ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

ಐತಿಹಾಸಿಕ ಭವ್ಯ ರಾಮಮಂದಿರಕ್ಕೆ ಮೋದಿಯಿಂದ ಭೂಮಿಪೂಜೆ

|
Google Oneindia Kannada News

ಲಕ್ನೋ, ಆಗಸ್ಟ್ 05: ಅಯೋಧ್ಯೆ ರಾಮಮಂದಿರ ಭೂಮಿ ಪೂಜನಾ ಕಾರ್ಯಕ್ರಮವು ಆಗಸ್ಟ್ 5 ರಂದು ನೆರವೇರಲಿದೆ.

ಪ್ರಧಾನಿ ನರೇಂದ್ರ ಮೋದಿಯವರು ದೇವಾಲಯದ ಮುಖ್ಯ ಶಿಲೆಯನ್ನು ಗರ್ಭಗ್ರಹದಲ್ಲಿ ಇರಿಸುವ ಮೂಲಕ ದೇವಾಲಯದ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ.

Ayodhya Ram Mandir Bhumi Pujan LIVE Updates, News In Kannada

ಐತಿಹಾಸಿಕ ಸಂಭ್ರಮಕ್ಕೆ ಉತ್ತರ ಪ್ರದೇಶ ಸರ್ಕಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಈಗಾಗಲೇ ಅತಿಥಿಗಳಿಗೆ ಆಹ್ವಾನ ಸಹ ಕಳುಹಿಸಿದೆ. ಇನ್ನು ಆಗಸ್ಟ್ 5 ರಂದು ಪ್ರಧಾನಿ ಮೋದಿ ಸುಮಾರು ಮೂರು ಗಂಟೆಗಳ ಕಾಲ ಅಯೋಧ್ಯೆಯಲ್ಲಿರಲಿದ್ದಾರೆ ಎಂಬ ವಿವರ ಲಭ್ಯವಾಗಿದೆ. ಬೆಳಗ್ಗೆ 9.30ಕ್ಕೆ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಲಕ್ನೋ ಕಡೆ ಪ್ರಯಾಣ ಆರಂಭಿಸಲಿದ್ದಾರೆ.

Newest FirstOldest First
3:37 PM, 5 Aug

ಹರಿಯಾಣ: 500 ವರ್ಷಗಳ ಹಳೆಯ ಕಾಯುವಿಕೆ ಅಂತಿಮವಾಗಿ ಮುಗಿದಿದೆ. ರಾಮ ದೇವಾಲಯ ನಿರ್ಮಾಣ ಪ್ರಾರಂಭವಾಗಿದೆ. ದಶಕಗಳಷ್ಟು ಹಳೆಯ ಕಠಿಣ ಪರಿಶ್ರಮಕ್ಕೆ ಫಲ ಸಿಕ್ಕಿದೆ. ಪ್ರತಿಯೊಬ್ಬ ಭಾರತೀಯನನ್ನು ನಾನು ಅಭಿನಂದಿಸುತ್ತೇನೆ: ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್
3:36 PM, 5 Aug

ಮಹಾರಾಷ್ಟ್ರ: ರಾಮ ದೇವಾಲಯ ನಿರ್ಮಾಣಕ್ಕಾಗಿ ಭೂಮಿ ಪೂಜೆಯ ಸಂದರ್ಭದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ತಮ್ಮ ಕುಟುಂಬದೊಂದಿಗೆ ನಾಗ್ಪುರದಲ್ಲಿ ಭಗವಾನ್ ರಾಮನನ್ನು ಪೂಜಿಸಿದರು.
3:34 PM, 5 Aug

ರಾಮಮಂದಿರಕ್ಕೆ ಅಡಿಪಾಯ ಹಾಕುವ ಮೂಲಕ, 500 ವರ್ಷಗಳ ಹಳೆಯ ವಿವಾದವನ್ನು ಹೇಗೆ ಶಾಂತಿಯುತವಾಗಿ ಬಗೆಹರಿಸಲಾಗಿದೆ ಎಂಬುದನ್ನು ಭಾರತ ತೋರಿಸಿದೆ: ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್
3:22 PM, 5 Aug

