ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶೀಯ ವಿಮಾನಗಳ ಕಾರ್ಯಾಚರಣೆ: ಶೇ.70ರಿಂದ 80ಕ್ಕೆ ಏರಿಕೆ

|
Google Oneindia Kannada News

ನವದೆಹಲಿ, ಡಿಸೆಂಬರ್ 03: ದೇಶೀಯ ವಿಮಾನಗಳ ಕಾರ್ಯಾಚರಣೆಯನ್ನು ಶೇ.70 ರಿಂದ ಶೇ.80ಕ್ಕೆ ಹೆಚ್ಚಿಸಲಾಗಿದೆ.

ಕೇಂದ್ರ ಸರ್ಕಾರ ಗುರುವಾರ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಸಿಹಿ ಸುದ್ದಿ ನೀಡಿದ್ದು, ಕೋವಿಡ್ ನಂತರ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದ್ದ ದೇಶೀಯ ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ.

ದೆಹಲಿಗೆ ರೈಲು, ವಿಮಾನ ಸೇವೆ ಪುನಾರಂಭದ ಕುರಿತು 8 ದಿನದಲ್ಲಿ ನಿರ್ಧಾರ: ಮಹಾರಾಷ್ಟ್ರ ಸರ್ಕಾರ ದೆಹಲಿಗೆ ರೈಲು, ವಿಮಾನ ಸೇವೆ ಪುನಾರಂಭದ ಕುರಿತು 8 ದಿನದಲ್ಲಿ ನಿರ್ಧಾರ: ಮಹಾರಾಷ್ಟ್ರ ಸರ್ಕಾರ

ಕೊರೊನಾ ವೈರಸ್ ನಡುವೆಯೂ ದೇಶಿಯ ಪ್ರಯಾಣಿಕ ವಿಮಾನಗಳಿಗೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ನವೆಂಬರ್ 11ರಂದು ಶೇ. 70 ರಷ್ಟು ವಿಮಾನಗಳ ಕಾರ್ಯಾಚರಣೆಗೆ ಅನುಮತಿ ನೀಡಲಾಗಿತ್ತು. ಇದೀಗ ಅದನ್ನು ಶೇ. 80ಕ್ಕೆ ಹೆಚ್ಚಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

Aviation Ministry Increases Cap On Domestic Flights From 70% To 80%

ಕೊರೊನಾ ಲಾಕ್ ಡೌನ್ ನಂತರ ಮೇ 25 ರಂದು ದೇಶಿಯ ವಿಮಾನ ಸಂಚಾರ ಪುನರಾರಂಭಗೊಂಡಾಗ ಶೇ. 33 ರಷ್ಟು ವಿಮಾನಗಳ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಜೂನ್ ಶೇ.45ಕ್ಕೆ, ಸೆಪ್ಟೆಂಬರ್ ನಲ್ಲಿ ಶೇ. 60ಕ್ಕೆ ಹಾಗೂ ನವೆಂಬರ್ ನಲ್ಲಿ ಶೇ. 70ಕ್ಕೆ ಹೆಚ್ಚಿಸಲಾಗಿತ್ತು.

ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಸಚಿವ ಪುರಿ ಅವರು, ಮೇ 25 ರಂದು 30 ಸಾವಿರ ಪ್ರಯಾಣಿಕರೊಂದಿಗೆ ದೇಶೀಯ ವಿಮಾನಯಾನ ಪುನರಾರಂಭಗೊಂಡಿತ್ತು. ಈಗ ಅದು 2.52 ಲಕ್ಷಕ್ಕೆ ತಲುಪಿದೆ ಎಂದು ಹೇಳಿದ್ದಾರೆ.

English summary
The Aviation Ministry on Thursday increased the cap on domestic flights from 70 percent to 80 percent of the pre-COVID levels from today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X