ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಷಮೆಯಾಚಿಸಿದರೆ ಮಾತ್ರ ಜ್ವಾಲಾ ಬಚಾವ್

By Mahesh
|
Google Oneindia Kannada News

ನವದೆಹಲಿ, ಅ.6: ಇಂಡಿಯನ್ ಬ್ಯಾಡ್ಮಿಂಟನ್ ಲೀಗ್(IBL)‌ ವೇಳೆ ವಿವಾದ ಸೃಷ್ಟಿಸಿ, ಆಟಕ್ಕೆ ತಡೆವೊಡ್ಡಿದ ಆರೋಪಕ್ಕೆ ಗುರಿಯಾಗಿರುವ ಡಬಲ್ಸ್ ಆಟಗಾರ್ತಿ ಜ್ವಾಲಾ ಗುಟ್ಟಾ ಮೇಲೆ ಆಜೀವ ನಿಷೇಧದ ಹೇರುವಂತೆ ಶಿಸ್ತು ಸಮಿತಿಯು ಭಾರತ ಬ್ಯಾಡ್ಮಿಂಟನ್ ಸಂಸ್ಥೆಗೆ ಶಿಘಾರಸು ಮಾಡಿದೆ.

ಇಂಡಿಯನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಡೆಲ್ಲಿ ಸ್ಮಾಷರ್ಸ್ ತಂಡದ ಆಟಗಾರನಿಗೆ ಬೆಂಗಾ ಬೀಟ್ಸ್ ವಿರುದ್ಧದ ಪಂದ್ಯವೊಂದರಲ್ಲಿ ಆಡದಂತೆ ಅಡ್ಡಿಪಡಿಸಿದ ಡೆಲ್ಲಿ ಸ್ಮಾಷರ್ಸ್ ತಂಡದ ನಾಯಕಿ ಜ್ವಾಲಾ ಗುಟ್ಟಾ ವಿರುದ್ಧ ಆಜೀವ ನಿಷೇಧದ ಭೀತಿ ಎದುರಿಸುತ್ತಿದ್ದಾರೆ.

ಬ್ಯಾಡ್ಮಿಂಟನ್ ಅಸೊಸಿಯೇಶನ್ ಆಫ್ ಇಂಡಿಯಾದ ಶಿಸ್ತು ಸಮಿತಿ ಅಧ್ಯಕ್ಷ ಎಸ್. ಮುರಲೀಧರನ್ ನೇತೃತ್ವದ ಸಮಿತಿಯು ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ಡೆಲ್ಲಿ ಸ್ಮಾಷರ್ಸ್ ತಂಡದ ಆಟಗಾರ್ತಿ ಜ್ವಾಲಾ ಗುಟ್ಟಾ ವಿರುದ್ಧ ಆಜೀವ ನಿಷೇಧ ವಿಧಿಸುವಂತೆ ಶಿಫಾರಸು ಮಾಡಿದ್ದಾರೆ.

ಆಗಸ್ಟ್ 25ರಂದು ಬೆಂಗಾ ಬೀಟ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಸ್ಮಾಷರ್ಸ್ ತಂಡ ಕೊನೆಯ ಕ್ಷಣದಲ್ಲಿ ತಂಡದ ಗಾಯಾಳು ಆಟಗಾರ ಹಾಂಕಾಂಗ್ ನ ಹು ಹ್ಯೂನ್ ಬದಲಿಗೆ ಡೆನ್ಮಾರ್ಕ್ನ ಜಾನ್ ಜಾರ್ಗೆನ್ಸೆನ್ ರನ್ನು ಆಡಿಸುವ ನಿರ್ಧಾರ ಕೈಗೊಂಡಿತ್ತು.ಈ ಹಂತದಲ್ಲಿ ಜ್ವಾಲಾ ಗುಟ್ಟಾ ಈ ನಿರ್ಧಾರವನ್ನು ವಿರೋಧಿಸಿ ಬೆಂಗಾ ಬೀಟ್ಸ್ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದ್ದರು.