ಅಸ್ಸಾಂ: ನಮಗೆ ಇಂದು ಬಹಳ ಮುಖ್ಯವಾದ ದಿನ. ರಾಮ ಜನ್ಮಭೂಮಿಯ ರಾಮ ದೇವಾಲಯಕ್ಕಾಗಿ ಜನರು ಅನೇಕ ವರ್ಷಗಳಿಂದ ಕಾಯುತ್ತಿದ್ದರು. ಇಂದು ಆ ಕನಸು ನನಸಾಗಿದೆ. ಈ ಕನಸನ್ನು ಈಡೇರಿಸಿದ ಪ್ರಧಾನಿ ಮೋದಿಯ ಬಗ್ಗೆ ನಮಗೆ ಹೆಮ್ಮೆ ಇದೆ. ಈ ದೇವಾಲಯವು ದೇಶದಲ್ಲಿ ಶಾಂತಿ ಮತ್ತು ಮಾನವೀಯತೆಯನ್ನು ಬಲಪಡಿಸುತ್ತದೆ: ಅಸ್ಸಾಂ ಸಿಎಂ ಸರ್ಬಾನಂದ ಸೋನೊವಾಲ್
3:21 PM, 5 Aug

ರಾಮ ದೇವಾಲಯ ನಿರ್ಮಾಣಕ್ಕಾಗಿ ಭೂಮಿ ಪೂಜೆಯ ಸಂದರ್ಭದಲ್ಲಿ ಉಪಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರು ತಮ್ಮ ಕುಟುಂಬದೊಂದಿಗೆ ಬುಧವಾರ ತಮ್ಮ ನಿವಾಸದಲ್ಲಿ ಪ್ರಾರ್ಥನೆ ಸಲ್ಲಿಸಿದರು. "ದೇವಾಲಯದ ನಿರ್ಮಾಣವನ್ನು ಸತ್ಯ, ನೈತಿಕತೆ ಮತ್ತು ಆದರ್ಶಗಳ ಅತ್ಯುನ್ನತ ಮಾನವೀಯ ಮೌಲ್ಯಗಳ ಮರು ಪಟ್ಟಾಭಿಷೇಕ ಎಂದು ಉಪಾಧ್ಯಕ್ಷರು ವಿವರಿಸಿದ್ದಾರೆ ಎಂದು ಅವರ ಕಚೇರಿ ಟ್ವೀಟ್ ನಲ್ಲಿ ತಿಳಿಸಿದೆ.
3:16 PM, 5 Aug

ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರಕ್ಕೆ ಶಿಲಾನ್ಯಾಸ ಮಾಡಿದ ಬಳಿಕ ಕರ್ನಾಟಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಅವರ ಕ್ಯಾಬಿನೆಟ್ ಸಹೋದ್ಯೋಗಿಗಳು ಜನರನ್ನು ಸ್ವಾಗತಿಸಿದರು. 1992 ರ ಡಿಸೆಂಬರ್‌ನಲ್ಲಿ ಕಾರ್ ಸೇವಕನಾಗಿರುವುದರಿಂದ ಹಿಡಿದು ನಮ್ಮ ಪ್ರಧಾನಮಂತ್ರಿಯವರು ಅಡಿಪಾಯ ಹಾಕಿದ ಈಗಿನ ಕ್ಷಣವನ್ನು ನೆನೆದು ಕನಸು ನನಸಾಗಿದೆ ಎಂದು ಯಡಿಯೂರಪ್ಪ ಬರೆದಿದ್ದಾರೆ.
3:13 PM, 5 Aug

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಭಾರತೀಯ ಇತಿಹಾಸದಲ್ಲಿ ಸುವರ್ಣ ಅಧ್ಯಾಯವಾಗಿದೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರಕ್ಕೆ ಶಿಲಾನ್ಯಾಸ ಮಾಡಿದ ನಂತರ ಈ ಹೇಳಿಕೆ ಬಂದಿದೆ.
Advertisement
2:09 PM, 5 Aug

