನಕ ಜಾರಿಯಲ್ಲಿರುತ್ತದೆ.

English summary
Badrinath temple open doors for devotees on Sunday. Uttarakhand government allowed daily 15,000 devotees for the temple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X