ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಹತ್ಯೆಗೆ ಸ್ಕೆಚ್ ಹಾಕಿದ್ದ ಅಬು ಜುಂದಾಲ್ ಗೆ ಜೀವಾವಧಿ ಶಿಕ್ಷೆ

By ವಿಕಾಸ್ ನಂಜಪ್ಪ
|
Google Oneindia Kannada News

ಮುಂಬೈ, ಆಗಸ್ಟ್ 02: 26/11ಮುಂಬೈ ದಾಳಿಯ ರೂವಾರಿ ಅಬು ಜುಂದಾಲ್ ಗೆ 2006ರಲ್ಲಿ ಔರಂಗಾಬಾದ್​ನಲ್ಲಿ ಅಕ್ರಮ ಶಸ್ತ್ರಾಸ್ತ್ರ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋಕಾ ಕೋರ್ಟಿನಿಂದ ಜೀವಾವಧಿ ಶಿಕ್ಷೆ ಪ್ರಕಟಿಸಲಾಗಿದೆ. ಅಬು ಸೇರಿದಂತೆ ಏಳು ಜನಕ್ಕೆ ಜೀವಾವಧಿ ಶಿಕ್ಷೆ ವಿಧಿಸಿ ಮೋಕಾ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ.

ಈ ಪ್ರಕರಣದಲ್ಲಿಇಬ್ಬರು ಅಪರಾಧಿಗಳಿಗೆ 14 ವರ್ಷ ಜೈಲು ಶಿಕ್ಷೆ ಸಿಕ್ಕಿದ್ದರೆ, ಉಳಿದ ಮೂವರು ಅಪರಾಧಿಗಳಿಗೆ 8 ವರ್ಷ ಶಿಕ್ಷೆ ವಿಧಿಸಲಾಗಿದೆ. ಪ್ರಕರಣದಲ್ಲಿ 8 ಜನರ ಖುಲಾಸೆಯಾಗಿದ್ದರೆ, ಒಬ್ಬ ಆರೋಪಿ ಇನ್ನೂ ನಾಪತ್ತೆಯಾಗಿದ್ದಾನೆ. ಜುಂದಾಲ್ ಬಂಧನದ ಬಳಿಕ ಮೋಕಾ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಕಳೆದ ಮಾರ್ಚ್​ನಲ್ಲಿ ವಿಚಾರಣೆ ಮುಕ್ತಾಯಗೊಂಡಿತ್ತು.

Aurangabad arms haul: Lashkar-e-Taiba's Abu Jundal gets life term

ಮೋದಿ ಹತ್ಯ್ಗೆಗೆ ಸ್ಕೆಚ್ ಹಾಕಿದ್ದ ಜುಂದಾಲ್: 2002ರಲ್ಲಿ ಗೋಧ್ರಾ ಗಲಭೆಯ ಬಳಿಕ ಅಂದಿನ ಗುಜರಾತ್ ಸಿಎಂ ನರೇಂದ್ರ ಮೋದಿ ಮತ್ತು ವಿಶ್ವ ಹಿಂದು ಪರಿಷತ್​ನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರನ್ನು ಹತೈಗೈಯಲು ಜುಂದಾಲ್ ಸಂಚು ರೂಪಿಸಿದ್ದ. ಇದಕ್ಕಾಗಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಸಂಗ್ರಹಿಸಿದ್ದ.

2005ರ ಮೇ 8ರಂದು ಮಹಾರಾಷ್ಟ್ರ ಎಟಿಎಸ್ ತಂಡವು ಔರಂಗಾಬಾದ್​ನ ಚಂದ್​ವಾಡ್ - ಮನ್ಮಾದ್ ಹೆದ್ದಾರಿಯಲ್ಲಿ ಟಾಟಾ ಸುಮೋ, ಇಂಡಿಕಾ ಕಾರನ್ನು ಬೆನ್ನಟ್ಟಿ ಮೂವರು ಶಂಕಿತ ಉಗ್ರರನ್ನು ಬಂಧಿಸಿತ್ತು. ಬಂಧಿತರಿಂದ 30 ಕೆ.ಜಿ. ಆರ್​ಡಿಎಕ್ಸ್, 10 ಎ.ಕೆ.47ಬಂದೂಕು, 3,200 ಬುಲೆಟ್​ಗಳನ್ನು ವಶಪಡಿಸಿ ಕೊಂಡಿತ್ತು.

ಇಂಡಿಕಾ ಕಾರನ್ನು ಚಲಾಯಿಸುತ್ತಿದ್ದ ಜುಂದಾಲ್ ತಪ್ಪಿಸಿಕೊಂಡು ಪರಾರಿಯಾಗಿದ್ದ. 2012ರಲ್ಲಿ ಜುಂದಾಲ್ ಬಂಧನದ ಬಳಿಕ ಆತ ನೀಡಿದ ಮಾಹಿತಿಯಂತೆ ನಾಸಿಕ್​ನಲ್ಲಿ 13 ಕೆ.ಜಿ.ಆರ್​ಡಿಎಕ್ಸ್, 1,200 ಕ್ಯಾಟ್ರಿಡ್ಜ್, 50 ಹ್ಯಾಂಡ್ ಗ್ರೆನೇಡ್​ಗಳು, 22 ಸುತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಯಿತು.

English summary
The special MCOCA court on Tuesday(August 02) sentenced Abu Jundal, the Lashkar-e-Taiba operative to life imprisonment in the Aurangabad arms haul case. Six others too were handed out life imprisonments by the court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X