ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಅಧಿಕಾರಕ್ಕೆ ಬಂದಿದ್ದೇ ಇದರಿಂದ: ಬಾಬ್ರಿ ಮಸೀದಿ ತೀರ್ಪಿಗೆ ಓವೈಸಿ ಪ್ರತಿಕ್ರಿಯೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 30: ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ನೋದ ಸಿಬಿಐ ವಿಶೇಷ ನ್ಯಾಯಾಲಯ ನೀಡಿದ ತೀರ್ಪಿನ ವಿರುದ್ಧ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತೀರ್ಪು ಪ್ರಕಟವಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಓವೈಸಿ, 1992ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ನ್ಯಾಯವನ್ನು ನಿರಾಕರಿಸಲಾಗಿದೆ ಎಂದು ತೀರ್ಪಿನ ಬಗ್ಗೆ ಕಿಡಿಕಾರಿದರು.

ಬಾಬರಿ ಮಸೀದಿ ತೀರ್ಪು; ಕರ್ನಾಟಕದ ನಾಯಕರ ಪ್ರತಿಕ್ರಿಯೆಬಾಬರಿ ಮಸೀದಿ ತೀರ್ಪು; ಕರ್ನಾಟಕದ ನಾಯಕರ ಪ್ರತಿಕ್ರಿಯೆ

ಮಸೀದಿ ಧ್ವಂಸ ಕೃತ್ಯದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಎಲ್‌ಕೆ ಅಡ್ವಾಣಿ, ಮುರಳಿ ಮನೋಹರ ಜೋಷಿ, ಉಮಾಭಾರತಿ, ವಿನಯ್ ಕಟಿಯಾರ್, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಸೇರಿದಂತೆ ಎಲ್ಲ 32 ಆರೋಪಿಗಳ ವಿರುದ್ಧ ಸೂಕ್ತ ಸಾಕ್ಷ್ಯ ಇಲ್ಲ ಎಂದು ಹೇಳಿದ ಸಿಬಿಐ ನ್ಯಾಯಾಧೀಶ ಎಸ್‌.ಕೆ. ಯಾದವ್, ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದ್ದರು.

ಬಾಬ್ರಿ ಮಸೀದಿ ಧ್ವಂಸ ತೀರ್ಪು: ಕಾಂಗ್ರೆಸ್ ದೇಶದ ಜನತೆಯ ಕ್ಷಮೆ ಕೇಳಲಿ!ಬಾಬ್ರಿ ಮಸೀದಿ ಧ್ವಂಸ ತೀರ್ಪು: ಕಾಂಗ್ರೆಸ್ ದೇಶದ ಜನತೆಯ ಕ್ಷಮೆ ಕೇಳಲಿ!

ಸಿಬಿಐ ವಿಶೇಷ ನ್ಯಾಯಾಲಯವು ಎಲ್ಲ 32 ಆರೋಪಿಗಳನ್ನು ಖುಲಾಸೆಗೊಳಿಸಿದೆ. ಇದು ಪೂರ್ವ ನಿಯೋಜಿತ ಸಂಚಲ್ಲ. ಆರೋಪಿಗಳ ವಿರುದ್ಧದ ಸೂಕ್ತ ಪುರಾವೆಗಳಿಲ್ಲ ಎಂದು ನ್ಯಾಯಾಲಯ ಹೇಳಿದೆ. ಇದು ವಿರೋಧ ಪಕ್ಷಗಳ ಟೀಕೆಗೆ ಒಳಗಾಗಿದೆ. ಹಾಗಾದರೆ ಮಸೀದಿ ತಾನಾಗಿಯೇ ಬಿದ್ದಿತೇ? ಅಲ್ಲಿ ಭೂಕಂಪ ಸಂಭವಿಸಿತ್ತೇ? ಎಂದು ಪ್ರಶ್ನಿಸಿದ್ದಾರೆ. ಮುಂದೆ ಓದಿ...

ಎಷ್ಟು ತಿಂಗಳ ಸಿದ್ಧತೆ ಬೇಕು?

ಎಷ್ಟು ತಿಂಗಳ ಸಿದ್ಧತೆ ಬೇಕು?

'ಇದು ಭಾರತೀಯ ನ್ಯಾಯಾಂಗದ ಇತಿಹಾಸದಲ್ಲಿ ಖೇದಕರ ದಿನ. ಅಲ್ಲಿ ಯಾವುದೇ ಸಂಚು ನಡೆದಿರಲಿಲ್ಲ ಎಂದು ನ್ಯಾಯಾಲಯ ಹೇಳಿದೆ. ಆ ಕ್ಷಣದಲ್ಲಿ ನಡೆದ ಕೃತ್ಯವನ್ನು ಅನರ್ಹಗೊಳಿಸಲು ಎಷ್ಟು ತಿಂಗಳ ಕಾಲ ಸಿದ್ಧತೆ ನಡೆಸಬೇಕಾಗುತ್ತದೆ ಎಂದು ನನಗೆ ತಿಳಿವಳಿಕೆ ನೀಡಿ' ಎಂದು ಓವೈಸಿ ವ್ಯಂಗ್ಯವಾಡಿದರು.

