• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಯೋಧ್ಯಾ ನಗರದ ಬಾಬ್ರಿ ಮಸೀದಿ ಧ್ವಂಸ ವಿವಾದ, ಟೈಮ್ ಲೈನ್

|
Google Oneindia Kannada News

ಬಾಬ್ರಿ ಮಸೀದಿ ಧ್ವಂಸ ನಡೆದು ಸುಮಾರು 28 ವರ್ಷಗಳು ಕಳೆದಿದೆ. ಉತ್ತರ ಪ್ರದೇಶದ ಅಯೋಧ್ಯಾ ನಗರದಲ್ಲಿ ಹಿಂದೂ ಪರ ಸಂಘಟನೆಗಳು ಅಂದು ನಡೆಸಿದ ಕೃತ್ಯ, ಕರಸೇವಕರ ಪಾಲಿಗೆ ಶೌರ್ಯ ದಿವಸವಾಗಿದ್ದರೆ, ಮುಸ್ಲಿಂ ಸಂಘಟನೆಗಳಿಗೆ ಕಪ್ಪು ದಿನವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 30 ಬುಧವಾರದಂದು ಲಕ್ನೋ ಸಿಬಿಐ ವಿಶೇಷ ನ್ಯಾಯಾಲಯವು ಅಂತಿಮ ತೀರ್ಪು ನೀಡಿದೆ. ಧ್ವಂಸ ಪ್ರಕರಣದಲ್ಲಿ ಕ್ರಿಮಿನಲ್ ಸಂಚು ಕಂಡು ಬಂದಿಲ್ಲ, ಪೂರ್ವ ನಿಯೋಜಿತ ಕೃತ್ಯ ಅಲ್ಲ ಎಂದು ಹೇಳಿದೆ.

   Ayodhya Verdict : Entire Disputed 2.77-Acre Land Goes to Hindus for Ram Mandir | Oneindia Kannada

   ಎಲ್‌.ಕೆ.ಆಡ್ವಾಣಿ, ಡಾ.ಮುರಳಿ ಮನೋಹರ್‌ ಜೋಶಿ ಮತ್ತು ಉಮಾ ಭಾರತಿ ಸೇರಿದಂತೆ ಎಲ್ಲಾ 32 ಆರೋಪಿಗಳು ನಿರ್ದೋಷಿಗಳೆಂದು ತೀರ್ಪಿನಲ್ಲಿ ಹೇಳಲಾಗಿದೆ.

   ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಅಂತಿಮ ತೀರ್ಪು ಪ್ರಕಟಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಅಂತಿಮ ತೀರ್ಪು ಪ್ರಕಟ

   1885ರಿಂದ ಮೊದಲುಗೊಂಡು ಆರಂಭವಾದ ರಾಮಜನ್ಮಭೂಮಿ, ಬಾಬ್ರಿ ಮಸೀದಿ ವಿವಾದ ಇಂದಿನ ತನಕ ಪರಿಹಾರ ಕಾಣದಂತೆ ನಡೆದುಕೊಂಡು ಬಂದಿದೆ. ಪರಸ್ಪರ ಮಾತುಕತೆ ಮೂಲಕ ಸಮಸ್ಯೆಗೆ ಇತ್ಯರ್ಥ ಹಾಡಿ ಎಂದು ಸುಪ್ರೀಂಕೋರ್ಟ್ ಇತ್ತೀಚೆಗೆ ಸೂಚಿಸಿದೆ. ಆದರೆ, ಕೇಸ್ ಮತ್ತೆ ಮತ್ತೆ ಬೇರೆ ಬೇರೆ ರೂಪದಲ್ಲಿ ಹಲವರನ್ನು ಕಾಡುತ್ತಿದೆ.

   ಈ ಒಂದು ಘಟನೆ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಸೇರಿದಂತೆ 32 ಜನ ಬಿಜೆಪಿ, ಹಿಂದು ಪರ ನಾಯಕರನ್ನು ಇಂದಿಗೂ ಕಾಡುತ್ತಿದೆ. ರಾಮಾಯಣ ಕಾಲದ ಅಯೋಧ್ಯದಲ್ಲಿದ್ದ ಬಾಬ್ರಿ ಮಸೀದಿಯ ಹುಟ್ಟು ಹಾಗೂ ಅವನತಿಯ ತನಕ ಕಾಲಾನುಕ್ರಮ ಪಟ್ಟಿ, ಈ ಕೇಸಿಗೆ ಸಂಬಂಧಿಸಿದಂತೆ ಪ್ರಮುಖ ಘಟನಾವಳಿಗಳ ವಿವರ ಮುಂದಿದೆ.

