ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಖ್ಖರ ಮೇಲೆ ಹಲ್ಲೆ ಪ್ರಕರಣ; ವಿಶಾಲ್ ಜೂದ್ ಆಸ್ಟ್ರೇಲಿಯಾದಿಂದ ಗಡಿಪಾರು

|
Google Oneindia Kannada News

ಚಂಡೀಗಢ ಅಕ್ಟೋಬರ್ 18: ಆಸ್ಟ್ರೇಲಿಯಾದಲ್ಲಿ ಖಾಲಿಸ್ತಾನಿ ಹಾಗೂ ಕಾಶ್ಮೀರಿ ಇಸ್ಲಾಮಿಕ್ ಉಗ್ರರು ನಡೆಸುತ್ತಿದ್ದ ಭಾರತ ವಿರೋಧಿ ಕಾರ್ಯಕ್ರಮಗಳ ವಿರುದ್ಧ ತಿರಂಗ ಯಾತ್ರೆ ನಡೆಸಿದ ಕಾರಣಕ್ಕೆ ಸುಳ್ಳು ಆಪಾದನೆಗಳನ್ನು ಹೊರಿಸಿ‌ ಜೈಲುಪಾಲಾಗಿರುವ ದೇಶಪ್ರೇಮಿ ವಿಶಾಲ್ ಜೂದ್ ಗಡಿಪಾರು ಮಾಡಲಾಗಿದೆ.

ಸಿಖ್ಖರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಜೈಲು ಶಿಕ್ಷೆ ಅನುಭವಿಸಿದ ಭಾರತೀಯನನ್ನು ಆಸ್ಟ್ರೇಲಿಯಾದಿಂದ ಗಡಿಪಾರು ಮಾಡಲಾಗಿದೆ ಎಂದು ದೇಶದ ವಲಸೆ ಮತ್ತು ಪೌರತ್ವ ಸಚಿವರು ಟ್ವೀಟ್ ಮಾಡಿದ್ದಾರೆ. ವಿಶಾಲ್ ಜೂದ್ (25) ಸಿಖ್ಖರ ಮೇಲಿನ ದಾಳಿಯ ಆರೋಪದ ಮೇಲೆ ಆಸ್ಟ್ರೇಲಿಯಾದ ಜೈಲಿನಲ್ಲಿದ್ದರು.

ಆಸ್ಟ್ರೇಲಿಯಾದಲ್ಲಿ ಭಾರತ ವಿರೋಧಿ ಘೋಷಣೆ ಕೂಗಿ, ಭಾರತದ ಧ್ವಜಕ್ಕೆ ಅಗೌರವ ತೋರಲು ಹೊರಟಿದ್ದ ಖಾಲಿಸ್ತಾನಿ ಹಾಗೂ ಇಸ್ಲಾಮಿಕ್ ಉಗ್ರರ ವಿರುದ್ಧ ಏಕಾಂಗಿಯಾಗಿ ಹೋರಾಡಿ, ದೇಶದ್ರೋಹಿಗಳ ಕೈಯಿಂದ ತಿರಂಗವನ್ನು ಕಿತ್ತುಕೊಂಡು ವಿರೋಧಿಗಳ ಮಧ್ಯೆಯೇ ಎದೆಯುಬ್ಬುಸಿ ನಿಂತು ಧ್ವಜ ಹಾರಿಸಿದ್ದ ದೇಶಪ್ರೇಮಿ ವಿಶಾಲ್ ಜೂದ್.

