ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2021ನೇ ಸಾಲಿನ UPSC ಮುಖ್ಯ ಪರೀಕ್ಷೆ ನಿಗದಿಯಂತೆ ಜ.7ಕ್ಕೆ

|
Google Oneindia Kannada News

ನವದೆಹಲಿ, ಜನವರಿ 6: ಕೋವಿಡ್‌-19 ಸಾಂಕ್ರಾಮಿಕದ ಹೊಸ ರೂಪಾಂತರಿ ಓಮಿಕ್ರಾನ್‌ನಿಂದ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ಪರಿಶೀಲಿಸಿದ ನಂತರ, ಕೇಂದ್ರ ಲೋಕ ಸೇವಾ ಆಯೋಗ, 2021ರ ನಾಗರಿಕ ಸೇವೆಗಳ (ಮುಖ್ಯ) ಪರೀಕ್ಷೆಯನ್ನು ವೇಳಾಪಟ್ಟಿಯ ಪ್ರಕಾರ ಅಂದರೆ, 2022ರ ಜನವರಿ 7, 8, 9, 15 ಮತ್ತು 16ರಂದು ನಡೆಸಲು ನಿರ್ಧರಿಸಿದೆ.

ಸೋಂಕು ತಡೆಗೆ ಸರ್ಕಾರಗಳು ವಿಧಿಸುತ್ತಿರುವ ನಿರ್ಬಂಧ/ ನಿರ್ಬಂಧಗಳನ್ನು ಗಮನದಲ್ಲಿಟ್ಟುಕೊಂಡು, ಆಯೋಗ ತಮ್ಮ ಪ್ರಕ್ರಿಯೆಗೆ ಅಭ್ಯರ್ಥಿಗಳಿಗೆ/ ಪರೀಕ್ಷಾ ಕಾರ್ಯನಿರ್ವಾಹಕರಿಗೆ, ವಿಶೇಷವಾಗಿ ಕಂಟೈನ್ಮೆಂಟ್‌/ ಮೈಕ್ರೋ ವಲಯದಿಂದ ಬರುವವರಿಗೆ ಯಾವುದೇ ಅನಾನುಕೂಲತೆ ಉಂಟಾಗದಂತೆ ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದೆ. ಕಂಟೈನ್ಮೆಂಟ್‌ ವಲಯ(ಗಳು) ಮತ್ತು ಅಗತ್ಯವಿದ್ದಲ್ಲಿ, ಅಭ್ಯರ್ಥಿಗಳ ಇ-ದಾಖಲಾತಿ ಕಾರ್ಡ್‌ಗಳನ್ನು ಮತ್ತು ಪರೀಕ್ಷಾ ಕಾರ್ಯನಿರ್ವಾಹಕರ ಗುರುತಿನ ಕಾರ್ಡ್‌ಗಳನ್ನು ಸಂಚಾರದ ವೇಳೆ ಪಾಸ್‌ಗಳಾಗಿ ಬಳಸಬಹುದು ಎಂದಿದೆ.

ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ 2021; ಫಲಿತಾಂಶ ಪ್ರಕಟ ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ 2021; ಫಲಿತಾಂಶ ಪ್ರಕಟ

ಪರೀಕ್ಷೆ ನಡೆಯುವ ದಿನಾಂಕದವರೆಗೆ ಅಂದರೆ 2022.01.06 ರಿಂದ 2022.01.09 ಮತ್ತು 2022.01.14ರಿಂದ 2022.01.16 ರವರೆಗೆ ಪರೀಕ್ಷೆಯ ಒಂದು ದಿನದ ಮೊದಲು ಅಭ್ಯರ್ಥಿಗಳು/ ಪರೀಕ್ಷಾ ಕಾರ್ಯನಿರ್ವಾಹಕರು ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಸಾರ್ವಜನಿಕ ಸಾರಿಗೆಯನ್ನು ಗರಿಷ್ಠ ಮಟ್ಟದಲ್ಲಿ ಕಾರ್ಯನಿರ್ವಹಿಸುವಂತೆ ರಾಜ್ಯ ಸರ್ಕಾರಗಳಿಗೆ ವಿನಂತಿಸಲಾಗಿದೆ.

Attension Stuents: UPSC Civil Services (Main) Examination, 2021 will be held as per schedule

ಕೋವಿಡ್ ಮಾರ್ಗಸೂಚನೆ:

ಕೋವಿಡ್ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಧರಿಸುವುದು, ವೈಯಕ್ತಿಕವಾಗಿ ಅರೋಗ್ಯ ಕಾಪಾಡಿಕೊಳ್ಳುವುದು ಸೇರಿದಂತೆ ಸೂಚಿಸಲಾದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಯುಪಿಎಸ್​ಸಿ ತಿಳಿಸಿದೆ.

ಕೋವಿಡ್‌ ಸೋಂಕು ಹರಡುತ್ತಿರುವ ಸಂದರ್ಭದಲ್ಲಿ ಪರೀಕ್ಷೆಗಳನ್ನು ನಡೆಸಲು ಎಲ್ಲಾ ಸಮರ್ಥ ಜಿಲ್ಲಾಧಿಕಾರಿಗಳು ಮತ್ತು ಸ್ಥಳ ಮೇಲ್ವಿಚಾರಕರಿಗೆ ಆಯೋಗದ ಮಾರ್ಗಸೂಚಿಗಳನ್ನು ಒದಗಿಸಲಾಗಿದೆ. ಈ ಮಾರ್ಗಸೂಚಿಗಳು ಮುಖ್ಯವಾಗಿ ಅಭ್ಯರ್ಥಿಗಳು/ ಪರೀಕ್ಷಾ ಕಾರ್ಯನಿರ್ವಾಹಕರಗಳ ವೈಯಕ್ತಿಕ ನೈರ್ಮಲ್ಯ, ವೈಕ್ತಿಗತ ಅಂತರವನ್ನು ಕಾಪಾಡಿಕೊಳ್ಳುವುದು ಮತ್ತು ಅಭ್ಯರ್ಥಿಗಳು ಹಾಗೂ ಪರೀಕ್ಷಾ ಕಾರ್ಯನಿರ್ವಾಹಕರು ಸದಾ ಮುಖ ಗವಸನ್ನು ಧರಿಸುವುದನ್ನು ಒಳಗೊಂಡಿರುತ್ತದೆ.