   ಮೊದಲ ಬಾರಿಗೆ ಕೋಮು ಗಲಭೆ

   ಮೊದಲ ಬಾರಿಗೆ ಕೋಮು ಗಲಭೆ

   1528: ಹಿಂದೂಗಳ ಆರಾಧ್ಯ ದೈವ ಶ್ರೀರಾಮಚಂದ್ರ ಹುಟ್ಟಿದ ಸ್ಥಳದಲ್ಲಿ ಮಸೀದಿ ನಿರ್ಮಾಣ.
   1853: ಅಯೋಧ್ಯೆದಲ್ಲಿ ಮೊಟ್ಟ ಮೊದಲ ಬಾರಿಗೆ ಕೋಮು ಗಲಭೆ ಘಟನೆ ದಾಖಲಾಗಿದೆ.

   1859: ವಿವಾದಿತ ಪ್ರದೇಶಕ್ಕೆ ಬೇಲಿ ಹಾಕಿದ ಬ್ರಿಟಿಷ್ ಆಡಳಿತ. ಒಳಾಂಗಣ ಭಾಗ ಮುಸ್ಲಿಮರಿಗೆ ಹಾಗೂ ಹೊರಾಂಗಣ ಭಾಗ ಹಿಂದೂಗಳಿಗೆ ಎಂದು ಹಂಚಿಕೆ.
   1885: ಹಿಂದೂಗಳಿಗೆ ಹಂಚಿಕೆಯಾಗಿದ್ದ ಹೊರಾಂಗಣ ಭಾಗದಲ್ಲಿ ರಾಮ ಮಂದಿರ ನಿರ್ಮಿಸಲು ಮಹಂತ ರಘುವೀರ್ ದಾಸ್ ರಿಂದ ನಿರಾಕರಣೆ.
   1949: ಮಸೀದಿಯೊಳಗೆ ಶ್ರೀರಾಮನ ಪ್ರತಿಮೆ ಕಾಣಿಸಿಕೊಂಡು ಎಲ್ಲರ ಹುಬ್ಬೇರಿಸಿತ್ತು. ಹಿಂದೂಗಳು ತಂದಿಟ್ಟಿದ್ದಾರೆ ಎಂದು ಮುಸ್ಲಿಮರಿಂದ ದೂರು. ಪ್ರಕರಣ ಕೋರ್ಟ್ ಮೆಟ್ಟಿಲೇರುತ್ತಿದ್ದಂತೆ ಎಚ್ಚೆತ್ತುಕೊಂಡ ಸರ್ಕಾರ ಗೇಟ್ ಬೀಗ ಹಾಕಿ ಜಡೆಯಿತು.

   ಶ್ರೀರಾಮ ಜನ್ಮಭೂಮಿ ವಿಮೋಚನೆ

   ಶ್ರೀರಾಮ ಜನ್ಮಭೂಮಿ ವಿಮೋಚನೆ

   1950-61 : ರಾಮ್ ಲಲ್ಲಾ ಪೂಜೆಗೆ ಅನುವು ಮಾಡಿಕೊಡುವಂತೆ ಕೋರಿ ನಾಲ್ಕು ಪ್ರತ್ಯೇಕ ಅರ್ಜಿ, ವಿವಾದಿತ ಸ್ಥಳದಲ್ಲಿ ಮಂದಿರ ನಿರ್ಮಾಣಕ್ಕೆ ಅನುವು ಕೋರಿ ಅರ್ಜಿ.

   1984: ಶ್ರೀರಾಮ ಜನ್ಮಭೂಮಿ ವಿಮೋಚನೆಗಾಗಿ ಹಿಂದೂ ಸಮಿತಿ ಅಸ್ತಿತ್ವಕ್ಕೆ, ಮಂದಿರ ನಿರ್ಮಾಣದ ಗುರಿ. ವಿಶ್ವ ಹಿಂದೂ ಪರಿಷತ್ ಹಾಗೂ ಎಲ್ ಕೆ ಅಡ್ವಾಣಿ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷದಿಂದ ಅಭಿಯಾನ.

   1986: ಮಸೀದಿ ಬಾಗಿಲು ತೆರೆವುಗೊಳಿಸಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ನ್ಯಾಯಾಲಯದ ತೀರ್ಪು. ಪ್ರತಿಭಟನೆಗಾಗಿ ಮುಸ್ಲಿಮರಿಂದ ಬಾಬ್ರಿ ಮಸೀದಿ ಕಾರ್ಯಕಾರಿ ಸಮಿತಿ ಸ್ಥಾಪನೆ.