ಪ್ರಧಾನಿ ಮೋದಿ ಭಾಷಣ ಮುಕ್ತಾಯ
2:08 PM, 5 Aug

ಎರಡು ಗಜ ದೂರ ಪ್ರತಿಯೊಬ್ಬರೂ ಮಾಸ್ಕ್ ಧಾರಣೆ ಇದು ನಮ್ಮೆಲ್ಲರ ಮರ್ಯಾದೆಯ ಸೂತ್ರವಾಗಿದೆ-ಕೊರೊನಾ ಸಂದರ್ಭದಲ್ಲಿ ಇದೇ ರಾಮ ಸೂತ್ರವಾಗಿರಲಿ- ಮೋದಿ
2:07 PM, 5 Aug

ರಾಮನ ಸೂತ್ರಗಳೊಂದಿಗೆ ಆತ್ಮ ವಿಶ್ವಾಸ ಹಾಗೂ ಆತ್ಮ ನಿರ್ಭರ ಭಾರತವನ್ನು ನಿರ್ಮಾಣ ಮಾಡುವುದು ನಮ್ಮ ಕನಸಾಗಿದೆ. ಹೀಗಾಗಿ ಇಂದು ಭಾರತ ಕಾಯುವ ಹಂತದಲ್ಲಿಲ್ಲ, ಬೆಳವಣಿಗೆಗಾಗಿ ಮುಂದಡಿ ಇಡಬೇಕಾಗಿದೆ- ಮೋದಿ
2:04 PM, 5 Aug

ರಾಮ ಚರಿತ್ರೆಯೇ ಗಾಂಧೀಜಿಯ ರಾಮರಾಜ್ಯ ನಿರ್ಮಾಣದ ಮೂಲವಾಗಿದೆ, ರಾಮನು ನಮಗೆ ಸಮಯದ ಜೊತೆಗೆ ನಡೆಯುವ ಹಾಗೂ ಬೆಳೆಯುವುದನ್ನು ಕಲಿಸಿದ್ದಾರೆ- ಮೋದಿ
1:59 PM, 5 Aug

ರಾಮ ಜನ್ಮಭೂಮಿಯಲ್ಲಿ, ರಾಮಮಂದಿರ ನಿರ್ಮಾಣ =ವಾಗುತ್ತಿರುವುದು ವಿಶ್ವದೆಲ್ಲೆಡೆ ರಾಮ ಭಕ್ತರಿಗೆ ಖುಷಿ ತಂದಿದೆ ಎನ್ನುವ ವಿಶ್ವಾಸವಿದ. ಭವಿಷ್ಯದಲ್ಲಿ ಇವರೆಲ್ಲರೂ ಅಯೋಧ್ಯೆಯೆಡೆಗೆ ಬರಲಿದ್ದಾರೆ.ಈ ಮಂದಿರವು ಎಲ್ಲಾ ಮಾನವೀಯತೆ ನಿರ್ಮಾಣಕ್ಕೂ ಪ್ರೇರಣೆ ನೀಡಲಿದೆ- ಮೋದಿ
Advertisement
1:58 PM, 5 Aug

ಇಂಡೋನೇಷ್ಯಾ, ಮಲೇಷ್ಯಾ, ಕಾಂಬೋಡಿಯಾ, ಥೈಲೆಂಡ್, ಇರಾನ್, ಚೀನಾ, ಶ್ರೀಲಂಕಾ ನೇಪಾಳ ಸೇರಿ ಸಾಕಷ್ಟು ದೇಶಗಳ್ಲಲಿ ರಾಮನ ವಿಭಿನ್ನ ಕಥನಗಳು ಪ್ರತೀತಿಯಲ್ಲಿದೆ-ಮೋದಿ
1:56 PM, 5 Aug