 Attack on Sikhs : Indian Vishal Jude exiles from Australia

24 ವಿಶಾಲ್ ಹರ್ಯಾಣ ಮೂಲದವರು. ಆಸ್ಟ್ರೇಲಿಯಾದ ವಿದ್ಯಾರ್ಥಿ. ಏಪ್ರಿಲ್ 16 ರಂದು ಸಿಡ್ನಿಯಲ್ಲಿ ಮೂರು ಕ್ರಿಮಿನಲ್ ಘಟನೆಗಳಲ್ಲಿ ಭಾಗಿಯಾದ ಆರೋಪದ ಮೇಲೆ ಆತನನ್ನು ಬಂಧಿಸಲಾಯಿತು. ಭಾರತೀಯ ರಾಷ್ಟ್ರೀಯವಾದಿಗಳ ಗುಂಪು ಆಸ್ಟ್ರೇಲಿಯಾದಲ್ಲಿ ಖಲಿಸ್ತಾನಿಗಳೊಂದಿಗೆ ಘರ್ಷಣೆ ನಡೆಸಿದ ಬಳಿಕ ಆಸ್ಟ್ರೇಲಿಯಾದ ಪೊಲೀಸ್ ಅಧಿಕಾರಿಗಳು ವಿಶಾಲ್ ಜೂದ್ ಬಂಧಿಸಿದ್ದರು.

ಈ ಪ್ರಕರಣದಲ್ಲಿ ವಿಶಾಲ್ ಜೂದ್ ಆಸ್ಟ್ರೇಲಿಯಾದ ಜೈಲಿನಲ್ಲಿದ್ದರು. ಆಸ್ತಿ ಹಾನಿ, ಅಪಹರಣ ಮತ್ತು ಹಲ್ಲೆ ಆರೋಪದ ಮೇಲೆ ಪೊಲೀಸರು ವಿಶಾಲ್ ಜೂದ್ ಬಂಧಿಸಿದ್ದರು. ಆಸ್ಟ್ರೇಲಿಯಾದಲ್ಲಿ ಕಾಶ್ಮೀರಿ ಇಸ್ಲಾಮಿಕ್ ಉಗ್ರರೊಂದಿಗೆ ಭಾರತ ವಿರೋಧಿ ಕಾರ್ಯಕ್ರಮಗಳನ್ನು ನಡೆಸುವ ವೇಳೆ ವಿಶಾಲ್ ಜೂದ್ ಅದನ್ನು ವಿರೋಧಿಸಿದ್ದರು.

ಈ ವೇಳೆ ಘರ್ಷಣೆ ನಡೆದಿದ್ದು, ಖಲಿಸ್ತಾನಿಗಳು ಆಸ್ಟ್ರೇಲಿಯಾದಲ್ಲಿ ನಡೆದ ಘರ್ಷಣೆಯ ಹೊಣೆಯನ್ನು ವಿಶಾಲ್ ಮೇಲೆ ಹೊರಿಸಿದ್ದವು. ಆಸ್ಟ್ರೇಲಿಯಾದ ಸಿಖ್ಖರಲ್ಲಿ ಕೆಲವರು ಜೂದ್ ಖಲಿಸ್ತಾನ್ ಪರವಾಗಿದ್ದು ಸಿಖ್ಖರನ್ನು ಸಿಡ್ನಿಯಲ್ಲಿ ಗುರಿಯಾಗಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.

ಖಲಿಸ್ತಾನಿಗಳು ಯಾರು?; ವಿಶಾಲ್ ಮೇಲೆ 16 ಸೆಪ್ಟೆಂಬರ್ 2020, 14 ಮತ್ತು 28 ಫೆಬ್ರವರಿ 2021 ರಂದು ಸಂಭವಿಸಿದ ಮೂರು ಅಪರಾಧಗಳ ಆರೋಪವಿದೆ. ಕುತೂಹಲಕಾರಿ ಎಂದರೆ ಖಲಿಸ್ತಾನಿ ಕಾರ್ಯಕರ್ತರನ್ನು ಎಲ್ಲಾ ಮೂರು (ಆಸ್ತಿ ಹಾನಿ, ಅಪಹರಣ ಮತ್ತು ಹಲ್ಲೆ) ಪ್ರಕರಣಗಳಲ್ಲಿ ಹೆಸರಿಸಲಾಗಿದೆ.

