• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಯುಷ್ಮಾನ್ ಭಾರತ ಯೋಜನೆ : ಯಾರು ಫಲಾನುಭವಿ, ಯಾರು ಅರ್ಹರು?

|
   ಅಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಫಲಾನುಭವಿಗಳು ಯಾರ್ ಯಾರು? | Oneindia Kannada

   ಸೆಪ್ಟೆಂಬರ್ 25ರಂದು ಮಂಗಳವಾರ ನರೇಂದ್ರ ಮೋದಿ ಸರಕಾರದ ಮಹತ್ವಾಕಾಂಕ್ಷಿ ಆಯುಷ್ಮಾನ್ ಭಾರತ ಅಥವಾ ರಾಷ್ಟ್ರೀಯ ಆರೋಗ್ಯ ರಕ್ಷಣಾ ಮಿಷನ್ ಅಥವಾ ಮೋದಿಕೇರ್ ಯೋಜನೆಯನ್ನು ಆರಂಭಿಸಲಾಗುತ್ತಿದೆ.

   ಸರಕಾರಿ ಪ್ರಯೋಜಿತ ಈ ಆರೋಗ್ಯ ವಿಮೆ ಯೋಜನೆಯಿಂದ ದೇಶದಲ್ಲಿರುವ 10.74 ಕೋಟಿ ಕುಟುಂಬಗಳು ಮತ್ತು 50 ಕೋಟಿಯಷ್ಟು ಜನರು ಪ್ರಯೋಜನ ಪಡೆಯಲಿದ್ದಾರೆ. ಉಚಿತ ಕವರೇಜ್ ಇರುವ ಯೋಜನೆಯಿಂದ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರುಪಾಯಿಯಷ್ಟು ಹಣದ ನೆರವು ಸಿಗಲಿದೆ. ಯಾವುದೇ ಸರಕಾರಿ ಆಸ್ಪತ್ರೆ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ಕೂಡ ಚಿಕಿತ್ಸೆ ಪಡೆಯಬಹುದಾಗಿದೆ.

   ಆಯುಷ್ಮಾನ್ ಭಾರತ್ ಅಥವಾ ಮೋದಿಕೇರ್ ಎಂದರೇನು?

   ಆದರೆ, ಇದು ಕೇವಲ ದೇಶದ ಬಡಜನತೆಗೆ ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳಿಗೆ ಮಾತ್ರ ಲಭ್ಯವಾಗಿರಲಿದ್ದು, ಉಚಿತ ವೈದ್ಯಕೀಯ ವಿಮೆಯ ಸೌಲಭ್ಯ ಎಲ್ಲರಿಗೂ ಸಿಗುವುದಿಲ್ಲ. ಹಾಗಿದ್ದರೆ ಈ ಯೋಜನೆಯಡಿ ಯಾರು ಬರಲಿದ್ದಾರೆ, ಯಾರ್ಯಾರು ಇದಕ್ಕೆ ಅರ್ಹತೆ ಗಳಿಸಲಿದ್ದಾರೆ, ಇದಕ್ಕಾಗಿ ಇರಬೇಕಾಗಿರುವ ದಾಖಲಾತಿಗಳೇನು? ಮುಂತಾದ ವಿವರಗಳು ಮುಂದಿವೆ.

   ಗ್ರಾಮೀಣ ಪ್ರದೇಶದಲ್ಲಿ

   1) ಕೇವಲ ಒಂದೇ ಕೋಣೆಯಲ್ಲಿ, ಕಚ್ಚಾ ಗೋಡೆ ಮತ್ತು ಕಚ್ಚಾ ಮಾಳಿಗೆ ಇರುವ ಮನೆಯಲ್ಲಿ ವಾಸಿಸುತ್ತಿರುವವರು.

   2) 16ರಿಂದ 59 ವರ್ಷದೊಳಗಿನ ವಯಸ್ಕರು ಇಲ್ಲದಿರುವ ಕುಟುಂಬದ ಸದಸ್ಯರು.

   3) 16ರಿಂದ 59 ವರ್ಷದೊಳಗಿನ ಪುರುಷರು ಇಲ್ಲದಿರುವ, ಆದರೆ, ಮಹಿಳೆ ನಿರ್ವಹಿಸುತ್ತಿರುವ ಬಡ ಕುಟುಂಬ.

   4) ಕನಿಷ್ಠ ಒಬ್ಬರು ವಿಕಲಾಂಗವಿರುವ ಮತ್ತು ಹಿರಿಯರಿದ್ದರೂ ಅಂಗವೈಕಲ್ಯತೆ ಇರುವ ಕುಟುಂಬ.

