ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್‌ಡೌನ್ ಕಾಲ: ಏಪ್ರಿಲ್‌ನಿಂದ ನಿತ್ಯದ ಸ್ಮಾರ್ಟ್‌ಫೋನ್ ಬಳಕೆ ಶೇ.25ರಷ್ಟು ಹೆಚ್ಚಳ

|
Google Oneindia Kannada News

ನವದೆಹಲಿ, ಡಿಸೆಂಬರ್ 15: ಭಾರತದಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರು ನಿತ್ಯ ಸುಮಾರು 7 ತಾಸುಗಳ ಕಾಲ ಮೊಬೈಲ್ ಬಳಕೆ ಮಾಡುತ್ತಾರೆ.

ಆದರೆ ಕಳೆದ ಏಪ್ರಿಲ್‌ನಿಂದ ಸ್ಮಾರ್ಟ್ ಫೋನ್ ಬಳಕೆದಾರರು ಶೇ.25ರಷ್ಟು ಹೆಚ್ಚು ಸಮಯಗಳ ಕಾಲ ಫೋನ್ ಬಳಕೆ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಕೋ ವಿನ್ ಆ್ಯಪ್‌ ಮೂಲಕ ಕೊರೊನಾ ಲಸಿಕೆ ನೋಂದಣಿ ಹೇಗೆ?ಕೋ ವಿನ್ ಆ್ಯಪ್‌ ಮೂಲಕ ಕೊರೊನಾ ಲಸಿಕೆ ನೋಂದಣಿ ಹೇಗೆ?

ಕೊರೊನಾ ಸೋಂಕಿನಿಂದಾಗಿ, ವರ್ಕ್ ಫ್ರಂ ಹೋಂ, ಆನ್‌ಲೈನ್ ತರಗತಿಗಳು, ಹೆಚ್ಚೆಚ್ಚು ಸಿನೆಮಾ ವೀಕ್ಷಣೆ, ವಿಡಿಯೋ ಗೇಮ್ ಸೇರಿದಂತೆ ಹೆಚ್ಚೆಚ್ಚು ಮೊಬೈಲ್‌ಗಳನ್ನು ಬಳಕೆ ಮಾಡುತ್ತಿದ್ದಾರೆ.

Average Daily Time Spent On Smartphones Up 25 Percent In India: Report

ಭಾರತದಲ್ಲಿ ಶೇ.70ರಷ್ಟು ಮಂದಿ ಸ್ಮಾರ್ಟ್ ಫೋನ್ ಬಳಕೆ ಮಾಡುತ್ತಿದ್ದಾರೆ. ಇದು ಅವರ ಮಾನಸಿಕತೆ, ದೈಹಿಕ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ.

ಕೊರೊನಾ ಸೋಂಕು ಹರಡುವುದಕ್ಕೂ ಮುನ್ನ ಮಾರ್ಚ್‌ನಲ್ಲಿ 5.5ಗಂಟೆಗಳ ಕಾಲ ಮೊಬೈಲ್ ಬಳಕೆ ಮಾಡುತ್ತಿದ್ದರು. 2019ರಲ್ಲಿ ಅದು 4.9 ಗಂಟೆಗಳಿತ್ತು. ಏಪ್ರಿಲ್ ವರೆಗೆ 6.9 ಗಂಟೆಗಳ ಕಾಲ ಸ್ಮಾರ್ಟ್ ಫೋನ್ ಬಳಸುತ್ತಿದ್ದವರು ಇದೀಗ ಶೇ.25ರಷ್ಟು ಹೆಚ್ಚು ಸಮಯದವರೆಗೆ ಬಳಕೆ ಮಾಡುತ್ತಿದ್ದಾರೆ.

ಇನ್ನೂ ಕೆಲವು ಮಂದಿ ತಮ್ಮ ಮೊಬೈಲ್‌ಗಳನ್ನು ಆಫ್ ಮಾಡಿಕೊಂಡು ಕುಟುಂಬದವರ ಜತೆ ಸಮಯ ಕಳೆಯುತ್ತಿದ್ದಾರೆ. ಕೇವಲ ಶೇ.18ರಷ್ಟು ಮಂದಿ ಮಾತ್ರ ತಮ್ಮ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಾರೆ.

ಲಾಕ್‌ಡೌನ್‌ ಆರಂಭವಾದಾಗಿನಿಂದ ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಹೆಚ್ಚೆಚ್ಚು ಖರೀದಿ ಮಾಡಲಾಗಿದೆ. ತಮ್ಮ ಹತ್ತಿರದವರ ಜತೆ ಸದಾಕಾಲ ಸಂಪರ್ಕ ಸಾಧಿಸುವ ಏಕೈಕ ಮಾಧ್ಯಮ ಸ್ಮಾರ್ಟ್‌ಫೋನ್ ಎಂದು ಶೇ.79ರಷ್ಟು ಮಂದಿ ಹೇಳಿದ್ದಾರೆ.

English summary
Amid the pandemic, the daily time spent on smartphones has increased by 25 per cent on average in India, a new study claimed on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X