• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಯೋಧ್ಯೆ: ರಾಮಲಲ್ಲಾ ವಕೀಲರಿಗೆ ಸಿಜೆಐ ಗೊಗೊಯ್ ನೀಡಿದ್ದ ಅಪರೂಪದ ಆಫರ್

|

ದೇಶದ ರಾಜಕೀಯ ಇತಿಹಾಸವನ್ನೇ ಬದಲಾಯಿಸಿದ್ದ 130 ವರ್ಷಗಳ ಹಿಂದಿನ ಅಯೋಧ್ಯೆ ಜಮೀನು ವಿವಾದವನ್ನು, ಕೊನೆಗೂ, ಸರ್ವೋಚ್ಚ ನ್ಯಾಯಾಲಯ ವಿಲೇವಾರಿ ಮಾಡಿದೆ.

ಮೂಲ ದಾವೆಯನ್ನು, ನಲವತ್ತು ದಿನಗಳ ಸತತ ವಿಚಾರಣೆಯ ನಂತರ, ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪನ್ನು ನೀಡಿದೆ. ವಿವಾದಿತ ಜಮೀನನ್ನು ರಾಮಜನ್ಮಭೂಮಿ ನ್ಯಾಸ ಟ್ರಸ್ಟಿಗೆ ನೀಡುವುದು. ಮತ್ತು, ಕೇಂದ್ರ ಸರ್ಕಾರ ವಶದಲ್ಲಿದ್ದ ಭೂಮಿಯಲ್ಲಿ ಸುನ್ನಿ ವಕ್ಫ್ ಬೋರ್ಡಿಗೆ 5 ಎಕರೆ ನೀಡುವ ಆದೇಶವನ್ನು ನೀಡಿದೆ.

ಸುಪ್ರೀಂ ತೀರ್ಪು: ಅಯೋಧ್ಯಾ ಭೂ ವ್ಯಾಜ್ಯ ಅಂತ್ಯ, ಮಂದಿರ-ಮಸೀದಿಗೆ ಹಂಚಿಕೆ

ಅಯೋಧ್ಯೆ ವಿಚಾರಣೆಯ ವೇಳೆ, ನಡೆದ ಅಪರೂಪದ ಘಟನೆ, ಸರ್ವೋಚ್ಚ ನ್ಯಾಯಾಲಯದ ತೀರ್ಪು ಹೊರಬಂದ ನಂತರ, ಈಗ ಮತ್ತೆ ಸುದ್ದಿಯಾಗುತ್ತಿದೆ. ಇದು, ಸಿಜೆಐ ಗೊಗೊಯ್, ರಾಮಲಲ್ಲಾ ಪರವಾಗಿ ವಾದಿಸಿದ ವಕೀಲರಿಗೆ ನೀಡಿದ್ದ ಅಪರೂಪದ ಆಫರ್ ಆಗಿತ್ತು.

ಅಯೋಧ್ಯಾ ತೀರ್ಪು: ಗಮನಿಸಬೇಕಾದ ಕುತೂಹಲಕಾರಿ 10 ಸಂಗತಿಗಳು

ರಾಮಲಲ್ಲಾ ಪರವಾಗಿ ವಾದಿಸುತ್ತಿದ್ದವರು ಚೆನ್ನೈ ಮೂಲದ ಹಿರಿಯ ವಕೀಲ, ಮಾಜಿ ಅಟಾರ್ನಿ ಜನರಲ್ ಕೇಶವ್ ಪರಶರನ್. ಇವರ ವಯಸ್ಸು 93. ಕಳೆದ ಕೆಲವು ವರ್ಷಗಳಿಂದ, ಪ್ರತೀ ವಿಚಾರಣೆಯ ವೇಳೆಯೂ ಚೆನ್ನೈನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದವರು.

'ಭಾರತದ ವಕೀಲರ ಪಿತಾಹಮ' ಎಂದೇ ಕರೆಯಲ್ಪಡುವ ಪರಶರನ್

'ಭಾರತದ ವಕೀಲರ ಪಿತಾಹಮ' ಎಂದೇ ಕರೆಯಲ್ಪಡುವ ಪರಶರನ್

'ಭಾರತದ ವಕೀಲರ ಪಿತಾಹಮ' ಎಂದೇ ಕರೆಯಲ್ಪಡುವ ಪರಶರನ್, ಹುಟ್ಟಿದ್ದು 09.10.1927ರಲ್ಲಿ. 1983 ಮತ್ತು 1989ರಲ್ಲಿ ಭಾರತದ ಅಟಾರ್ನಿ ಜನರಲ್ ಆಗಿ ಇವರು ಕೆಲಸ ನಿರ್ವಹಿಸಿದ್ದವರು. ಆಗಸ್ಟ್ ತಿಂಗಳಲ್ಲಿ, ಅಯೋಧ್ಯೆ ಕೇಸನ್ನು ಐದು ನ್ಯಾಯಮೂರ್ತಿಗಳ ಬೆಂಚ್ ಮೂಲಕ ಡೈಲಿ ವಿಚಾರಣೆ ನಡೆಸುವ ತೀರ್ಮಾನಕ್ಕೆ ಸುಪ್ರೀಂಕೋರ್ಟ್ ಬಂದಿತ್ತು.