   ಡಿಸೆಂಬರ್ 06, 1992

   ಡಿಸೆಂಬರ್ 06, 1992

   1989: ವಿಎಚ್ ಪಿ ಅಭಿಯಾನ ಶುರು, ವಿವಾದಿತ ಮಸೀದಿ ಜಾಗದ ಪಕ್ಕ ರಾಮ ಮಂದಿರಕ್ಕಾಗಿ ಶಂಕುಸ್ಥಾಪನೆ. ನಾಲ್ಕು ಅರ್ಜಿಗಳ ವಿಚಾರಣೆ ಅಲಹಾಬಾದ್ ಹೈಕೋರ್ಟಿಗೆ ವರ್ಗ

   1990: ವಿಎಚ್ ಪಿ ಕಾರ್ಯಕರ್ತರಿಂದ ಮಸೀದಿಯ ಪಾರ್ಶ್ವ ಭಾಗ ಧ್ವಂಸ. ಸಮಸ್ಯೆ ಬಗೆಹರಿಸಲು ಪ್ರಧಾನಿ ಚಂದ್ರಶೇಖರ್ ರಿಂದ ವಿಫಲ ಯತ್ನ.

   1991: ಆಯೋಧ್ಯೆ ಇರುವ ಉತ್ತರಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ.

   ಡಿಸೆಂಬರ್ 06, 1992: ವಿಎಚ್ ಪಿ, ಶಿವ ಸೇನೆ, ಬಿಜೆಪಿ ಕರಸೇವಕರಿಂದ ಮಸೀದಿ ಧ್ವಂಸ. ರಾಷ್ಟ್ರವ್ಯಾಪಿ ಹಿಂದೂ -ಮುಸ್ಲಿಂ ಕೋಮು ಗಲಭೆಗೆ ನಾಂದಿ. 2,000ಕ್ಕೂ ಅಧಿಕ ಮಂದಿ ಮರಣ. ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಲ್ಲೂ ಹಿಂಸಾಚಾರ ಹಬ್ಬಿತು.

   ಪಕ್ಕದ ದೇಶಗಳಲ್ಲಿ ಹಿಂದೂ ದೇಗುಲಗಳು ಧ್ವಂಸ. ಅಲ್ಲಿಂದ ಮುಂದಕ್ಕೆ ಆ ದೇಶಗಳಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳು ಭಯದಿಂದ, ಅನಾದಾರ ಧೋರಣೆಗೆ ಒಳಪಡಬೇಕಾಯಿತು.
   ಚಾರ್ಜ್ ಶೀಟ್ ಹಾಕಿದ ಸಿಬಿಐ

   ಚಾರ್ಜ್ ಶೀಟ್ ಹಾಕಿದ ಸಿಬಿಐ

   1993 : ಹಿಂದೂಗಳಿಗೆ ಮಂಜೂರಾಗಿದ್ದ ಹೊರಾಂಗಣ ಪ್ರದೇಶ (67 ಎಕರೆ) ವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಉತ್ತರಪ್ರದೇಶ ಸರ್ಕಾರ. ಬಾಬ್ರಿ ಮಸೀದಿ ನಿರ್ಮಾಣಕ್ಕೂ ಮುನ್ನ ಅಲ್ಲಿ ಹಿಂದೂ ಪೂಜಾ ಮಂದಿರವಿತ್ತೇ ಎಂಬುದರ ಬಗ್ಗೆ ಸುಪ್ರೀಂಕೋರ್ಟ್ ಅಭಿಪ್ರಾಯ ಕೇಳಿದ ಸರ್ಕಾರ.
   ಅಕ್ಟೋಬರ್ 1993: ಎಲ್ ಕೆ ಅಡ್ವಾಣಿ ಹಾಗೂ 13 ಮಂದಿಗಳ ಮೇಲೆ ಬಾಬ್ರಿ ಮಸೀದಿ ಕೆಡವಲು ಸಂಚು ರೂಪಿಸಿದ ಆರೋಪ ಹೊರೆಸಿ ಚಾರ್ಜ್ ಶೀಟ್ ಹಾಕಿದ ಸಿಬಿಐ.

   1994: ಅಲಹಾಬಾದ್ ಹೈಕೋರ್ಟಿನ ಲಕ್ನೋ ವಿಭಾಗೀಯ ಪೀಠದಲ್ಲಿ ನಿರಂತರವಾಗಿ ಪ್ರಕರಣದ ವಿಚಾರಣೆ.
   1998: ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೆ ಬಂದಿತು.

