ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಪ್ರೀಂಕೋರ್ಟ್ ಅಯೋಧ್ಯೆ ತೀರ್ಪನ್ನು ಎಂದು ಪ್ರಕಟಿಸಲಿದೆ?

|
Google Oneindia Kannada News

Recommended Video

Ayodhya street view before the judgement | Oneindia Kannada

ನವದೆಹಲಿ, ನವೆಂಬರ್ 08 : ದೇಶದ ಚಿತ್ತ ಸುಪ್ರೀಂಕೋರ್ಟ್‌ ನತ್ತ ನೆಟ್ಟಿದೆ. ಅಯೋಧ್ಯೆ ಪ್ರಕರಣದ ತೀರ್ಪು ಎಂದು ಪ್ರಕಟವಾಗಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ತೀರ್ಪಿನ ಹಿನ್ನಲೆಯಲ್ಲಿ ದೇಶಾದ್ಯಂತ ಬದೋಬಸ್ತ್ ಕೈಗೊಳ್ಳಲಾಗುತ್ತಿದೆ.

ಅಯೋಧ್ಯೆಯ ರಾಮಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದ ಪ್ರಕರಣದ ತೀರ್ಪು ನವೆಂಬರ್ 17ರೊಳಗೆ ಪ್ರಕಟವಾಗಲಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜಯ್ ಗೋಗಾಯ್ ನ.17ರಂದು ನಿವೃತ್ತರಾಗಲಿದ್ದು, ಅದಕ್ಕೂ ಮೊದಲು ತೀರ್ಪು ನೀಡಲಿದ್ದಾರೆ.

ಅಯೋಧ್ಯೆ ತೀರ್ಪು: ಯೋಗಿ ಆದಿತ್ಯನಾಥ್ ಸರ್ಕಾರದ ತಯಾರಿಗಳೇನು?ಅಯೋಧ್ಯೆ ತೀರ್ಪು: ಯೋಗಿ ಆದಿತ್ಯನಾಥ್ ಸರ್ಕಾರದ ತಯಾರಿಗಳೇನು?

ನವೆಂಬರ್ 13 ರಿಂದ 15ರೊಳಗೆ ತೀರ್ಪು ಪ್ರಕಟವಾಗುವ ನಿರೀಕ್ಷೆ ಇದೆ. ತೀರ್ಪಿನ ಹಿನ್ನಲೆಯಲ್ಲಿ ಈಗಾಗಲೇ ಉತ್ತರ ಪ್ರದೇಶದ ಅಯೋಧ್ಯೆ ಸೇರಿದಂತೆ ದೇಶಾದ್ಯಂತ ಅಗತ್ಯ ಪೊಲೀಸ್ ಬಂದೋಬಸ್ತ್ ಮಾಡಿಕೊಳ್ಳಲಾಗುತ್ತಿದೆ.

ಅಯೋಧ್ಯಾ ಅಂತಿಮ ತೀರ್ಪು: ಹಿಂದೂ, ಮುಸ್ಲಿಮರಿಗೆ ಒಪ್ಪಿಗೆಯಾಗದಿದ್ದರೆ...? ಅಯೋಧ್ಯಾ ಅಂತಿಮ ತೀರ್ಪು: ಹಿಂದೂ, ಮುಸ್ಲಿಮರಿಗೆ ಒಪ್ಪಿಗೆಯಾಗದಿದ್ದರೆ...?

Ayodhya Verdict Between November 13 And 15

ರಂಜನ್ ಗೋಗಾಯ್ ಅವರು ಶಬರಿಮಲೆ ವಿವಾದ, ರಫೆಲ್ ವಿವಾದ, ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆ ಪ್ರಕರಣದ ತೀರ್ಪನ್ನು ನೀಡಬೇಕಿದೆ. ನವೆಂಬರ್ 9ರ ಶನಿವಾರ ನ್ಯಾಯಾಲಯಕ್ಕೆ ರಜೆ ಇರುತ್ತದೆ.

ಅಯೋಧ್ಯಾ ಪ್ರಕರಣ Timeline : 1528 ರಿಂದ 2019ರ ತನಕ ಕಾಲಾನುಕ್ರಮದಲ್ಲಿಅಯೋಧ್ಯಾ ಪ್ರಕರಣ Timeline : 1528 ರಿಂದ 2019ರ ತನಕ ಕಾಲಾನುಕ್ರಮದಲ್ಲಿ

ಸೋಮವಾರದಿಂದ ಶುಕ್ರವಾರದ ತನಕ ಮುಖ್ಯ ನ್ಯಾಯಮೂರ್ತಿ ರಂಜಯ್ ಗೋಗಾಯ್ ವಿವಿಧ ತೀರ್ಪುಗಳನ್ನು ನೀಡಲಿದ್ದಾರೆ. ಅಯೋಧ್ಯೆ ತೀರ್ಪಿನ ಮೇಲೆ ದೇಶ ಚಿತ್ತ ನೆಟ್ಟಿದ್ದು, ಎಂದು ತೀರ್ಪು ಬರಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ರಂಜನ್ ಗೋಗಾಯ್ ಶುಕ್ರವಾರ ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಆಯುಕ್ತರಿಂದ ಕೈಗೊಂಡಿರುವ ಭದ್ರತೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.

English summary
Supreme Court is likely to deliver the Ayodhya verdict between November 13 and 15, 2019. Chief Justice of India Ranjan Gogoi met Uttar Pradesha chief secretary and DGP to discuss security arrangements ahead of verdict.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X