ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಪ್ರಶಸ್ತಿ ವಾಪಸ್ ಮೋದಿ ಮೇಲಿನ ಹುನ್ನಾರ, ನನ್ನ ಹತ್ರ ಸಾಕ್ಷ್ಯವಿದೆ'

|
Google Oneindia Kannada News

'ಪ್ರಶಸ್ತಿ ವಾಪಸ್' ಅಭಿಯಾನದ ನೆನಪಿದೆಯಾ? ಅದೇ ಕಣ್ರೀ 2015ರಲ್ಲಿ ಆರಂಭವಾಗಿತ್ತಲ್ಲಾ, ಪ್ರಶಸ್ತಿ ವಾಪಸ್ ಮಾಡುವ ಅಭಿಯಾನ. ನರೇಂದ್ರ ಮೋದಿ ನೇತೃತ್ವದ ಸರಕಾರದಲ್ಲಿ ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗಿ ಅನ್ನೋ ಕಾರಣ ಮುಂದೊಡ್ಡಿ ಐವತ್ತಕ್ಕೂ ಹೆಚ್ಚು ಲೇಖಕರು ತಮ್ಮ ಪ್ರಶಸ್ತಿ ವಾಪಸ್ ಮಾಡಿದ್ದರಲ್ಲಾ ಅದು ರಾಜಕೀಯ ಪ್ರೇರಿತವಾಗಿತ್ತು ಎಂಬ ಆರೋಪ ಬಂದಿದೆ.

ಹೀಗೆ ಆರೋಪ ಮಾಡುತ್ತಿರುವವರು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ವಿಶ್ವನಾಥ್ ಪ್ರಸಾದ್ ತಿವಾರಿ. ಅವರು ಬರೀ ಆರೋಪ ಮಾಡುತ್ತಿಲ್ಲ. ಇದಕ್ಕೆ ಸಂಬಂಧಿಸಿದ ಹಾಗೆ ತಮ್ಮ ಹತ್ತಿರ ಸಾಕ್ಷ್ಯ ಕೂಡ ಇದೆ ಎಂದು ಹೇಳಿದ್ದಾರೆ. ಅದೊಂದು ರಾಜಕೀಯ ಪ್ರೇರಿತ ಅಭಿಯಾನ. ಮಾರ್ಕ್ಸಿಸ್ಟ್ ಬರಹಗಾರರು ಮತ್ತು ಹಿಂದಿ ಕವಿ ಅಶೋಕ್ ವಾಜಪೇಯಿ ಸೇರಿ ಸರಕಾರಕ್ಕೆ ಮಸಿ ಬಳಿಯಲು ಮಾಡಿದ ಪ್ರಯತ್ನವಂತೆ.

ಪದ್ಮನಾಭ ಭಟ್, ಕಂಚ್ಯಾಣಿ ಶರಣಪ್ಪಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರಪದ್ಮನಾಭ ಭಟ್, ಕಂಚ್ಯಾಣಿ ಶರಣಪ್ಪಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ

ಅಷ್ಟೇ ಅಲ್ಲ, ಆ ಸಂದರ್ಭದಲ್ಲಿ ಬಿಹಾರದ ಚುನಾವಣೆ ಎದುರು ಇದ್ದಾಗ 'ಅಸಹಿಷ್ಣುತೆ'ಯ ದೊಡ್ಡ ಧ್ವನಿ ಎದ್ದಿತ್ತು. ಆದರೆ ತಿವಾರಿ ಆರೋಪವನ್ನು ವಾಜಪೇಯಿ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ತಿವಾರಿ ಅವರು ಹೊರತರುವ ಹತ್ತು ಪುಟಗಳ ಸಾಹಿತ್ಯ ನಿಯತಕಾಲಿಕೆಯಲ್ಲಿ ಈ ಬಗ್ಗೆ ಲೇಖನ ಬಂದಿದೆ.