   ಚಾರ್ಜ್ ಶೀಟ್ ರದ್ದು

   ಚಾರ್ಜ್ ಶೀಟ್ ರದ್ದು

   2001: ವಿಎಚ್ ಪಿ ಯಿಂದ ಮತ್ತೆ ರಾಮಜನ್ಮಭೂಮಿಯಲ್ಲಿ ಮಂದಿರ ಸ್ಥಾಪನೆ ಸಂಕಲ್ಪ. ಮಸೀದಿ ಧ್ವಂಸ ವಾರ್ಷಿಕ ದಿನ ಹಲವೆಡೆ ಗಲಭೆ, ಹಿಂಸಾಚಾರ.
   ಮೇ 4, 2001: ಎಲ್ ಕೆ ಅಡ್ವಾಣಿ, ಕಲ್ಯಾಣ್ ಸಿಂಗ್ ಸೇರಿದಂತೆ 13 ಮುಖಂಡರ ಮೇಲಿದ್ದ ಚಾರ್ಜ್ ಶೀಟ್ ರದ್ದುಗೊಳಿಸಿದ ವಿಶೇಷ ನ್ಯಾ. ಎಸ್ .ಕೆ ಶುಕ್ಲಾ. ಕ್ರೈಂ 197 (ಮಸೀದಿ ಧ್ವಂಸ) ಹಾಗೂ 198(ಕ್ರಿಮಿನಲ್ ಪಿತೂರಿ) ಎರಡನ್ನು ಪ್ರತ್ಯೇಕಿಸಿ ಆದೇಶ.
   ಜನವರಿ 2002 : ಹಿಂದೂ -ಮುಸ್ಲಿಂ ನಾಯಕರ ಜತೆ ಮಾತುಕತೆ ನಡೆಸಲು ವಾಜಪೇಯಿ ಅವರಿಂದ ತಮ್ಮ ಕಚೇರಿಯಲ್ಲಿ ಪ್ರತ್ಯೇಕ ಕೇಂದ್ರ ಸ್ಥಾಪನೆ.

   ಗೋಧ್ರದಲ್ಲಿ ಹಿಂಸಾಚಾರ

   ಗೋಧ್ರದಲ್ಲಿ ಹಿಂಸಾಚಾರ

   ಫೆಬ್ರವರಿ 2002 : ಉತ್ತರಪ್ರದೇಶ ಅಸೆಂಬ್ಲಿ ಚುನಾವಣೆ ಪ್ರಣಾಳಿಕೆಯಲ್ಲಿ ರಾಮಮಂದಿರ ನಿರ್ಮಾಣ ಸೇರ್ಪಡೆ. ನಿರ್ಮಾಣಕ್ಕೆ ಮಾ.15 ಗಡುವು. ಅಯೋಧ್ಯೆಯಿಂದ ರೈಲಿನ ಮೂಲಕ ಹಿಂತಿರುಗುತ್ತಿದ್ದ ಹಿಂದೂ ಕಾರ್ಯಕರ್ತರ ಪೈಕಿ ಸುಮಾರು 58 ಜನರ ಹತ್ಯೆ. ಗೋಧ್ರದಲ್ಲಿನ ಘಟನೆಯಿಂದ ಹಿಂಸಾಚಾರಕ್ಕೆ ನಾಂದಿ.
   ಮಾರ್ಚ್ 2002 : 1000 ರಿಂದ 2000 ಜನ ಬಹುತೇಕ ಮುಸ್ಲಿಮರು ಗೋಧ್ರೋತ್ತರ ಹಿಂಸಾಚಾರದಲ್ಲಿ ರೈಲು ದಾಳಿಯಲ್ಲಿ ಹತ್ಯೆ.
   ಏಪ್ರಿಲ್ 2002: ಮೂವರು ಹೈಕೋರ್ಟ್ ಜಡ್ಜ್ ಗಳಿದ್ದ ಪೀಠದಿಂದ ವಿವಾದಿತ ಧಾರ್ಮಿಕ ತಾಣ ವಿಚಾರಣೆ.
   ಜನವರಿ 2003: ವಿವಾದಿತ ತಾಣ ಶ್ರೀರಾಮನ ಜನ್ಮಸ್ಥಳವೇ ಎಂಬುದನ್ನು ಪರಿಶೀಲಿಸಲು ಭೂ ಗರ್ಭ ಶಾಸ್ತ್ರಜ್ಞರಿಂದ ಸಮೀಕ್ಷೆ ಶುರು.

