ಬಾಬಾ ರಾಮದೇವ್ ಹೊಸ ಸಾಹಸ, ವಿಶ್ವವಿದ್ಯಾಲಯ ಸ್ಥಾಪನೆ!

Posted By:
Subscribe to Oneindia Kannada

ಮಥುರಾ, ಫೆ. 21: ಯೋಗ ಗುರು ಬಾಬಾ ರಾಮದೇವ್ ಅವರು ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ದೆಹಲಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಿಶ್ವವಿದ್ಯಾಲಯ ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಈ ವಿಶಿಷ್ಟ ವಿಶ್ವವಿದ್ಯಾಲಯ ಆರಂಭಗೊಳ್ಳಲಿದೆ ಎಂದು ರಾಮದೇವ್ ಹೇಳಿದ್ದಾರೆ.

ಸುಮಾರು ಒಂದು ಲಕ್ಷಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ವಿವಿಧ ವಿಷಯಗಳ ಮೇಲೆ ಅಧ್ಯಯನ ನಡೆಸಲು ಸೂಕ್ತವಾದ ವೇದಿಕೆ ಕಲ್ಪಿಸಲಾಗುವುದು. ಹಾರ್ವರ್ಡ್, ಕೇಂಬ್ರಿಡ್ಜ್ ವಿವಿಗಳ ಶಿಕ್ಷಣ ಗುಣಮಟ್ಟವನ್ನು ನಮ್ಮ ವಿಶ್ವವಿದ್ಯಾಲಯ ಹೊಂದಲಿದೆ. ವಿದೇಶದಿಂದ ಇಲ್ಲಿಗೆ ಬಂದು ವಿದ್ಯಾರ್ಜನೆ ಮಾಡಲು ಹಾತೊರೆಯುವಂಥ ವಾತಾವರಣ ನಿರ್ಮಿಸಲಾಗುವುದು ಎಂದು ಬಾಬಾ ರಾಮದೇವ್ ಹೇಳಿದ್ದಾರೆ.

Baba Ramdev to set up Harvard-like university in Delhi

ವೃಂದಾವನದ ವತ್ಸಾಲಯ ಗ್ರಾಮಕೇಂದ್ರದಲ್ಲಿ ನಡೆದ ಸಮಾರಂಭವೊಂದರಲ್ಲಿ ಬಾಬಾ ರಾಮದೇವ್ ಮಾತನಾಡುತ್ತಿದ್ದರು. (ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Yoga guru Ramdev today said he will set up an international standard university in Delhi within the next five years.
Please Wait while comments are loading...