ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ವೈರಲ್ ವಿಡಿಯೋ ವಿರುದ್ಧ ದಾವೆ ಹೂಡಲು ಹೊರಟ ಲೇಖಕ

|
Google Oneindia Kannada News

ನವದೆಹಲಿ, ಮಾರ್ಚ್ 10: ಟ್ವಿಟ್ಟರ್ ನಲ್ಲಿ ಕಾಂಗ್ರೆಸ್ ಪೋಸ್ಟ್ ಮಾಡಿರುವ ಸಿಂಗಪುರದಲ್ಲಿ ರಾಹುಲ್ ಗಾಂಧಿಯೊಂದಿಗಿನ ಸಂವಾದದ ವಿಡಿಯೋವನ್ನು ಡಿಲೀಟ್ ಮಾಡದಿದ್ದಲ್ಲಿ, ಕಾಂಗ್ರೆಸ್ ವಿರುದ್ಧ ದಾವೆ ಹೂಡುವುದಾಗಿ ಲೇಖಕರೊಬ್ಬರು ಎಚ್ಚರಿಸಿದ್ದಾರೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

Asia Reborn ಪುಸ್ತಕದ ಲೇಖಕ ಪ್ರಸೇನ್ ಜಿತ್ ಕೆ ಬಸು ಎಂಬುವವರು ಕೇಳಿದ ಪ್ರಶ್ನೆಗೆ ರಾಹುಲ್ ಗಾಂಧಿ ನೀಡಿದ ಉತ್ತರದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಆದರೆ ಪ್ರಸೇನ್ ಜಿತ್ ಹೇಳುವ ಪ್ರಕಾರ ಈ ವಿಡಿಯೋವನ್ನು ತಿರುಚಲಾಗಿದೆ. ತಾವು ಪ್ರಶ್ನೆ ಕೇಳಿದ ನಂತರದ ಭಾಗಗಳನ್ನು ಕತ್ತರಿಸಿ, ಕಾಂಗ್ರೆಸ್ ಅನ್ನು ಹೊಗಳುತ್ತಿರುವ ಭಾಗವನ್ನು ಇದರೊಂದಿಗೆ ಸೇರಿಸಲಾಗಿದೆ. ಎಂದು ದೂರಿದ್ದಾರೆ.

ಅಷ್ಟೇ ಅಲ್ಲ, ಕಾಂಗ್ರೆಸ್ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕೆ ನನ್ನನ್ನು ಬಳಸಿಕೊಳ್ಳುತ್ತಿದೆ. ಅಂದು ನಡೆಯದೇ ಇದ್ದ ಸಂದರ್ಭಗಳನ್ನು ಒಟ್ಟು ಸೇರಿಸಿ ಈ ವಿಡಿಯೋ ತಯಾರಿಸಿದೆ. ಒಂದೋ ಈ ವಿಡಿಯೋವನ್ನು ಡಿಲೀಟ್ ಮಾಡಿ. ಇಲ್ಲವೇ ಸಿಂಗಪುರ ನ್ಯಾಯಾಲಯದಿಂದ ಪ್ರಕರಣ ಎದುರಿಸಿ" ಎಂದು ಪ್ರಸೇನ್ ಜಿತ್ ಬಸು ಟ್ವೀಟ್ ಮಾಡಿದ್ದಾರೆ.

English summary
Prasenjit K Basu, the author of Asia Reborn book has threatened the Congress with legal action in Singapore if it doesn’t withdraw a video it tweeted of a public interaction between him and Rahul Gandhi at a prestigious university.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X