   ರಾಮಮಂದಿರ ನಿರ್ಮಾಣಕ್ಕೆ ಬಿಜೆಪಿ

   ರಾಮಮಂದಿರ ನಿರ್ಮಾಣಕ್ಕೆ ಬಿಜೆಪಿ

   ಆಗಸ್ಟ್ 2003: ಶ್ರೀರಾಮನ ಜನ್ಮಸ್ಥಳ ಇದೇ ಎನ್ನುವುದಕ್ಕೆ ಮಸೀದಿ ಕೆಳಗೆ ಕುರುಹುಗಳಿವೆ ಎಂದು ಸಮೀಕ್ಷೆ ಹೇಳಿಕೆ. ಇದನ್ನು ಅಲ್ಲಗೆಳೆದ ಮುಸ್ಲಿಮರು. ಹಿಂದೂ ಕಾರ್ಯಕರ್ತ ರಾಮಚಂದ್ರ ದಾಸ್ ಪರಮಹಂಸ ಕೊನೆ ಆಸೆಯಂತೆ ಮಂದಿರ ನಿರ್ಮಾಣ ಎಂದು ವಾಜಪೇಯಿ ಹೇಳಿಕೆ. ಆದರೆ, ನ್ಯಾಯಾಲಯದ ತೀರ್ಪಿನಿಂದ ಸಮಸ್ಯೆ ಪರಿಹಾರದ ನಿರೀಕ್ಷೆ.
   ಸೆಪ್ಟೆಂಬರ್ 2003: ಏಳು ಹಿಂದೂ ನಾಯಕರ ವಿರುದ್ಧ ವಿಚಾರಣೆಗೆ ಕೋರ್ಟ್ ಆದೇಶ. ಆದರೆ, 1992ರಲ್ಲಿ ಘಟನಾ ಸ್ಥಳದಲ್ಲಿದ್ದ ಉಪ ಪ್ರಧಾನಿ ಎಲ್ ಕೆ ಅಡ್ವಾಣಿ ವಿರುದ್ಧ ಆರೋಪ ಕೇಳಿ ಬರಲಿಲ್ಲ.
   ಅಕ್ಟೋಬರ್ 2004: ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಬಿಜೆಪಿ ಬದ್ಧ ಎಂದು ಅಡ್ವಾಣಿ ಹೇಳಿಕೆ.

   ಲೆಬ್ರಹಾನ್ ಸಮಿತಿ ವರದಿ

   ಲೆಬ್ರಹಾನ್ ಸಮಿತಿ ವರದಿ

   ನವೆಂಬರ್ 2004 : ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಅಡ್ವಾಣಿ ಕೈವಾಡ ಇಲ್ಲ ಎಂಬ ಈ ಹಿಂದಿನ ತೀರ್ಪು ಮರು ಪರಿಶೀಲನೆ ಅರ್ಜಿಯನ್ನು ಸ್ವೀಕರಿಸಿದ ಉತ್ತರ ಪ್ರದೇಶದ ಕೋರ್ಟ್.
   ಜುಲೈ 2005: ಶಂಕಿತ ಮುಸ್ಲಿಂ ಉಗ್ರರಿಂದ ವಿವಾದಿತ ತಾಣದ ಮೇಲೆ ದಾಳಿ. ಜೀಪ್ ಬಳಸಿದ್ದ ಉಗ್ರರು ಗೋಡೆಯಲ್ಲಿ ರಂಧ್ರ ಕೊರೆದಿದ್ದರು. ಭದ್ರತಾ ಪಡೆಯಿಂದ ಐವರ ಹತ್ಯೆ. ಆರನೇ ವ್ಯಕ್ತಿ ಗುರುತು ಪತ್ತೆಯಾಗಲಿಲ್ಲ.
   ಜೂನ್ 2009: ಸುಮಾರು 17 ವರ್ಷಗಳ ನಂತರ ಲೆಬ್ರಹಾನ್ ಸಮಿತಿಯಿಂದ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ತನಿಖಾ ವರದಿ ಸಲ್ಲಿಕೆ.
   ನವೆಂಬರ್ 2009: ಮಸೀದಿ ಧ್ವಂಸ ಪ್ರಕರಣದಲ್ಲಿ ಹಿಂದೂ ಧರ್ಮ ಪಾಲಕ ಬಿಜೆಪಿ ನಾಯಕರ ಕೈವಾಡವಿದೆ ಎಂದ ಲೆಬ್ರಹಾನ್ ಸಮಿತಿ ವರದಿ ಬಗ್ಗೆ ಸಂಸತ್ತಿನಲ್ಲಿ ಭಾರಿ ಗದ್ದಲ.

   ಮೊಹಮ್ಮದ್ ಫರೂಕ್ ನಿಧನ

   ಮೊಹಮ್ಮದ್ ಫರೂಕ್ ನಿಧನ

   ಸೆಪ್ಟೆಂಬರ್ 2010 : ವಿವಾದಿತ ತಾಣ ಹಂಚಿಕೆ ಮಾಡಿಕೊಳ್ಳುವಂತೆ ಅಲಹಾಬಾದ್ ಹೈಕೋರ್ಟ್ ತೀರ್ಪು. ತಲಾ ಮೂರನೇ ಒಂದು ಭಾಗ ಮುಸ್ಲಿಂ ಸಮುದಾಯ, ಹಿಂದೂಗಳಿಗೆ ಹಂಚಿಕೆ. ನಿರ್ಮೋಹಿ ಅಖಾರಕ್ಕೆ ಮುಖ್ಯ ವಿವಾದಿತ ಭಾಗ ಎಂದು ತೀರ್ಪು.
   ಮೇ 2011: 2010ರ ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದ ಹಿಂದೂ ಹಾಗೂ ಮುಸ್ಲಿಂ ಸಮುದಾಯ. ಹೈಕೋರ್ಟ್ ತೀರ್ಪು ರದ್ದುಗೊಳಿಸಿದ ಸುಪ್ರೀಂಕೋರ್ಟ್.
   ಡಿಸೆಂಬರ್ 25, 2014: 1949ರಲ್ಲಿ ಕೇಸು ಹಾಕಿದ್ದ ಏಳು ಮಂದಿ ಅಯೋಧ್ಯಾ ನಿವಾಸಿಗಳ ಪೈಕಿ ಹಿರಿಯರಾದ ಅರ್ಜಿದಾರ ಮೊಹಮ್ಮದ್ ಫರೂಕ್ ನಿಧನ.

