ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪನಗದೀಕರಣಕ್ಕೆ 5 ತಿಂಗಳು ಕಳೆದರೂ ಎಟಿಎಂಗಳು ಖಾಲಿ ಖಾಲಿ

ಹಣ ಸಿಗದೆ ಒದ್ದಾಟವಾಗಿದ್ದ ಅಪನಗದೀಕರಣದ ದಿನಗಳು ಮತ್ತೆ ಎದುರಾಗಿದೆಯಾ ಎಂಬ ಪ್ರಶ್ನೆ ಉದ್ಭವಿಸಿದೆ. ಹಲವು ಕಡೆ ಎಟಿಎಂಗಳು ಖಾಲಿಖಾಲಿಯಾಗಿವೆ. ದುಃಸ್ವಪ್ನದಂತೆ ಕಂಡಿದ್ದ ಆ ದಿನಗಳು ಮರಳಿರುವಂತೆ ಜನರು ಗಾಬರಿಯಾಗಿದ್ದಾರೆ

By ಮಾಧುರಿ
|
Google Oneindia Kannada News

ಬೆಂಗಳೂರು, ಏಪ್ರಿಲ್ 12: ಅಪನಗದೀಕರಣ ಘೋಷಣೆಯಾಗಿ ಐದು ತಿಂಗಳ ನಂತರ ಕೂಡ ಹಲವು ಕಡೆ ಎಟಿಎಂಗಳಲ್ಲಿ ಹಣವಿಲ್ಲ. ಅಪನಗದೀಕರಣದ ದಿನಗಳು ಮತ್ತೆ ಎದುರಾಗಿವೆಯೇ ಎಂಬ ಅನುಮಾನ ಮೂಡುವಂತಿದೆ ಸನ್ನಿವೇಶ. ಗ್ರಾಹಕರು ವಿವಿಧ ಬ್ಯಾಂಕ್ ಗಳ ಎಟಿಎಂ ಕೇಂದ್ರಗಳಿಗೆ ತೆರಳಿ ಬರಿಗೈಲಿ ಹಿಂತಿರುಗುತ್ತಿದ್ದಾರೆ.

ವ್ಯವಸ್ಥೆಯಲ್ಲಿ ಚಲಾವಣೆಯಲ್ಲಿದ್ದ ಶೇ 86ರಷ್ಟು 500, 1000 ರುಪಾಯಿ ನೋಟುಗಳು ಅಮಾನ್ಯಗೊಂಡ ನಂತರ ಎಟಿಎಂ ಹಾಗೂ ಬ್ಯಾಂಕ್ ಗಳ ಮುಂದೆ ಉದ್ದುದ್ದ ಸಾಲುಗಳು ಕಂಡುಬಂದವು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 500, 2000 ರುಪಾಯಿ ನೋಟುಗಳನ್ನು ಪರಿಚಯಿಸಿದ ನಂತರ, ಜನವರಿ ತಿಂಗಳಲ್ಲಿ ಕೂಡ ಎಟಿಎಂನಲ್ಲಿ ನೋಟಿನ ಕೊರತೆ ನೀಗಲಿಲ್ಲ.[ಅಪನಗದೀಕರಣದ ನಂತರ ಲೆಕ್ಕಕ್ಕೆ ಕೊಡದ 5,400 ಕೋಟಿ ರುಪಾಯಿ ಪತ್ತೆ!]

ATMs still running dry post demonetisation

ಕ್ಯಾಶ್ ಲಾಜಿಸ್ಟಿಕ್ಸ್ ಅಸೋಸಿಯೇಷನ್ ಪ್ರಕಾರ, ಎಟಿಎಂಗಳಲ್ಲಿ ಈಗಲೂ ಅಗತ್ಯ ಪ್ರಮಾಣದ ನಗದು ದೊರೆಯುತ್ತಿಲ್ಲ. ಶೇ 30ರಷ್ಟು ಕೊರತೆ ಎದುರಾಗಿದೆ. ತಿಂಗಳ ಆರಂಭದಲ್ಲಿ ಎಟಿಎಂಗಳಿಗೆ ನಗದು ಪೂರೈಕೆ ಮಾಡಿದರೆ, ಆ ನಂತರ ಪೂರೈಕೆ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ತಿಳಿಸಿದ್ದಾರೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಬಗ್ಗೆ ಹೇಳಿಕೆ ನೀಡಿದ್ದು, ಏಪ್ರಿಲ್ ಮಧ್ಯಭಾಗದ ವೇಳೆಗೆ ಪರಿಸ್ಥಿತಿ ಸುಧಾರಿಸುತ್ತದೆ ಎಂದು ತಿಳಿಸಿದೆ. ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ನಗದು ವ್ಯವಹಾರ ಹಾಗೂ ವಿಥ್ ಡ್ರಾ ಪ್ರಮಾಣ ಅಪನಗದೀಕರಣದ ನಂತರ ತುಂಬ ಕಡಿಮೆಯಾಗಿದೆ. ವ್ಯವಸ್ಥೆಯೊಳಗೆ ನಗದು ಬರುವುದು ಹೆಚ್ಚಾಗಿದೆ. ಅದರೆ ಪರಿಸ್ಥಿತಿ ಸಹಜವಾಗುವುದಕ್ಕೆ ಇನ್ನೂ ಸ್ವಲ್ಪ ಸಮಯ ಬೇಕು ಎಂದಿದ್ದಾರೆ.[200ರೂ. ನೋಟು ಬರುತ್ತಂತೆ, ಅಂತೆ-ಕಂತೆ!]

ಭಯೋತ್ಪಾದನೆ ಹಾಗೂ ಕಪ್ಪು ಹಣ ನಿಯಂತ್ರಿಸುವ ಉದ್ದೇಶದಿಂದ ನವೆಂಬರ್ 8, 2016ರಲ್ಲಿ 500, 1000 ರುಪಾಯಿ ನೋಟುಗಳನ್ನು ಅಮಾನ್ಯ ಮಾಡಲಾಯಿತು.

English summary
Nearly after five months post-demonetisation, the ATMs continue to run dry in several locations. Looks like the arid days of demonetisation are back. Customers are seen visiting multiple booths of various banks and returning empty-handed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X