ಈ ಖಲಿಸ್ತಾನಿಗಳು ಭಾರತೀಯ ಮೂಲದವರು ಎಂದು ನಂಬಲಾಗಿದೆ. ಆದಾಗ್ಯೂ, ಅವರು ತಮ್ಮನ್ನು ಭಾರತೀಯರು ಎಂದು ಗುರುತಿಸಿಕೊಳ್ಳುವುದಿಲ್ಲ. ಆದರೆ ಅವರ ಧಾರ್ಮಿಕ ಗುರುತಿನೊಂದಿಗೆ ಗುರುತಿಸಿಕೊಳ್ಳಲು ಬಯಸುತ್ತಾರೆ. ಖಲಿಸ್ತಾನ್ ಕಲ್ಪನೆಯನ್ನು ಬೆಂಬಲಿಸುತ್ತಾರೆ.

ಖಲಿಸ್ತಾನಿಗಳು ಪ್ರಸ್ತುತಪಡಿಸಿದ ವಿಡಿಯೋಗಳಿಂದ ಪೂರಕವಾಗಿ ಸಿಡ್ನಿ ಪೊಲೀಸರು ಸಂಶಯಾಸ್ಪದ ಆರೋಪಗಳ ಮೇಲೆ ವಿಶಾಲ್‌ನನ್ನು ಬಂಧಿಸಿದಾಗಿನಿಂದ, ಭಾರತೀಯ ವಲಸಿಗರು ವಿಶಾಲ್ ಜೂದ್ ಬಿಡುಗಡೆಗೆ ಒತ್ತಾಯಿಸುತ್ತಿದ್ದಾರೆ. ಭಾರತೀಯ ವಲಸಿಗರು ವಿಶಾಲ್ ಜೂದ್ ಬಿಡುಗಡೆಗೆ ಸಿಡ್ನಿ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದ್ದರು.

ಅಕ್ಟೋಬರ್ 16ರಂದು ಆಸ್ಟ್ರೇಲಿಯಾದ ಜೈಲಿನಿಂದ ಬಿಡುಗಡೆಯಾದರು. ಆದರೆ ಇದು ಖಲಿಸ್ತಾನಿಯರನ್ನು ಕೆರಳಿಸಿತು ಮತ್ತು ಪ್ರತಿಭಟನೆಗೆ ಪ್ರಚೋದಿಸಿತು. ವಿಶಾಲ್ ಬಿಡುಗಡೆ ವೇಳೆ ವಿಶಾಲ್ ಅವರ ವಕೀಲರು ಜೈಲಿನ ಅಧಿಕಾರಿಗಳೊಂದಿಗೆ ಕಾನೂನು ಕ್ರಮಕ್ಕೆ ಬೆದರಿಕೆ ಹಾಕಿದರು ಎಂದು ಆರೋಪಿಸಲಾಗಿದೆ. ಇದು ವಿಶಾಲ್ ವಿರುದ್ಧ ಮತ್ತಷ್ಟು ಕ್ರಿಮಿನಲ್ ಆರೋಪಗಳನ್ನು ಸೇರಿಸಲು ಪುಷ್ಠಿ ನೀಡಿದೆ. ವಿಶಾಲ್ ಮತ್ತು ಭಾರತೀಯ ಸಮುದಾಯಕ್ಕೆ ಮತ್ತಷ್ಟು ತೊಂದರೆ ಉಂಟು ಮಾಡಲು ಪ್ರಕರಣವನ್ನು ಉನ್ನತ ನ್ಯಾಯಾಲಯಕ್ಕೆ ವರ್ಗಾಯಿಸಲು ಕಾರಣವಾಯಿತು.