   ಅಡ್ವಾಣಿ ವಿರುದ್ಧ ವಿಚಾರಣೆ

   ಅಡ್ವಾಣಿ ವಿರುದ್ಧ ವಿಚಾರಣೆ

   ಮಾರ್ಚ್ 6, 2017: ಕೈಂ 197 ಹಾಗೂ 198 ಜಂಟಿಯಾಗಿ ಪರಿಗಣಿಸಿ ಸಂಚು ರೂಪಿಸಿದ್ದರ ಬಗ್ಗೆ ಸಿಬಿಐ ಸಲ್ಲಿಸಿದ್ದ ಪುನರ್ ಪರಿಶೀಲನೆ ಅರ್ಜಿ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್.
   ಮಾರ್ಚ್ 22, 2017: ಎರಡು ಪಾರ್ಟಿಗಳು ಮಾತುಕತೆ ಮೂಲಕ ಕೋರ್ಟ್ ಹೊರಗಡೆ ಸಮಸ್ಯೆ ಬಗೆಹರಿಸಿಕೊಳ್ಳುವುದಾದರೆ ಮಧ್ಯಸ್ಥರನ್ನು ನೇಮಿಸಲು ಸಿದ್ಧ ಎಂದ ಸುಪ್ರೀಂಕೋರ್ಟ್.
   ಏಪ್ರಿಲ್ 19, 2017: ಎಲ್ ಕೆ ಅಡ್ವಾಣಿ ಸೇರಿದಂತೆ 13 ಜನ ಆರೋಪಿಗಳ ಮೇಲಿನ ಆರೋಪ ಪಟ್ಟಿ ರದ್ದು ಮಾಡದಂತೆ ಸಿಬಿಐ ಕೋರಿದ್ದ ಅರ್ಜಿಗೆ ಪುರಸ್ಕಾರ. ಕಲ್ಯಾಣ್ ಸಿಂಗ್ ಹೊರತುಪಡಿಸಿ ಉಳಿದವರ ಮೇಲೆ ವಿಚಾರಣೆ ನಡೆಸಲು ಆದೇಶ.
   ಚಿತ್ರದಲ್ಲಿ: ಧರ್ಮದಾಸ್, ಸ್ವಾಮಿ ಹರ್ ದಯಾಳ್ ಶಾಸ್ತ್ರಿ, ಅರ್ಜಿದಾರ ಹಶೀಂ ಅನ್ಸಾರಿ ಅವರು 22ನೇ ವಾರ್ಷಿಕೋತ್ಸವದಲ್ಲಿ ಸಿಹಿ ಹಂಚಿಕೆ.

   ಮೇ 30, 2017: ಲಕ್ನೋದ ಸಿಬಿಐ ವಿಶೇಷ ನ್ಯಾಯಾಲಯ ಎಲ್.ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಉಮಾ ಭಾರತಿ ಸೇರಿ 12 ಜನರ ವಿರುದ್ಧ ಕ್ರಿಮಿನಲ್ ಸಂಚಿನ ಪ್ರಕರಣವನ್ನು ಸಿಬಿಐ ವಿಶೇಷ ನ್ಯಾಯಾಲಯ ದಾಖಲು ಮಾಡಿಕೊಂಡಿದೆ. ಇದೀಗ ಇವರ ವಿರುದ್ಧ ವಿಚಾರಣೆ ಆರಂಭವಾಗಲಿದೆ.

