ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾದಿಂದ ರಕ್ಷಿಸಲು ಮಕ್ಕಳನ್ನು ಮನೆಯಲ್ಲೇ ಸುರಕ್ಷಿತವಾಗಿಡುವುದು ಹೇಗೆ?

|
Google Oneindia Kannada News

ನವದೆಹಲಿ, ಜೂನ್ 14: ಕೊರೊನಾ ಸೋಂಕಿನಿಂದ ರಕ್ಷಿಸಲು ಮಕ್ಕಳನ್ನು ಮನೆಯಲ್ಲಿಯೇ ಸುರಕ್ಷಿತವಾಗಿಡುವುದು ಹೇಗೆ ಎನ್ನುವುದರ ಕುರಿತು ಆಯುಷ ಸಚಿವಾಲಯ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಮಾಸ್ಕ್ ಧರಿಸುವುದು, ಯೋಗ ಮಾಡುವುದು, ಆಸ್ಪತ್ರೆಗೆ ಕರೆದೊಯ್ಯುವ ಬದಲು ದೂರವಾಣಿಯಲ್ಲಿ ವೈದ್ಯರೊಂದಿಗೆ ಸಮಾಲೋಚನೆ, ಮಕ್ಕಳಿಗೆ ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಪೋಷಕರು ಸಂಪೂರ್ಣ ಕೊರೊನಾ ಲಸಿಕೆಯನ್ನು ತೆಗೆದುಕೊಳ್ಳುವುದು ಇವು ಆಯುಷ್ ಸಚಿವಾಲಯವು ನೀಡಿರುವ ಮಾರ್ಗಸೂಚಿಯಲ್ಲಿ ಅಡಕವಾಗಿದೆ.

ಸೋಂಕು ಸಾಮಾನ್ಯವಾಗಿ ವಯಸ್ಕರಿಗಿಂತ ಮಕ್ಕಳಲ್ಲಿ ಕಡಿಮೆ ಇದೆ, ಸೋಂಕಿನಿಂದ ಬಳಲುತ್ತಿರುವ ಮಕ್ಕಳಿಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆಯ ಅಗತ್ಯವಿರುವುದಿಲ್ಲ, ಈ ಸೋಂಕಿನಿಂದ ಮಕ್ಕಳನ್ನು ರಕ್ಷಿಸಲು ರೋಗ ನಿರೋಧಕ ಶಕ್ತಿ ವೃದ್ಧಿಯೇ ಅತ್ಯುತ್ತಮ ವಿಧಾನವಾಗಿದೆ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ಇಲ್ಲಿಯವರೆಗೆ ನಡೆಸಿದ ಅಧ್ಯಯನದಲ್ಲಿ ಕೆಲವೇ ಕೆಲವು ಆಯುರ್ವೇದ ಔಷಧಿಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿವೆ.

 ಮಕ್ಕಳಿಗೆ ಅಪಾಯ

ಮಕ್ಕಳಿಗೆ ಅಪಾಯ

ಬೊಜ್ಜು, ಟೈಪ್ 1 ಡಯಾಬಿಟಿಸ್, ದೀರ್ಘಕಾಲದ ಹೃದಯ ಸಂಬಂಧಿ ಕಾಯಿಲೆ ಹೊಂದಿರುವ ಮಕ್ಕಳಿಗೆ ಹೆಚ್ಚಿನ ಅಪಾಯವಿದೆ. ಕೊರೊನಾ ಸೋಂಕು ಎಲ್ಲೆಡೆ ಹಬ್ಬುತ್ತಿದ್ದು, ಕೋವಿಡ್ 19 ತಡೆಗೆ ಸಂಬಂಧಿಸಿದ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸುವುದು ಒಳಿತು.