Award Wapsi politically motivated campaign, allegation

ಅದಕ್ಕೆ ಪ್ರತಿಕ್ರಿಯೆ ನೀಡಿರುವ ಅಶೋಕ್ ವಾಜಪೇಯಿ, ಆಗಿನ ಪರಿಸ್ಥಿತಿ ದೇಶದಲ್ಲಿ ಹಾಗಿತ್ತು. ಅದು ಬರಹಗಾರರೆಲ್ಲ ಒಟ್ಟಾಗಬೇಕಾಗಿದ್ದ ಸಮಯ. ಪ್ರಶಸ್ತಿ ವಾಪಸ್ ಮಾಡಿದವರ ಪೈಕಿ ಹಲವರು ಒಬ್ಬರಿಗೊಬ್ಬರು ಪರಿಚಯವೇ ಇರಲಿಲ್ಲ ಎಂದು ಹೇಳಿದ್ದಾರೆ.

ದೇಶದ ಪ್ರತಿಷ್ಠೆಗೆ ಮಸಿ ಬಳಿಯಲು ಪ್ರಶಸ್ತಿ ವಾಪಸಿ : ಅನುಪಮ್ ಖೇರ್ ದೇಶದ ಪ್ರತಿಷ್ಠೆಗೆ ಮಸಿ ಬಳಿಯಲು ಪ್ರಶಸ್ತಿ ವಾಪಸಿ : ಅನುಪಮ್ ಖೇರ್

"ಪ್ರಶಸ್ತಿ ವಾಪಸ್ ಹಿಂದಿನ ಸತ್ಯ ಹಾಗೂ ಅದರ ಹಿಂದಿನ ಆಷಾಢಭೂತಿತನ" ಎಂಬ ಶೀರ್ಷಿಕೆ ಅಡಿಯಲ್ಲಿ ತಿವಾರಿ ಲೇಖನ ಬರೆದಿದ್ದಾರೆ. ನಾಲ್ಕು ತಿಂಗಳ ಪ್ರಶಸ್ತಿ ವಾಪಸ್ ಅಭಿಯಾನವನ್ನು ಬರಹಗಾರರ ಮೂರು ತಂಡಗಳು ಪ್ರೋತ್ಸಾಹಿಸಿದ್ದವು. ಅವರಿಗೆಲ್ಲ ನರೇಂದ್ರ ಮೋದಿ ವಿರುದ್ಧ ವೈಯಕ್ತಿಕ ದ್ವೇಷವಿತ್ತು ಎಂದಿದ್ದಾರೆ.

ಯಾರಿಗೆ ಸರಕಾರಕ್ಕೆ ಮಸಿ ಬಳಿಯಬೇಕು ಅಂತಿತ್ತೋ ಹಾಗೂ ಇಪ್ಪತ್ತೈದು ಬರಹಗಾರರ ತಂಡದಲ್ಲಿದ್ದವರಿಗೆ ವೈಯಕ್ತಿಕವಾಗಿ ಪ್ರಚಾರ ಬೇಕಿತ್ತು ಎಂದು ಆರೋಪ ಮಾಡಿದ್ದಾರೆ.

ಪ್ರಶಸ್ತಿ ವಾಪಸ್ ಅನ್ನೋದು ಆ ಸನ್ನಿವೇಶದ ಪ್ರತಿಕ್ರಿಯೆ ಅಲ್ಲ. ಆದರೆ ಅದು ಐವರು ಲೇಖಕರ ಒಟ್ಟು ಪ್ರಯತ್ನ ಆಗಿತ್ತು. ಕೇಂದ್ರದಲ್ಲಿ ಅಧಿಕಾರ ಹಿಡಿಯುವ ಮುಂಚೆಯೇ ಆ ಪೈಕಿ ಹಲವರು ಮೋದಿ ವಿರೋಧಿ ಸಭೆಗಳನ್ನು ಕೂಡ ನಡೆಸಿದ್ದರು. ಇವೆಲ್ಲದಕ್ಕೂ ನನ್ನ ಬಳಿ ಸಾಕ್ಷ್ಯಗಳಿವೆ ಎಂದು ತಿವಾರಿ ಬರೆದುಕೊಂಡಿದ್ದಾರೆ.