ಕನ್ನಡದಲ್ಲಿ ಕುಮುದೇಂದು ರಾಮಾಯಣ, ಗುರುಗೋವಿಂದರ ಗೋವಿಂದ ರಾಮಾಯಣ ಸೇರಿ ಪ್ರತಿ ಭಾಷೆಯಲ್ಲೂ ಭಿನ್ನ ರೂಪದಲ್ಲಿ ಸಿಗುತ್ತಾರೆ. ಆದರೆ ರಾಮ ಎಲ್ಲಾ ಜಾಗದಲ್ಲೂ ಇದ್ದಾರೆ, ಎಲ್ಲರ ರಾಮನಾಗಿದ್ದಾರೆ. ಹೀಗಾಗಿ ರಾಮ ಏಕತೆಯಲ್ಲಿ ಅನೇಕತೆಯ ಪ್ರತೀಕವಾಗಿದ್ದಾರೆ- ಮೋದಿ
1:50 PM, 5 Aug

ಕಲ್ಲಿನ ಮೇಲೆ ಶ್ರೀರಾಮ ಎಂದು ಬರೆದು ರಾಮ ಸೇತುವೆ ನಿರ್ಮಿಸಲಾಗಿತ್ತು ಅದೇ ರೀತಿ ದೇಶಾದ್ಯಂತ ಲಕ್ಷಾಂತರ ಭಕ್ತರು ದಿವ್ಯತೆಯಿಂದ ನೀಡಿರುವ ಶಿಲೆಗಳು ಹಾಗೂ ಪುಣ್ಯ ಭೂಮಿಯ ಮಣ್ಣಿನ ಮೂಲಕ ಇಂದು ರಾಮ ಮಂದಿರ ನಿರ್ಮಾಣದ ಮುಂದಡಿ ಇಡಲಾಗಿದೆ.- ಮೋದಿ
1:48 PM, 5 Aug

ಕೊರೊನಾ ಕಾರಣದಿಂದ ಇಂದಿನ ಭೂಮಿಪೂಜೆ ಕಾರ್ಯಕ್ರಮವು ಸಾಕಷ್ಟು ಕಟ್ಟುನಿಟ್ಟುಗಳ ಮಧ್ಯೆ ನಡೆಯುತ್ತಿದೆ. ಸುಪ್ರೀಂಕೋರ್ಟ್ ಆದೇಶ ಬಂದಾಗಲೂ ನಾವು ಇದೇ ರೀತಿಯ ಕಟ್ಟುನಿಟ್ಟಿನ ವರ್ತನೆ ತೋರಿದ್ದೆವು. ಶಾಂತಿಯುತವಾಗಿ ಮರ್ಯಾಎಯಿಂದ ನಡೆದುಕೊಂಡಿದ್ದೆವು, ಇಂದು ರಾಷ್ಟ್ರ ಅದೇ ರೀತಿಯಾಗಿ ನಡೆದುಕೊಂಡಿದೆ, ಇದು ಮರ್ಯಾದಾ ಪುರುಷೋತ್ತಮ ರಾಮನಿಗೆ ಸಲ್ಲಿಸಿದ ಗೌರವ-ಮೋದಿ
1:47 PM, 5 Aug

ರಾಮ ಮಂದಿರ ನಿರ್ಮಾಣದ ಪ್ರಕ್ರಿಯೆಯು ದೇಶ ಜೋಡಣೆಯ ವಿಚಾರವಾಗಿದೆ. ಮಂದಿರವು ಏಕತೆಯ ಪ್ರತೀಕವಾಗಿರಲಿದೆ-ಮೋದಿ
1:45 PM, 5 Aug

ರಾಮ ಮಂದಿರವು ಆಧುನಿಕತೆ, ರಾಷ್ಟ್ರೀಯತೆ, ಕೋಟ್ಯಂತರ ಜನರ ಸಂಕಲ್ಪದ ಪ್ರತೀಕವಾಗಿರಲಿದೆ. ಭವಿಷ್ಯದ ಪೀಳಿಗೆಗೆ ನಿಷ್ಠೆ, ಶ್ರದ್ಧೆ, ಸಂಕಲ್ಪದ ಪ್ರತೀಕವಾಗಿರಲಿದೆ.ಮಂದಿರದ ನಿರ್ಮಾಣ ಬಳಿಕ ಅಯೋಧ್ಯೆಯ ಚಿತ್ರಣವೇ ಬದಲಾಗಲಿದೆ. ಇಡೀ ವಿಶ್ವದ ಜನರೇ ಇತ್ತ ನೋಡಲಿದ್ದಾರೆ-ಮೋದಿ
1:41 PM, 5 Aug