 ಮಕ್ಕಳಿಗೆ ಸಲಹೆಗಳು

ಮಕ್ಕಳಿಗೆ ಸಲಹೆಗಳು

ಕೈಗಳನ್ನು ಪದೇ ಪದೇ ತೊಳೆಯುತ್ತಿರಬೇಕು, ಹೊರಗಡೆ ಹೋಗುವಾಗ ತಪ್ಪದೇ ಮಾಸ್ಕ್‌ ಧರಿಸಬೇಕು, 5-18 ವರ್ಷದವರು ಮಾಸ್ಕ್ ಧರಿಸಲೇಬೇಕು, -5 ವರ್ಷದ ಮಕ್ಕಳು ಮಾಸ್ಕ್ ಧರಿಸಬೇಕೆಂದಿಲ್ಲ ಯಾಕೆಂದರೆ ಅವರಿಗೆ ಉಸಿರಾಟ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಮೂರು ಲೇಯರ್ ಮಾಸ್ಕ್ ಧರಿಸುವುದು ಉತ್ತಮ. ಆದಷ್ಟು ಮನೆಯಲ್ಲಿಯೇ ಇರಿ, ಹೊರಗೆ ಓಡಾಟ ಕಡಿಮೆ ಮಾಡಿ, ಕುಟುಂಬದವರೊಂದಿಗೆ ವಿಡಿಯೋ ಕಾಲ್‌ಗಳಲ್ಲಿ ಮಾತನಾಡಿ ಎಂದು ಸಲಹೆ ನೀಡಲಾಗಿದೆ.

 ಮನೆಯ ಹಿರಿಯರ ಸಂಪರ್ಕ ಬೇಡ

ಮನೆಯ ಹಿರಿಯರ ಸಂಪರ್ಕ ಬೇಡ

ಮನೆಯಲ್ಲಿ ಮಕ್ಕಳಿಗೆ ಕೊರೊನಾ ಸೋಂಕಿನ ಲಕ್ಷಣಗಳಿದ್ದರೆ ಮನೆಯಲ್ಲಿರುವ ಹಿರಿಯ ಸದಸ್ಯರ ಜತೆಯಲ್ಲಿ ಸಂಪರ್ಕದಲ್ಲಿರದಂತೆ ನೋಡಿಕೊಳ್ಳಿ, ಇದರಿಂದ ಅವರಿಗೆ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಐದು ದಿನಕ್ಕಿಂತ ಹೆಚ್ಚು ದಿನ ಜ್ವರ ಇದ್ದರೆ, ಉಡಿರಾಟದ ತೊಂದರೆ ಇದ್ದರೆ, ಆಕ್ಸಿಜನ್ ಪ್ರಮಾಣ ಶೇ.95ಕ್ಕಿಂತ ಕಡಿಮೆ ಇದ್ದರೆ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಎಂದು ಸಲಹೆ ನೀಡಲಾಗಿದೆ.

 ಮಕ್ಕಳು ಶುಚಿತ್ವ ಕಾಪಾಡಿಕೊಳ್ಳಬೇಕು

ಮಕ್ಕಳು ಶುಚಿತ್ವ ಕಾಪಾಡಿಕೊಳ್ಳಬೇಕು

ಮಕ್ಕಳು ನಿತ್ಯ ಬೆಚ್ಚಗಿನ ನೀರನ್ನು ಕುಡಿಯಬೇಕು, ಬೆಳಗ್ಗೆ ಹಾಗೂ ರಾತ್ರಿ ಬ್ರಷ್ ಮಾಡಬೇಕು, ಉಪ್ಪು ನೀರು ಗಾರ್ಗ್ಲಿಂಗ್ ಮಾಡಬೇಕು, ಪ್ರಾಣಾಯಾಮ, ಧ್ಯಾನ ರೀತಿಯ ಯೋಗ ಮಾಡಬೇಕು ಎಂದು ಸಲಹೆ ನೀಡಲಾಗಿದೆ.

English summary
Ayush Ministry prepares homecare guidelines for children during the ongoing Covid pandemic. Here's all you need to know kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X