ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯೋಧ್ಯೆ ಸುಪ್ರೀಂ ತೀರ್ಪು: ರಹಸ್ಯವಾಗಿಯೇ ಉಳಿದ 'ತೀರ್ಪು ಬರೆದವರಾರು'

|
Google Oneindia Kannada News

ನವದೆಹಲಿ, ನ 10: ರಾಮ ಜನ್ಮಭೂಮಿ - ಬಾಬರಿ ಮಸೀದಿ ಪ್ರಕರಣದ ಶತಮಾನದ ವಿವಾದಕ್ಕೆ ಸರ್ವೋಚ್ಚ ನ್ಯಾಯಾಲಯ ತೆರೆ ಎಳಿದಿದೆ.

ಸಿಜೆಐ ರಂಜನ್ ಗೊಗೊಯ್ ಸೇರಿದಂತೆ ಐದು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ, ಸರ್ವಾನುಮತದಿಂದ, ವಿವಾದಿತ 2.77 ಎಕರೆ ಜಮೀನನ್ನು ರಾಮಲಲ್ಲಾ ವಿರಾಜಮಾನ್ ಗೆ ಹಂಚಿಕೆ ಮಾಡಿ, ಕೇಂದ್ರ ಸರಕಾರದ ನಿಯಂತ್ರಣಕ್ಕೆ ಕೊಟ್ಟಿದೆ.

929 ಪುಟಗಳ ತೀರ್ಪಿಗೆ, ಇತರ ಹೆಚ್ಚುವರಿ ದಾಖಲೆ, ಸಾಕ್ಷಿ ಸೇರಿ 116 ಪುಟಗಳನ್ನು ಸೇರಿಸಲಾಗಿದೆ. ಒಟ್ಟು, 1045 ಪುಟಗಳ ತೀರ್ಪು ಇದಾಗಿದೆ.

ಅಯೋಧ್ಯೆ: ರಾಮಲಲ್ಲಾ ವಕೀಲರಿಗೆ ಸಿಜೆಐ ಗೊಗೊಯ್ ನೀಡಿದ್ದ ಅಪರೂಪದ ಆಫರ್ಅಯೋಧ್ಯೆ: ರಾಮಲಲ್ಲಾ ವಕೀಲರಿಗೆ ಸಿಜೆಐ ಗೊಗೊಯ್ ನೀಡಿದ್ದ ಅಪರೂಪದ ಆಫರ್

ಸಿಜಿಐ ರಂಜನ್ ಗೊಗೊಯ್, ಮುಂದಿನ ಸಿಜೆಐ ಎಸ್.ಎ.ಬೊಬ್ಡೆ, ಜಸ್ಟೀಸ್ ಡಿ.ವೈ.ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಅಬ್ದುಲ್ ನಜೀರ್ ಅವರ ನ್ಯಾಯಪೀಠ, ಅಯೋಧ್ಯೆ ತೀರ್ಪನ್ನು ನೀಡಿತ್ತು. ಆದರೆ, ಇಂತಹ ಹೈಪ್ರೊಫೈಲ್ ಕೇಸಿನ, ಪ್ರಮುಖ ಎರಡು ವಿಷಯಗಳನ್ನು ಸಿಜೆಐ ಬಹಿರಂಗಪಡಿಸಲಿಲ್ಲ.

ಐವರು ಜಡ್ಜ್ ಗಳಲ್ಲಿ ಒಬ್ಬರು

ಐವರು ಜಡ್ಜ್ ಗಳಲ್ಲಿ ಒಬ್ಬರು

1045 ಪುಟಗಳ ತೀರ್ಪಿನ ಪೈಕಿ, 116 ಪುಟಗಳನ್ನು ಐವರು ಜಡ್ಜ್ ಗಳಲ್ಲಿ ಒಬ್ಬರು ಬರೆದಿದ್ದರು ಎಂದು ಹೇಳಲಾಗಿದೆ. ಇವರು ಬರೆದ ಈ ತೀರ್ಪಿಗೆ ಇತರ ನಾಲ್ವರು ವಿರೋಧ ವ್ಯಕ್ತಪಡಿಸಲಿಲ್ಲ ಎಂದೂ ಹೇಳಲಾಗಿದೆ. ಹಾಗಾಗಿ, ಇದು ಸರ್ವಾನುಮತದ ತೀರ್ಪು ಎಂದು ಸಿಜಿಐ ಹೇಳಿದ್ದರು. ಆದರೆ, 116 ಪುಟ ತೀರ್ಪು ಬರೆದವರಾರು ಎಂದು ಬಹಿರಂಗಗೊಂಡಿಲ್ಲ ಎನ್ನುವುದು ಒಂದು..

