• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೇ.18ರಿಂದ ಬದರಿನಾಥ ದೇಗುಲ ಪುನರಾರಂಭ

|

ಡೆಹ್ರಾಡೂನ್, ಫೆಬ್ರುವರಿ 16: ಚಳಿಗಾಲದ ಸಂದರ್ಭ ಮುಚ್ಚಲಾಗಿದ್ದ ಬದರಿನಾಥ ದೇಗುಲವನ್ನು ಇದೇ ಮೇ 18ರಿಂದ ಭಕ್ತಾದಿಗಳಿಗೆ ತೆರೆಯಲಾಗುವುದು ಎಂದು ಚಾರ್‌ಧಾಮ್ ದೇವಸ್ಥಾನ ಮಂಡಳಿ ಮಂಗಳವಾರ ಅಧೀಕೃತವಾಗಿ ಪ್ರಕಟಣೆ ಹೊರಡಿಸಿದೆ.

ತೆಹ್ರಿ ಮಹಾರಾಜರ ನರೇಂದ್ರ ನಗರ ಪ್ಯಾಲೇಸ್ ‌ನಲ್ಲಿ ವಸಂತ ಪಂಚಮಿ ಆಚರಣೆ ಸಂದರ್ಭ, ದೇವಸ್ಥಾನ ತೆರೆಯಲು ಮುಹೂರ್ತವನ್ನು ನಿಗದಿಪಡಿಸಲಾಯಿತು. ತೇಲ್ ಕಲ ಯಾತ್ರೆಯು ಏಪ್ರಿಲ್ 29ರಿಂದ ಆರಂಭಗೊಳ್ಳಲಿದೆ.

ಬದರಿನಾಥ್ ದೇಗುಲ ಆರಂಭ, ಭಕ್ತರ ಪ್ರವೇಶಕ್ಕೆ ನಿರ್ಬಂಧ

"ಉತ್ತರಾಖಂಡ ಚಾಮೋಲಿ ಜಿಲ್ಲೆಯಲ್ಲಿರುವ ಬದರಿನಾಥ ದೇವಾಲಯವನ್ನು ಚಳಿಗಾಲದ ಕಾರಣ ಮುಚ್ಚಲಾಗಿತ್ತು. ನವೆಂಬರ್ ನಲ್ಲಿ ಹಿಮಪಾತವಾದ ಕಾರಣ ಕೇದಾರನಾಥ, ಬದರಿನಾಥ ದೇಗುಲಗಳನ್ನು ಬಂದ್ ಮಾಡಲಾಗಿತ್ತು. ಇದೇ ಮೇ 18ರಿಂದ ಬೆಳಿಗ್ಗೆ 4.15ಕ್ಕೆ ದೇವಾಲಯದಲ್ಲಿ ಭಕ್ತರಿಗೆ ಅವಕಾಶ ಮಾಡಿಕೊಡಲಾಗುವುದು" ಎಂದು ದೇವಸ್ಥಾನ ಮಂಡಳಿ ತಿಳಿಸಿದೆ. ನವೆಂಬರ್ 19ರಿಂದ ಬದರಿನಾಥ್ ಬಂದ್ ಆಗಿತ್ತು.

ಕೆಲವೇ ದಿನಗಳ ಹಿಂದೆ ಉತ್ತರಾಖಂಡದ ಚಾಮೋಲಿ ಜಿಲ್ಲೆ ಸಮೀಪ ಹಿಮಪ್ರವಾಹ ಸಂಭವಿಸಿದ್ದು, ಘಟನೆಯಲ್ಲಿ ಕಣ್ಮರೆಯಾಗಿರುವವರ ಪತ್ತೆಗೆ ಕಾರ್ಯಾಚರಣೆ ಮುಂದುವರೆದಿದೆ. ಇದುವರೆಗೂ 56 ಮಂದಿಯ ಮೃತದೇಹಗಳು ದೊರೆತಿವೆ.

English summary
Portals of badrinath temple will open from may 18 at 4.15 am
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X