ಮಂದಿರ ಹೋರಾಟಕ್ಕಾಗಿ ತ್ಯಾಗ ಮಾಡಿದ ಪ್ರತಿ ವ್ಯಕ್ತಿಗೂ ದೇಶದ 130 ಕೋಟಿ ಜನರ ಪರವಾಗಿ ಕೈ ಮುಗಿದು ನಾನು ನಮಸ್ಕರಿಸುತ್ತೇನೆ. ಅವರ ತ್ಯಾಗವನ್ನು ಮರೆಯಲಾಗದು-ಮೋದಿ
1:41 PM, 5 Aug

ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಹೋರಾಟಕ್ಕೆ ಲಕ್ಷಾಂತರ ಜನ ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿದ್ದರು.ಅದೇ ರೀತಿ ರಾಮಮಂದಿರ ನಿರ್ಮಾಣಕ್ಕಾಗಿ ಶತಮಾನಗಳ ಕಾಲ ಸಾಕಷ್ಟು ಪೀಳಿಗೆಯ ಜನ ನಿರಂತರ ಹೋರಾಟ ನಡೆಸಿದ್ದರು. ಇಂದು ಆ ತ್ಯಾಗ-ಸಂಕಲ್ಪದ ಪ್ರತೀಕದ ದಿನವಾಗಿದೆ, ಮಂದಿರ ಹೋರಾಟದಲ್ಲಿ ಅರ್ಪಣೆ, ಸಂಘರ್ಷ, ಸಂಕಲ್ಪ ಎಲ್ಲವೂ ಇತ್ತು. ಅವರೆಲ್ಲದರ ಪರಿಣಾಮವಾಗಿ ಇಂದು ಕನಸು ನನಸಾಗುತ್ತಿದೆ.-ಮೋದಿ
1:38 PM, 5 Aug

ಶತಮಾನಗಳ ಕಾಲ ಟೆಂಟ್‌ನಲ್ಲಿದ್ದ ರಾಮಲಲ್ಲಾ ವಿಗ್ರಹಕ್ಕೆ ಇನ್ನು ಭವ್ಯ ಮಂದಿರ ದೊರೆಯಲಿದೆ- ಮೋದಿ
1:37 PM, 5 Aug

ಸರಯೂ ನದಿಯ ತಟದಲ್ಲಿ ಇಂದು ಭಾರತ ಇತಿಹಾಸದಲ್ಲಿ ಸ್ವರ್ಣ ಅಧ್ಯಾಯ ತೆರೆದಿದೆ. ಕೋಟ್ಯಂತರ ರಾಮ ಭಕ್ತರ ನಿರೀಕ್ಷೆ ನಿಜವಾಗುತ್ತಿದೆ. ಇಂದು ಇಡೀ ಭಾರತವೇ ರಾಮಮಯವಾಗಿದೆ. ಪ್ರತಿ ಭಾರತೀಯನ ಮನಸ್ಸಿನಲ್ಲಿ ದೀಪ ಬೆಳಗುತ್ತಿದ. ಇಡೀ ದೇಶ ಭಾವುಕವಾಗಿದೆ, ಶತಮಾನದ ನಿರೀಕ್ಷೆ ಇಂದು ಅಂತ್ಯಗೊಂಡಿದೆ- ಮೋದಿ
1:33 PM, 5 Aug

ಸೀತಾರಾಮರ ಜಯಘೋಷದೊಂದಿಗೆ ಭಾಷಣ ಆರಂಭಿಸಿದ ಪ್ರಧಾನಿ ಮೋದಿ
1:33 PM, 5 Aug

ಸಭೆಯನ್ನುದ್ದೇಶಿಸಿ ಮೋದಿ ಭಾಷಣ
1:32 PM, 5 Aug

ಕರ್ನಾಟಕದಲ್ಲಿ ಕೇವಲ ಆರು ತಿಂಗಳಿನಲ್ಲಿ ನಿರ್ಮಾಣ ಮಾಡಿರುವ ಕೋದಂಡರಾಮ ವಿಗ್ರಹವನ್ನು ಪ್ರಧಾನಿಗೆ ಅರ್ಪಿಸಿದ ಯೋಗಿ ಆದಿತ್ಯನಾಥ್
1:32 PM, 5 Aug