ನ್ಯಾಯಾಂಗಕ್ಕೆ ಕರಾಳ ದಿನ

ನ್ಯಾಯಾಂಗಕ್ಕೆ ಕರಾಳ ದಿನ

ಸಿಬಿಐ ನ್ಯಾಯಾಲಯ ನೀಡಿದ ತೀರ್ಪು ಭಾರತೀಯ ನ್ಯಾಯಾಂಗಕ್ಕೆ ಕರಾಳ ದಿನ. ಏಕೆಂದರೆ ನಾಗರಿಕ ಆಸ್ತಿ ವಿವಾದವು ಕಾನೂನು ನಿಯಮದ ತೀವ್ರ ಉಲ್ಲಂಘನೆ ಮತ್ತು ಆರಾಧನೆಯ ಸಾರ್ವಜನಿಕ ಸ್ಥಳವನ್ನು ಹಾನಿ ಮಾಡುವುದು ಸಿದ್ಧತೆಯೊಂದಿಗೆ ಮಾಡಿದ ಕೃತ್ಯ ಎಂದು ಈಗಾಗಲೇ ಸುಪ್ರೀಂಕೋರ್ಟ್ ಹೇಳಿದೆ ಎಂದು ಹೇಳಿದರು.

ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಸ್ವಾಗತಿಸಿದ ಬಿಜೆಪಿ ಭೀಷ್ಮಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಸ್ವಾಗತಿಸಿದ ಬಿಜೆಪಿ ಭೀಷ್ಮ

ಬಿಜೆಪಿ ಅಧಿಕಾರಕ್ಕೆ ಬಂದಿದ್ದೇ ಇದರಿಂದ

ಬಿಜೆಪಿ ಅಧಿಕಾರಕ್ಕೆ ಬಂದಿದ್ದೇ ಇದರಿಂದ

'ಇದು ನ್ಯಾಯದ ವಿಷಯ. ಬಾಬ್ರಿ ಮಸೀದಿ ಧ್ವಂಸಕ್ಕೆ ಕಾರಣರಾದ ಜನರಿಗೆ ಶಿಕ್ಷೆಯಾಗಬೇಕು ಎನ್ನುವುದು ಖಾತರಿಯಾಗಬೇಕದ್ದ ವಿವಾದ. ಆದರೆ ಅವರನ್ನು ಈ ಹಿಂದೆ ಗೃಹ ಸಚಿವ ಮತ್ತು ಮಾನವ ಸಂಪನ್ಮೂಲ ಸಚಿವರನ್ನಾಗಿ ಮಾಡುವ ಮೂಲಕ ರಾಜಕೀಯವಾಗಿ ಬಹುಮಾನ ನೀಡಲಾಗಿತ್ತು. ಈ ವಿವಾದದ ಕಾರಣದಿಂದಲೇ ಈಗ ಬಿಜೆಪಿ ಅಧಿಕಾರದಲ್ಲಿದೆ' ಎಂದು ಆರೋಪಿಸಿದರು.

ನ್ಯಾಯದ ಅಣಕ

ನ್ಯಾಯದ ಅಣಕ

'ಇದು ನ್ಯಾಯದ ಸಂಪೂರ್ಣ ಅಣಕವಾಗಿದೆ. ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಕ್ರಿಮಿನಲ್ ಸಂಚು ಆರೋಪ ಹೊತ್ತಿದ್ದ ಎಲ್ಲರನ್ನೂ ಖುಲಾಸೆಗೊಳಿಸಲಾಗಿದೆ. ಹಾಗಾದರೆ ಮಸೀದಿ ತಾನಾಗಿಯೇ ಸ್ಫೋಟಗೊಂಡಿತೇ? ಹಿಂದಿನ ಸಿಜೆಐ ನೇತೃತ್ವದ ಸಾಂವಿಧಾನಿಕ ಪೀಠವು, ಧ್ವಂಸ ಕೃತ್ಯ ಕಾನೂನಿನ ತೀವ್ರವಾದ ಉಲ್ಲಂಘನೆ ಎಂದು ಹೇಳಿತ್ತು. ಈಗ ಈ ತೀರ್ಪು ಬಂದಿದೆ. ನಾಚಿಕೆಗೇಡು' ಎಂದು ಸೀತಾರಾಂ ಯೆಚೂರಿ ಅಸಮಾಧಾನ ವ್ಯಕ್ತಪಡಿಸಿದರು.

English summary
Babri Masjid Case Verdict: AIMIM chief Asaduddin Owaisi said it is a black day for judiciary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X