ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸಹಿಷ್ಣುತೆ ಮಾತಾಡಿದ್ದ ಶಾರುಖ್ ದಿಲ್ವಾಲೆಗೆ ಚಲ್ ರೇ ಎಂದ ಪ್ರೇಕ್ಷಕ!

|
Google Oneindia Kannada News

ಬೆಂಗಳೂರು, ಡಿಸೆಂಬರ್, 18: ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ಮಾತನಾಡಿ ನಂತರ ಕ್ಷಮೆ ಕೇಳಿದ್ದ ಶಾರುಖ್ ಖಾನ್ ಅವರನ್ನು ಪ್ರೇಕ್ಷಕ ಮಹಾಪ್ರಭು ಕ್ಷಮಿಸಿಲ್ಲ. ಶಾರುಖ್ ಮತ್ತು ಬಾಲಿವುಡ್ ನ ಬಹುನಿರೀಕ್ಷಿತ ಸಿನಿಮಾ ದಿಲ್ವಾಲೆಗೆ ಜನ ತಕ್ಕ ಪ್ರತಿಕ್ರಿಯೆಯನ್ನೇ ನೀಡಿದ್ದಾರೆ.

ಬೆಂಗಳೂರು, ಮುಂಬೈ, ನವದೆಹಲಿ, ಅಹಮದಾಬಾದ್, ಕೋಲ್ಕತ್ತಾ ಹೀಗೆ ಎಲ್ಲಾ ನಗರಗಳಲ್ಲಿಯೂ ದಿಲ್ವಾಲೆ ಖಾಲಿ ಹೊಡೆಯುತ್ತಿದೆ. ದೇಶದ ವಿರುದ್ಧ ಮಾತನಾಡಿದ್ದ ಶಾರುಖ್ ಖಾನ್ ರನ್ನು ಜನ ಕ್ಷಮಿಸಿಲ್ಲ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ? ಹೌದು .... ಜನರು ಈ ಬಾರಿ ಅಸಹಿಷ್ಣುತೆ ತೋರಿಸಿದ್ದಾರೆ.[ಪ್ರೇಕ್ಷಕ ಪ್ರಭುಗಳೆದಿರು ಕಳಚಿಬಿತ್ತು ಕಿಂಗ್ ಖಾನ್ ಕಿರೀಟ]

ನೋ ದಿಲ್ವಾಲೆ ಎಂಬ ಹೆಸರಿನಲ್ಲಿ ಸಾಮಾಜಿಕ ತಾಣಗಳಲ್ಲಿ ಅಭಿಯಾನವೂ ಆರಂಭವಾಗಿದೆ. ತಮಿಳುನಾಡು ಪ್ರವಾಹ ಸಂತ್ರಸ್ತರಿಗೆ, ಪ್ರಧಾನ ಮಂತ್ರಿ ವಿಕೋಪ ಪರಿಹಾರ ನಿಧಿಗೆ ದೇಣಿಗೆ ನೀಡಿ ಅನೇಕರು ಮುಯ್ಯಿ ತೀರಿಸಿಕೊಂಡಿದ್ದಾರೆ.

ತಮ್ಮ ಹುಟ್ಟಿದ ದಿನದಂದು, 'ಭಾರತ ಸ್ವಲ್ಪ ಮಟ್ಟಿಗೆ ಅಸಹಿಷ್ಣುವಾಗಿದೆ ಎಂದಿದ್ದ ಶಾರುಖ್ ಯು ಟರ್ನ್ ತೆಗೆದುಕೊಂಡಿದ್ದರು. ನನ್ನ ಮಾತುಗಳಿಂದ ನೋವಾಗಿದ್ದರೆ ಕ್ಷಮಿಸಿ ಎಂದಿದ್ದರು. ಆದರೆ ಪ್ರೇಕ್ಷಕ, ಭಾರತದ ನಾಗರಿಕ ಯಾವುದೇ ಮಾತನಾಡದೆ ಸಿನಿಮಾಕ್ಕೆ ತಟಸ್ಥ ಬಹಿಷ್ಕಾರ ಹಾಕಿ ಅಸಹಿಷ್ಣುತೆ ಪಾಠ ಹೇಳಿಕೊಟ್ಟಿದ್ದಾನೆ. ಯಾವ ಯಾವ ನಗರಗಳಲ್ಲಿ ದಿಲ್ ವಾಲೆ ಖಾಲಿ ಹೊಡೆಯುತ್ತಿದೆ ನೋಡ್ಕಂಡು ಬನ್ನಿ....

ಬೆಂಗಳೂರಲ್ಲಿ ಇಂದಿನ ಬುಕಿಂಗ್

ಬೆಂಗಳೂರಲ್ಲಿ ಇಂದಿನ ಬುಕಿಂಗ್

ನೀಲಿ ಬಣ್ಣದಲ್ಲಿ ಕಾಣುತ್ತಿರುವುದು ಬುಕ್ ಆಗಿರುವುದು ಅಂದುಕೊಳ್ಳಬೇಡಿ. ಶಾರುಖ್ ಖಾನ್ ಚಿತ್ರವೆಂದರೆ ಮುಗಿ ಬೀಳುತ್ತಿದ್ದವರು ಮೂಗು ತಿರುಚಿದ್ದಾರೆ. ಇದು ಬೆಂಗಳೂರಿನ ಕತೆ.