ಅಯೋಧ್ಯೆ ಕೇಸಿನ 929 ಪುಟಗಳ ತೀರ್ಪು

ಅಯೋಧ್ಯೆ ಕೇಸಿನ 929 ಪುಟಗಳ ತೀರ್ಪು

ಸಾಮಾನ್ಯವಾಗಿ ಸರ್ವಾನುಮತದ ತೀರ್ಪು ಎಂದಾಗ, ಸರ್ವೋಚ್ಚ ನ್ಯಾಯಪೀಠ, ತೀರ್ಪು ಬರೆದವರಾರು ಎನ್ನುವುದನ್ನು ಬಹಿರಂಗ ಪಡಿಸುತ್ತದೆ. ಆದರೆ, ಅಯೋಧ್ಯೆ ಕೇಸಿನ 929 ಪುಟಗಳ ತೀರ್ಪು ಬರೆದವರಾರು ಎನ್ನುವುದು ರಹಸ್ಯವಾಗಿಯೇ ಉಳಿಯಿತು. (ಚಿತ್ರ:ಪಿಟಿಐ)

ನಲವತ್ತು ನಿಮಿಷ ಸಿಜಿಐ ಗೊಗೊಯ್

ನಲವತ್ತು ನಿಮಿಷ ಸಿಜಿಐ ಗೊಗೊಯ್

ನ್ಯಾಯಪೀಠ ತೀರ್ಪು ಪ್ರಕಟಿಸುವಾಗ, ಬೆಂಚ್ ಪರವಾಗಿ 'ತೀರ್ಪನ್ನು ಬರೆದವರ' ಹೆಸರನ್ನು ದಾಖಲು ಮಾಡಲಾಗುತ್ತದೆ. ಆದರೆ, ಸುಮಾರು ನಲವತ್ತು ನಿಮಿಷ ಸಿಜಿಐ ಗೊಗೊಯ್, ತೀರ್ಪನ್ನು ಕೋರ್ಟ್ ಹಾಲ್ ನಲ್ಲಿ ಓದಿದರೂ, ಬರೆದವರ ಹೆಸರನ್ನು ಬಹಿರಂಗಪಡಿಸಲಿಲ್ಲ.

ಸುಪ್ರೀಂಕೋರ್ಟ್ ಅಯೋಧ್ಯೆ ತೀರ್ಪನ್ನು ಏಕಾಏಕಿ ಪ್ರಕಟಿಸಲು ಕಾರಣವೇನು?ಸುಪ್ರೀಂಕೋರ್ಟ್ ಅಯೋಧ್ಯೆ ತೀರ್ಪನ್ನು ಏಕಾಏಕಿ ಪ್ರಕಟಿಸಲು ಕಾರಣವೇನು?

ಐವರಲ್ಲಿ ಒಬ್ಬರು ಈ ತೀರ್ಪನ್ನು ಬರೆದಿದ್ದಾರೆ

ಐವರಲ್ಲಿ ಒಬ್ಬರು ಈ ತೀರ್ಪನ್ನು ಬರೆದಿದ್ದಾರೆ

ಇದಲ್ಲದೇ, ರಾಮನ ಜನ್ಮಸ್ಥಳದ ಬಗ್ಗೆ ತೀರ್ಪು ಬರೆದ ನ್ಯಾಯಮೂರ್ತಿಗಳ ಹೆಸರನ್ನೂ ಬೆಂಚ್ ಬಹಿರಂಗ ಪಡಿಸಲಿಲ್ಲ. "ನಮ್ಮ ಐವರಲ್ಲಿ ಒಬ್ಬರು ಈ ತೀರ್ಪನ್ನು ಬರೆದಿದ್ದಾರೆ. ಹಿಂದೂಗಳ ನಂಬಿಕೆಯಂತೆ ರಾಮನ ಜನ್ಮಸ್ಥಾನದ ಬಗ್ಗೆ ಅವರ ಬರೆದ ತೀರ್ಪಿಗೆ ಎಲ್ಲರ ಸಹಮತವಿದೆ" ಎಂದಷ್ಟೇ ಸಿಜಿಐ ಹೇಳಿದರು.

ಅಯೋಧ್ಯೆ ತೀರ್ಪು: ಯಕ್ಷಪ್ರಶ್ನೆಯಾಗಿಯೇ ಉಳಿದ 'ಅವರು ಯಾರು'?

ಅಯೋಧ್ಯೆ ತೀರ್ಪು: ಯಕ್ಷಪ್ರಶ್ನೆಯಾಗಿಯೇ ಉಳಿದ 'ಅವರು ಯಾರು'?

ಹಾಗಾಗಿ, ಅಯೋಧ್ಯೆ ಯಂತಹ ಸೆನ್ಸಿಟಿವ್ ಕೇಸಿನ ತೀರ್ಪು ಹೊರಬಂದರೂ, ಎರಡು ಪ್ರಮುಖಾಂಶಗಳು ರಹಸ್ಯವಾಗಿಯೇ ಉಳಿಯಿತು. ಯಾಕೆ, ಸಿಜಿಐ ಈ ಹೆಸರನ್ನು ಬಹಿರಂಗ ಪಡಿಸಲಿಲ್ಲ ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ.

English summary
Ayodhya 1045 Page Judgment: Who Is The Author Of The Verdict, Question Unanswered
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X