ಸ್ಥಳದ ಅನುಕೂಲಕರ ಸ್ಥಳಗಳಲ್ಲಿ ಸ್ಯಾನಿಟೈಜರ್‌ಗಳನ್ನು ಒದಗಿಸುವುದು ಮತ್ತು ಪ್ರತಿ ಸ್ಥಳವನ್ನು ನಿಯಮಿತವಾಗಿ ಸ್ಯಾನಿಟೈಸೇಶನ್‌ ಮಾಡಲು ಪರೀಕ್ಷಾ ಪದಾಧಿಕಾರಿಗಳು, ಅಭ್ಯರ್ಥಿಗಳು ತಮ್ಮ ಸ್ವಂತ ಸ್ಯಾನಿಟೈಜರ್‌ಗಳನ್ನು ಪಾರದರ್ಶಕ ಬಾಟಲಿಗಳಲ್ಲಿ ಕೊಂಡೊಯ್ಯುಲು ಅವಕಾವಿದೆ. ಕೆಮ್ಮುವಿಕೆ, ಸೀನುವಿಕೆ, ಉಸಿರಾಟದ ತೊಂದರೆ, ಜ್ವರದಿಂದ ಬಳಲುತ್ತಿರುವ ಅಭ್ಯರ್ಥಿಗಳಿಗೆ ಇರುವ ಎರಡು ಹೆಚ್ಚುವರಿ ಪರೀಕ್ಷಾ ಕೊಠಡಿಗಳಲ್ಲಿ ಸೂಕ್ತ ಸುರಕ್ಷತಾ ನಿಯಮಗಳ ಅಡಿಯಲ್ಲಿ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು.

ಪರಿಶೀಲನೆ ಸಮಯದಲ್ಲಿ ಅಭ್ಯರ್ಥಿಗಳು ಮಾಸ್ಕ್ ತೆಗೆಯಬೇಕೆಂದು ಅಧಿಕಾರಿಗಳು ಸೂಚಿಸಿದರೆ ತೆಗೆದು ಸಹಕರಿಸಬೇಕು ಎಂದು ಸೂಚಿಸಲಾಗಿದೆ. ಮಾಸ್ಕ್ ಧರಿಸದಿದ್ದರೆ ಯಾವುದೇ ಕಾರಣಕ್ಕೂ ಪರೀಕ್ಷಾ ಕೇಂದ್ರದೊಳಗೆ ಅಭ್ಯರ್ಥಿಗೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಲಾಗಿದೆ.

ಯುಪಿಎಸ್​ಸಿ ನಾಗರಿಕ ಸೇವಾ ಪರೀಕ್ಷೆಗಳು 3 ಹಂತಗಳಲ್ಲಿ ನಡೆಯಲಿವೆ. ಈ ಸೇವೆಗಳಿಗೆ ಅಭ್ಯರ್ಥಿಗಳನ್ನು ಪೂರ್ವಭಾವಿ ಪರೀಕ್ಷೆ, ಮುಖ್ಯಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಐಎಎಸ್, ಐಪಿಎಸ್, ಐಎಫ್​​ಎಸ್​ ಮುಂತಾದ ಹುದ್ದೆಗಳಿಗೆ ಈ ಪರೀಕ್ಷೆಯ ಮೂಲಕವೇ ನೇಮಕಾತಿ ನಡೆಯುತ್ತದೆ.

ಕೋವಿಡ್ ಕಾರಣದಿಂದ 2020ರಲ್ಲಿ ಸತತವಾಗಿ ನಾಲ್ಕು ಬಾರಿ ಪರೀಕ್ಷೆ ರದ್ದು ಪಡಿಸಿ, ಮುಂದೂಡಲಾಗಿತ್ತು. ನಂತರ 2021ರ ಜೂನ್ 27ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ಮುಂದೂಡಲಾಗಿದ್ದು, ಅಕ್ಟೋಬರ್ 10ರಂದು ನಡೆಸಲಾಗಿತ್ತು. ಕೊರೊನಾ ಸೋಂಕಿನ ಕಾರಣದಿಂದಾಗಿ 2020ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ ಸಿ) ಪರೀಕ್ಷೆ ಬರೆಯುವ ತಮ್ಮ ಕೊನೆಯ ಅವಕಾಶದಿಂದ ವಂಚಿತರಾದ ಅಭ್ಯರ್ಥಿಗಳಿಗೆ ಪರೀಕ್ಷೆ ತೆಗೆದುಕೊಳ್ಳಲು ಮತ್ತೊಂದು ಅವಕಾಶ ನೀಡಲಾಗಿತ್ತು.

Recommended Video

Rishab Pantಗೆ ಸಾಮಾಜಿಕ ಜಾಲತಾಣಗಳಲ್ಲಿ ಮಂಗಳಾರತಿ | Oneindia Kannada

English summary
Attension Stuents: After carefully reviewing the situation prevailing due to COVID-19 pandemic, the Union Public Service Commission has decided to conduct the Civil Services (Main) Examination, 2021 as per schedule i.e. on 7th, 8th, 9th, 15th and 16th January, 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X