ಸನ್ನಿ ವಕ್ಫ್ ಬೋರ್ಡ್ ವಕೀಲ ರಾಜೀವ್ ಧವನ್

ಸನ್ನಿ ವಕ್ಫ್ ಬೋರ್ಡ್ ವಕೀಲ ರಾಜೀವ್ ಧವನ್

ಸಿಜಿಐ ರಂಜನ್ ಗೊಗೊಯ್ ಈ ತೀರ್ಮಾನವನ್ನು ಪ್ರಕಟಿಸಿದಾಗ, ಸನ್ನಿ ವಕ್ಫ್ ಬೋರ್ಡ್ ವಕೀಲ ರಾಜೀವ್ ಧವನ್, ಸಿಜಿಐ ಅವರಲ್ಲಿ ಮನವಿಯೊಂದನ್ನು ಮಾಡಿದ್ದರು."ನನ್ನ ವಿರೋಧಿ ವಕೀಲರಾದ ಪರಶರನ್ ವಯಸ್ಸಿನಲ್ಲಿ ತುಂಬಾ ಹಿರಿಯರು. ಪ್ರತೀದಿನ ತನ್ನ ಕಕ್ಷಿದಾರರ ಪರ ವಾದ ಮಂಡಿಸಲು, ವಿಚಾರಣೆಗೆ ಬರಲು ಅವರಿಗೆ ಕಷ್ಟವಾದೀತು" ಎಂದು ಮನವಿ ಮಾಡಿದ್ದರು.

ಅಯೋಧ್ಯೆ ಕೇಸಿನ ತೀರ್ಪು ಹೊರಬಿದ್ದರೆ ಸಾಕು

ಅಯೋಧ್ಯೆ ಕೇಸಿನ ತೀರ್ಪು ಹೊರಬಿದ್ದರೆ ಸಾಕು

ಆಗ, ಪರಶರನ್, "ನನಗೆ ಯಾವುದೇ ಅಭ್ಯಂತರವಿಲ್ಲ. ಸುಪ್ರೀಂಕೋರ್ಟ್ ಪ್ರತೀದಿನ ವಿಚಾರಣೆ ಕೈಗೆತ್ತಿಕೊಳ್ಳುತ್ತಿರುವುದೇ ಖುಷಿಯ ವಿಚಾರ. ನಾನು ಕೊನೆಯುಸಿರು ಎಳೆಯುವ ಮುನ್ನ, ಅಯೋಧ್ಯೆ ಕೇಸಿನ ತೀರ್ಪು ಹೊರಬಿದ್ದರೆ ಸಾಕು. ನಾನು ಪ್ರತೀದಿನ ವಾದ ಮಂಡಿಸಲು ಬರುವೆ" ಎನ್ನುವ ಮಾತನ್ನು ಹೇಳುತ್ತಾರೆ. ಆಗ, ಸಿಜಿಐ ಅವರಿಗೊಂದು ಆಫರ್ ನೀಡುತ್ತಾರೆ.

ಸಿಜೆಐ

ಸಿಜೆಐ "ನೀವು ಕುಳಿತುಕೊಂಡೇ ವಾದ ಮಂಡಿಸಲು ಬಯಸುತ್ತೀರಾ" ಎನ್ನುವ ಆಫರ್

ಸಿಜೆಐ ಗೊಗೊಯ್, "ನೀವು ಕುಳಿತುಕೊಂಡೇ ವಾದ ಮಂಡಿಸಲು ಬಯಸುತ್ತೀರಾ" ಎನ್ನುವ ಆಫರ್ ಅನ್ನು ನೀಡುತ್ತಾರೆ. ಆಗ, ಪರಶರನ್ ನಯವಾಗಿ ಸಿಜಿಐ ನೀಡಿದ ಆಫರ್ ಅನ್ನು ತಿರಸ್ಕರಿಸುತ್ತಾ, ನೀಡಿದ ಹೇಳಿಕೆಗೆ, ಕೋರ್ಟ್ ಹಾಲ್ ನಲ್ಲಿ ವ್ಯಾಪಕ ಕರತಾಡನ ವ್ಯಕ್ತವಾಯಿತು.

93 ವಯಸ್ಸಿನ ಪರಶರನ್, ಶಬರಿಮಲೆ ಪರ ವಕೀಲರು ಕೂಡಾ

93 ವಯಸ್ಸಿನ ಪರಶರನ್, ಶಬರಿಮಲೆ ಪರ ವಕೀಲರು ಕೂಡಾ

"ಇಲ್ಲ ಯುವರ್ ಆನರ್. ನಾನು ನಿಂತುಕೊಂಡೇ ನನ್ನ ಕಕ್ಷಿದಾರರ ಪರವಾಗಿ ವಾದ ಮಂಡಿಸುತ್ತೇನೆ. ನಿಂತು ಕೊಂಡೇ ವಾದ ಮಾಡುವುದು ಭಾರತದ ವಕೀಲ ಹುದ್ದೆಯ ಸಂಸ್ಕೃತಿ. ಇದನ್ನು ನಾನು ಬ್ರೇಕ್ ಮಾಡಲು ಇಷ್ಟ ಪಡುವುದಿಲ್ಲ" ಎನ್ನುವ ಪರಶರನ್ ಹೇಳಿಕೆ ವ್ಯಾಪಕ ಪ್ರಶಂಸೆಗೆ ಒಳಗಾಯಿತು. ಪರಶರನ್, ಶಬರಿಮಲೆ ಕೇಸ್ ನಲ್ಲಿ ನಾಯರ್ ಸರ್ವಿಸ್ ಸೊಸೈಟಿ ಪರವಾಗಿಯೂ ವಾದ ಮಂಡಿಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ayodhya Verdict: CJI Ranjan Gogoi Offer To Ramlalla Advocate Parasaran During August 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more