   ಡಿಸೆಂಬರ್ 05, 2017:2010ರಲ್ಲಿ ವಿವಾದದ ಸಂಬಂಧ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿರುವ 13 ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಂಡ ಸುಪ್ರೀಂಕೋರ್ಟಿನ ತ್ರಿಸದಸ್ಯ ಪೀಠ. ಸುನ್ನಿ ಮುಸ್ಲಿಮರಿಂದ ಹೆಚ್ಚಿನ ಕಾಲಾವಕಾಶ ಕೋರಿಕೆ, ಮುಂದಿನ ವಿಚಾರಣೆ ಫೆಬ್ರವರಿ 08, 2018ಕ್ಕೆ ಮುಂದೂಡಿಕೆ.
   ಇಸ್ಲಾಂ ಪ್ರಕಾರ ಮಸೀದಿಯ ಮಹತ್ವ

   ಇಸ್ಲಾಂ ಪ್ರಕಾರ ಮಸೀದಿಯ ಮಹತ್ವ

   ಸೆಪ್ಟೆಂಬರ್ 27: 1994ರ ಅಲಹಾಬಾದ್ ಹೈಕೋರ್ಟ್ ಆದೇಶದಂತೆ, ಇಸ್ಲಾಂ ಪ್ರಕಾರ ಮಸೀದಿಯ ಮಹತ್ವ ಹಾಗೂ ನಮಾಜ್ ಮಾಡಲು ಅದೇ ಜಾಗ ಆಗಬೇಕೆಂದೇನಿಲ್ಲ, ಬಯಲು ಪ್ರದೇಶವೊಂದರಲ್ಲೂ ಪ್ರಾರ್ಥನೆ ಸಲ್ಲಿಸಬಹುದು ಎನ್ನಲಾಗಿತ್ತು.

   ಈ ಅಂಶವನ್ನು ಸಿಜೆಐ ದೀಪಕ್ ಮಿಶ್ರಾ ಹಾಗೂ ನ್ಯಾ ಅಶೋಕ್ ಭೂಷಣ್ ಎತ್ತಿ ಹಿಡಿದರೆ, ನ್ಯಾ ಅಬ್ದುಲ್ ನಜೀರ್ ಅಸಮ್ಮತಿ ವ್ಯಕ್ತಪಡಿಸಿದರು.

   ವಿಸ್ತೃತ ಸಂವಿಧಾನ ಪೀಠ ರಚನೆಗೆ ಆಗ್ರಹಿಸಿದ್ದ ಮುಸ್ಲಿಂ ಸಂಘಟನೆಗಳ ಮನವಿಯನ್ನು ನ್ಯಾ. ನಜೀರ್ ಪುರಸ್ಕರಿಸಿದರು. ಆದರೆ, ಇದರ ವಿರುದ್ಧ ತ್ರಿಸದಸ್ಯ ಪೀಠದಲ್ಲಿ 2:1 ರ ಫಲಿತಾಂಶ ಬಂದಿದೆ.

   ರಾಮಜನ್ಮ ಭೂಮಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 29ರಿಂದ ನಿರಂತರವಾಗಿ ವಿಚಾರಣೆ ನಡೆಯಲಿದೆ.

   ಮಾರ್ಚ್ 06, 2019: ಕೋರ್ಟ್ ಮೇಲ್ವಿಚಾರಣೆಯಲ್ಲಿ ರಾಮಜನ್ಮಭೂಮಿ ವಿವಾದವನ್ನು ಸಂಧಾನದ ಮೂಲಕ ಬಗೆಹರಿಸುವ ಕುರಿತಂತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್. ತೀರ್ಪನ್ನು ಕಾಯ್ದಿರಿಸಿ, ಮಧ್ಯಸ್ಥಿಕೆ ಯಾರು ನಡೆಸಬೇಕು ಎಂಬುದನ್ನು ಅರ್ಜಿದಾರರೇ ನಿರ್ಧರಿಸಲಿ ಎಂದ ಸುಪ್ರೀಂ ಕೋರ್ಟ್.

   ಸಂಧಾನ ಪ್ರಗತಿ ವರದಿ ಪರಿಶೀಲನೆ

   ಸಂಧಾನ ಪ್ರಗತಿ ವರದಿ ಪರಿಶೀಲನೆ

   ಜೂನ್ 18, 2019
   ಜಸ್ಟೀಸ್ ಬೊಬ್ಡೆ ಅವರಲ್ಲದೆ, ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ಜಸ್ಟೀಸ್ ಚಂದ್ರಚೂಡ್, ಜಸ್ಟೀಸ್ ಭೂಷಣ್, ಜಸ್ಟೀಸ್ ಅಬ್ದುಲ್ ನಜೀರ್ ಅವರನ್ನೊಳಗೊಂಡ ನ್ಯಾಯಪೀಠವು, ಸಂಧಾನ ಪ್ರಗತಿ ವರದಿಯನ್ನು ಪರಿಶೀಲಿಸಿ, ವಿಚಾರಣೆಯನ್ನು ಆಗಸ್ಟ್ 02ಕ್ಕೆ ಮುಂದೂಡಿದ್ದಾರೆ. ಆದರೆ, ಜುಲೈ 31ರ ತನಕ ಸಂಧಾನಕಾರರು ತಮ್ಮ ಸಂಧಾನಸಭೆಗಳನ್ನು ನಡೆಸಬಹುದು ಎಂದು ಸೂಚಿಸಲಾಗಿದೆ.