ಕುಟುಂಬಸ್ಥರ ಆರೋಪವೇನು?; ವಿಶಾಲ್ ಜೂದ್ ಸ್ನೇಹಿತರು ಮತ್ತು ಕುಟುಂಬದವರು ಆಸ್ಟ್ರೇಲಿಯಾ ಪೊಲೀಸರು ಭಾರತದ ಪರವಾಗಿ ನಿಂತು ಮತ್ತು ಆಸ್ಟ್ರೇಲಿಯಾದ ನೆಲದಿಂದ ಕಾರ್ಯನಿರ್ವಹಿಸುತ್ತಿರುವ ಖಲಿಸ್ತಾನಿ ಘಟಕಗಳಿಗೆ ಸವಾಲು ಹಾಕಿದ್ದಕ್ಕಾಗಿ ಜೂಡ್ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ವಿಶಾಲ್ ಜೂದ್‌ನ ಸ್ನೇಹಿತರು ಮತ್ತು ಕುಟುಂಬದವರು ಆತನನ್ನು ಬಂಧಿಸಲು ಖಲಿಸ್ತಾನಿ ಗುಂಪುಗಳ ಒತ್ತಡದಲ್ಲಿ ಪೊಲೀಸರು ವರ್ತಿಸಿದ್ದಾರೆ ಎಂದು ಹೇಳಿದ್ದಾರೆ.

ವಿಶಾಲ್ ಜೂದ್ ಮಧುಮೇಹಿಯಾಗಿದ್ದು, ಜೈಲಿನಲ್ಲಿ ಆತನ ಔಷಧಿಗೆ ಪ್ರವೇಶವಿಲ್ಲ ಎಂದು ತಿಳಿದುಬಂದಿದೆ. ಹಲವು ದಿನಗಳವರೆಗೆ ಅವರ ಆರೋಗ್ಯದ ಹೊರತಾಗಿಯೂ ಅವರ ಸ್ನೇಹಿತರು ಮತ್ತು ಕುಟುಂಬಕ್ಕೆ ಪ್ರವೇಶವನ್ನು ನಿರಾಕರಿಸಲಾಯಿತು.

ಹರ್ಯಾಣ ಸಿಎಂ ಮನವಿ; ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಜೂನ್‌ನಲ್ಲಿ ಆಸ್ಟ್ರೇಲಿಯಾ ಅಧಿಕಾರಿಗಳಿಗೆ ಜೂದ್ ಬಿಡುಗಡೆ ಮಾಡುವಂತೆ ಕೇಳಿದ್ದರು. ಜೂದ್ ಬೆಂಬಲಿಗರು ಆತನ ಬಂಧನ ವಿರೋಧಿಸಿ ಬೀದಿಗಿಳಿದು ಹೋರಾಟ ಮಾಡಿದ್ದರು. ಖಾಲಿಸ್ತಾನಿ ತಂತ್ರಗಾರಿಕೆಗಳು ಜೂದ್ ಅವರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಿವೆ ಎಂದು ಅವರು ಹೇಳಿಕೊಂಡಿದ್ದಾರೆ.

ಜೂದ್ ಅವರನ್ನು ಆಸ್ಟ್ರೇಲಿಯಾದಿಂದ ಗಡಿಪಾರು ಮಾಡುವುದರೊಂದಿಗೆ ಆಸ್ಟ್ರೇಲಿಯಾದ ಮಂತ್ರಿ ಅಲೆಕ್ಸ್ ಹಾಕ್ ಅವರು, "ಆಸ್ಟ್ರೇಲಿಯಾದ ಸಾಮಾಜಿಕ ಒಗ್ಗಟ್ಟನ್ನು ಹಾಳು ಮಾಡುವ ಪ್ರಯತ್ನಗಳನ್ನು ಸಹಿಸಲಾಗುವುದಿಲ್ಲ" ಎಂದು ಟ್ವೀಟ್ ಮಾಡಿದ್ದಾರೆ.

English summary
An Indian man Vishal Jude has been deported from Australia after he served a jail sentence on charges of attacking Sikhs, the country's immigration and citizenship minister tweeted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X