ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪದ್ಮಶ್ರೀ ಬಗ್ಗೆ ರಾಜಮೌಳಿ ಟ್ವಿಟ್ಟರ್‌ನಲ್ಲಿ ಬರೆದಿದ್ದೇನು?

|
Google Oneindia Kannada News

ಬೆಂಗಳೂರು, ಜನವರಿ, 26: "ನಾನು ಹುಟ್ಟಿದ್ದು ಕರ್ನಾಟಕದಲ್ಲಿ, ಓದಿದ್ದು ಆಂಧ್ರಪ್ರದೇಶದಲ್ಲಿ, ಕೆಲಸ ಮಾಡಿದ್ದು ತಮಿಳುನಾಡಿನಲ್ಲಿ, ವಾಸವಾಗಿರೋದು ತೆಲಂಗಾಣದಲ್ಲಿ. ನಾನು ಎಲ್ಲಾ ರಾಜ್ಯಗಳಿಗೆ ಸೇರಿದವ ಎಂದು ಹೇಳಲು ಸಂತಸವಾಗುತ್ತಿದೆ ಎಂದು ಖ್ಯಾತ ನಿರ್ದೇಶಕ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಎಸ್.ಎಸ್.ರಾಜಮೌಳಿ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

ನನನ್ನು ಕೇಳದೆ ಕರ್ನಾಟಕ ಸರ್ಕಾರ ನನ್ನ ಹೆಸರನ್ನು ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು ಮಾಡಿತ್ತು. ಕರ್ನಾಟಕದ ಲೆಕ್ಕದಲ್ಲಿ ನನಗೆ ಪ್ರಶಸ್ತಿ ಒಲಿದು ಬಂದಿದೆ. ಕೆಲವರು ನಾನು ಕರ್ನಾಟಕದವನೇ? ಎಂದು ಅನುಮಾನ ವ್ಯಕ್ತಪಡಿಸಿದ್ದರು. ನಾನು ಹುಟ್ಟಿದ್ದು ರಾಯಚೂರಿನಲ್ಲಿ ಎಂದು ರಾಜಮೌಳಿ ಸ್ಪಷ್ಟನೆ ನೀಡಿದ್ದಾರೆ.[ಪದ್ಮ ಪ್ರಶಸ್ತಿ ಪಡೆದವರ ಪಟ್ಟಿ]

director

ಬಾಹುಬಲಿ ಚಿತ್ರ ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಿ ದಾಖಲೆ ನಿರ್ಮಿಸಿತ್ತು. ಬಾಹುಬಲಿ ಚಿತ್ರದ ಮತ್ತೊಂದು ಅವತರಣಿಕೆ ಈ ವರ್ಷ ಬಿಡುಗಡೆಯಾಗಲಿದ್ದು ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಪ್ರಶಸ್ತಿ ಬಂದಿದ್ದು ನನಗೆ ಸಂತಸ ತಂದಿದೆ ಎಂದು ರಾಜಮೌಳಿ ಹೇಳಿದ್ದಾರೆ.[ಪದ್ಮ ಪ್ರಶಸ್ತಿಗಳ ಮೇಲೆ ತೂರಿಬಂದ ಟೀಕಾಸ್ತ್ರಗಳು]

ಈ ಬಾರಿ ಸೂಪರ್ ಸ್ಟಾರ್ ರಜನಿಕಾಂತ್, ಆರ್ಟ್ ಆಫ್ ಲಿವಿಂಗ್ ಖ್ಯಾತಿಯ ರವಿಶಂಕರ್ ಗುರೂಜಿ ಅವರಿಗೆ ಪ್ರಸಕ್ತ ಸಾಲಿನ ಪದ್ಮ ವಿಭೂಷಣ ನೀಡಲಾಗಿದ್ದರೆ 83 ಸಾಧಕರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

English summary
Director S S Rajamouli is on the list of the recently announced Padma Awards, but the Baahubali director says that he hasn't "created any artistic brilliance that deserves this honour." In a series of tweets he thanked the government for the honour and also congratulated his colleagues. Here is some intersting tweets by Rajamouli.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X