   ಸೆಪ್ಟೆಂಬರ್ 30ರಂದು ಅಂತಿಮ ತೀರ್ಪು

   ಸೆಪ್ಟೆಂಬರ್ 30ರಂದು ಅಂತಿಮ ತೀರ್ಪು

   ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಅಂತಿಮ ತೀರ್ಪು ಸೆಪ್ಟೆಂಬರ್ 30ರಂದು ನೀಡಲು ಲಕ್ನೋದ ಸಿಬಿಐ ಕೋರ್ಟ್ ಮುಂದಾಗಿದೆ. ತೀರ್ಪಿನ ದಿನದಂದು ಪ್ರಮುಖ ಆರೋಪಿಗಳಾದ ಬಿಜೆಪಿಯ ಹಿರಿಯ ಮುಖಂಡ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಉಮಾಭಾರತಿ ಸೇರಿದಂತೆ ಆರೋಪಿಗಳಿಗೆ ಹಾಜರಿರುವಂತೆ ಕೋರ್ಟ್ ಸೂಚಿಸಿದೆ. ಆದರೆ, ಅನೇಕ ಆರೋಪಿಗಳು ಖುದ್ದು ಹಾಜರಾತಿಯಿಂದ ವಿನಾಯತಿ ಕೋರಿ ಮನವಿ ಸಲ್ಲಿಸಿದ್ದಾರೆ.

   ವಿಶೇಷ ಜಡ್ಜ್ ಎಸ್. ಕೆ ಯಾದವ್ ಮುಂದೆ ಅಡ್ವಾಣಿ ಸೇರಿದಂತೆ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ವಿಚಾರಣೆ ಮೂಲಕ ಹಾಜರಾಗಿದ್ದಾರೆ. ಈ ಹಿಂದೆ ಏಪ್ರಿಲ್ 2020ರ ಒಳಗೆ ತೀರ್ಪು ನೀಡಬೇಕು ಎಂದು ಹೇಳಿತ್ತು. ಈಗ ಸೆಪ್ಟೆಂಬರ್ 30ರಂದು ತೀರ್ಪು ನೀಡಲಿದೆ.

   ಪ್ರಕರಣದ ಅಂತಿಮ ತೀರ್ಪು ಪ್ರಕಟ

   ಪ್ರಕರಣದ ಅಂತಿಮ ತೀರ್ಪು ಪ್ರಕಟ

   ಲಕ್ನೋ, ಸೆಪ್ಟೆಂಬರ್ 30: ಬಹು ನಿರೀಕ್ಷಿತ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಅಂತಿಮ ತೀರ್ಪು ಪ್ರಕಟಗೊಂಡಿದೆ. ಲಕ್ನೋದ ಸಿಬಿಐ ವಿಶೇಷ ನ್ಯಾಯಾಲಯದ ಜಡ್ಜ್ ಎಸ್. ಕೆ ಯಾದವ್ ಇಂದು ಮಹತ್ವದ ತೀರ್ಪು ನೀಡಿದ್ದಾರೆ. ಬಿಜೆಪಿಯ ಹಿರಿಯ ನಾಯಕರಾದ ಎಲ್‌.ಕೆ.ಆಡ್ವಾಣಿ, ಡಾ.ಮುರಳಿ ಮನೋಹರ್‌ ಜೋಶಿ ಮತ್ತು ಉಮಾ ಭಾರತಿಗೆ ಖುಲಾಸೆಯಾಗಿದೆ.

   ಬಿಜೆಪಿಯ ಹಿರಿಯ ನಾಯಕರಾದ ಎಲ್‌.ಕೆ.ಆಡ್ವಾಣಿ, ಡಾ.ಮುರಳಿ ಮನೋಹರ್‌ ಜೋಶಿ ಮತ್ತು ಉಮಾ ಭಾರತಿ ಸೇರಿದಂತೆ 32 ಮಂದಿ ಪ್ರಮುಖ ಆರೋಪಿಗಳಾಗಿದ್ದ 28 ವರ್ಷಗಳ ಕೇಸ್‌ಗೆ ಒಂದು ಮುಕ್ತಾಯ ಕಂಡಿದೆ. ಸುಮಾರು 2,000 ಪುಟಗಳ ತೀರ್ಪಿನ ಪ್ರಮುಖ ಅಂಶಗಳನ್ನು ಮಾತ್ರ ನ್ಯಾ. ಯಾದವ್ ಅವರು ಓದಿದ್ದಾರೆ.

   English summary
   Babri mosque demolition case : The CBI special court in Lucknow on Wednesday(Sept 30)acquitted LK Advani, MM Joshi, Uma Bharti and all 32 accused as Court Observes Incident Was Not Pre-planned. Here is a Timeline of The 28-Year-Old Case
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X