ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆತ್ಮಹತ್ಯೆ ಯತ್ನ ಇನ್ನು ಮುಂದೆ ಅಪರಾಧವಲ್ಲ

By Manjunatha
|
Google Oneindia Kannada News

ನವ ದೆಹಲಿ, ಜೂನ್ 02: ಆತ್ಮಹತ್ಯೆ ಪ್ರಯತ್ನ ಇನ್ನು ಮುಂದೆ ಭಾರತದಲ್ಲಿ ಅಪರಾಧವಲ್ಲ. ಮಾನಸಿಕ ಆರೂಗ್ಯ ಕಾಯ್ದೆ 2017ಯ ಪ್ರಕಾರ ಕೇಂದ್ರ ಆರೋಗ್ಯ ಇಲಾಖೆ ಮೇ 29ರಂದು ಈ ಅಧಿಸೂಚನೆ ಹೊರಡಿಸಿದೆ.

ಆತ್ಮಹತ್ಯೆ ಯತ್ನಕ್ಕೆ ಮಾನಸಿಕ ಒತ್ತಡ ಕಾರಣ ಹಾಗಾಗಿ ಆತ್ಮಹತ್ಯೆ ಯತ್ನವನ್ನು ಮಾನಸಿಕ ಖಾಯಿಲೆಯ ರೂಪದಲ್ಲಿ ಕಾಣಬೇಕೆ ವಿನಃ ಅಪರಾಧವಾಗಿ ಅಲ್ಲ ಎಂದು ಹೊಸ ಕಾಯ್ದೆ ಹೇಳುತ್ತಿದೆ.

ಸಾಲಮನ್ನಾ ಆಗಲಿಲ್ಲ ಎಂದು ಬೇಸತ್ತು ರೈತ ಆತ್ಮಹತ್ಯೆ?ಸಾಲಮನ್ನಾ ಆಗಲಿಲ್ಲ ಎಂದು ಬೇಸತ್ತು ರೈತ ಆತ್ಮಹತ್ಯೆ?

ಕಳೆದ ವರ್ಷ ಲೋಕಸಭೆಯಲ್ಲಿ ಮಂಡಿಸಲಾಗಿದ್ದ 'ಮೆಂಟಲ್ ಹೆಲ್ತ್ ಕೇರ್ ಬಿಲ್ 2017' (ಮಾನಸಿಕ ಆರೂಗ್ಯ ಕಾಯ್ದೆ 2017) ಕಾಯ್ದೆಯು ಈ ವರ್ಷ ಜಾರಿಯಾಗಿದ್ದು, ಇನ್ನು ಮುಂದೆ ಆತ್ಮಹತ್ಯೆ ಯತ್ನವನ್ನು ಐಪಿಸಿ ಅಡಿಯಲ್ಲಿ ಪರಿಶೀಲನೆ ಮಾಡಲಾಗದು ಎಂದು ಆರೋಗ್ಯ ಸಚಿವಾಲಯ ಹೇಳಿದೆ.

attempt to suicide is not crime : Health ministry

ಇದೇ ಕಾಯ್ದೆಯು ಮಾನಸಿಕ ಅಸ್ವಸ್ಥ ಮಕ್ಕಳಿಗೆ ವಿದ್ಯುತ್ ಶಾಕ್ ಟ್ರೀಟ್‌ಮೆಂಟ್‌ನಿಂದಲೂ ಮುಕ್ತಿ ದೊರಕಿಸಿದೆ. ಅಷ್ಟೆ ಅಲ್ಲದೆ ಹಿರಿಯ ಮಾನಸಿಕ ರೋಗಿಗಳಿಗೆ ಸಹ ಅರಿವಳಿಕೆ ನೀಡಿದ ತರುವಾಯವೇ ವಿದ್ಯುತ್ ಶಾಕ್ ಚಿಕಿತ್ಸೆ ನೀಡಬೇಕು ಎಂದು ಸೂಚಿಸಲಾಗಿದೆ.

English summary
According to new Mental healthcare act 2017 attempting to suicide is not crime. Health ministry says that 'attemting suicide is a mental health problem it should be treat as mental illness not as crime'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X