ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುತ್ರನ ಸಾವಿಗೆ 32 ಗಂಟೆಯಲ್ಲಿ ಪ್ರತೀಕಾರ: ಹುತಾತ್ಮ ಯೋಧನ ತಂದೆಯ ಆಕ್ರೋಶ

|
Google Oneindia Kannada News

ಶ್ರೀನಗರ, ಜೂನ್ 16: "ಇನ್ನು 32 ಗಂಟೆಗಳಲ್ಲಿ ನನ್ನ ಹುತಾತ್ಮ ಮಗನ ಸಾವಿನ ಪ್ರತೀಕಾರ ತೀರಿಸಿ" ಎಂದು ಭಾವುಕರಾಗಿ, ಅಷ್ಟೇ ಆಕ್ರೋಶಭರಿತರಾಗಿ ಮನವಿ ಮಾಡಿದ್ದಾರೆ ಹುತಾತ್ಮ ಯೋಧ ಔರಂಗಜೇಬ್ ತಂದೆ ಹನೀಫ್.

ತಮ್ಮ ಮಗನನ್ನು ಸಾವಿಗೆ ಕಾರಣವಾಗಿದ್ದು ಪಾಕಿಸ್ತಾನ. ಆತನನ್ನು ಕೊಂದ ಭಯೋತ್ಪಾದಕರ ವಿರುದ್ಧ ಕೂಡಲೇ ಪ್ರತೀಕಾರ ತೀರಿಸಿಕೊಳ್ಳಬೇಕು. ಇದು ನಿಮಗೆಲ್ಲರಿಗೂ ನನ್ನ ಮನವಿ. ನನ್ನ ಮಗನನ್ನು ಸಾವಿನ ಪ್ರತೀಕಾರವನ್ನು ಇನ್ನು 32 ಗಂಟೆಗಳಲ್ಲಿ ತೀರಿಸಿಕೊಳ್ಳಬೇಕು. ಕಾಶ್ಮೀರದ ಶಾಂತಿ ಕದಡುತ್ತಿರುವ ಅಂಥವರನ್ನು ಕೊಲ್ಲಿ, ಅವರನ್ನು ನನ್ನ ಮಗನನ್ನು ಕೊಂಡೊಯ್ದರು, ಅವರು ಈ ಕಾಶ್ಮೀರದ ಮಗನನ್ನು ಕೊಂಡೊಯ್ದರು. ನನಗೆ ಗೊತ್ತಿಲ್ಲ, ಈ ರಾಜ್ಯ ನಮ್ಮನ್ನು ಕಾಪಾಡುತ್ತದೋ, ಬಿಡುತ್ತದೋ ಗೊತ್ತಿಲ್ಲ. ಆದರೆ ನಾವು ಕಾಶ್ಮೀರಿಗಳು ನೋವನುಭವಿಸುತ್ತಿದ್ದೇವೆ. ಕಾಶ್ಮೀರ ನಮ್ಮದು. ನಾವು ಇದು ಬೆಂಕಿಯಲ್ಲಿ ಸುಡುವಂತೆ ಮಾಡುವುದು ಬೇಡ. ನಮ್ಮ ಕಾಶ್ಮೀರವನ್ನು ಹಾಳುಮಾಡುತ್ತಿರುವವರನ್ನು ಇಲ್ಲಿಂದ ಓಡಿಸೋಣ" ಎಂದು ಉದ್ವೇಗದಿಂದ ಅವರು ಮಾತನಾಡಿದ ವಿಡಿಯೋವೊಂದು ವೈರಲ್ ಆಗಿದೆ.

Avenge sons killing in 32 hours: Aurangzebs father

ಉಗ್ರರು ಅಪಹರಿಸಿದ್ದ ಭಾರತೀಯ ಯೋಧನ ಮೃತದೇಹ ಪತ್ತೆಉಗ್ರರು ಅಪಹರಿಸಿದ್ದ ಭಾರತೀಯ ಯೋಧನ ಮೃತದೇಹ ಪತ್ತೆ

44 ರಾಷ್ಟ್ರೀಯ ರೈಫಲ್ಸ್ ನ ಸದಸ್ಯರಾಗಿದ್ದ ಔರಂಗಜೇಬ್ ರನ್ನು ಉಗ್ರರು ಅಪಹರಿಸಿ, ಜೂನ್ 15 ರಂದು ಕೊಲೆ ಮಾಡಿದ್ದರು. ಶಾಂತಿಕಯ ಸಂದೇಶ ಸಾರುವ ರಂಜಾನ್ ಸಂದರ್ಭದಲ್ಲಿ ಇಂಥ ದುರ್ಘಟನೆ ನಡೆದಿರುವುದು ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು.

"ನನ್ನ ಮಗ ತನ್ನ ಮಾತನ್ನು ಉಳಿಸಿಕೊಂಡಿದ್ದಾನೆ. ದೇಶಕ್ಕಾಗಿ ತ್ಯಾಗ ಮಾಡಿ ನನ್ನ ಬಳಿ ಹಿಂದಿರುಗಿದ್ದಾನೆ! ಈ ಭಯೋತ್ಪಾದಕರನ್ನು ನಾಶಗೊಳಿಸುವಂತೆ ನಾನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಳಿ ಮನವಿ ಮಾಡಿಕೊಳ್ಳುತ್ತೇನೆ" ಎಂದು ಸಹ ಹನೀಫ್ ಹೇಳಿದ್ದಾರೆ.

English summary
Avenge son's killing in 32 hours, Father of martyred soldier Aurangzeb, who was killed by terrorists, requested to all people of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X