   ಮೋದಿ ಆರೋಗ್ಯ ಯೋಜನೆಯನ್ನು ಹಾಡಿಹೊಗಳಿದ ಬ್ರಿಟಿಷ್ ಪತ್ರಿಕೆ

   5) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬ.

   6) ದಿನಗೂಲಿ ನೌಕರಿಯನ್ನೇ ನಂಬಿರುವ, ಯಾವುದೇ ಭೂಮಿ ಇಲ್ಲದ ಕುಟುಂಬ.

   7) ನಿರ್ಗತಿಕರು ಮತ್ತು ಭಿಕ್ಷೆಯ ಮೇಲೆ ಆಧಾರಿತ ಕುಟುಂಬ.

   8) ಒಳಚರಂಡಿ ಸ್ವಚ್ಛಗೊಳಿಸುವ ಕಾಯಕದಲ್ಲಿ ತೊಡಗಿರುವ ಕುಟುಂಬ.

   9) ಆಧುನಿಕ ಸಂಸ್ಕೃತಿಗೆ ತೆರೆದುಕೊಂಡಿರದ ಗುಡ್ಡಗಾಡು ಕುಟುಂಬ.

   10) ಜೀತಪದ್ಧತಿಯಿಂದ ಕಾನೂನಾತ್ಮಕವಾಗಿ ಬಿಡುಗಡೆಗೊಂಡಿರುವ ಕುಟುಂಬ.

   ನಗರ ಪ್ರದೇಶದಲ್ಲಿ

   1) ಕಸ ಆಯುವವರು

   2) ಭಿಕ್ಷುಕರು

   3) ಮನೆಗೆಲಸಗಾರರು

   4) ಬೀದಿ ವ್ಯಾಪಾರಿಗಳು / ಚಮ್ಮಾರರು / ಆಯುವವರು / ಬೀದಿಯಲ್ಲಿ ಇತರ ಕೆಲಸದಲ್ಲಿ ತೊಡಗಿರುವವರು

   5) ಕಟ್ಟಡ ಕರ್ಮಿಗಳು / ನಲ್ಲಿ ರಿಪೇರಿಯವರು / ದಿನಗೂಲಿ ನೌಕರರು / ಬಣ್ಣ ಬಳಿಯುವವರು / ವೆಲ್ಡಿಂಗ್ ಮಾಡುವವರು / ರಕ್ಷಣಾ ಸಿಬ್ಬಂದಿಗಳು / ಕೂಲಿ ಕಾರ್ಮಿಕರು

   ಆಯುಷ್ಮಾನ್ ಭಾರತ್ ಫಲಾನುಭವಿಗಳಿಗೆ ಸಹಾಯವಾಣಿ

   6) ಕಸ ಗುಡಿಸುವವರು / ಶೌಚಾಲಯ ಸ್ವಚ್ಛಗೊಳಿಸುವವರು / ಮಾಲಿಗಳು

   7) ಮನೆ ಸಂಬಂಧಿ ಕೆಲಸದಲ್ಲಿ ತೊಡಗಿರುವವರು / ಕುಶಲಕರ್ಮಿಗಳು / ಕರಕುಶಲ ಕರ್ಮಿಗಳು / ಶಿಂಪಿಗಳು

   8) ಸಾರಿಗೆ ಕೆಲಸಗಾರರು / ಡ್ರೈವರ್ / ನಿರ್ವಾಹಕರು / ಡ್ರೈವರ್ ಮತ್ತು ನಿರ್ವಾಹಕರಿಗೆ ಸಹಾಯಕರಾಗಿರುವವರು / ಗಾಡಿ ಎಳೆಯುವವರು / ರಿಕ್ಷಾ ಎಳೆಯುವವರು.

   9) ಅಂಗಡಿಯಲ್ಲಿ ಕೆಲಸ ಮಾಡುವವರು / ಸಹಾಯಕರು / ಸಣ್ಣ ಸಂಸ್ಥೆಯಲ್ಲಿ ಕೆಲಸ ಮಾಡುವ ಜವಾನರು / ಸಹಾಯಕರು / ಬಟವಾಡೆ ಮಾಡುವವರು / ಅಟೆಂಡರ್ / ಮಾಣಿಗಳು.

   10) ಎಲೆಕ್ಟ್ರಿಶಿಯನ್ / ಮೆಕ್ಯಾನಿಕ್ / ಅಸೆಂಬ್ಲರ್ / ರಿಪೇರಿ ಕೆಲಸ ಮಾಡುವವರು.

   11) ಅಗಸ / ಚೌಕಿದಾರ್ (ಮನೆ ಕಾಯುವವರು)

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Ayushman Bharat Yojna or Modicare or National Health Protection Mission is meant for poor and economically deprived families in India. So here is the eligibility criteria for selecting the beneficiaries. Who are all eligible to get this benefit?
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more