ಐದು ರೂಪಾಯಿ ಮೌಲ್ಯದ ರಾಮಮಂದಿರ ಅಂಚೆ ಚೀಟಿ ಬಿಡುಗಡೆ
1:30 PM, 5 Aug

ರಾಮಮಂದಿರ ಭೂಮಿ ಪೂಜೆಯ ಶಿಲಾಫಲಕ ಅನಾವರಣ
1:26 PM, 5 Aug

ನಮ್ಮ ಬಳಿ ಎಲ್ಲರೂ ರಾಮ ಮಂದಿರ ನಿರ್ಮಾಣ ಯಾವಾಗ ಎಂದು ಪ್ರಶ್ನಿಸುತ್ತಿದ್ದರು, ನಮಗೂ ಉತ್ತರ ಕೊಟ್ಟು ಸಾಕಾಗಿತ್ತು. ಉತ್ತರ ಪ್ರದೇಶದಲ್ಲಿ ಯೋಗಿ ಭಾರತದಲ್ಲಿ ಮೋದಿ ಇದ್ದಾಗಲೂ ನಿರ್ಮಾಣವಾಗದಿದ್ದರೆ ಇನ್ಯಾವಾಗ ಎಂದು ನಾವೂ ಅಂದುಕೊಂಡಿದ್ದವು, ಆದರೆ ಅದು ಈಗ ಆರಂಭವಾಗಿದೆ-ನೃತ್ಯ ಗೋಪಾಲ ದಾಸ್, ರಾಮಜನ್ಮಭೂಮಿ ತೀರ್ಥಕ್ಷೇತ್ರ ಅಧ್ಯಕ್ಷ
1:18 PM, 5 Aug

ಆತ್ಮ ವಿಶ್ವಾಸದ ಭಾರತ, ಆತ್ಮ ನಿರ್ಭರದ ಭಾರತ ನಿರ್ಮಾಣದ ಆರಂಭಿಕ ಹೆಜ್ಜೆ ಮಂದಿರದ ನಿರ್ಮಾಣವಾಗಿದೆ. ಈ ಕ್ಷಣ ನೋಡಲು ವಿಎಚ್‌ಪಿಯ ಮಾಜಿ ಅಧ್ಯಕ್ಷ ಅಶೋಕ್ ಸಿಂಘಾಲ್ ಸೇರಿ ಹಿರಿಯರು ಇದ್ದರೆ ಇನ್ನಷ್ಟು ಖುಷಿ ಕೊಡುತ್ತಿತ್ತು-ಮೋಹನ್ ಭಾಗವತ್
1:16 PM, 5 Aug

30 ವರ್ಷಗಳ ಹಿಂದೆ ಹೋರಾಟ ಆರಂಭಿಸಿದಾಗ ಸುದೀರ್ಘ ಹೋರಾಟದ ನಿರೀಕ್ಷೆ ಇತ್ತು. ಈ ಹೋರಾಟ ಆರಂಭಿಸಿದ ಅಡ್ವಾಣಿ ಸೇರಿ ಸಾಕಷ್ಟು ಹೊರಿಯರು ಇಂದು ಬರಲಾಗಲಿಲ್ಲ. ಇಂದಿನ ತುರ್ತು ಪರಿಸ್ಥಿತಿಯಲ್ಲಿ ಎಲ್ಲರೂ ಮನೆಯಲ್ಲಿಯೇ ಕುಳಿತು ಕಾರ್ಯಕ್ರಮ ವೀಕ್ಷಿಸುತ್ತಿದ್ದಾರೆ- ಮೋಹನ್ ಭಾಗವತ್
READ MORE

English summary
Ayodhya Ram Mandir Bhumi Pujan Live Updates, News in Kannada: Check out the latest breaking news, live updates, images, videos about ram mandir bhumi pujan ceremony.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X