ಮೋದಿ ಗೆಲುವಿನಿಂದ ಬುದ್ದಿಜೀವಿಗಳಿಗೆ ದಿಗಿಲು: ಭೈರಪ್ಪ ವಾಗ್ದಾಳಿ ಮೋದಿ ಗೆಲುವಿನಿಂದ ಬುದ್ದಿಜೀವಿಗಳಿಗೆ ದಿಗಿಲು: ಭೈರಪ್ಪ ವಾಗ್ದಾಳಿ

ಆ ಸಂದರ್ಭದಲ್ಲಿ ಅಕಾಡೆಮಿಯ ನೇತೃತ್ವ ವಹಿಸಿಕೊಂಡಿದ್ದವರು ತಿವಾರಿ. ಅಭಿಯಾನ ಆರಂಭಿಸಿದ ಅಶೋಕ್ ವಾಜಪೇಯಿ ಅವರಿಗೆ ಮೋದಿ, ಅಕಾಡೆಮಿ ಹಾಗೂ ಸ್ವತಃ ತಿವಾರಿ ಮೇಲೆ ಕೂಡ ದ್ವೇಷವಿತ್ತು ಎಂದು ಆರೋಪಿಸಿದ್ದಾರೆ.

ಇನ್ನು ಪ್ರಶಸ್ತಿ ವಾಪಸ್ ಅಭಿಯಾನದ ವೇಳೆ ತಿವಾರಿ ಅವರಿಗೆ ಲೇಖಕರಿಂದ ಬಂದಿದ್ದ ಕೆಲವು ಪತ್ರಗಳು ಹಾಗೂ ಎಸ್ಸೆಮ್ಮೆಸ್ ಗಳನ್ನು ಸಹ ಪ್ರಕಟಿಸಿದ್ದು, ಆ ಸಂದರ್ಭದಲ್ಲಿ ಇತರ ಲೇಖಕರಿಂದ ತಮ್ಮ ಮೇಲೆ ಒತ್ತಡ ಬರುತ್ತಿರುವುದಾಗಿ ಹೇಳಿಕೊಂಡಿದ್ದರು ಎನ್ನುವಂಥ ಒಕ್ಕಣೆಗಳನ್ನು ಒಳಗೊಂಡಿವೆ.

ಆದರೆ, ನಯನತಾರಾ ಸೆಹಗಲ್ ಅವರು ಪ್ರಶಸ್ತಿ ವಾಪಸ್ ಮಾಡಿದ್ದರ ಪ್ರಾಮಾಣಿಕತೆಯನ್ನು ಮೆಚ್ಚಿಕೊಂಡಿರುವ ತಿವಾರಿ, ತುರ್ತು ಪರಿಸ್ಥಿತಿ ಸಂದರ್ಭದಲ್ಲೂ ಆಕೆ ಹಾಗೇ ನಡೆದುಕೊಂಡಿದ್ದರು ಎಂದಿದ್ದಾರೆ. ಇನ್ನು ತಮ್ಮ ಲೇಖನದಲ್ಲಿ ರಾಜಕಾರಣಿಗಳ ಜತೆಗೆ ಗುರುತಿಸಿಕೊಂಡಿದ್ದ ಲೇಖಕರು ಮತ್ತು ಎಂ.ಎಂ.ಕಲಬುರ್ಗಿ ಹತ್ಯೆ ನಂತರದ ಘಟನೆಗಳ ಬಗ್ಗೆ ಕೂಡ ತಿವಾರಿ ಪ್ರಸ್ತಾವ ಮಾಡಿದ್ದಾರೆ.

English summary
Award Wapsi campaign on 2015, which was politically motivated and led by Hindi poet Ashok Vajapayi, alleged by Akadamy former president Vishwanath Prasad Tiwari.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X