Badminton: Life ban recommended for Jwala Gutta

ಈ ವಿವಾದಿಂದಾಗಿ ಸುಮಾರು ಒಂದೂವರೆ ಗಂಟೆ ತಡವಾಗಿ ಆಟ ಆರಂಭಗೊಂಡಿತ್ತು.ಅಂತಿಮವಾಗಿ ಜಾರ್ಗೆನ್ಸೆನ್ ಅವರಿಗೆ ಆಡಲು ಅವಕಾಶ ಸಿಗಲಿಲ್ಲ. ಭಾರತದ ಅರವಿಂದ ಭಟ್ ಸ್ಪರ್ಧಾ ಕಣಕ್ಕಿಳಿದಿದ್ದರು. ಅನಗತ್ಯವಾಗಿ ವಿವಾದ ಸೃಷ್ಟಿಸಿದ ಜ್ವಾಲಾ ಗುಟ್ಟಾ ವಿರುದ್ಧ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ ಶೋಕಾಸ್ ನೋಟಿಸ್ ಜಾರಿಗೊಳಿಸಿ 14 ದಿನಗಳ ಒಳಗಾಗಿ ಉತ್ತರಿಸುವಂತೆ ಸೂಚಿಸಿತ್ತು.

ಜ್ವಾಲಾ ನೋಟಿಸ್ಗೆ ಉತ್ತರ ನೀಡಿ ''ನನ್ನಿಂದ ಯಾವುದೇ ಸಮಸ್ಯೆ ಉಂಟಾಗಿಲ್ಲ. ನಾನು ನಾಯಕಿಯಾಗಿ ಯಾವ ರೀತಿ ನಡೆದುಕೊಳ್ಳಬೇಕಿತ್ತೋ ಅದೇ ರೀತಿ ನಡೆದುಕೊಂಡಿರುವೆ '' ಎಂದು ಹೇಳಿದ್ದರು.

ಬೆಂಗಾ ತಂಡ ಜೊರ್ಗೆನ್ಸನ್ ಅವರನ್ನು ಕಣಕ್ಕಿಳಿಸುವುದನ್ನು ವಿರೋಧಿಸಿದ್ದು ನನ್ನ ವೈಯಕ್ತಿಕ ನಿರ್ಧಾರ ಆಗಿರಲಿಲ್ಲ. ಅದು ತಂಡದ ತೀರ್ಮಾನ. ನಾನು ತಂಡದ ನಾಯಕಿ. ಆ ರೀತಿ ವರ್ತಿಸುವಂತೆ ತಂಡದ ಆಡಳಿತ ನನಗೆ ಸೂಚನೆ ನೀಡಿತ್ತು. ಇದರಲ್ಲಿ ನನ್ನ ತಪ್ಪೇನೂ ಇಲ್ಲ' ಎಂದು ಪ್ರತಿಕ್ರಿಯಿಸಿದ್ದರು.

ಜ್ವಾಲಾ ಅವರು ನೀಡಿರುವ ಉತ್ತರದಿಂದ ಬ್ಯಾಡ್ಮಿಂಟನ್ ಅಸೋಸಿಯೆಶನ್ ಆಫ್ ಇಂಡಿಯಾ ತೃಪ್ತಿಗೊಂಡಿಲ್ಲ. ಇದೀಗ ಈ ವಿವಾದಕ್ಕೆ ಸಂಬಂಧಿಸಿ ಡೆಲ್ಲಿ ಸ್ಮಾಷರ್ಸ್ ಆಡಳಿತ ಸಮಿತಿ ಮತ್ತು ಐಬಿಎಲ್ ಗೆ ಸ್ಪಷ್ಟನೆ ನೀಡುವಂತೆ ನೋಟಿಸ್ ಜಾರಿಗೊಳಿಸಿದೆ.

30 ವರ್ಷದ ಆಟಗಾರ್ತಿ ಜ್ವಾಲಾ ಗುಟ್ಟಾ ಅವರು ಒಂದು ವೇಳೆ ಬಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾದ ಅಧ್ಯಕ್ಷ ಅಖಿಲೇಶ್ ದಾಸ್ ಗುಪ್ತಾ ಮುಂದೆ ಬಂದು ಬೇಷರತ್ ಕ್ಷಮೆಯಾಚಿಸಿದರೆ ನಿಷೇಧ ಹಿಂಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. (ಪಿಟಿಐ)

English summary
The Badminton Association of India (BAI)'s disciplinary committee has recommended a life ban for leading doubles player Jwala Gutta for her conduct during an Indian Badminton League (IBL) tie in Bangalore Aug 25.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X