ನಾಳೆಯೂ ಖಾಲಿ

ನಾಳೆಯೂ ಖಾಲಿ

ಬಿಡುಗಡೆ ದಿನವೇ ಚಿತ್ರ ಖಾಲಿ ಹೊಡೆಯುತ್ತಿದೆ. ಶನಿವಾರ ವಾರಾಂತ್ಯ, ವರ್ಷಾಂತ್ಯ ಸಮೀಪವಿದ್ದರೂ ಜನರು ಶಾರುಖ್ ಗೆ ಅಸಹಿಷ್ಣುತೆ ಪಾಠ ಹೇಳಿಕೊಟ್ಟಿದ್ದಾರೆ.

ಮುಂಬೈನಲ್ಲೂ ಇದೇ ಪ್ರತಿಕ್ರಿಯೆ

ಮುಂಬೈನಲ್ಲೂ ಇದೇ ಪ್ರತಿಕ್ರಿಯೆ

ಬಾಲಿವುಡ್ ತವರು ಮುಂಬೈನಲ್ಲೂ ಶಾರುಖ್ ಚಿತ್ರಕ್ಕೆ ಮೌನ ಬಹಿಷ್ಕಾರ ಹಾಕಲಾಗಿದೆ. ಅಂದು ಹೇಳಿದ್ದ ಅಸಹಿಷ್ಣುತೆ ಇಂದು ಖಾನ್ ಅವರಿಗೆ ಪಾಠ ಕಲಿಸುತ್ತಿದೆ.

ರಾಜಧಾನಿ ನವದೆಹಲಿ

ರಾಜಧಾನಿ ನವದೆಹಲಿ

ನವದೆಹಲಿಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ನೀಲಿ ಬಣ್ಣದಲ್ಲಿ ಕಾಣುತ್ತಿರುವುದೆಲ್ಲ ಖಾಲಿ ಖಾಲಿ ಎಂದು ಸಾರಿ ಹೇಳುತ್ತಿದೆ.

ಅಹಮದಾಬಾದ್ ಕತೆ ಹೀಗಿದೆ

ಅಹಮದಾಬಾದ್ ಕತೆ ಹೀಗಿದೆ

ಬಿಡುಗಡೆಯಾದ ವಾರದಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದ್ದ ಶಾರುಖ್ ಖಾನ್ ಗೆ ಅಸಹಿಷ್ಣುತೆ ಪಾಠವನ್ನು ಕಲಿಸಿದ್ದು ಹೀಗೆ.

ಪ್ರವಾಹ ಸಂತ್ರಸ್ತರಿಗೆ ದೇಣಿಗೆ

ಪ್ರವಾಹ ಸಂತ್ರಸ್ತರಿಗೆ ದೇಣಿಗೆ

ದಿಲ್ವಾಲೆ ಚಿತ್ರ ನೋಡಬೇಕು ಎಂದುಕೊಂಡಿದ್ದೆ. ಆದರೆ ಆ ಹಣವನ್ನು ವ್ಯಯಿಸಲು ನನಗೆ ಇಷ್ಟವಿಲ್ಲ. ತಮಿಳುನಾಡು ಪ್ರವಾಹ ಸಂತ್ರಸ್ತರಿಗೆ 400 ರು. ದೇಣಿಗೆ ನೀಡುತ್ತಿದ್ದೇನೆ ಎಂಬ ಪೋಸ್ಟ್ ಫೆಸ್ ಬುಕ್ ನಲ್ಲಿ ಕಂಡಿದ್ದು.

ಪ್ರತಿಭಟನೆಯೂ ನಡೆದಿದೆ

ಪ್ರತಿಭಟನೆಯೂ ನಡೆದಿದೆ

ದಿಲ್ವಾಲೆ ಚಿತ್ರವನ್ನು ನಾವು ನೋಡುವುದಿಲ್ಲ, ನೀವು ನೋಡಬೇಡಿ ಎಂದು ಬರೋಡಾದಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ ಯುವಕರು.

ಪ್ರಧಾನ ಮಂತ್ರಿ ಪರಿಹಾರ ನಿಧಿಗೆ

ಪ್ರಧಾನ ಮಂತ್ರಿ ಪರಿಹಾರ ನಿಧಿಗೆ

ದಿಲ್ವಾಲೆ ಚಿತ್ರಕ್ಕೆ ಹಣ ಹಾಕಿ ಹಾಳು ಮಾಡುವ ಬದಲು ಪ್ರಧಾನಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿ, ನಾನು ಹಾಗೆ ಮಾಡುತ್ತಿದ್ದೇನೆ ಎಂದು ಹಣ ನೀಡಿದ ಚೆಕ್ ಸಾಮಾಜಿಕ ತಾಣ ಫೇಸ್ ಬುಕ್ ನಲ್ಲಿ.

English summary
Now, Indians teach a good lesson to Bollywood King Shahrukh Khan by Boycotting his Dilwale Hindi film. The Major cities Dilwale theaters moving empty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X